ಪತಿ ಐಸಿಯುನಲ್ಲಿ, ಪತ್ನಿ ಸಂಕ್ರಾಂತಿ ಸಂಭ್ರಮ- ಭರ್ಜರಿ ಫೋಟೋಶೂಟ್​! ನೆಟ್ಟಿಗರು ಸುಮ್ಮನಿರ್ತಾರಾ?

By Suvarna News  |  First Published Jan 15, 2024, 4:43 PM IST

ನಟಿ ಮಹಾಲಕ್ಷ್ಮಿ ಅವರ ಪತಿ ರವೀಂದರ್​ ಐಸಿಯುಗೆ ದಾಖಲಾಗಿದ್ದರೆ, ಇತ್ತ ನಟಿ ಸಂಕ್ರಾಂತಿ ನಿಮಿತ್ತ ಭರ್ಜರಿ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ನೆಟ್ಟಿಗರು ಏನಂತಿದ್ದಾರೆ?
 


 ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravindra Chandrasekaran) ಮತ್ತು ಕಿರುತೆರೆ ನಿರೂಪಕಿ ಮಹಾಲಕ್ಷ್ಮಿ (Mahalakshmi) ಸದಾ ಸದ್ದು ಮಾಡುತ್ತಲೇ ಇರುತ್ತಾರೆ.  ಇದೀಗ ರವೀಂದರ್​ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ತೀವ್ರ ಅನಾರೋಗ್ಯದಿಂದ ಅವರು ಬಳಲುತ್ತಿರುವ ಹಿನ್ನೆಲೆಯಲ್ಲಿ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಕಳೆದೊಂದು ವಾರದಿಂದ ಅವರು ಐಸಿಯುನಲ್ಲಿಯೇ ಇರುವುದಾಗಿ ಹೇಳಲಾಗುತ್ತಿದೆ. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ  ಉಸಿರಾಡಲು ರವೀಂದರ್​ ಅವರಿಗೆ ಕಷ್ಟವಾಗುತ್ತಿದೆ.  ಆಕ್ಸಿಜನ್​ ಮಾಸ್ಕ್​ ಹಾಕಿಕೊಂಡು ಅವರು  ಮಾತನಾಡುತ್ತಿರುವ ವಿಡಿಯೋ ಕೂಡ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ರವೀಂದರ್​ ಅವರ ತೂಕ ಹೆಚ್ಚಿರುವ ಕಾರಣ, ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು,  ಉಸಿರಾಡೋಕೆ ಕಷ್ಟವಾಗುತ್ತಿದೆ ಎಂದು ವರದಿಯಾಗಿದೆ.  ಆಕ್ಸಿಜನ್ ಮಾಸ್ಕ್ ಸಮೇತ ಇರುವ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.  ಈ ಹಿಂದೆ ಅವರನ್ನು ಜೈಲಿನಲ್ಲಿ ಇಟ್ಟ ಸಮಯದಲ್ಲಿ,  ಅಲ್ಲಿಯೂ  ನೆಲದ ಮೇಲೆ ಕುಳಿತುಕೊಳ್ಳಲಾರದೇ  ಉಸಿರಾಟದ ಸಮಸ್ಯೆ ಎದುರಿಸಿದ್ದರು. ಈ ಬಗ್ಗೆ ಮಹಾಲಕ್ಷ್ಮಿ ಮೀಡಿಯಾಗಳ ಮುಂದೆ ಹೇಳಿಕೊಂಡು ಕಣ್ಣೀರಿಟ್ಟಿದ್ದರು.   ದೇಹದ ತೂಕದ ಕಾರಣ ರವೀಂದರ್​ ಸಾಮಾನ್ಯರಂತೆ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ನೆಲದ ಮೇಲೆ ಕುಳಿತುಕೊಳ್ಳಲು ಸಹ ಸಾಧ್ಯವಿಲ್ಲ. ಹೀಗಾಗಿ ಜೈಲಿನಲ್ಲಿ ಸಾಕಷ್ಟು ಕಷ್ಟ ಕೂಡ ಅನುಭವಿಸಿದ್ದಾರೆ ಎಂದು ಖುದ್ದು ರವೀಂದರ್​ ಅವರೇ ಹೇಳಿಕೊಂಡಿದ್ದು ಇದೆ, ಈ ಬಗ್ಗೆ ಮಹಾಲಕ್ಷ್ಮಿ ಕೂಡ ನೋವು ತೋಡಿಕೊಳ್ಳುತ್ತಲೇ ಇದ್ದಾರೆ.

Tap to resize

Latest Videos

ಆಮೀರ್​ ಖಾನ್​ ಪುತ್ರಿ ಇರಾ ರಿಸೆಪ್ಷನ್​ನಲ್ಲಿ ಜೈ ಶ್ರೀರಾಮ್​ ಎಂದು ಜಪಿಸಿದ ಕಂಗನಾ: ವಿಡಿಯೋ ವೈರಲ್

ಅದೇನೇ ಇದ್ದರೂ ಮಹಾಲಕ್ಷ್ಮಿ ಇದೀಗ ಸಂಕ್ರಾಂತಿ ಸಂಭ್ರಮದಲ್ಲಿ ಮುಳುಗಿದ್ದಾರೆ. ಭರ್ಜರಿಯಾಗಿ ಸೀರೆ ಉಟ್ಟು, ಪೊಂಗಲ್​ ಹಬ್ಬ ಆಚರಿಸಿದ್ದಾರೆ. ಅದರ ಫೋಟೋಗಳನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅತ್ತ ಪತಿ ಸಾವು-ಬದುಕಿನ ನಡುವೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇತ್ತ ಪತ್ನಿ ಮಹಾಲಕ್ಷ್ಮಿ ಈ ರೀತಿ ಮೇಕಪ್​  ಮಾಡಿಕೊಂಡು ಫೋಟೋಶೂಟ್​ ಮಾಡಿಸಿಕೊಂಡಿರುವ ಕಾರಣ ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. 
ಅಂದಹಾಗೆ, ಈ ಜೋಡಿ 2022ರ ಸೆಪ್ಟೆಂಬರ್​ನಲ್ಲಿ ಮದುವೆಯಾಗಿದೆ.  ಇಬ್ಬರಿಗೂ ಇದು ಎರಡನೇ ಮದುವೆ ಆಗಿದೆ, ಮದುವೆಯಾದ ದಿನದಿಂದಲೂ  ಈ ಜೋಡಿ ಸಕತ್​ ಸದ್ದು ಮಾಡುತ್ತಲೇ ಇದೆ. ಸುಂದರಿಯಾಗಿರುವ ಮಹಾಲಕ್ಷ್ಮಿ, ಕಿರುತೆರೆ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಒರು ಕೈ ಒಸೈ, ವಾಣಿ ರಾಣಿ, ಆಫೀಸ್‌, ಚೆಲ್ಲಮೇ, ಉಥಿರಿಪೂಕ್ಕಳ್ ಇವರಿಗೆ ತುಂಬಾ ಹೆಸರು ತಂದುಕೊಟ್ಟಿವೆ. ಸದ್ಯ ಅವರ  ಮಹಾರಸಿ ಎಂಬ ಧಾರಾವಾಹಿ ಕೂಡ ಪ್ರಸಾರವಾಗುತ್ತಿದೆ. ರವೀಂದರ್‌ ಚಂದ್ರಶೇಖರನ್‌ ಅವರು ‘ನಟ್ಪುನ ಎನ್ನಡು ಥೆರಿಯುಮ’, ‘ಮುರುಂಗೈಕೈ ಚಿಪ್ಸ್’, ‘ವಿಡಿಯುಮ್‌ ವಾರೈ ಕಾಥಿರು’ ಮುಂತಾದ ಸಿನಿಮಾಗಳನ್ನು ತಮ್ಮ ಲಿಬ್ರಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

ಹಣಕ್ಕಾಗಿ ಮಹಾಲಕ್ಷ್ಮಿ ರವೀಂದರ್​ ಅವರನ್ನು ಮದುವೆಯಾಗಿದ್ದಾರೆ ಎಂದು ಮೊದಲಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಅದಕ್ಕೆ ತಕ್ಕಂತೆ ಮಹಾಲಕ್ಷ್ಮಿ ಅವರಿಗೆ ರವೀಂದರ್​ ಭಾರಿ ಭಾರಿ ಉಡುಗೊರೆ ಕೊಟ್ಟಿದ್ದೂ ಇದೆ. ಇತ್ತೀಚೆಗೆ  ರವೀಂದರ್​ ಚಂದ್ರಶೇಖರನ್ ಅವರನ್ನು  ಕೆಲ ತಿಂಗಳ ಹಿಂದೆ ಪೊಲೀಸರು ಅರೆಸ್ಟ್​ ಮಾಡಿದ್ದು ಅವರು ಬಂಧನದಲ್ಲಿದ್ದರು. ಇವರ​ ವಿರುದ್ಧ ವಂಚನೆ ಆರೋಪ ದಾಖಲಾಗಿದೆ.   ರವೀಂದರ್ ಚಂದ್ರಶೇಖರ್ ವಿರುದ್ಧ ಕೇಂದ್ರ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ.  15.83 ಕೋಟಿ ರೂಪಾಯಿ  ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ   ರವೀಂದರ್ ಚಂದ್ರಶೇಖರ್ ಪೊಲೀಸ್ ಅವರನ್ನು  ಬಂಧಿಸಿದ್ದರು.  ರವೀಂದರ್​ ಅವರನ್ನು ಮದ್ರಾಸ್​ ಹೈಕೋರ್ಟ್​ ಐದು ಕೋಟಿ ರೂಪಾಯಿ ಶ್ಯೂರಿಟಿಯೊಂದಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಅವರೀಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ಹಿಂದೆ ಪತಿ ಜೈಲಿನಲ್ಲಿ ಇದ್ದಾಗಲೂ ಮಹಾಲಕ್ಷ್ಮಿ ಅವರು ಇದೇ ರೀತಿ ಫೋಟೋಶೂಟ್ ಮಾಡಿಸಿಕೊಂಡು ಟ್ರೋಲ್​ಗೆ ಒಳಗಾಗಿದ್ದೂ ಇದೆ. ಆದರೆ ಇದೀಗ ಐಸಿಯುನಲ್ಲಿ ಇರುವಾಗ ಹೀಗೆ ಮಾಡುತ್ತಿರುವುದರಿಂದ ಈಕೆ ನಿಜಕ್ಕೂ ದುಡ್ಡಿಗಾಗಿಯೇ ಮದುವೆಯಾಗಿದ್ದಾ ಎನ್ನುವುದು ನಿಜ ಎಂದು ತೋರುತ್ತಿದೆ ಎನ್ನುತ್ತಿದ್ದಾರೆ ನೆಟ್ಟಿಗರು. 

ಸುಸ್ಸಾನೆ ಖಾನ್- ಹೃತಿಕ್ ಆಲಿಂಗನ​! ಸಿನಿಮಾ ತಾರೆಯರಿಗೆ ಡಿವೋರ್ಸ್​ ಆದ್ಮೇಲೆ ಲವ್​ ಜಾಸ್ತಿಯಾಗೋದ್ಯಾಕೆ?

click me!