ಹಿಂದಿಯಲ್ಲಿ 100 ಕೋಟಿ ರೂ. ದಾಟಿದ 'RRR' ಗಳಿಕೆ; 5 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

By Shruiti G Krishna  |  First Published Mar 30, 2022, 3:32 PM IST

ಎಸ್ ಎಸ್ ರಾಜಮೌಳಿ ನಿರ್ದೇಶಕ ಆರ್ ಆರ್ ಆರ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆಯಾಗಿ 5 ದಿನಗಳಲ್ಲಿ 600 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಹಿಂದಿಯಲ್ಲಿ ಆರ್ ಅರ್ ಆರ್ 100 ಕೋಟಿ ಕ್ಲಾಬ್ ಸೇರಿದೆ. 


ಎಸ್ ಎಸ್ ರಾಜಮೌಳಿ(Rajamouli) ಸಾರಥ್ಯದಲ್ಲಿ ಬಂದ ಆರ್ ಆರ್ ಆರ್(RRR) ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ 5ನೇ ದಿನವೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರಮಂದಿರಗಳು ಹೌಸ್ ಫುಲ್ ಆಗಿವೆ. ಆರ್ ಆರ್ ಆರ್ ಮಾರ್ಚ್ 25ರಂದು ಅದ್ದೂರಿಯಾಗಿ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಚಿತ್ರ ನೋಡಿ ಆನಂದಿಸುತ್ತಿದ್ದಾರೆ. ರಾಮ್ ಚರಣ್ ಮತ್ತು ಜೂ. ಎನ್ ಟಿ ಆರ್(Jr NTR and Ram Charans) ಅಭಿನಯಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. ಈಗಾಗಲೇ ರಾಜಮೌಳಿ ಸಿನಿಮಾ 500 ಕೋಟಿ ರೂಪಾಯಿ ಕಲೆಕ್ಷನ್ ದಾಟಿದ್ದು, 5 ನೇ ದಿನವೂ ಉತ್ತಮ ಗಳಿಕೆ ಮಾಡಿದೆ.

ಆರ್ ಆರ್ ಆರ್ ಸಿನಿಮಾ ಹಿಂದಿಯಲ್ಲಿ ಈಗಾಗಲೇ 100 ಕೋಟಿ ರೂಪಾಯಿ(100 crore) ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸಿನಿಮಾ ಬಿಡುಗಡೆಯಾಗಿ 5ನೇ ದಿನವೂ ಕಲೆಕ್ಷನ್ ಅಬ್ಬರ ಮುಂದುರೆದಿದೆ. ಹೀಗೆ ಮುಂದುವರೆದರೆ ಬಾಹುಬಲಿ ಕಲೆಕ್ಷನ್ ಬೀಟ್ ಮಾಡಲಿದೆ ಎನ್ನಲಾಗುತ್ತಿದೆ. ಹಿಂದಿಯ ಕಲೆಕ್ಷನ್ ಮಾಹಿತಿಯನ್ನು ಬಾಲಿವುಡ್ ಸಿನಿಮಾ ವಿಶ್ಲೇಷಕ ತರಣ್ ಆದರ್ಶನ್ ಶೇರ್ ಮಾಡಿದ್ದಾರೆ. ಹಿಂದಿಯಲ್ಲಿ ಒಟ್ಟು 107.59 ಕೋಟಿ ರೂ. ಕಲೆಕ್ಷನ್ ಮಾಡಿದೆ. ಶುಕ್ರವಾರ 20.07 ಕೋಟಿ, ಶನಿವಾರ 24 ಕೋಟಿ ರೂ, ಭಾನುವಾರ 31.50 ಕೋಟಿ ರೂ, ಸೋಮವಾರ 17 ಕೋಟಿ ರೂ, ಮಂಗಳವಾರ 15.02 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ತರಣ್ ಆದರ್ಶ್ ತಿಳಿಸಿದ್ದಾರೆ.

Tap to resize

Latest Videos

ಹಿಂದಿ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ. ದಾಟಿದ ರಾಜಮೌಳಿ ಅವರ 3ನೇ ಸಿನಿಮಾ ಇದಾಗಿದೆ. ಬಾಹುಬಲಿ 1 ಮತ್ತು 2 ಬಾಲಿವುಡ್ ನಲ್ಲಿ ದಾಖಲೆ ನಿರ್ಮಿಸಿತ್ತು. ಇದೀಗ ಆರ್ ಆರ್ ಆರ್ ಸಿನಿಮಾ ಕೂಡ 100 ಕೋಟಿ ಕ್ಲಬ್ ಸೇರಿದೆ. ಇನ್ನು ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಬಾಲಿವುಡ್ ನಲ್ಲಿ ಇದು ಮೊದಲ ಶತಕವಾಗಿದೆ. ಮಾಹಿತಿಗಳ ಪ್ರಕಾರ ಆರ್ ಆರ್ ಆರ್ ಇದುವರೆಗೂ 600 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಮೂರು ದಿನಕ್ಕೆ 500 ಕೋಟಿ ಬಾಚಿತಾ RRR? ರೆಕಾರ್ಡ್ ಬ್ರೇಕ್ ಮಾಡುತ್ತಾರಾ ರಾಜಮೌಳಿ?

feveRRR grips mass circuits... SupeRRRb hold... Will cross *lifetime biz* of 's *first Blockbuster* [] in *Week 1*... RRRacing towards ₹ 200 cr... Fri 20.07 cr, Sat 24 cr, Sun 31.50 cr, Mon 17 cr, Tue 15.02 cr. Total: ₹ 107.59 cr. biz. pic.twitter.com/mikZRMFrq8

— taran adarsh (@taran_adarsh)

ಇನ್ನು ರಾಜಮೌಳಿ ನಿರ್ದೇಶದ ಆರ್ ಆರ್ ಆರ್ ಮೊದಲ ದಿನವೇ ದಾಖಲೆ ಗಳಿಕೆ ಮಾಡಿತ್ತು. ಆಂಧ್ರ ಪ್ರದೇಶದಲ್ಲಿ 75 ಕೋಟಿ ರೂ. ಗಳಿಕೆ ಮಾಡಿದೆ. ಕರ್ನಾಟಕದಲ್ಲಿ 14.5 ಕೋಟಿ ರೂ. ಗಳಿಕೆ ಮಾಡಿದ್ರೆ ತಮಿಳುನಾಡಿನಲ್ಲಿ 10 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಕೇರಳದಲ್ಲಿ 4 ಕೋಟಿ ರೂ. ಆರ್ ಆರ್ ಆರ್ ಸಿನಿಮಾ ಬಾಚಿಕೊಂಡಿತ್ತು. ಉತ್ತರ ಭಾರತದಲ್ಲಿ 25 ಕೋಟಿ ರೂ. ಭಾರತದಲ್ಲಿ ರಾಜಮೌಳಿ ಸಿನಿಮಾ 156 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ವಿದೇಶದಲ್ಲಿಯೂ ಆರ್ ಆರ್ ಆರ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು. ಯು ಎಸ್ ನಲ್ಲಿ 42 ಕೋಟಿ ಕಲೆಕ್ಷನ್ ಮಾಡಿದೆ, ಬೇರೆ ಬೇರೆ ದೇಶಗಳಲ್ಲಿ 25 ಕೋಟಿ ರೂ. ಮೊದಲ ದಿನ ಒಟ್ಟು ಆರ್ ಆರ್ ಆರ್ ಕಲೆಕ್ಷನ್ 223 ಕೋಟಿ ರೂಪಾಯಿ ಆಗಿತ್ತು.

ಇನ್ನು ಸಿನಿಮಾದ ಬಗ್ಗೆ ಹೇಳುವುದಾದರೆ ಆರ್ ಆರ್ ಆರ್ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತರಾಮ ರಾಜು ಮತ್ತು ಕೋಮರಾಮ್ ಭೀಮ್ ಅವರ ಜೀವನದ ಆಧರಿಸಿದ ಕಾಲ್ಪನಿಕ ಕಥೆಯಾಗಿದೆ. ಚಿತ್ರದಲ್ಲಿ ರಾಮ್ ಚರಣ್ ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕೋಮರಾಮ್ ಭೀಮ್ ಪಾತ್ರದಲ್ಲಿ ಜೂ.ಎನ್ ಟಿ ಆರ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸುಮಾರು 450 ಕೋಟಿ ರೂ. ಬಜೆಟ್ ನಲ್ಲಿ ತಯಾರಾಗಿದೆ. ಡಿವಿವಿ ದಾನಯ್ಯ ನಿರ್ಮಾಣದಲ್ಲಿ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ಅಲಿಯಾ ಭಟ್, ಸಮುದ್ರ ಕಣಿ, ಅಜಯ್ ದೇವಗನ್, ಒಲಿವಿಯಾ ಮೋರಿಸ್ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ.

click me!