ನೈಟ್ ಗೌನ್ ಹರಿದು, ಗುಪ್ತಾಂಗಕ್ಕೆ ಬಾಟಲಿ ತುರುಕಿದ್ದ; ಜಾನಿ ಡೆಪ್ ವಿರುದ್ಧ ಮಾಜಿ ಪತ್ನಿ ಗಂಭೀರ ಆರೋಪ

By Shruiti G Krishna  |  First Published Apr 18, 2022, 12:49 PM IST

ಹಾಲಿವುಡ್‌ ಖ್ಯಾತ ನಟ ಜಾನಿ ಡೆಪ್( Johnny Depp) ಮತ್ತು ಮಾಜಿ ಪತ್ನಿ ಅಂಬರ್ ಹರ್ಡ್(Amber Heard) ನಡುವಿನ ವಿವಾದ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಜಾನಿ ಡೆಪ್ ವಿರುದ್ಧ ಮಾಜಿ ಪತ್ನಿ ಅಂಬರ್ ಹರ್ಡ್ ಲೈಂಗಿಕ ದೌರ್ಜನ್ಯ ಹಾಗೂ ಕೌಟುಂಬಿಕ ಹಿಂಸೆ ಆರೋಪ ಮಾಡಿದ್ದು ಈ ಪ್ರಕರಣದ ವಿಚಾರಣೆ ಸದ್ಯ ವರ್ಜೀನಿಯಾ ನ್ಯಾಯಾಲಯದಲ್ಲಿ ನಡೆಯುತ್ತಿದೆ.


ಹಾಲಿವುಡ್‌ ಖ್ಯಾತ ನಟ ಜಾನಿ ಡೆಪ್( Johnny Depp) ಮತ್ತು ಮಾಜಿ ಪತ್ನಿ ಅಂಬರ್ ಹರ್ಡ್(Amber Heard) ನಡುವಿನ ವಿವಾದ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಜಾನಿ ಡೆಪ್ ವಿರುದ್ಧ ಮಾಜಿ ಪತ್ನಿ ಅಂಬರ್ ಹರ್ಡ್ ಲೈಂಗಿಕ ದೌರ್ಜನ್ಯ ಹಾಗೂ ಕೌಟುಂಬಿಕ ಹಿಂಸೆ ಆರೋಪ ಮಾಡಿದ್ದು ಈ ಪ್ರಕರಣದ ವಿಚಾರಣೆ ಸದ್ಯ ವರ್ಜೀನಿಯಾ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಅಂಬರ್ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿ, 2016 ರಲ್ಲಿ ಆಸ್ಟ್ರೇಲಿಯಾದಲ್ಲಿ ಅಂಬರ್ ವಿರುದ್ಧ ಲೈಂಗಿಕ ಹಿಂಸಾಚಾರವನ್ನು ಜಾನಿ ಡೆಪ್ ಮಾಡಿರುವುದಾಗಿ ಹೇಳಿದ್ದಾರೆ.

2015ರಲ್ಲಿ ಮದುವೆ,ವಿಚ್ಛೇದನ

Tap to resize

Latest Videos

2012ರಿಂದ ಡೇಟಿಂಗ್ ನಲ್ಲಿದ್ದ ಜಾನಿ ಡೆಪ್ ಮತ್ತು ಅಂಬರ್ ಹರ್ಡ್ ಇಬ್ಬರು 2015ರಲ್ಲಿ ಮದುವೆಯಾದರು. ಇಬ್ಬರು ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿ ಕೆಲವೇ ತಿಂಗಳಲ್ಲಿ ದೂರ ಆಗುವ ಮೂಲಕ ಅಚ್ಚರಿ ಮೂಡಿಸಿದರು. 2016ರಲ್ಲಿ ಅಂಬರ್ ಹರ್ಡ್ ಪತಿ ಜಾನಿ ಡೆಪ್ ಅವರಿಂದ ದೂರ ಆದರು. ಬಳಿಕ ಅಂಬರ್ 2018ರಲ್ಲಿ ವಾಷಿಂಗ್ ಟನ್ ಪೋಸ್ಟ್ ನಲ್ಲಿ ನಿಂದನೆ ಆರೋಪ ಮಾಡಿದ್ದರು. ಆದರೆ ಅದರಲ್ಲಿ ಮಾಜಿ ಪತಿ ಜಾನಿ ಡೆಪ್ ಹೆಸರು ಉಲ್ಲೇಖ ಮಾಡಿರಲಿಲ್ಲ. ಬಳಿಕ ಜಾನಿ ಡೆಪ್, ಅಂಬರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಜಾನಿ ಡೆಪ್ ವಿರುದ್ಧ ಅಂಬರ್ ಗಂಭೀರ ಆರೋಪ

ಇದೀಗ ವರ್ಜೀನಿಯಾದ ಕೌಂಟಿ ಕೋರ್ಟ್ ಹೌಸ್ ನಲ್ಲಿ ನಡೆದ ವಿಚಾರಣೆ ವೇಳೆ ಜಾನಿ ವಿರುದ್ಧ ಅಂಬರ್ ಲೈಂಗಿಕ ಆರೋಪ ಮಾಡಿದ್ದಾರೆ. ಹರ್ಡ್ ಪರ ವಕೀಲರು ಜಾವಿ ವಿರುದ್ಧ ಮಾಖಿಕ, ಮಾನಸಿಕ ಸೇರಿದಂತೆ ಹಲವು ರೀತಿಯ ದೌರ್ಜನ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. '2016ರಲ್ಲಿ ಆಸ್ಟ್ರೇಲಿಯಾದಲ್ಲಿದ್ದಾಗ ಡೆಪ್ ಮೂರು ದಿನಗಳು ಚೆನ್ನಾಗಿ ಕುಡಿದು ಅಂಬರ್ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ್ದ, ಮಧ್ಯದ ಬಾಟಲಿಯನ್ನು ಗುಪ್ತಾಂಗಕ್ಕೆ ಹಾಕಿದ್ದ, ನೈಟ್ ಗೌನ್ ಹರಿದು ಹಾಕಿದ್ದ ಇನ್ನು ಭಯಾನಕವಾಗಿ ವರ್ತಿಸಿದ್ದ' ಎಂದು ಹೇಳಿದ್ದಾರೆ.

ಹಾಲಿವುಡ್ ನಟ ಬ್ರೂಸ್ ವಿಲ್ಲೀಸ್‌ಗೆ Aphasia! ಏನೀ ಕಾಯಿಲೆ?

ಆರೋಪ ತಳ್ಳಿ ಹಾಕಿದ ಜಾನಿ ಡೆಪ್

ಆದರೆ ಎಲ್ಲಾ ಆರೋಪಗಳನ್ನು ಜಾನಿ ಡೆಪ್ ಪರ ವಕೀಲರು ತಳ್ಳಿ ಹಾಕಿದ್ದಾರೆ. ಜಾನಿ ಡೆಪ್ ಒಬ್ಬ ಜಂಟಲ್ ಮೆನ್, ಅಂಬರ್ ಮಾಡಿರುವ ರೋಪಗಳನ್ನು ಯಾವತ್ತೂ ಮಾಡಿಲ್ಲ. ಅಂಬರ್ ಈ ಹಿಂದೆ ದೂರು ನೀಡಿದಾಗ, ವಿಚ್ಛೇದನದ ಅರ್ಜಿ ಹಾಕಿದಾಗ ಜಾನಿ ಡೆಪ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರಲಿಲ್ಲ. ಆದರೆ ಜಾನಿ ಮಾನನಷ್ಟ ಮೊಕದ್ದಮೆ ಹೂಡಿದ ಬಳಿಕ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ ಎಂದು ಜಾನಿ ವರ ವಕೀಲರು ವಾದ ಮಂಡಿಸಿದ್ದಾರೆ.

ಜಾನಿ ಡೆಪ್ ಸಹ ಅಂಬರ್ ವಿರುದ್ಧ ಆರೋಪ ಮಾಡಿದ್ದು, ಆಕೆಯದ್ದು ಆಕ್ರಮಣಕಾರಿ ಮನೋಭಾವ ಎಂದಿದ್ದಾರೆ. ಒಮ್ಮೆ ವೋಡ್ಕಾ ಬಾಟಲಿಯೊಂದನ್ನು ನನ್ನೆಡೆಗೆ ಎಸೆದಳು. ಅದು ನನ್ನ ಕೈಗೆ ಬಿದ್ದು ಒಡೆದು ಹೋಯಿತು. ಇದರಿಂದ ನನ್ನ ಬೆರಳಿನ ಮೇಲ್ಬಾಗ ಕತ್ತರಿಸಿ ಹೋಗಿತ್ತು ಎಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ಅಂಬರ್ ಸಹಾಯಕಿ ಸಹ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ್ದು, ಇದು ಅಂಬರ್ ವಿರುದ್ಧವಾಗಿರುವುದು ಅಂಬರ್ ಗೆ ಕೊಂಚ ಹಿನ್ನಡೆಯಾಗಿದೆ. ಜಾನಿ ಡೆಪ್, ಅಂಬರ್ ಮೇಲೆ ಹಲ್ಲೆ ಮಾಡಿದ್ದಾರೆಂದರೆ ನಂಬಲು ಸಾಧ್ಯವಿಲ್ಲ ಎಂದು ಆಕೆ ಹೇಳಿಕೆ ನೀಡಿದ್ದಾಳೆ.

ಪಬ್ಲಿಕ್‌ನಲ್ಲಿ Tongue kissing ಮಾಡಿ ಟ್ರೋಲ್ ಆದ ಖ್ಯಾತ ನಟಿ!

'ಪೈರೇಟ್ಸ್ ಆಫ್ ಕೆರೇಬಿಯನ್' ಸಿನಿಮಾದ ನಾಯಕ ಜಾನಿ ಡೆಪ್ ವಿಶ್ವದೆಲ್ಲೆಡೆ ಹೆಸರು ಮಾಡಿದ್ದಾರೆ. ಹಾಲಿವುಡ್‌ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರಾಗಿದ್ದಾರೆ. ಅಂಬರ್ ಹರ್ಡ್ ವಿಚ್ಛೇದನದ ಬಳಿಕ ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎಲನ್ ಮಾಸ್ಕ್ ಜೊತೆ ಸಂಬಂಧದಲ್ಲಿದ್ದರು. ಇದೀಗ ಮತ್ತೋರ್ವನ ಜೊತೆ ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿದೆ.

click me!