KGF 2; 3ನೇ ದಿನವೂ ಹಿಂದಿಯಲ್ಲಿ ದಾಖಲೆ ಬರೆದ ರಾಕಿ ಭಾಯ್

By Shruiti G Krishna  |  First Published Apr 17, 2022, 1:11 PM IST

ರಾಕಿಂಗ್ ಸ್ಟಾರ್ ಯಶ್ ನಟನೆಯ KGF 2 ಸಿನಿಮಾ 3ನೇ ದಿನವೂ ಹಿಂದಿಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ನೀಡಿರುವ ಮಾಹಿತಿ ಪ್ರಕಾರ ಹಿಂದಿಯಲ್ಲಿ 3ನೇ ದಿನ 42 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಿದ್ದಾರೆ.


ಬಾಲಿವುಡ್ ನಲ್ಲಿ ಯಶ್(Yash) ನಟನೆಯ ಕೆಜಿಎಫ್-2 (KGF 2)ಸಿನಿಮಾ ಸುನಾಮಿ ಎಬ್ಬಸಿದೆ. ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಕೆಜಿಎಫ್-2 ಬಾಲಿವುಡ್ ಮಂದಿಯನ್ನು ಬೆಚ್ಚಿಬೀಳಿಸಿದೆ. ಕೆಜಿಎಫ್-2 ಬಿಡುಗಡೆಯಾಗಿ ಎರಡೇ ದಿನಕ್ಕೆ ಹಿಂದಿಯಲ್ಲಿ 100 ಕೋಟಿ ಕ್ಲಬ್(KGF2 Cross 100 Crore Club) ಸೇರುವ ಮೂಲಕ ಎಲ್ಲಾ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡಿತ್ತು. ಈ ಮೂಲಕ ಬಾಲಿವುಡ್ ನ ಘಟಾನುಘಟಿ ಸ್ಟಾರ್ ಗಳ ದಾಖಲೆ ಕಲೆಕ್ಷನ್ ಯಶ್, ಕೆಜಿಎಫ್-2 ಸಿನಿಮಾ ಧೂಳಿಪಟ ಮಾಡಿದೆ. ಇದೀಗ ಚಿತ್ರದ ಮೂರನೇ ದಿನದ ಕಲೆಕ್ಷನ್ ವರದಿ ಬಹಿರಂಗವಾಗಿದ್ದು ಸಿನಿಮಾ ಬಿಡುಗಡೆಯಾಗಿ ಮೂರನೇ ದಿನವೂ ಭರ್ಜರಿ ಕಮಾಯಿ ಮಾಡಿದೆ.

ಕೆಜಿಎಫ್-2 ಹಿಂದಿ ಭಾಗದ ಕಲೆಕ್ಷನ್ ವರದಿಯನ್ನು ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಮಾಹಿತಿ ನೀಡಿದೆ. ಈ ಬಗ್ಗೆ ತರಣ್ ಆದರ್ಶ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಕೆಜಿಎಫ್-2 ಸಿನಿಮಾ 3ನೇ ದಿನ 42.90 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಹಿಂದಿಯಲ್ಲಿ ಕೆಜಿಎಫ್-2 143.64 ಕೋಟಿ ರೂ. ಬಾಚಿಕೊಂಡಿದೆ.

Tap to resize

Latest Videos

'ಹಿಂದಿಯಲ್ಲಿ ಕೆಜಿಎಫ್-2 ರೆಕಾರ್ಡ್ ಮಾಡಿದೆ. ವಾರಾಂತ್ಯಕ್ಕೆ ಎಲ್ಲಾ ದಾಖಲೆ ಬ್ರೇಕ್ ಮಾಡಲು ಸಿದ್ಧವಾಗಿದೆ. 3ನೇ ದಿನವೂ ಸೂಪರ್ ಕಲೆಕ್ಷನ್. ಗುರುವಾರ 53.95 ಕಟಿ ರೂ. ಶುಕ್ರವಾರ 46.79 ಕೋಟಿ ರೂ. ಮತ್ತು ಶನಿವಾರ 42.90 ಕೋಟಿ ರೂ. ಒಟ್ಟು 143.64 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ' ಎಂದು ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್2 ಸಿನಿಮಾದ್ದೇ ಸದ್ದು. ಟ್ವಿಟ್ಟರ್ ನಲ್ಲಿ ಯಶ್ ಮತ್ತು ಕೆಜಿಎಫ್2 ಹೆಸರು ಟ್ರೆಂಡಿಂಗ್ ನಲ್ಲಿದೆ. ಸಿನಿಮಾ ಬಿಡುಗಡೆಯಾಗಿ 4 ದಿನವಾದರೂ ಟ್ವಿಟ್ಟರ್ ನಲ್ಲಿ #KGFChpater2, #Yash, KGF3 ಹೆಸರುಗಳು ರಾರಾಜಿಸುತ್ತಿವೆ. ಈಗಾಗಲೇ 143 ಕೋಟಿ ಬಾಚಿಕೊಂಡು ಮುನ್ನುಗ್ಗುತ್ತಿರುವ ಕೆಜಿಎಫ್-2 ಮೊದಲ ವಾರಾಂತ್ಯದಲ್ಲಿ ಎಷ್ಟು ಕೋಟಿ ಬಾಚಿಕೊಳ್ಳಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

[] is all set for a RECORD-SMASHING weekend... Day 3 is SUPER-SOLID - metros ROCKING, mass circuits STRONG... Day 4 [Sun] will be competing with Day 1 [Thu]... This one's a MONSTER... Thu 53.95 cr, Fri 46.79 cr, Sat 42.90 cr. Total: ₹ 143.64 cr. biz. pic.twitter.com/Dy1XPOqtQn

— taran adarsh (@taran_adarsh)

2 ದಿನಕ್ಕೆ ವಿಶ್ವದಾದ್ಯಂತ 300 ಕೋಟಿ ರೂಪಾಯಿ ಕಲೆಕ್ಷನ್

ಕೆಜಿಎಫ್2 ಸಿನಿಮಾ ವಿಶ್ವದಾದ್ಯಂತ ಅಬ್ಬರಿಸುತ್ತಿದ್ದೆ. ಎರಡು ದಿನಗಳಲ್ಲಿ ವಿಶ್ವದಾದ್ಯಂತ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಸಿನಿಮಾ ವಿಶ್ಲೇಷಕ ರಮೇಶ್ ಬಾಲಾ ಮಾಹಿತಿ ನೀಡಿದ್ದಾರೆ. ಕೇವಲ ಎರಡು ದಿನಗಳಲ್ಲಿ ಕನ್ನಡ ಸಿನಿಮಾವೊಂದು 300 ಕೋಟಿ ದಾಟಿ ಮುನ್ನುಗ್ಗುತ್ತಿರುವುದು ಭಾರತೀಯ ಸಿನಿಮಾರಂಗಕ್ಕೆ ಅಚ್ಚರಿಯ ವಿಚಾರವಾಗಿದೆ. ಮೊದಲನೇ ದಿನ ಕೆಜಿಎಫ್-2 ವಿಶ್ವದಾದ್ಯಂತ 165 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.

ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಮತ್ತು ಸಂಜಯ್ ದತ್ ನಟನೆ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಆಕ್ಷನ್ ದೃಶ್ಯ, ಸಂಗೀತ ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಹೃದಯ ಗೆದ್ದಿದೆ. 3ನೇ ದಿನವು ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ.

click me!