Yash: ಟಾಕ್ಸಿಕ್‌ಗೂ ಮೊದಲೇ ರಾಮಾಯಣ; ದೀಪಾವಳಿಗೆ 'ರಾವಣ'ನಾಗಿ ಡಿಸೆಂಬರ್‌ಗೆ 'ರಾಯ'ನಾಗಲಿರುವ ಯಶ್!

Published : May 25, 2026, 05:28 PM IST
Yash

ಸಾರಾಂಶ

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ರಿಲೀಸ್ ಯಾವಾಗ ಖಂಡಿತ ಗೊತ್ತಿಲ್ಲ. ಆದರೆ ಟಾಕ್ಸಿಕ್​ಗೂ ಮುನ್ನ ರಾಮಾಯಣ ಬರೋದಂತೂ ಫಿಕ್ಸ್ ಆಗಿದೆ. ದೀಪಾವಳಿಗೆ ರಿಲೀಸ್ ಆಗಬೇಕಿದ್ದ ರಾಮಾಯಣ ಅದಕ್ಕೂ ಮುನ್ನ ಥಿಯೇಟರ್ ಅಂಗಳಕ್ಕೆ ಬರ್ತಾ ಇದೆ.

'ಟಾಕ್ಸಿಕ್'ಗೂ ಮೊದಲೇ ರಾಮಾಯಣ..!

ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ಟಾಕ್ಸಿಕ್ ಸಿನಿಮಾ ರಿಲೀಸ್ ಯಾವಾಗ ಖಂಡಿತ ಗೊತ್ತಿಲ್ಲ. ಆದರೆ ಟಾಕ್ಸಿಕ್​ಗೂ ಮುನ್ನ ರಾಮಾಯಣ ಬರೋದಂತೂ ಫಿಕ್ಸ್ ಆಗಿದೆ. ದೀಪಾವಳಿಗೆ ರಿಲೀಸ್ ಆಗಬೇಕಿದ್ದ ರಾಮಾಯಣ ಅದಕ್ಕೂ ಮುನ್ನ ಥಿಯೇಟರ್ ಅಂಗಳಕ್ಕೆ ಬರ್ತಾ ಇದೆ.

ಟಾಕ್ಸಿಕ್ ಪೋಸ್ಟ್​ಪೋನ್.. ರಾಮಾಯಣ ಪ್ರೀ-ಪೋನ್..!

ದೀಪಾವಳಿಗೂ ಮೊದಲೇ ರಿಲೀಸ್ ರಾಕಿ ರಾಮಾಯಣ..!

ಯೆಸ್ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಮತ್ತೆ ಪೋಸ್ಟ್ ಪೋನ್ ಆದ ಮೇಲೆ, ಫ್ಯಾನ್ಸ್ ಯಾವಾಗ ರಿಲೀಸ್ ಅನ್ನೋದನ್ನ ಕೇಳೋದೇ ಬಿಟ್ಟುಬಿಟ್ಟಿದ್ದಾರೆ. ಅದ್ಯಾವಾಗ ಬರುತ್ತೋ ಬರಲಿ ಅಂತ ಸೈಲೆಂಟ್ ಆಗಿಬಿಟ್ಟಿದ್ದಾರೆ.

ಆದ್ರೆ ಇದರ ನಡುವೆ ರಾಮಾಯಣ ಟೀಂ ಮಾತ್ರ ಫ್ಯಾನ್ಸ್​ಗೆ ಒಂದು ಗುಡ್ ನ್ಯೂಸ್ ಕೊಟ್ಟಿದೆ. ಅಸಲಿಗೆ 2026 ದೀಪಾವಳಿಗೆ ರಾಮಾಯಣ ಭಾಗ-1 ರಿಲೀಸ್. 2027 ದೀಪಾವಳಿಗೆ ಭಾಗ-2 ರಿಲೀಸ್ ಅಂತ ಹಿಂದೆ ಅನೌನ್ಸ್ ಮಾಡಲಾಗಿತ್ತು.

ಹೊಸ ಅಪ್​ಡೇಟ್ ಏನು ಅಂದರೆ ರಾಮಾಯಣ ದೀಪಾವಳಿಗೂ ಒಂದು ವಾರ ಮೊದಲೇ ಅಂದರೆ ಅಕ್ಟೋಬರ್ 30ಕ್ಕೆ ತೆರೆಗೆ ಬರ್ತಾ ಇದೆ. ಹಿಂದಿನ ವೀಕೆಂಡ್​ಗೆ ರಿಲೀಸ್ ಮಾಡಿ ದೀಪಾವಳಿ ಹೊತ್ತಿಗೆ ಬಾಕ್ಸಾಫೀಸ್​ನಲ್ಲಿ ಪಟಾಕಿ ಹೊಡೆಯೋ ಪ್ಲಾನ್ ಮಾಡಿದೆ.

ನಿಮಗೆಲ್ಲಾ ಗೊತ್ತಿರೋ ಹಾಗೆ ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾದ್ರೆ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ನಮ್ಮ ರಾಕಿಂಗ್ ಸ್ಟಾರ್ ಯಶ್ ದಶಕಂಠ ರಾವಣನಾಗಿ ಮಿಂಚಿದ್ದಾರೆ.

ಆದ್ರೆ ಯಶ್ ಫ್ಯಾನ್ಸ್ ಪಾಲಿಗೆ ಏಕೈಕ ಬೇಸರದ ಸಂಗತಿ ಅಂದ್ರೆ ರಾವಣನ ಪಾತ್ರ ಭಾಗ-1ರ ಕೊನೆ ಕೊನೆಗೆ ಬರಲಿದೆಯಂತೆ. ಸೋ ಯಶ್ ಸಿನಿಮಾ ಬರ್ತಿದೆ ಅಂತ ಖುಷಿಯಾದ್ರೂ ಅವರು ತೆರೆ ಮೇಲೆ ಬರೋದು ಸಿನಿಮಾದ ಕೊನೆ ಕೊನೆಗೆ.

ಇನ್ನೂ ಟಾಕ್ಸಿಕ್ ಕಥೆ ಏನಾಯ್ತು ಅಂತ ನೋಡಹೋದ್ರೆ ಒಂದು ಕಡೆ ಸಿನಿಮಾ ಬ್ಯುಸಿನೆಸ್ ಮಾತುಕತೆ ನಡೀತಾ ಇದ್ರೆ, ಇನ್ನೊಂದು ಕಡೆಗೆ ಯಶ್ ಈಗಲೂ ಸಿನಿಮಾವನ್ನ ತಿದ್ದಿ ತೀಡುವ ಕೆಲಸದಲ್ಲೇ ಇದ್ದಾರಂತೆ. ಈಗಲೂ ಚಿತ್ರದ ಪ್ಯಾಚ್ ವರ್ಕ್ ನಡೀತಾನೆ ಇದೆ.

ಡಿಸೆಂಬರ್​ಗೆ ಟಾಕ್ಸಿಕ್ ರಿಲೀಸ್ ಮಾಡುವ ಪ್ಲ್ಯಾನ್..?

ಹೌದು ಮೂಲಗಳ ಪ್ರಕಾರ ರಾಮಾಯಣ ರಿಲೀಸ್ ಆದ ಬಳಿಕ, ಡಿಸೆಂಬರ್​​ ನಲ್ಲಿ ಟಾಕ್ಸಿಕ್ ರಿಲೀಸ್ ಮಾಡ್ಲಿಕ್ಕೆ ಯಶ್ ಪ್ಲಾನ್ ಮಾಡಿದ್ದಾರಂತೆ. ಡಿಸೆಂಬರ್ ಯಶ್ ಪಾಲಿಗೆ ಲಕ್ಕಿ ಮಂತ್ ಮಿಸ್ಟರ್ ಌಂಡ್ ಮಿಸೆಸ್ ರಾಮಾಚಾರಿ ಟಾಕ್ಸಿಕ್ ಚಿತ್ರಗಳು ರಿಲೀಸ್ ಆಗಿದ್ದು ಕೂಡ ಡಿಸೆಂಬರ್​ನಲ್ಲೇ ಸೋ ಟಾಕ್ಸಿಕ್​ ಕೂಡ ಡಿಸೆಂಬರ್​ಗೆ ಬರೋದು ಬಹುತೇಕ ಫಿಕ್ಸ್,

ಯಶ್​ನ ತೆರೆ ಮೇಲೆ ನೋಡದೇ ಕಾದಿರೋ ಫ್ಯಾನ್ಸ್​

ಒಟ್ಟಾರೆ 4 ವರ್ಷ ಯಶ್​ನ ತೆರೆ ಮೇಲೆ ನೋಡದೇ ಕಾದಿರೋ ಫ್ಯಾನ್ಸ್​ಗೆ ಈ ವರ್ಷ ದ್ವಿತಿಯಾರ್ಧದಲ್ಲಿ ಎರಡೆರಡು ಸಿನಿಮಾಗಳನ್ನ ನೋಡೋದಕ್ಕೆ ಸಿಗಲಿದೆ. ಸೋ ದೀಪಾವಳಿ ಮತ್ತು ಕ್ರಿಸ್ ಮಸ್ ಎರಡನ್ನೂ ಸೆಲೆಬ್ರೇಟ್ ಮಾಡ್ಲಿಕ್ಕೆ ಸಜ್ಜಾಗಿ.!

ಹೆಚ್ಚಿನ ಮನರಂಜನೆಗೆ ಸಿನಿಮಾ ಹಂಗಾಮ ನೋಡಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗರ್ಭಿಣಿಯಾಗಿದ್ದರೂ ನಟನೆಯಿಂದ ಹಿಂದೆ ಸರಿಯದ ಸಮಂತಾ: ಹೊಸ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್!
33 ವರ್ಷದ ಮಗನ ಮುಂದೆ 3ನೇ ಮದುವೆ ಬಗ್ಗೆ ಮಾತಾಡಿದ Aamir Khan; ಮುಜುಗರವೋ, ವ್ಯಂಗ್ಯವೋ? ಕಿಸಕ್ಕನೆ ನಕ್ಕ ಪುತ್ರ