KGF 2 ಆರ್ಭಟಕ್ಕೆ ಬಾಲಿವುಡ್ ಶಾಕ್ ಆಗಿದೆ. ಸಿನಿಮಾ ಬಿಡುಗಡೆಯಾಗಿ 4ನೇ ದಿನವೂ ದಾಕಲೆ ಕಲೆಕ್ಷನ್ ಮಾಡಿದೆ. ಈಗಾಗಲೇ 200 ಕೋಟಿ ಕ್ಲಬ್ ಸಮೀಪ ಇರುವ ಕೆಜಿಎಫ್-2 ಇಂದು 5ನೇ ದಿನ 200 ಕೋಟಿ ದಾಟಿ ಮುನ್ನುಗ್ಗಲಿದೆ. ಈ ಮೂಲಕ ಅತೀ ವೇಗದಲ್ಲಿ 200 ಕೋಟಿ ಕ್ಲಬ್ ಸೇರಿದ ಸಿನಿಮಾ ಎನ್ನುವ ದಾಖಲೆ ಕೂಡ ಬರೆಯಲಿದೆ.
ಬಾಲಿವುಡ್ ನಲ್ಲಿ ಯಶ್(Yash) ನಟನೆಯ ಕೆಜಿಎಫ್-2 (KGF 2)ಸಿನಿಮಾ ಸುನಾಮಿ ಎಬ್ಬಸಿದೆ. ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಕೆಜಿಎಫ್-2 ಬಾಲಿವುಡ್ ಮಂದಿಯನ್ನು ಬೆಚ್ಚಿಬೀಳಿಸಿದೆ. ಕೆಜಿಎಫ್-2 ಬಿಡುಗಡೆಯಾಗಿ ಎರಡೇ ದಿನಕ್ಕೆ ಹಿಂದಿಯಲ್ಲಿ 100 ಕೋಟಿ ಕ್ಲಬ್(KGF2 Cross 100 Crore Club) ಸೇರುವ ಮೂಲಕ ಎಲ್ಲಾ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡಿರುವ ಕೆಜಿಎಫ್-2 ಇದೀಗ 4 ದಿನಗಳಲ್ಲಿ 200 ಕೋಟಿ ಕ್ಲಬ್ ಸಮೀಪಿಸಿದೆ. ಈ ಮೂಲಕ ಬಾಲಿವುಡ್ ನ ಘಟಾನುಘಟಿ ಸ್ಟಾರ್ ಗಳ ದಾಖಲೆ ಕಲೆಕ್ಷನ್ ಯಶ್, ಕೆಜಿಎಫ್-2 ಸಿನಿಮಾ ಧೂಳಿಪಟ ಮಾಡಿದೆ.
ಕೆಜಿಎಫ್-2 ಸಿನಿಮಾ ಆರ್ಭಟಕ್ಕೆ ಇಡೀ ಬಾಲಿವುಡ್ ಮಂಕಾಗಿದೆ. ದಕ್ಷಿಣ ಭಾರತದ ಸಿನಿಮಾಗಳು ಹಿಂದಿಯಲ್ಲಿ ಅಬ್ಬರಿಸುತ್ತಿರುವ ರೀತಿಗೆ ಬಾಲಿವುಡ್ ಶಾಕ್ ಆಗಿದೆ. ಆರ್ ಆರ್ ಆರ್ ಬಳಿಕ ಇದೀಗ ಕೆಜಿಎಫ್-2 ಹಿಂದಿಯ ಎಲ್ಲಾ ದಾಖಲೆಗಳನ್ನು ದೂಳಿಪಟ ಮಾಡುವ ಮೂಲಕ ದಕ್ಷಿಣ ಸಿನಿಮಾಗಳು ರಾರಾಜಿಸುತ್ತಿವೆ. ಸಿನಿಮಾ ಬಿಡುಗಡೆಯಾಗಿ 4 ದಿನಗಳಲ್ಲಿ ಕೆಜಿಎಫ್-2 ಹಿಂದಿಯಲ್ಲಿ 193 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಅತೀ ವೇಗದಲ್ಲಿ 200 ಕೋಟಿ ಕ್ಲಬ್ ಸೇರಿದ ಸಿನಿಮಾ ಎನ್ನುವ ಖ್ಯಾತಿ ಸಹ ಪಡೆಯುತ್ತಿದೆ.
ಕೆಜಿಎಫ್-2 ಹಿಂದಿ ಭಾಗದ ಕಲೆಕ್ಷನ್ ವರದಿಯನ್ನು ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ನೀಡಿದ್ದಾರೆ. ಈ ಬಗ್ಗೆ ತರಣ್ ಆದರ್ಶ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಕೆಜಿಎಫ್-2 ಸಿನಿಮಾ 4ನೇ ದಿನ 50.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಹಿಂದಿಯಲ್ಲಿ ಕೆಜಿಎಫ್-2 193.99 ಕೋಟಿ ರೂ. ಬಾಚಿಕೊಂಡಿದೆ.
R#KGF2 CREATES HISTORY AGAIN... FASTEST TO ENTER ₹ 200 CR CLUB...
⭐ : Will cross ₹ 200 cr today [Mon, Day 5]
⭐ : Day 6 is REWRITING RECORD BOOKS... Thu 53.95 cr, Fri 46.79 cr, Sat 42.90 cr, Sun 50.35 cr. Total: ₹ 193.99 cr. biz. . pic.twitter.com/ysKnW2zIuV
KGF Chapter 2: ಕೆಜಿಎಫ್ ರಣಧೀರನ ಆರ್ಭಟಕ್ಕೆ ಬೆಚ್ಚಿದ ಬಾಲಿವುಡ್!
'ಕೆಜಿಎಫ್-2 ಮತ್ತೆ ಇತಿಹಾಸ ಸೃಷ್ಟಿ ಮಾಡಿದೆ. ಅತೀ ವೇಗವಾಗಿ 200 ಕೋಟಿ ಕ್ಲಬ್ ಸೇರುತ್ತಿದೆ. 5ನೇ ದಿನ ಸೋಮವಾರ ಕೆಜಿಎಫ್-2 200 ಕೋಟಿ ಕ್ಲಬ್ ಸೇರುತ್ತಿದೆ. ಬಾಹುಬಲಿ ಸಿನಿಮಾ 6ನೇ ದಿನ 200 ಕೋಟಿ ಬ್ಲಕ್ ಸೇರಿತ್ತು. ಕೆಜಿಎಫ್-2 ಮತ್ತೆ ರೆಕಾರ್ಡ್ ಬರೆಯುತ್ತಿದೆ. ಗುರುವಾಗ 53.95 ಕೋಟಿ ರೂ., ಶುಕ್ರವಾರ 46.79 ಕೋಟಿ ರೂ., ಶನಿವಾರ 42.90 ಕೋಟಿ ರೂ., ಬಾನುವಾರ 50.35 ಕೋಟಿ ರೂ. ಒಟ್ಟು 193.99 ಕೋಟಿ ರೂಪಾಯಿ ಹಿಂದಿಯಲ್ಲಿ ಕಲೆಕ್ಷನ್ ಮಾಡಿದೆ' ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಸದ್ಯ ಎಲ್ಲಾ ಕಡೆ ಕೆಜಿಎಫ್-2 ಸಿನಿಮಾದೆ ಸದ್ದು. ಎಲ್ಲಾ ಭಾಷೆಯಲ್ಲೂ ಕೆಜಿಎಫ್-2 ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಮಾನಿಗಳ ಜೊತೆಗೆ ಸಿನಿಮಾ ಗಣ್ಯರು ಸಹ ಕೆಜಿಎಫ್-2 ನೋಡಿ ಹಾಡಿಹೊಗಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಂತೂ ಕೆಜಿಎಫ್2 ಸಿನಿಮಾದ್ದೇ ಸದ್ದು. ಸಿನಿಮಾ ಬಿಡುಗಡೆಯಾಗಿ 5 ದಿನಗಳಾದರೂ ಟ್ವಿಟ್ಟರ್ ನಲ್ಲಿ ಯಶ್ ಮತ್ತು ಕೆಜಿಎಫ್2 ಹೆಸರು ಟ್ರೆಂಡಿಂಗ್ ನಲ್ಲಿದೆ. ಟ್ವಿಟ್ಟರ್ ನಲ್ಲಿ #KGFChpater2, #Yash, KGF3 ಹೆಸರುಗಳು ರಾರಾಜಿಸುತ್ತಿವೆ.
ಕೆಜಿಎಫ್-2 ಕ್ರೇಜ್‌ಗಿಂತ ಹೆಚ್ಚಾಯ್ತು ಇವರ ಕ್ರೇಜ್, ಸೋಷಿಯಲ್ ಮೀಡಿಯಾದಲ್ಲಿ ಈಗ ಇವರದ್ದೇ ಟ್ರೆಂಡ್!
ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಮತ್ತು ಸಂಜಯ್ ದತ್ ನಟನೆ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಆಕ್ಷನ್ ದೃಶ್ಯ, ಸಂಗೀತ ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಹೃದಯ ಗೆದ್ದಿದೆ. 3ನೇ ದಿನವು ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ.