
ನವದೆಹಲಿ (ಮಾ.31): ಕನ್ನಡದ ನಟಿ, ನಿರ್ದೇಶಕಿ ರೂಪಾ ಅಯ್ಯರ್ ಅವರು ನಟಿಸಿ, ನಿರ್ದೇಶಿಸಿರುವ ಹಿಂದಿ ಸಿನಿಮಾ ‘ಆಜಾದ್ ಭಾರತ್’ ಏ.1ರಂದು ದೆಹಲಿಯ ಸಂಸತ್ ಭವನದ ಸಿ.ಎಂ.ಸಿ. ಬಾಲಯೋಗಿ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ಪ್ರದರ್ಶನಗೊಳ್ಳಲಿದೆ. ಮುಂಗಡ ಟಿಕೆಟ್ ರಾಜ್ಯಸಭಾ ಕಾರ್ಯಾಲಯದ ಸ್ವಾಗತ ಕಚೇರಿಯಲ್ಲಿ ದೊರೆಯಲಿದೆ.
ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು, ಅಧಿಕಾರಿಗಳು ಹಾಗೂ ಅವರ ಕುಟುಂಬಸ್ಥರು ಚಿತ್ರವನ್ನು ವೀಕ್ಷಿಸಲಿದ್ದಾರೆ. ಈ ಚಿತ್ರ ನೇತಾಜಿ ಸುಭಾಷ್‌ಚಂದ್ರ ಬೋಸ್ ಹಾಗೂ ಸ್ವಾತಂತ್ರ್ಯ ಹೋರಾಟಗಾರ್ತಿ ನೀರಾ ಆರ್ಯ ಅವರ ಕುರಿತಾದ ಕಥಾಹಂದರ ಹೊಂದಿದೆ. ಬೋಸ್ ಸ್ಥಾಪಿಸಿದ ಮೊದಲ ಮಹಿಳಾ ಸೈನ್ಯದ ಬಗೆಗಿನ ಆಸಕ್ತಿದಾಯಕ ವಿಚಾರಗಳನ್ನು ತೆರೆಮೇಲೆ ತರಲಾಗಿದೆ. ಈ ಚಿತ್ರವನ್ನು ನೇತಾಜಿ ಬೋಸ್ ಅವರಿಗೆ ಅರ್ಪಣೆ ಮಾಡಲಾಗಿದೆ.
ನೇತಾಜಿ ಪಾತ್ರದಲ್ಲಿ ಬಾಲಿವುಡ್ ನಟ ಶ್ರೇಯಸ್ ತಲ್ಪಡೆ ಬಣ್ಣ ಹಚ್ಚಿದ್ದಾರೆ. 3 ಪ್ರಮುಖ ಮಹಿಳಾ ಪಾತ್ರಗಲಿದ್ದು, ನೀರಾ ಆರ್ಯ ಪಾತ್ರದಲ್ಲಿ ಸ್ವತಃ ರೂಪಾ ಅಯ್ಯರ್, ದುರ್ಗಾ ಪಾತ್ರದಲ್ಲಿ ಹಿತಾ ಚಂದ್ರಶೇಖರ್ ಹಾಗೂ ಸರಸ್ವತಿ ರಾಜಾಮಣಿ ಪಾತ್ರದಲ್ಲಿ ಇನ್ನೊಬ್ಬ ಜನಪ್ರಿಯ ನಟಿ ನಟಿಸಿದ್ದಾರೆ. ಸುರೇಶ್ ಓಬೇರಾಯ್, ಬಿರಾದಾರ್, ಸುಚೇಂದ್ರ ಪ್ರಸಾದ್ ಮೊದಲಾದವರ ತಾರಾಗಣವಿದೆ. ಚಿತ್ರದಲ್ಲಿ 7 ಹಾಡುಗಳಿವೆ. ವಿಶೇಷವೆಂದರೆ, ಒಂದು ಹಾಡನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಹಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.