ಯಶ್-ಕಿಯಾರಾ ಅಡ್ವಾನಿ ಹಸಿಬಿಸಿ ರೊಮ್ಯಾನ್ಸ್; ಹಿಂಸೆಗಿಂತ ಶೃಂಗಾರವೇ ಲೇಸು ಎಂದ Toxic Movie ನಟ

Published : Jul 09, 2026, 03:23 PM IST
 rocking star yash kiara advani toxic movie

ಸಾರಾಂಶ

Yash Toxic Movie: ನಟ ಯಶ್ ಅಭಿನಯದ ಮುಂಬರುವ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾದ ಬೋಲ್ಡ್‌ ದೃಶ್ಯಗಳ ಬಗ್ಗೆ ಈ ಸಿನಿಮಾದಲ್ಲಿ ನಟಿಸಿರುವ ಹಾಲಿವುಡ್‌ ನಟ ಏನು ಹೇಳಿದ್ದಾರೆ. 

Yash Toxic Movie: ನಟ ಯಶ್ ಅಭಿನಯದ ಮುಂಬರುವ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಇತ್ತೀಚಿನ ಪ್ರೋಮೋ 'ಲೇಡೀಸ್ ಆಂಡ್ ಲೇಡೀಸ್' (Ladies & Ladies) ಹಾಗೂ ಅತಿಯಾದ ಬೋಲ್ಡ್‌ ದೃಶ್ಯಗಳು ಸೋಶಿಯಲ್‌ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಟೀಸರ್‌ನಲ್ಲಿ ಮಹಿಳೆಯರನ್ನು ಬಿಂಬಿಸಿರುವ ವಿಧಾನದ ಬಗ್ಗೆ ಕೆಲ ಪರ ಹಾಗೂ ವಿರೋಧ ವ್ಯಕ್ತವಾಗಿರುವ ಟೀಕೆಗಳಿಗೆ ಸಹನಟ ಬೆನೆಡಿಕ್ಟ್ ಗ್ಯಾರೆಟ್ ಮಾತನಾಡಿದ್ದಾರೆ.

ಶೃಂಗಾರದ ವಿಷಯಕ್ಕೆ ಟೀಕೆ

ಇನ್‌ಸ್ಟಾಗ್ರಾಮ್‌ನಲ್ಲಿ ನಡೆದ 'ಆಸ್ಕ್ ಮಿ ಎನಿಥಿಂಗ್' ಸಂವಾದದಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಗ್ಯಾರೆಟ್, ಸಿನಿಮಾಗಳಲ್ಲಿ ಹಿಂಸೆ, ಲೈಂ*ಗಿಕತೆಯ ವಿಷಯಗಳ ಬಗ್ಗೆ ಸಮಾಜ ಹೊಂದಿರುವ ವಿಭಿನ್ನ ದೃಷ್ಟಿಕೋನಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಮೂಲಕ ಸಿನಿಮಾದ ಪ್ರಚಾರದ ತುಣುಕನ್ನು ಸಮರ್ಥಿಸಿಕೊಂಡಿದ್ದಾರೆ.

ಬೆನೆಡಿಕ್ಟ್‌ ಗ್ಯಾರೆಟ್‌ ಏನು ಹೇಳಿದ್ರು?

"ನನಗೆ ಸರಿಯಾಗಿ ಗೊತ್ತಿಲ್ಲ. ಆದರೆ ಜನರು ಹಿಂಸಾಚಾರವನ್ನು ನೋಡುವುದಕ್ಕಿಂತ ಹೆಚ್ಚಾಗಿ, ಲೈಂಗಿಕತೆಗೆ ಸಂಬಂಧಿಸಿದ ವಿಷಯಗಳನ್ನು (ಶೃಂಗಾರ ಕಂಟೆಂಟ್) ನೋಡುವುದಕ್ಕೆ ಹೆಚ್ಚು ಆಕ್ಷೇಪ ವ್ಯಕ್ತಪಡಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ, ಇದು ತೀರಾ ವಿಚಿತ್ರ ಮತ್ತು ತಪ್ಪು ನಿರ್ಧಾರ. ಹಿಂಸಾಚಾರದಿಂದ ತುಂಬಿರುವ ಜಗತ್ತಿಗಿಂತ ಲೈಂಗಿಕತೆ ಅಥವಾ ಪ್ರೀತಿ ಇರುವ ಜಗತ್ತೇ ನನಗೆ ಯಾವತ್ತಿದ್ದರೂ ಇಷ್ಟ."

ಚಿತ್ರದ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಅದರಲ್ಲಿ ಮಹಿಳಾ ಪಾತ್ರಗಳನ್ನು ಅತಿಯಾಗಿ ಗ್ಲಾಮರೈಸ್ ಮಾಡಲಾಗಿದೆ, ಅವರ ಪಾತ್ರಗಳನ್ನು ವಸ್ತುವಿನಂತೆ ಬಿಂಬಿಸಲಾಗಿದೆ ಎಂಬ ಕಾರಣಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಒಂದು ವರ್ಗದಲ್ಲಿ ವಿರೋಧ ವ್ಯಕ್ತವಾಗಿತ್ತು. ಇದಕ್ಕೆ ನಟ ಬೆನೆಡಿಕ್ಟ್ ಗ್ಯಾರೆಟ್ ಅವರು ಸಮಾಜವು ಹಿಂಸೆಯನ್ನು ಸುಲಭವಾಗಿ ಜೀರ್ಣಿಸಿಕೊಳ್ಳುತ್ತದೆ, ಆದರೆ ಶೃಂಗಾರ ಅಥವಾ ಮುಕ್ತ ಪ್ರೇಮದ ದೃಶ್ಯಗಳನ್ನು ಅಷ್ಟೇ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ಎಂಬ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಆಡಿಯೋ ರಿಲೀಸ್ ಆದಾಗಲೇ ಈ ಸಾಂಗ್ ಚಾರ್ಟ್‌ಬಸ್ಟರ್ ಲಿಸ್ಟ್ ಸೇರಿಕೊಂಡಿತ್ತು. ರೀಲ್ಸ್, ಶಾರ್ಟ್ಸ್‌ ಎಲ್ಲಿ ನೋಡಿದ್ರೂ ಇದೇ ಸೌಂಡು. ಆದ್ರೆ, ಈ ಹಾಡಿನ ಅಸಲಿ ಮಜಾ ಇರೋದೇ ವಿಶ್ಯುಯಲ್ಸ್‌ನಲ್ಲಿ ಅಂತ ಇವತ್ತು ಪ್ರೂವ್ ಆಗಿದೆ. ಕೆವಿಎನ್ ಪ್ರೊಡಕ್ಷನ್ಸ್, ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್, ಝೀ ಮ್ಯೂಸಿಕ್ ಕಂಪನಿ ಜೊತೆಗೂಡಿ ಬಿಡುಗಡೆ ಮಾಡಿರೋ ಈ ವಿಡಿಯೋ ಸಾಂಗ್ ನೋಡಿದ್ರೆ, ‘ಟಾಕ್ಸಿಕ್’ ಸಿನಿಮಾ ಯಾವ ರೇಂಜ್‌ಗೆ ಬಂದಿದೆ ಅನ್ನೋದು ಅಂದಾಜು ಸಿಕ್ಕಿಬಿಡುತ್ತೆ.

ಕಿಚ್ಚು ಹಚ್ಚಿದ ಆನ್-ಸ್ಕ್ರೀನ್ ಕೆಮಿಸ್ಟ್ರಿ

ಇನ್ನು ಈ ಹಾಡಿನ ಹೈಲೈಟ್ ಅಂದ್ರೆ, ನಮ್ಮ ರಾಕಿಂಗ್ ಸ್ಟಾರ್ ಯಶ್ ಜೊತೆ ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾನಿ ಸಖತ್ ಫ್ರೆಶ್ ಜೋಡಿ! ಇಬ್ಬರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಹೆಂಗಿದೆ ಅಂದ್ರೆ, ನೋಡೋಕೆ ಎರಡು ಕಣ್ಣು ಸಾಲಲ್ಲ. ಪ್ರೀತಿ ಅಂದ್ರೆ ಬರೀ ರೋಮ್ಯಾನ್ಸ್ ಅಷ್ಟೇ ಅಲ್ಲ, ಅದೊಂದು ತೀವ್ರವಾದ ಹುಚ್ಚು, ಕಂಪ್ಲೀಟ್ ಶರಣಾಗತಿ ಅನ್ನೋದನ್ನು ಈ ಇಬ್ಬರು ನಟರು ತಮ್ಮ ಕಣ್ಣುಗಳಲ್ಲೇ ಎಕ್ಸ್‌ಪ್ರೆಸ್ ಮಾಡಿದ್ದಾರೆ.

ಹೆಸರಿಗೆ ತಕ್ಕ ಹಾಗೆ ವಿಧ್ವಂಸ ಸೃಷ್ಟಿಸಿದ ತಬಾಹಿ

ಲೋಕವೇ ಮರೆತುಹೋಗುವಂಥಾ ರೌದ್ರ, ಗಂಭೀರ ಹಾಗೂ ಪ್ಯೂರ್ ಲವ್ ಇವರಿಬ್ಬರ ನಡುವೆ ಕಾಣಿಸ್ತಿದೆ. ಗ್ರಾಂಡ್ ಸಿನಿಮ್ಯಾಟಿಕ್ ವಿಶ್ಯುಯಲ್ಸ್, ಮೈ ರೋಮ ನಡುಗಿಸೋ ಗಿಟಾರ್ ನೋಟ್ಸ್ ಮತ್ತು ಇಂಟರ್ನ್ಯಾಷನಲ್ ಲೆವೆಲ್ ಆರ್ಕೆಸ್ಟ್ರಾ ಮ್ಯೂಸಿಕ್... ಅಬ್ಬಬ್ಬಾ, ‘ತಬಾಹಿ’ ನಿಜಕ್ಕೂ ಹೆಸರಿಗೆ ತಕ್ಕ ಹಾಗೆ ಮ್ಯೂಸಿಕ್ ವರ್ಲ್ಡ್‌ನಲ್ಲಿ ವಿಧ್ವಂಸ ಸೃಷ್ಟಿಸ್ತಿದೆ!

ಈ ಅದ್ಭುತ ಹಾಡಿಗೆ ಟ್ಯೂನ್ ಹಾಕಿ, ಧ್ವನಿಯಾಗಿರೋದು ಖ್ಯಾತ ಮ್ಯೂಸಿಷಿಯನ್ ವಿಶಾಲ್ ಮಿಶ್ರಾ. ಹಿಂದಿಯಲ್ಲಿ ರಾಜ್ ಶೇಖರ್ ಸಾಹಿತ್ಯ ಬರೆದ್ರೆ, ಕನ್ನಡದಲ್ಲಿ ನಮ್ಮ ವಿಕಟಕವಿ ಯೋಗರಾಜ್ ಭಟ್ರು ತಮ್ಮದೇ ಸ್ಟೈಲ್‌ನಲ್ಲಿ ಅದ್ಭುತವಾಗಿ ಸಾಹಿತ್ಯ ಉಣಬಡಿಸಿದ್ದಾರೆ.

ಕೇವಲ ಕನ್ನಡ, ಹಿಂದಿ ಅಷ್ಟೇ ಅಲ್ಲ, ತೆಲುಗಿನಲ್ಲಿ ರಾಮಜೋಗಯ್ಯ ಶಾಸ್ತ್ರಿ, ತಮಿಳಿನಲ್ಲಿ ವಿಘ್ನೇಶ್ ಶಿವನ್, ಮತ್ತು ಮಲಯಾಳಂನಲ್ಲಿ ರಫೀಕ್ ಅಹಮದ್ ರಂಥಾ ಸೌತ್ ಇಂಡಿಯಾದ ಟಾಪ್ ಲಿರಿಸಿಸ್ಟ್‌ಗಳು ಈ ಹಾಡನ್ನ ಆಯಾ ಭಾಷೆಗಳಿಗೆ ತಕ್ಕಂತೆ ಸಖತ್ ಆಗಿ ಅಡಾಪ್ಟ್ ಮಾಡಿದ್ದಾರೆ.

ನಟಿಯರ ಸಮ್ಮಿಲನ

ಇನ್ನೂ ಈ ಸಾಂಗ್​ನಲ್ಲಿ ಯಶ್-ಕಿಯಾರಾ ರೊಮ್ಯಾನ್ಸ್ ನಡುನಡುವೆ ಬೇರೆ ದೃಶ್ಯಗಳು ಕೂಡ ಇವೆ. ಅಲ್ಲಿ ನಯನತಾರಾ ಸೇರಿದಂತೆ ಬೇರೆ ನಟಿಯರ ಸಣ್ಣ ಝಲಕ್ ಕೂಡ ಕಾಣಿಸಿದೆ. ಅಸಲಿಗೆ ಟಾಕ್ಸಿಕ್ ಸಿನಿಮಾದ ತಾರಾಗಣ ನೋಡಿದ್ರೆ ತಲೆ ತಿರುಗುತ್ತೆ! ರಾಕಿಂಗ್ ಸ್ಟಾರ್ ಯಶ್ ಜೊತೆ ಲೇಡಿ ಸೂಪರ್ ಸ್ಟಾರ್ ನಯನತಾರಾ, ಕಿಯಾರಾ ಅದ್ವಾನಿ, ತಾರಾ ಸುತಾರಿಯಾ, ನಮ್ಮ ಹೆಮ್ಮೆಯ ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ರುಕ್ಮಿಣಿ ವಸಂತ್ ಮತ್ತು ಹುಮಾ ಖುರೇಷಿ ಅವರಂಥಾ ಪವರ್‌ಹೌಸ್ ಸ್ಟಾರ್ಸ್ ಈ ಸಿನಿಮಾದಲ್ಲಿದ್ದಾರೆ.

ಗೀತು ಮೋಹನ್‌ದಾಸ್ ಮತ್ತು ಯಶ್ ಅವರೇ ಟಾಕ್ಸಿಕ್‌ಗೆ ಸ್ವತಃ ಸ್ಕ್ರಿಪ್ಟ್ ಬರೆದಿದ್ದು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಈ ಚಿತ್ರ ಶೂಟ್ ಆಗಿದೆ. ಹಿಂದಿ, ತಮಿಳು, ತೆಲುಗು, ಮಲಯಾಳಂಗೆ ಡಬ್ ಆಗ್ತಿದೆ.ಇದೇ ಬರುವ ಆಗಸ್ಟ್ 26, 2026 ಕ್ಕೆ ಇಡೀ ಜಗತ್ತಿನಾದ್ಯಂತ ‘ಟಾಕ್ಸಿಕ್’ ಥಿಯೇಟರ್‌ಗಳಿಗೆ ಅಪ್ಪಳಿಸಲಿದೆ.

ಸದ್ಯಕ್ಕಂತೂ ರಿಲೀಸ್ ಆಗಿರೋ ಈ ‘ತಬಾಹಿ’ ವಿಡಿಯೋ ಸಾಂಗ್ ನೋಡಿ, ಯಶ್ ಖದರ್ ಎಂಜಾಯ್ ಮಾಡಿ. 4 ವರ್ಷದಿಂದ ಕಾಣೆಯಾಗಿದ್ದ ಯಶ್ ಸುನಾಮಿಯಂಥಾ ಸಾಂಗ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಗ್ರಾಂಡ್ ವಿಶ್ಯುಯಲ್ಸ್ ಮತ್ತು ಹಾರ್ಟ್-ಟಚಿಂಗ್ ಮ್ಯೂಸಿಕ್ ಸೇರಿರೋ ‘ತಬಾಹಿ’ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸುನಾಮಿಯನ್ನೇ ಸೃಷ್ಟಿಸ್ತಾ ಇದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Toxic Movie: ಯಶ್‌, ಕಿಯಾರಾ ಅಡ್ವಾನಿ ಅತಿಯಾದ ರೊಮ್ಯಾನ್ಸ್; ಕೊನೆಗೂ ರಿಯಾಕ್ಟ್ ಮಾಡಿದ ಪತಿ Sidharth Malhotra
Janhvi Kapoor Saree: ಲವೆಂಡರ್ ಕಾಂಜೀವರಂ ಸೀರೆಯಲ್ಲಿ ಜಾನ್ವಿ, ಮೆಹೆಂದಿಯಲ್ಲಿತ್ತು ಬಾಯ್‌ಫ್ರೆಂಡ್ ಹೆಸರು!