ಹೆಸರು ಟೈಗರ್, ಮಾಡೋದೆಲ್ಲಾ ಆಕ್ಷನ್ ಚಿತ್ರ… ಆದ್ರೆ ಈವಾಗ್ಲೂ ಒಬ್ಬರೇ ಮಲಗೋಕೆ ಭಯ ಈ ಸ್ಟಾರ್ ನಟನಿಗೆ !

Published : Mar 08, 2025, 06:15 PM ISTUpdated : Mar 08, 2025, 07:26 PM IST
ಹೆಸರು ಟೈಗರ್, ಮಾಡೋದೆಲ್ಲಾ ಆಕ್ಷನ್ ಚಿತ್ರ… ಆದ್ರೆ ಈವಾಗ್ಲೂ ಒಬ್ಬರೇ ಮಲಗೋಕೆ ಭಯ ಈ ಸ್ಟಾರ್ ನಟನಿಗೆ !

ಸಾರಾಂಶ

ಟೈಗರ್ ಶ್ರಾಫ್ ಬಾಲಿವುಡ್ ನಟ, ಫಿಟ್ನೆಸ್ ಮತ್ತು ಆಕ್ಷನ್‌ನಿಂದ ಪ್ರಸಿದ್ಧರಾಗಿದ್ದಾರೆ. ಹೀರೋಪಂತಿ ಚಿತ್ರದ ಮೂಲಕ ಪರಿಚಿತರಾದ ಇವರು, ರಿಯಲ್ ಲೈಫಲ್ಲಿ ಮೃದು ಸ್ವಭಾವದವರಾಗಿದ್ದಾರೆ. ದೆವ್ವಗಳಿಗೆ ಹೆದರುವ ಕಾರಣದಿಂದಾಗಿ, ಅವರು ಒಬ್ಬಂಟಿಯಾಗಿ ಮಲಗಲು ಭಯಪಡುತ್ತಾರೆ. ಚಿತ್ರೀಕರಣಕ್ಕೆ ಹೋದಾಗ ತಂಡದ ಸದಸ್ಯರೊಂದಿಗೆ ಮಲಗುತ್ತಾರೆ.  

ಬಾಲಿವುಡ್ ನಲ್ಲಿ ತಮ್ಮ ಫಿಟ್ ಮತ್ತು ಸ್ಟ್ರಾಂಗ್ ಬಾಡಿ, ಡ್ಯಾನ್ಸ್, ಆಕ್ಷನ್ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಪಡೆದ ನಟ ಟೈಗರ್ ಶ್ರಾಫ್ (Tiger Shroff) . ಮಕ್ಕಳಾಗಿರಲಿ ಅಥವಾ ವಯಸ್ಸಾದವರಾಗಿರಲಿ ಎಲ್ಲಾ ವಯಸ್ಸಿನ ಜನರು ಇಷ್ಟಪಡುವಂತಹ ನಟ ಟೈಗರ್ ಶ್ರಾಫ್. ಹುಡುಗಿಯರಿಗಂತೂ ಟೈಗರ್ ಶ್ರಾಫ್ ಅಂದ್ರೇನೆ ಕ್ರೇಜ್. ಇವರ ಅಭಿಮಾನಿಗಳಲ್ಲಿ ಹೆಚ್ಚಿನವರು ಹುಡುಗಿಯರು. ಆದ್ರೆ ನಿಮಗೆ ಗೊತ್ತಾ ಆಕ್ಷನ್ ಸ್ಟಾರ್ ಆಗಿರುವ ಟೈಗರ್ ಗೆ ಇವತ್ತಿಗೂ ಒಬ್ಬಂಟಿಯಾಗಿ ಮಲಗೋದಕ್ಕೆ ಭಯ ಅಂತೆ!

ಟೈಗರ್ ಶ್ರಾಫ್ ಸಹೋದರಿ ಯಾರು?

ಹೀರೋಪಂತಿ (Heropanti) ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ನಟ ಟೈಗರ್ ಶ್ರಾಫ್. ಮೊದಲ ಚಿತ್ರದಲ್ಲೇ ತಮ್ಮ ಆಕ್ಷನ್ ಹಾಗೂ ಡ್ಯಾನ್ಸ್ ಮೂಲಕ ಗಮನ ಸೆಳೆದಿದ್ದರು. ವಾವ್ ಹುಡುಗರು ಇದ್ರೆ ಹೀಗೆ ಇರಬೇಕು ಎನ್ನುವಷ್ಟು ಹುಡುಗಿಯರ ಹೃದಯ ಕದ್ದಿದ್ದರು ಟೈಗರ್. ಆದ್ರೆ ಸಿನಿಮಾದಲ್ಲಿ ಕಾಣಿಸುವಂತೆ ಟೈಗರ್ ರಿಯಲ್ ಲೈಫಲ್ಲಿ ಇಲ್ವೇ ಇಲ್ಲ. ರಿಯಲ್ ಲೈಫಲ್ಲಿ ತುಂಬಾನೆ ಸಾಫ್ಟ್ ಈ ನಾಯಕ. ಅದಕ್ಕೆ ಉದಾಹರಣೆ ಹಲವು ವರ್ಷಗಳ ಹಿಂದೆ ಅವರು ನೀಡಿದ ಸಂದರ್ಶನದಲ್ಲಿ ತಮ್ಮ ಸೀಕ್ರೆಟ್ ಒಂದನ್ನು ಶೇರ್ ಮಾಡಿದ್ದಾರೆ. 

ಟೈಗರ್ ಶ್ರಾಫ್ ಅವರು ದೆವ್ವಗಳಿಗೆ ತುಂಬಾನೆ ಹೆದರುತ್ತಾರಂತೆ. ಹಾಗಾಗಿ ಇದರಿಂದಾಗಿ ರಾತ್ರಿಯಲ್ಲಿ ಒಬ್ಬಂಟಿಯಾಗಿ ಮಲಗಲು ಅವರು ಹೆದರುವುದಾಗಿ ತಿಳಿಸಿದ್ದಾರೆ ಟೈಗರ್. ಅಷ್ಟೇ ಆಲ್ಲ  ಟೈಗರ್ ಶ್ರಾಫ್ ಅವರು ಹೊರಾಂಗಣ ಚಿತ್ರೀಕರಣಕ್ಕೆ ಹೋದಾಗಲೆಲ್ಲಾ, ಅವರು ರಾತ್ರಿಯಿಡೀ ಮೋಜು ಮಾಡಿದ ನಂತರ ಜಿಮ್ ಮಾಡಿದ ಬಳಿಕ, ಅವರು ತಮ್ಮ ತಂಡದ ಯಾವುದಾದರು ಒಬ್ಬರು ಸದಸ್ಯರ ಜೊತೆ ಮಲಗುತ್ತಾರೆ ಎಂದು ತಿಳಿಸಿದ್ದಾರೆ.  ಇದರ ಬಗ್ಗೆ ಟೈಗರ್ ತಮ್ಮ ಹೀರೋಪಂತಿ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಜೀವನದ ಹಲವು ರಹಸ್ಯಗಳನ್ನು ಬಹಿರಂಗ ಪಡಿಸಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡೀಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅವರು ಬಾಲ್ಯದಲ್ಲಿ ಒಂದು ಹಾರರ್ ಸಿನಿಮಾ ನೋಡಿದ ನಂತರ, ಮತ್ತೆ ಒಬ್ಬರೇ ಮಲಗೋಕೆ ಸಿಕ್ಕಾಪಟ್ಟೆ ಭಯ ಪಟ್ಟರಂತೆ. ಆ ಭಯ ಇಂದಿಗೂ ಹಾಗೆಯೇ ಉಳಿದಿದೆ ಎನ್ನುತ್ತಾರೆ ಟೈಗರ್. ನಾನು ಮನೆಯಿಂದ ಹೊರಗೆ ಹೋದಾಗ ಅಥವಾ ಪ್ರಯಾಣಿಸಿದಾಗಲೆಲ್ಲಾ, ನಾನು ಯಾವಾಗಲೂ ತಂಡದ ಸದಸ್ಯರ ಜೊತೆ ಮಲಗುತ್ತೇನೆ, ಹಾಗೂ ನಾನು ಮನೆಯಲ್ಲಿದ್ದಾಗ, ನಾನು ನನ್ನ ತಾಯಿಯ ಪಕ್ಕದಲ್ಲಿ ಮಲಗುತ್ತೇನೆ ಎಂದು ಹೇಳಿದ್ದಾರೆ. ಇದನ್ನು ಕೇಳಿ ಜನರು ಹೆಸರು ಮಾತ್ರ ಟೈಗರ್ ಶ್ರಾಫ್, ಆಕ್ಷನ್ ಥ್ರಿಲ್ಲರ್ ಸಿನಿಮಾ ಕೂಡ ಮಾಡುತ್ತಾರೆ. ಆದರೆ ಒಬ್ಬರೆ ಮಲಗೋದೆ ಭಯಾನ? ಎಂದು ಕೇಳಿದ್ದಾರೆ. 

ಟೈಗರ್ ಶ್ರಾಫ್ ನಿಜವಾದ ಹೆಸರೇನು?

ಜಾಕಿ ಶ್ರಾಫ್ (Jackie Shroff) ಅವರ ಪುತ್ರ ಜಯ್ ಹೇಮಂತ್ ಶ್ರಾಫ್ ತಮ್ಮ ನಿಕ್ ನೇಮ್ ಟೈಗರ್ ಎನ್ನುವ ಹೆಸರಿನ ಮೂಲಕವೇ ಸಿನಿಮಾ ಇಂಡಷ್ಟ್ರಿಗೆ ಕಾಲಿಟ್ಟರು. ಅಷ್ಟೇ ಅಲ್ಲ ಒಂದರ ಮೇಲೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಮಾಡಿದ ನಟ, ಸದ್ಯ ತಮ್ಮದೇ ಭಾಗಿ ಫಿಲಂ ನ ನಾಲ್ಕನೇ ಭಾಗದಲ್ಲೂ ತಾವೇ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಕನ್ನಡದ ನಿರ್ದೇಶಕ ಎ ಹರ್ಷ ನಿರ್ದೇಶನ ಮಾಡಲಿದ್ದಾರೆ. ಭಾಗಿ 4 (Bhagi 4)  ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಂದು IIFA ವೇದಿಕೆಯಲ್ಲಿ ಯಶ್ ಆಡಿದ್ದ ಮಾತೇನು? ಇಂದು 'ವಿಷಕಾರಿ' ಆಗಿರೋ ರಾಕಿಂಗ್ ಸ್ಟಾರ್ ಮಾಡಿದ್ದೇನು?
Bigg Boss ಗಿಲ್ಲಿ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ನಟ ಜಗ್ಗೇಶ್​: ಮಾತು ನಿಜವಾಗೋಯ್ತು- ವಿಡಿಯೋ ವೈರಲ್​