ಸೀರಿಯಲ್ ಕಿಸ್ಸರ್ ಇಮ್ರಾನ್ ಹಶ್ಮಿ ಬಾಲಿವುಡ್ ನ ಪ್ರಸಿದ್ಧ ನಟರಲ್ಲಿ ಒಬ್ಬರು. ಆನ್ ಸ್ಕ್ರೀನ್ ನಲ್ಲಿ ಮುತ್ತಿನ ಮಳೆಗೈದಿದ್ದ ಇಮ್ರಾನ್ ಹಶ್ಮಿ ಪತ್ನಿಯ ಬಗ್ಗೆ ಅನೇಕ ವಿಷ್ಯಗಳನ್ನು ಮಾತನಾಡಿದ್ದಾರೆ. ಮುತ್ತಿನ ದೃಶ್ಯದ ನಂತ್ರ ಪತ್ನಿಗೆ ಬ್ಯಾಗ್ ನೀಡ್ತಿದ್ದ ಇಮ್ರಾನ್ ಈಗ ಲಕ್ಕಿ ಎನ್ನಲು ಕಾರಣವೇನು?
ಒಂದು ಕಾಲದಲ್ಲಿ ಸೀರಿಯಲ್ ಕಿಸ್ಸರ್ ಎಂದೇ ಹೆಸರು ಪಡೆದವರು ಬಾಲಿವುಡ್ ನಟ ಇಮ್ರಾನ್ ಹಶ್ಮಿ. ಇತ್ತೀಚಿನ ದಿನಗಳಲ್ಲಿ ಆನ್ ಸ್ಕ್ರೀನ್ ನಲ್ಲಿ ಕಿಸ್ಸಿಂಗ್ ದೃಶ್ಯ ಕಡಿಮೆ ಆಗಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ ಇಮ್ರಾನ್ ಹಶ್ಮಿ, ಕಿಸ್ಸಿಂಗ್ ದೃಶ್ಯಕ್ಕೆ ಪತ್ನಿ ಹೇಗೆ ರಿಯಾಕ್ಟ್ ಮಾಡ್ತಿದ್ದರು, ಅವರ ಮಧ್ಯೆ ಒಪ್ಪಂದ ಏನಿತ್ತು, ಈಗ ಆ ಒಪ್ಪಂದ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ಹೇಳಿದ್ದಾರೆ.
ಕಿಸ್ಸಿಂಗ್ (Kissing) ದೃಶ್ಯದ ನಂತ್ರ ಶಾಪಿಂಗ್ – ಹ್ಯಾಂಡ್ ಬ್ಯಾಗ್ (Hand Bag) : 2016ರ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟ ಇಮ್ರಾನ್ ಹಶ್ಮಿ (Emraan Hashmi) , ಆನ್ ಸ್ಕ್ರೀನ್ ನಲ್ಲಿ ಮುತ್ತಿಡುವ ದೃಶ್ಯ ಮಾಡಿದಾಗ ಪತ್ನಿ ಪರ್ವೀನ್ ಶಹಾನಿ ಹೇಗೆ ರಿಯಾಕ್ಟ್ ಮಾಡ್ತಾರೆ ಎಂಬುದನ್ನು ಹೇಳಿದ್ದರು. ಅವರಿಬ್ಬರ ಮಧ್ಯೆ ಒಂದು ಒಪ್ಪಂದವಿತ್ತು. ಇಮ್ರಾನ್ ಹಶ್ಮಿ ಕಿಸ್ಸಿಂಗ್ ದೃಶ್ಯ ಮಾಡಿದ ನಂತ್ರ ಪತ್ನಿಯನ್ನು ಶಾಪಿಂಗ್ (Shopping) ಗೆ ಕರೆದುಕೊಂಡು ಹೋಗ್ಬೇಕಿತ್ತು. ಅವರಿಗೆ ಒಂದು ಹ್ಯಾಂಡ್ ಬ್ಯಾಗ್ ಕೊಡಿಸಬೇಕು ಎಂದು ಇಮ್ರಾನ್ ಹಶ್ಮಿ ಹೇಳಿದ್ದರು. ಕೆಲ ದಿನಗಳ ಹಿಂದೆ ನಡೆದ ಎನ್ ಡಿಟಿವಿ ಸಂದರ್ಶನದಲ್ಲಿ ಆ ಒಪ್ಪಂದದ ಬಗ್ಗೆ ಇಮ್ರಾನ್ ಹಶ್ಮಿ ಮತ್ತೆ ಮಾತನಾಡಿದ್ದಾರೆ. ಸದ್ಯ ಈಗ ಆ ಒಪ್ಪಂದವಿಲ್ಲ ಎಂದು ನಿಟ್ಟುಸಿರುಬಿಟ್ಟಿದ್ದಾರೆ. ಅದಕ್ಕೆ ಕಾರಣ ಹ್ಯಾಂಡ್ ಬ್ಯಾಗ್ ಬೆಲೆ. ಅದೃಷ್ಟಕ್ಕೆ ಈಗ ಈ ಒಪ್ಪಂದವಿಲ್ಲ. ಇಲ್ಲ ಅಂದ್ರೆ ನನ್ನ ಬ್ಯಾಂಕ್ ಬ್ಯಾಲೆನ್ಸ್ ಝಿರೋ ಆಗ್ತಿತ್ತು. ಈಗ ಹ್ಯಾಂಡ್ ಬ್ಯಾಗ್ ಬೆಲೆ ಎಷ್ಟು ದುಬಾರಿ ಎಂದು ಇಬ್ರಾನ್ ಹಶ್ಮಿ ಹೇಳಿದ್ದಾರೆ.
ಆತ ಪ್ಯಾಂಟ್ ಜಿಪ್ ತೆಗೆದು ನನ್ನ ಕೈ.... ಶಾಕಿಂಗ್ ಘಟನೆ ಬಿಚ್ಚಿಟ್ಟ ನಟಿ ತಿಲೋತ್ತಮ ಶೋಮ್!
ಆನ್ ಸ್ಕ್ರೀನ್ ಕಿಸ್ಸಿಂಗ್ ನೀವು ಎಂಜಾಯ್ ಮಾಡ್ತೀರಾ ಎನ್ನುವ ಪ್ರಶ್ನೆಗೆ ಹೌದು ಎಂದ ಇಮ್ರಾನ್ ಹಶ್ಮಿ, ಇದನ್ನು ನಾನು ಕೆಟ್ಟದು ಎಂದು ಭಾವಿಸೋದಿಲ್ಲ. ಇದು ನನ್ನ ಕೆಲಸ ಎಂದಿದ್ದಾರೆ. ಸಂದರ್ಶನವನ್ನು ಪತ್ನಿ ನೋಡ್ತಿರುತ್ತಾರೆ ಎಂದು ಇಮ್ರಾನ್ ಹಶ್ಮಿ ತಮಾಷೆ ಮಾಡಿದ್ದಾರೆ.
ಇದಕ್ಕೂ ಮುನ್ನವೂ ಇಬ್ರಾನ್ ಹಶ್ಮಿ, ಕಿಸ್ಸಿಂಗ್ ದೃಶ್ಯದ ಬಗ್ಗೆ ಪತ್ನಿ ಹೇಗೆ ರಿಯಾಕ್ಟ್ ಮಾಡ್ತಾರೆ ಎಂಬುದನ್ನು ಹೇಳಿದ್ದರು. ನಾನು ಪತ್ನಿಗೆ ದೃಶ್ಯದ ಬಗ್ಗೆ ಹೇಳೋದಿಲ್ಲ. ಸಿನಿಮಾ ಬಗ್ಗೆ ಮಾತ್ರ ಹೇಳ್ತೇನೆ. ಆಕೆ ಅದ್ರ ಬಗ್ಗೆ ಹೆಚ್ಚಾಗಿ ಕೇಳೋದಿಲ್ಲ. ಪರ್ವೀನ್ ಶಹಾನಿ, ಸಿನಿಮಾ ಲವ್ವರ್ ಹೌದು. ಆದ್ರೆ ಗ್ಲಾಮರ್ ಇಷ್ಟವಾಗೋದಿಲ್ಲ. ಅವಳಿಗೆ ಅವಳ ಲೈಫ್ ಇದೆ. ಕಿಸ್ಸಿಂಗ್ ದೃಶ್ಯ ಆಕೆಗೆ ಸಮಸ್ಯೆ ಎನ್ನಿಸಿದ್ರೂ ಅದು ನನ್ನ ಕೆಲಸ ಎಂಬುದನ್ನು ಆಕೆ ಅರ್ಥ ಮಾಡಿಕೊಂಡಿದ್ದಾಳೆ ಎಂದು ಇಬ್ರಾನ್ ಹಶ್ಮಿ ಹೇಳಿದ್ದರು.
ಕಾಫಿ ವಿತ್ ಕರಣ್ ಸಂದರ್ಶನದ ವೇಳೆಯೂ ಇಬ್ರಾನ್ ಹಶ್ಮಿ, ಪತ್ನಿ ಹಾಗೂ ಕಿಸ್ಸಿಂಗ್ ದೃಶ್ಯದ ಬಗ್ಗೆ ಮಾತನಾಡಿದ್ದರು. ಮರ್ಡರ್ ಸಿನಿಮಾ ನೋಡಿದ್ದ ಪತ್ನಿ, ಕೋಪದಲ್ಲಿ ಇಮ್ರಾನ್ ಹಶ್ಮಿ ಮೇಲೆ ಪತ್ನಿ ದಾಳಿ ಮಾಡಿದ್ದರು. ಕೈ ಮೇಲೆ ಉಗುರಿನಿಂದ ಎಷ್ಟು ಗಟ್ಟಿಯಾಗಿ ಚುಚ್ಚಿದ್ದರೆಂದ್ರೆ ರಕ್ತ ಬಂದಿತ್ತು. ನೀವು ಏನು ಮಾಡ್ತಿದ್ದೀರಿ, ನನ್ನನ್ನು ಇದಕ್ಕೆ ಸಿದ್ಧಪಡಿಸಿಲ್ಲ ಎಂದು ಪರ್ವೀನ್ ಶಹಾನಿ ಹೇಳಿದ್ದರು.
ವಿಷ್ಣು ಸರ್ ನಟಿಸಲ್ಲ ಅಂದ್ರೆ ನಾನೂ ನಟಿಸಲ್ಲ ಅಂದಿದ್ರಂತೆ ಜಯಲಲಿತಾ; ಮನಸ್ಸಿನಲ್ಲಿ ಏನಿತ್ತಂತೆ ಗೊತ್ತಾ?
ವೈವಿಧ್ಯಮಯ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಇಮ್ರಾನ್ ಹಶ್ಮಿ, ಮರ್ಡರ್, ಆಶಿಕ್ ಬನಾಯಾ ಆಪ್ನೆ ಸೇರಿದಂತೆ ಹಲವು ಚಿತ್ರಗಳಲ್ಲಿ ಕಿಸ್ಸಿಂಗ್ ದೃಶ್ಯಗಳಲ್ಲಿ ಇಮ್ರಾನ್ ನಟಿಸಿದ್ದಾರೆ. ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿರುವ ಶೋಟೈಮ್ ವೆಬ್ ಸರಣಿಯಲ್ಲಿ ನಟಿಸಿದ್ದರು. ಐಶ್ವರ್ಯ ರೈ ಹಾಗೂ ಇಮ್ರಾನ್ ಹಶ್ಮಿ ವಿವಾದವೊಂದು ನಡೆದಿತ್ತು. ಹಶ್ಮಿ ಈ ಬಗ್ಗೆ ಕ್ಷಮೆ ಕೂಡ ಕೇಳಿದ್ದರು.