ಗ್ರೇಟ್ ಡೈರೆಕ್ಟರ್ ರಾಜಮೌಳಿ ಕರ್ನಾಟಕ-ಕಿತ್ತೂರು ಚೆನ್ನಮ್ಮ ಬಗ್ಗೆ ಹೇಳಿರೋ ಮಾತು ಮತ್ತೆ ವೈರಲ್, ಯಾಕೀಗ?

Published : Nov 14, 2025, 03:48 PM IST
SS Rajamouli

ಸಾರಾಂಶ

ನನ್ನ ಸಿನಿಮಾ ಇಡೀ ಭಾರತದ್ದು, ಇಡಿಯ ಭಾರತಕ್ಕೆ ನಾನೇನು ಕೊಡಲು ಸಾಧ್ಯ ಎಂದು ನಾನು ಯೋಚಿಸುತ್ತೇನೆ. ಕರ್ನಾಟಕ, ಒರಿಸ್ಸಾ ಅಥವಾ ಮತ್ತೊಂದು ರಾಜ್ಯಗಳ ಕಾನ್ಸೆಪ್ಟ್ ನನ್ನ ತಲೆಯಲ್ಲಿ ಬರೋದೇ ಇಲ್ಲ. ಪ್ರಶ್ನೆಗೆ ಉತ್ತರಿಸುತ್ತ ನಿರ್ದೇಶಕ ರಾಜಮೌಳಿಯವರು ತಮ್ಮ ಅಭಿಪ್ರಾಯವನ್ನು ಈ ಮೇಲಿನಂತೆ ಹೇಳಿದ್ದಾರೆ.

ಎಸ್‌ಎಸ್‌ ರಾಜಮೌಳಿಯವರ ಮಾತು!

ಇದು ಗ್ರೇಟ್ ಡೈರೆಕ್ಟರ್ ಎಸ್‌ಎಸ್ ರಾಜಮೌಳಿಯವರು (SS Rajamouli) ಆಡಿರೋ ಮಾತುಗಳು. ಅದೂ ಕೂಡ ಕರ್ನಾಕದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಎಂಬುದು ಗಮನಾರ್ಹ. ಹಾಗಿದ್ದರೆ ಈ ಪ್ರಶ್ನೆ-ಉತ್ತರ ಏನು ನೋಡಿ.. 'ನಾನು ಹುಟ್ಟಿದ್ದು ಕರ್ನಾಟಕದಲ್ಲಿ.. ಬೆಳೆದಿದ್ದು, ಓದಿದ್ದು ಆಂಧ್ರಪ್ರದೇಶ್.. ನಾನು ಸಿನಿಮಾ ವೃತ್ತಿ ಶುರುಮಾಡಿದ್ದು ತಮಿಳುನಾಡಿನಲ್ಲಿ. ನಾನು ವಾಸವಿರೋದು ತೆಲಂಗಾಣದಲ್ಲಿ. ಹೀಗೆ ನಾನು ನನ್ನ ಜೀವನದಲ್ಲಿ ಒಂದೇ ಕಡೆ ಇದ್ದೋನು ಅಲ್ಲ, ಬಾಲ್ಯದಿಂದಲೂ ಇಡೀ ಭಾರತವನ್ನು ಸುತ್ತುತ್ತಾ ಇರೋನು. ಇಡೀ ಭಾರತ ನನ್ನ ಜೀವನದ ಅವಿಭಾಜ್ಯ ಅಂಗ ಎನ್ನಲೇಬೇಕು. ಹೀಗಾಗಿ ನಾನು ಯಾವುದೇ ಒಂದು ಸ್ಥಳಕ್ಕೆ, ರಾಜ್ಯಕ್ಕೆ ಸಂಬಂಧಪಟ್ಟವನು ಅಲ್ಲ..

ಸಿನಿಮಾ ಮಾಡುವಾಗಲೂ ಅಷ್ಟೇ.. ನಾನು ಕರ್ನಾಟಕಕ್ಕೆ ನನ್ನ ಸಿನಿಮಾ ಮೂಲಕ ಏನೋ ಕೊಡಬೇಕು, ಓರಿಸ್ಸಾಗೆ ಏನೋ ಕೊಡಬೇಕು ಎಂದು ನಾನು ಯೋಚನೆ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ, ನಾನು ಇಡೀ ಭಾರತದ ಎಲ್ಲಾ ರಾಜ್ಯಗಳ ಎಲ್ಲಾ ಸ್ಥಳಗಳನ್ನೂ ನೋಡಿ ಬೆಳೆದವನು. ಎಲ್ಲಾ ಕಡೆ ವಿಭಿನ್ನ ಆದರೆ ವಿಶಿಷ್ಠ ಸಂಸ್ಕೃತಿ-ಸಂಪ್ರದಾಯಗಳು ಇವೆ.. ನಾನು ಎಲ್ಲವನ್ನೂ ನೋಡಿದ್ದೇನೆ, ಮೆಚ್ಚಿದ್ದೇನೆ. ಹೀಗಾಗಿ ನನ್ನ ಸಿನಿಮಾದಲ್ಲಿ ನಾನು ಯಾವುದೇ ರಾಜ್ಯಕ್ಕೆ ಅಥವಾ ಪ್ರದೇಶಕ್ಕೆ ಪ್ರಿಪರೆನ್ಸ್ ಕೊಡಲು ಸಾಧ್ಯವಾಗುವುದಿಲ್ಲ.

ನನ್ನ ಸಿನಿಮಾ ಇಡೀ ಭಾರತದ್ದು

ನನ್ನ ಸಿನಿಮಾ ಇಡೀ ಭಾರತದ್ದು, ಇಡಿಯ ಭಾರತಕ್ಕೆ ನಾನೇನು ಕೊಡಲು ಸಾಧ್ಯ ಎಂದು ನಾನು ಯೋಚಿಸುತ್ತೇನೆ. ಕರ್ನಾಟಕ, ಒರಿಸ್ಸಾ ಅಥವಾ ಮತ್ತೊಂದು ರಾಜ್ಯಗಳ ಕಾನ್ಸೆಪ್ಟ್ ನನ್ನ ತಲೆಯಲ್ಲಿ ಬರೋದೇ ಇಲ್ಲ. ಕಿತ್ತೂರ ರಾಣಿ ಚೆನ್ನಮ್ಮ ಅವರನ್ನು ನಾನು ನನ್ನ ಸಿನಿಮಾದಲ್ಲಿ ತಂದಾಗ, ನನಗೆ ಅವರೊಬ್ಬರು ಕನ್ನಡಿಗರು, ಅಥವಾ ಇನ್ನೆಲ್ಲಿಯವರೋ ಎನ್ನುವ ಭಾವ ಇಲ್ಲ, ಬದಲಿಗೆ ಅವರೊಬ್ಬರು ಗ್ರೇಟ್ ರಾಣಿ, ವೀರವನಿತೆ, ಅವರೊಬ್ಬರು ಗ್ರೇಟ್ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದಷ್ಟೇ ನಾನು ಭಾವಿಸುತ್ತೇನೆ. ಜೊತೆಗೆ, ನನ್ನ ಸಿನಿಮಾ ಮೂಲಕ ಅವರಿಗೆ ಗೌರವ ಸಲ್ಲಿಸಲು ನಾನು ಬಯಸುತ್ತೇನೆ' ಎಂದಿದ್ದಾರೆ ಅಂತರಾಷ್ಟ್ರೀಯ ಖ್ಯಾತಿಯ ಭಾರತದ ನಿರ್ದೇಶಕರಾದ ಎಸ್‌ಎಸ್‌ ರಾಜಮೌಳಿಯವರು.

ಜೂನಿಯರ್ ಎನ್‌ಟಿಆರ್' ಇದ್ದರು

ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ 'ಆರ್‌ಆರ್‌ಆರ್‌' ಸಿನಿಮಾದ ಬಿಡುಗಡೆ ವೇಳೆಯಲ್ಲಿ ಮಾಡಿರುವ ಸಂದರ್ಶನ ಎನ್ನಬಹುದು. ಏಕೆಂದರೆ, ಅಂದು ನಿರ್ದೇಶಕ ಎಸ್‌ಎಸ್‌ ರಾಜಮೌಳಿಯವರ ಜೊತೆ RRR ಸಿನಿಮಾದ ನಾಯಕನಟರಲ್ಲಿ ಒಬ್ಬರಾದ 'ಜೂನಿಯರ್ ಎನ್‌ಟಿಆರ್' ಇದ್ದರು. ಕೇಳಿರುವ ಪ್ರಶ್ನೆಗೆ ಉತ್ತರಿಸುತ್ತ ನಿರ್ದೇಶಕ ರಾಜಮೌಳಿಯವರು ತಮ್ಮ ಅಭಿಪ್ರಾಯವನ್ನು ಈ ಮೇಲಿನಂತೆ ಹೇಳಿದ್ದಾರೆ. ಅದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?