Toxic Movie: 'ಟಾಕ್ಸಿಕ್' ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಹೊಸ ಪೋಸ್ಟ್‌.. ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ!

Published : Jul 14, 2026, 07:57 PM IST
Vishal Mishra

ಸಾರಾಂಶ

ಟಾಕ್ಸಿಕ್ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದ್ದು, ಬೇರೆ ಇನ್ನುಳಿದ ಭಾಷೆಗಳಿಗೆ ಡಬ್ ಮಾಡಲಾಗುವುದು. ಈ ಚಲನಚಿತ್ರವು 26 ಆಗಸ್ಟ್ 2026 ರಂದು ವಿಶ್ವದಾದ್ಯಂತ ಥಿಯೇಟ್ರಿಕಲ್ ಬಿಡುಗಡೆಗೆ ನಿರ್ಧರಿಸಲಾಗಿದೆ. ಸಿನಿಮಾವನ್ನು 'ಕೆವಿಎನ್ ಪ್ರೊಡಕ್ಷನ್ಸ್' ಮತ್ತು ಯಶ್ ಅವರ 'ಮಾನ್​ಸ್ಟರ್ ಮೈಂಡ್ಸ್' ಒಟ್ಟಿಗೆ ನಿರ್ಮಾಣ ಮಾಡಿದೆ.

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಮುಂಬರುವ ಗ್ಯಾಂಗ್‌ಸ್ಟಾರ್ ಆಕ್ಷನ್ ಡ್ರಾಮಾ 'ಟಾಕ್ಸಿಕ್' (Toxic Movie) ಚಿತ್ರವು ಇಡೀ ಜಗತ್ತಿನಾದ್ಯಂತ ಬಾರೀ ಸಂಚಲನ, ನಿರೀಕ್ಷೆ ಸೃಷ್ಟಿಸಿದೆ. ಇತ್ತೀಚೆಗೆ ಬಿಡುಗಡೆ ಕಂಡಿರುವ 'ತಬಾಹಿ' ಭಾರೀ ಸಂಚಲನ ಸೃಷ್ಟಿಸಿದೆ. ಅದರ ಬೆನ್ನಲ್ಲೇ, ಟಾಕ್ಸಿಕ್ ಚಿತ್ರದ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ (Vishal Mishra) ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಹೊಸ ಪೋಸ್ಟ್ ಕುತೂಹಲ ಮೂಡಿಸಿದೆ. ಸದ್ಯ ವಿಶಾಲ್ ಮಿಶ್ರಾ ಮಾಡಿರುವ ಪೋಸ್ಟ್ ಅಭಿಮಾನಿಗಳ ಗಮನ ಸೆಳೆದಿದೆ. ಮುಂದೆ ಯಾವ ಸಾಂಗ್ ಬರುತ್ತೆ ಎನ್ನುವ ಕುತೂಹಲ ಹೆಚ್ಚಿಸಿದೆ.

ವಿಶಾಲ್ ಮಿಶ್ರಾ ಪೋಸ್ಟ್ ಏನು ಹೇಳ್ತಿದೆ?

ಜೀ ಸಂಸ್ಥೆಗೆ 'ಟಾಕ್ಸಿಕ್' ಸಿನಿಮಾದ ಆಡಿಯೋ ರೈಟ್ಸ್ ಮಾರಾಟವಾಗಿದೆ. ರವಿ ಬಸ್ರೂರು ಜೊತೆ 4 ಜನ ಸಂಗೀತ ನಿರ್ದೇಶಕರು ಸೇರಿ ಈ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ಒಂದು ಸಾಂಗ್ ಜೊತೆಗೆ ಹಿನ್ನೆಲೆ ಸಂಗೀತ ಜವಾಬ್ದಾರಿಯನ್ನು ಸಹ ರವಿ ಬಸ್ರೂರು ವಹಿಸಿಕೊಂಡಿದ್ದಾರೆ.

'ತಬಾಹಿ' ಸೇರಿದಂತೆ 4 ಹಾಡುಗಳನ್ನು ವಿಶಾಲ್ ಮಿಶ್ರಾ ಕಂಪೋಸ್ ಮಾಡಿದ್ದಾರೆ. ಮತ್ತೊಂದು ಹಾಡಿಗೆ ವಿಶಾಲ್ ಜೊತೆ ಅರ್ಸ್ಲಾನ್ ನಿಜಾಮಿ ಮತ್ತು ಫಹೀಮ್ ಅಬ್ದುಲ್ಲಾ ಕೂಡ ಕೈ ಜೋಡಿಸಿದ್ದಾರೆ. ವಿಶಾಲ್ ಮಿಶ್ರಾ ಮಾಡಿರುವ ಹೊಸ ಪೋಸ್ಟ್ ಅಭಿಮಾನಿಗಳ ಗಮನ ಸೆಳೆದಿದೆ. ಮುಂದೆ ಯಾವ ಸಾಂಗ್ ಬರುತ್ತೆ ಎನ್ನುವ ಕುತೂಹಲ ಹೆಚ್ಚಿಸಿ ಕಾಯುವಂತೆ ಮಾಡಿದೆ.

ವಿಶಾಲ್ ಮಿಶ್ರಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಟಾಕ್ಸಿಕ್ ಚಿತ್ರದ ನಾಲ್ಕನೇ ಹಾಡಿನ ಕೆಲಸ ಪ್ರಸ್ತುತ ನಡೆಯುತ್ತಿದೆ ಎಂದು ಬಹಿರಂಗಪಡಿಸಿದ್ದಾರೆ. ವಿಶಾಲ್ ಮಿಶ್ರಾ ಪ್ರಸ್ತುತ ಸಂಗೀತ ಕಾರ್ಯಕ್ರಮದ ಸಲುವಾಗಿ ಕ್ಯಾಲಿಫೋರ್ನಿಯಾದಲ್ಲಿ ಇದ್ದಾರೆ. "Toxic - PBS 4" ಎಂದು ಬರೆದುಕೊಂಡಿದ್ದಾರೆ. ಅಂದರೆ ಚಿತ್ರದ 4ನೇ ಹಾಡಿನ ಕೆಲಸ ನಡೆಯುತ್ತಿದೆ ಎಂದು ಸುಳಿವು ನೀಡಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

ವಿಶಾಲ್ ಮಿಶ್ರಾ ಜೊತೆಗೆ ಈ ಚಿತ್ರಕ್ಕಾಗಿ ಹಲವು ಪ್ರತಿಭಾನ್ವಿತ ತಂಡ ಸೇರಿಕೊಂಡಿದ್ದು, ರವಿ ಬಸ್ರೂರ್, ತನಿಷ್ಕ್ ಬಾಗ್ಚಿ ಮತ್ತು ಫಹೀಮ್ ಅಬ್ದುಲ್ಲಾ ಅವರು ಈ ಹಾಡಿಗೆ ಟ್ರಾಕ್‌ ಸಂಯೋಜನೆ ಮಾಡುತ್ತಿದ್ದಾರೆ. 'ಟಾಕ್ಸಿಕ್' ಚಿತ್ರದ 'ಲೇಡೀಸ್ & ಲೇಡೀಸ್' ಟೀಸರ್ ಹಾಡಿನ ಮೊದಲು, ೀ ಚಿತ್ರದ ನಿರ್ಮಾಪಕರು 'ಲೇಡೀಸ್ & ಲೇಡೀಸ್' ಎಂಬ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ.

'ತಬಾಹಿ' ಚಿತ್ರದ ವೀಡಿಯೋ ಸಾಂಗ್

'ತಬಾಹಿ' ಚಿತ್ರದ ವೀಡಿಯೋ ಸಾಂಗ್ ಬಿಡುಗಡೆ ಬೆನ್ನಲ್ಲೇ ಯಶ್ ಜೊತೆ ವಾಟ್ಸಪ್ ಕಾಲ್‌ನಲ್ಲಿ ಚರ್ಚೆ ನಡೆಸಿರುವ ಬಗ್ಗೆ ವಿಶಾಲ್ ಮಿಶ್ರಾ ಹಂಚಿಕೊಂಡಿದ್ದರು. ಟಾಕ್ಸಿಕ್ ಸಿನಿಮಾನಲ್ಲಿ ಯಶ್ ಅವರು 'ರಾಯ' ಮತ್ತು 'ಟಿಕೆಟ್' ಹೆಸರಿನ ಎರಡು ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಅಕ್ಷಯ್ ಒಬೆರಾಯ್, ಸುದೇವ್ ನಾಯರ್ ಮತ್ತು ಅಮಿತ್ ತಿವಾರಿ ಸೇರಿದಂತೆ ಹಲವು ವಿದೇಶಿ ನಟ, ನಟಿಯರು ಸಹ ನಟಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಟಾಕ್ಸಿಕ್ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದ್ದು, ಬೇರೆ ಇನ್ನುಳಿದ ಭಾಷೆಗಳಿಗೆ ಡಬ್ ಮಾಡಲಾಗುವುದು. ಈ ಚಲನಚಿತ್ರವು 26 ಆಗಸ್ಟ್ 2026 ರಂದು ವಿಶ್ವದಾದ್ಯಂತ ಥಿಯೇಟ್ರಿಕಲ್ ಬಿಡುಗಡೆಗೆ ನಿರ್ಧರಿಸಲಾಗಿದೆ. ಸಿನಿಮಾವನ್ನು 'ಕೆವಿಎನ್ ಪ್ರೊಡಕ್ಷನ್ಸ್' ಮತ್ತು ಯಶ್ ಅವರ 'ಮಾನ್​ಸ್ಟರ್ ಮೈಂಡ್ಸ್' ಒಟ್ಟಿಗೆ ನಿರ್ಮಾಣ ಮಾಡಿದೆ. ಈ ಚಿತ್ರದ ಬಿಡುಗಡೆಗೆ ಇಡೀ ಜಗತ್ತು ಕಾಯುತ್ತಿದೆ. ಆ ಕ್ಷಣ ಆಗಸ್ಟ್ 26 ಎಂಬುದು ಗೊತ್ತಿದ್ದರೂ ಕೂಡ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಉಡುಪಿಯ ದಿಶಾ ಸಾಲಿಯಾನ್ ನಿಗೂಢ ಸಾವು ಪ್ರಕರಣ: FIR ನಲ್ಲಿ ಬಾಲಿವುಡ್ ನಟರು, ಆದಿತ್ಯ ಠಾಕ್ರೆ ಸೇರಿ ಪ್ರಭಾವಿಗಳ ಹೆಸರು!
ರಶ್ಮಿಕಾ ಮಂದಣ್ಣ ಮುಖದಲ್ಲಿ ಇಷ್ಟೊಂದು ಬದಲಾವಣೆ? ವೈದ್ಯರ ವಿಶ್ಲೇಷಣೆ ವೈರಲ್.. ಸರ್ಜರಿ ಬಗ್ಗೆ ಹೇಳಿದ್ದೇನು?