ಹಾಟ್ ನಟಿಯೆಂದೇ ಫೇಮಸ್ ಆಗಿರೋ ಕುಬ್ರಾ ಸೇಠ್ ಅವರಿಗೆ ಇಂದು (ಜುಲೈ 27) ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಅವರ ಜೀವನದ ಹಲವು ಘಟನೆಗಳ ಸಂದರ್ಶನ ವೈರಲ್ ಆಗಿದೆ. ಅವರು ಹೇಳಿದ್ದೇನು?
'ಸೆಕ್ರೆಡ್ ಗೇಮ್ಸ್' ವೆಬ್ ಸೀರಿಸ್ನಲ್ಲಿ ತೃತೀಯ ಲಿಂಗಿ ಪಾತ್ರ ಮಾಡುವ ಸಕತ್ ಫೇಮಸ್ ಆಗಿರೋ ನಟಿ ಕುಬ್ರಾ ಸೇಠ್. ಅಪರೂಪಕ್ಕೊಮ್ಮೆ ಸಿನಿಮಾ ಮಾಡಿದರೂ, ಇಂಟಿಮೇಟ್ ದೃಶ್ಯಗಳು, ಹಾಟ್ ದೃಶ್ಯಗಳಿಂದಲೇ ಸದ್ದು ಮಾಡುತ್ತಿರುವವರು ಸೆಕ್ರೆಡ್ ಗೇಮ್ಸ್ ವೆಬ್ ಸೀರಿಸ್ನಲ್ಲಿಯೂ ಇವರದ್ದು ಇದೇ ರೀತಿಯ ಪಾತ್ರವೇ. ಜೀವನದಲ್ಲಿ ಹಲವಾರು ಭಯಾನಕ ಘಟನೆಗಳನ್ನು ಎದುರಿಸಿರುವ ನಟಿ ಕುಬ್ರಾ ಅವರಿಗೆ ಇಂದು ಅಂದರೆ 27ನೇ ಜುಲೈ 41ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಇವರ ಜೀವನ ಆಧರಿತ 'ಓಪನ್ ಬುಕ್: ನಾಟ್ ಕ್ವಿಟ್ ಎ ಮೆಮೊಯಿರ್' ಬಿಡುಗಡೆಯಾಗಿತ್ತು. ಈ ಪುಸ್ತಕದಲ್ಲಿ ಕುಬ್ರಾ ಅವರ ಜೀವನದ ಹಲವಾರು ಘಟನೆಗಳನ್ನು ವಿವರಿಸಲಾಗಿದೆ. ಬಾಲ್ಯದಲ್ಲಿ ಅಂಕಲ್ನಿಂದಲೇ ಅನುಭವಿಸಿದ ಲೈಂಗಿಕ ಕಿರುಕುಳ ಸೇರಿದಂತೆ ಬಾಡಿ ಶೇಮಿಂಗ್, ಆ ಬಳಿಕ ವ್ಯಕ್ತಿಯೊಬ್ಬನ ಜೊತೆ ಅಚಾನಕ್ ಆಗಿ ಸೆಕ್ಸ್ ಮಾಡಿದ್ದು ಎಲ್ಲವನ್ನೂ ಹೇಳಿಕೊಂಡಿದ್ದಾರೆ.
ಇದಕ್ಕೆ ಸಂಬಂಧಿಸಿದ ಅವರ ಸಂದರ್ಶನದ ವಿಡಿಯೋ ಒಂದು ಹುಟ್ಟುಹಬ್ಬದ ಅಂಗವಾಗಿ ಮತ್ತೆ ವೈರಲ್ ಆಗುತ್ತಿದೆ. ಇದು ಸೆಕ್ರೆಡ್ ಗೇಮ್ಸ್ ವೆಬ್ ಸರಣಿಯಲ್ಲಿ ನಟ ನವಾಜುದ್ದೀನ್ ಸಿದ್ಧಕಿ ಅವರ ಜೊತೆ ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ದೃಶ್ಯಗಳು ಬಿಡುಗಡೆಯಾದ ಮೇಲೆ ಸಾಕಷ್ಟು ಹಲ್ಚಲ್ ಕೂಡ ಸೃಷ್ಟಿಸಿದೆ. ಕುಕೂ ಹೆಸರಿನ ತೃತೀಯಲಿಂಗಿ ಪಾತ್ರ ಮಾಡಿದ್ದ ಕುಬ್ರಾ, ಡಾನ್ ಗಣೇಶ್ ಗಾಯ್ತೊಂಡೆ ಪಾತ್ರ ಮಾಡುತ್ತಿರುವ ನವಾಜುದ್ದೀನ್ ಸಿದ್ಧಕಿ ಜೊತೆ ಹಲವಾರು ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದನ್ನು ಮಾಡುವುದು ತಮಗೆ ಅಷ್ಟು ಸುಲಭವಾಗಿರಲಿಲ್ಲ ಎಂದು ಕುಬ್ರಾ ಹೇಳಿದ್ದಾರೆ. ಸೆಕ್ಸ್ ಸೀನ್ ಮಾಡುವ ಸಂದರ್ಭದಲ್ಲಿ ಏಳು ಬಾರಿ ರೀ ಟೇಕ್ ಮಾಡಲಾಯಿತು. ಪ್ರತಿ ಬಾರಿ ಸೆಕ್ಸ್ ಸೀನ್ ಮಾಡಿದಾಗಲೂ ಅದು ಸರಿ ಬರುತ್ತಿರಲಿಲ್ಲ ಎಂದು ಹಲವು ಬಾರಿ ಮಾಡಿಸಿದ್ರು. ಇದು ನನಗೆ ಶಾಕ್ ಕೊಟ್ಟಿತ್ತು. ಶೂಟಿಂಗ್ ಆದ ಮೇಲೆ ತುಂಬಾ ಅಳುತ್ತಿದ್ದೆ ಎಂದಿದ್ದಾರೆ.
ಮದ್ವೆಯಾಗದೇ ಮಗು ಬೇಕೆಂದ ನಟಿ ಮೃಣಾಲ್ ಹೀಗಾ ಕಲ್ಲಂಗಡಿ ತಿನ್ನೋದು? ವಿಡಿಯೋ ನೋಡಿ ಯುವಕರ ಬಾಯಲ್ಲಿ ನೀರು!
ಇದೇ ಸಂದರ್ಶನದಲ್ಲಿ ಕುಬ್ರಅ ಅವರು, 30ನೇ ವಯಸ್ಸಿನ ಘಟನೆಯನ್ನು ತಿಳಿಸಿದ್ದಾರೆ. ಅದರಲ್ಲಿ ಕೂಬಾ ಡೈವಿಂಗ್ ಕಲಿತ ಬಳಿಕ ಅಂಡಮಾನ್ ಸಮುದ್ರದಲ್ಲಿ ಡೈವಿಂಗ್ ಮಾಡಲು ಸ್ನೇಹಿತನ ಜೊತೆ ಹೋದಾಗ ಆದ ಘಟನೆಯನ್ನು ವಿವರಿಸಿದ್ದಾರೆ. ಆ ಸ್ನೇಹಿತನ ಜೊತೆ ಮೈಮರೆತೆ. ಆತನ ಜೊತೆ ತುಂಬಾ ಕಂಫರ್ಟಬಲ್ ಎನಿಸಿ ಸೆಕ್ಸ್ ಮಾಡಿಬಿಟ್ಟೆ. ನಂತರ ಶೂಟಿಂಗ್ನಲ್ಲಿ ಪಾಲ್ಗೊಂಡು ಆ ವಿಚಾರವನ್ನು ಮರೆತು ಬಿಟ್ಟಿದ್ದೆ. ಆದರೆ ಮೂರು ತಿಂಗಳು ಪಿರಿಯಡ್ ಆಗದೇ ಇರುವುದು ನನ್ನ ಗಮನಕ್ಕೆ ಬರಲೇ ಇಲ್ಲ. ಆ ನಂತರ ಅರಿವಾಗಿ ಶಾಕ್ಗೆ ಒಳಗಾದೆ ಎಂದ ನಟಿ, ಗರ್ಭಿಣಿಯಾಗಿದ್ದು ಪರೀಕ್ಷೆಯಿಂದ ತಿಳಿಯಿತು. ಆದರೆ ಆ ವ್ಯಕ್ತಿ ನನ್ನ ಕಡೆ ತಿರುಗಿಯೇ ನೋಡಲಿಲ್ಲ. ಇದರಿಂದ ಅನಿವಾರ್ಯವಾಗಿ ಅಬಾಷನ್ ಮಾಡಿಕೊಳ್ಳಬೇಕಾಯಿತು ಎಂದಿದ್ದಾರೆ.
ಇದೇ ವೇಳೆ, ಬಾಲ್ಯದಲ್ಲಿ ಅಂಕಲ್ ಲೈಂಗಿಕ ಕಿರುಕುಳ ಕೊಟ್ಟ ಬಗ್ಗೆ ಸಂದರ್ಶನದಲ್ಲಿ ನಟಿ ಹೇಳಿಕೊಂಡಿದ್ದಾರೆ. ನನಗೆ ನನ್ನ ಅಂಕಲ್ ಲೈಂಗಿಕ ಕಿರುಕುಳ ಕೊಡುತ್ತಿದ್ದರು. ನಾನು ಬೇಡ ಎಂದು ಎಷ್ಟು ಸಲ ಹೇಳಿದ್ದರೂ ಅರ್ಥವಾಗುತ್ತಿರಲಿಲ್ಲ. ಲೈಂಗಿಕವಾಗಿ ಬಳಸಿಕೊಂಡರು ಎಂದೂ ತಿಳಿಸಿದ್ದಾರೆ. ಎಲ್ಲವನ್ನೂ ಧೈರ್ಯ ಮಾಡಿ ಅಮ್ಮನ ಎದುರು ಹೇಳಿದೆ. ಅಬಾರ್ಷನ್ ಘಟನೆ ಕೂಡ ತಿಳಿಸಿದೆ. ನನ್ನ ತಾಯಿ ಒಂದು ಮಾತು ಹೇಳುತ್ತಿದ್ದರು ಏನೇ ವಿಚಾರ ಇದ್ದರೂ ನೀನು ನೇರವಾಗಿ ಬಂದು ಹೇಳಬೇಕು ಮತ್ತೊಬ್ಬರಿಂದ ನಾನು ಕೇಳಿಸಿಕೊಳ್ಳಬಾರದು ಎಂದು. ಈಗಲೂ ಆಕೆ ಮಾತನನ್ನು ಪಾಲಿಸುತ್ತಿರುವೆ, ಪ್ರತಿಯೊಂದು ವಿಚಾರ ಹಂಚಿಕೊಂಡಿರುವೆ ಅದೇ ಧೈರ್ಯದ ಮೇಲೆ ಪುಸ್ತಕ ಬರೆದಿರುವೆ ಎಂದಿದ್ದರು.
ನೀನು ನನ್ನನ್ನೇ ಲವ್ ಮಾಡೋದು ಚೆನ್ನಾಗಿ ಗೊತ್ತು ಎಂದಳಲ್ಲಾ ನಿವೇದಿತಾ! ಮಂಚದಲ್ಲಿ ಕುಳಿತು ಏನಿದು ಹೊಸ ಸ್ಟೋರಿ?