ಮುಂಬೈ ಗಲ್ಲಿಯಲ್ಲಿ ರಾಕಿ ಭಾಯ್ ಯಶ್; ಮರಾಠಿಗರ ಬಾಯಲ್ಲಿ ಬಂತು ಅಣ್ಣ ಹೇಗಿದ್ದೀರಾ..!

By Sathish Kumar KH  |  First Published Nov 10, 2024, 6:08 PM IST

ರಾಕಿಂಗ್ ಸ್ಟಾರ್ ಯಶ್ ಅವರು ಟಾಕ್ಸಿಕ್ ಸಿನಿಮಾ ಶೂಟಿಂಗ್‌ಗಾಗಿ ಮುಂಬೈಗೆ ತೆರಳಿದ್ದು, ಅಲ್ಲಿನ ಮರಾಠಿ ಅಭಿಮಾನಿಗಳು ಅವರನ್ನು ಯಶ್ ಅಣ್ಣಾ ಹೇಗಿದ್ದೀರಾ..? ಎಂದು ಕನ್ನಡದಲ್ಲಿಯೇ ಮಾತನಾಡಿಸಿದ್ದಾರೆ.


ಮುಂಬೈ (ನ.10): ಕನ್ನಡದ ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಟಾಕ್ಸಿಕ್ ಸಿನಿಮಾ ಶೂಟಿಂಗ್ ಕಾರ್ಯದಲ್ಲಿ ಭಾಗವಹಿಸಲು ಮುಂಬೈನ ಗಲ್ಲಿಯೊಂದಕ್ಕೆ ತೆರಳಿದ್ದು, ಅಲ್ಲಿ ಮರಾಠಿಗರು ರಾಕಿ ಭಾಯ್, ಕೆಜಿಎಫ್ ರಾಖಿ, ಯಶ್ ಸರ್ ಬೋಲ್ನಾ ಎಂದು ಹೇಳಿದ್ದಾರೆ. ಮತ್ತೊಬ್ಬರು ಅಣ್ಣಾ ಹೇಗಿದ್ದೀರಾ.? ಎಂದು ಕನ್ನಡದಲ್ಲಿಯೇ ಮಾತನಾಡಿಸಿದ್ದಾರೆ. ಮಹಾರಾಷ್ಟ್ರದ ರಾಜಧಾನಿ ಮುಂಬೈ ಗಲ್ಲಿಯಲ್ಲಿ ಕನ್ನಡ ಪದ ಕೇಳಿದ ಕನ್ನಡಿಗರು ಖುಷ್ ಆಗಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅವರು ಟಾಕ್ಸಿಕ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿ ಆಗಿದ್ದಾರೆ. ಬೆಂಗಳೂರಿನ ಪೀಣ್ಯ ಬಳಿಯಿರುವ ಹೆಚ್‌ಎಂಟಿ ಕಾರ್ಖಾನೆಯ ಆಸ್ತಿಯಲ್ಲಿ ಅದ್ಧೂರಿ ಸೆಟ್ ಹಾಕಿದ್ದು, ಈ ಜಾಗದ ವಿವಾದದಿಂದಾಗಿ ರಾಜ್ಯ ಸರ್ಕಾರ ಸಿನಿಮಾ ಸೆಟ್ ತೆರವುಗೊಳಿಸಿದೆ. ಇದರಿಂದ ಟಾಕ್ಸಿಕ್ ಸಿನಿಮಾ ಶೂಟಿಂಗ್ ಮುಂಬೈಗೆ ವರ್ಗಾವಣೆ ಆಗಿದೆ. ಹೀಗಾಗಿ, ಶೂಟಿಂಗ್ ಕಾರ್ಯದಲ್ಲಿ ಭಾಗಿಯಾಗಲು ಮುಂಬೈ ಗಲ್ಲಿಗೆ ರಾಕಿಂಗ್ ಸ್ಟಾರ್ ಯಶ್ ತೆರಳಿದ್ದರು. ಮುಖಕ್ಕೆ ಮಾಸ್ಕ್ ಹಾಕಿಕೊಂಡು ತೆರಳಿದ್ದರೂ, ಅಲ್ಲಿನ ಜನರು ಕೆಜಿಎಫ್ ರಾಕಿ ಭಾಯ್ ಎಂದು ಗುರುತಿಸಿ ಅವರನ್ನು ಮಾತನಾಡಿಸಲು ಮುಂದಾಗಿದ್ದಾರೆ. ಹೀಗಾಗಿ, ರಾಕಿಂಗ್ ಸ್ಟಾರ್ ಯಶ್ ಅವರನ್ನು ನೋಡುತ್ತಿದ್ದಂತೆ ಎಲ್ಲರೂ ಮುಖದ ಮೇಲಿನ ಮಾಸ್ಕ್ ತೆಗೆದು ಮಾತನಾಡುವಂತೆ ಗೋಗರೆದಿದ್ದಾರೆ. ಇನ್ನು ಕೆಲವರು ತಮ್ಮ ಮೊಬೈಲ್‌ನಲ್ಲಿ, ಕ್ಯಾಮೆರಾಗಳಲ್ಲಿ ಯಶ್ ಅವರ ವಿಡಿಯೋ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ತಮ್ಮನ್ನು ಮಾತನಾಡಿಸುವಂತೆ ಮನವಿ ಮಾಡಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ: ಯಶ್ ಕನ್ನಡ ಪ್ರೇಮಕ್ಕೆ ಫ್ಯಾನ್ಸ್ ಫಿದಾ; ಹೊಸ ಕಾರಿನ ಮೇಲೆ ಕನ್ನಡದಲ್ಲೇ ಸಹಿ ಹಾಕಿದ ರಾಕಿಂಗ್ ಸ್ಟಾರ್!

ಈ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಇನ್‌ಸಲ್ಟರ್ (@Insulter3730010) ಎಂಬ ವ್ಯಕ್ತಿ ಶೇರ್ ಮಾಡಿಕೊಂಡಿದ್ದು, 8,500ಕ್ಕೂ ಅಧಿಕ ವೀಕ್ಷಣೆಯಾಗಿದೆ. ಒಂದು ಸಾವಿರ ಲೈಕ್ಸ್, 50ಕ್ಕೂ ಅಧಿಕ ರಿಟ್ವೀಟ್ ಆಗಿದೆ. ಈ ವಿಡಿಯೋದಲ್ಲಿ ಯಶ್ ಅವರು ಟೂರಿಸ್ಟ್ ಕಾರಿನಲ್ಲಿ ಬೌನ್ಸರ್ಸ್ ಹಾಗೂ ಸ್ಥಳೀಯ ಪೊಲೀಸರೊಂದಿಗೆ ಮುಂಬೈನ ಗಲ್ಲಿಗೆ ತೆರಳಿದ್ದಾರೆ. ಅಲ್ಲಿ ಕಾರನ್ನು ಇಳಿದು ಗಲ್ಲಿಯೊಂದರ ಒಳಗೆ ಹೋಗುತ್ತಾರೆ. ಆಗ ಪಾಪರಾಜಿಗಳು, ಸ್ಥಳೀಯ ಯುವಕರು ಯಶ್ ಅವರನ್ನು ಮಾತನಾಡಿಸಲು ಮುಂದಾಗಿದ್ದಾರೆ. ಅಣ್ಣಾ ಹೇಗಿದ್ದೀರಾ, ಯಶ್ ಅಣ್ಣಾ ಎಂದು ಕೇಳಿದ್ದಾನೆ. ಇನ್ನು ವಿಡಿಯೋ ಮಾಡುವವರು ಬೌನ್ಸರ್‌ಗಳೇ ಸೈಡಿಗೆ ಹೋಗಿ ಎಂದಿದ್ದಾರೆ. ಇನ್ನು ಕೆಲವರು ಯಶ್ ಭಾಯ್ ಮಾಸ್ಕ್ ತೆಗೆಯಿರಿ ಎಂದು ಕೇಳಿದ್ದಾರೆ. ಆದರೆ, ಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ಯಶ್ ಸಣ್ಣ ಬೋಟ್‌ನಲ್ಲಿ ಕೆರೆಯ ನೀರಿನಲ್ಲಿ ಮತ್ತೊಂದು ಪ್ರದೇಶಕ್ಕೆ ತೆರಳಿದ್ದಾರೆ.

Getting superstar treatment in Mumbai, reporters trying to approach him in Kannada... He is the real Game Changer for KFI

The name is Yash 🫡pic.twitter.com/OITPws82sX

— Insulter (@Insulter3730010)

ಎಕ್ಸ್ ಖಾತೆಯಲ್ಲಿ ಶೇರ್ ಮಾಡಿರುವ ವಿಡಿಯೋಗೆ ಹಲವರು ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ಒಬ್ಬರು 'ಕನ್ನಡದ ಪರಂಪರೆಯನ್ನು ನೋಡಿ, ಬೆಂಗಳೂರಿನಲ್ಲಿ ಅಲ್ಲ ಮುಂಬೈನ ಗಲ್ಲಿಯಲ್ಲಿ ಕನ್ನಡ ಕೇಳುತ್ತಿದೆ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು. ಯಶ್ ಅಣ್ಣ ಮೂವಿ ಶೂಟಿಂಗ್‌ಗಿಂತ ಹೆಚ್ಚಾಗಿ ಬಾಡಿಗಾರ್ಡ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ಬಹುತೇಕರು ಬೆಂಕಿ ಮತ್ತು ಸ್ಟಾರ್ ಇಮೋಜಿಗಳನ್ನು ಮಾಡಿದ್ದಾರೆ. ಮತ್ತೊಬ್ಬರು ಯಶ್‌ಗೆ ಇಷ್ಟೊಂದು ಬಾಡಿಗಾರ್ಡ್‌ಗಳ ಅಗತ್ಯವಿಲ್ಲ ಎಂದು ಕಾಮೆಂಟ್ ಮೂಲಕ ಹೇಳಿದ್ದಾರೆ.

ಇದನ್ನೂ ಓದಿ: ಊಟ ಕೊಡದೇ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಹೆಂಡ್ತಿಯ, ಉಸಿರು ನಿಲ್ಲಿಸಿದ ಗಂಡ!

click me!