
ಸಿನಿಮಾ ಹಂಗಾಮಾ, ಫಿಲ್ಮ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್
Yash Toxic Movie: ಬಾಲಿವುಡ್‌ನ ‘ಕನಸಿನ ಕನ್ಯೆ' ಈಗ ಸ್ಯಾಂಡಲ್‌ವುಡ್‌ನ ರಂಗು ಹೆಚ್ಚಿಸೋಕೆ ಬಂದಿದ್ದಾರೆ. ಕಿಯಾರಾ ಅಡ್ವಾನಿ ಅದೆಷ್ಟು ಬೋಲ್ಡ್ ಮತ್ತು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಅಂದ್ರೆ, ಪಡ್ಡೆ ಹುಡುಗರ ಎದೆಬಡಿತ ಜೋರಾಗಿದೆ. ಈಕೆಯನ್ನ ನೋಡಿ ಕೇವಲ ಸುಂದರಿ ಅಂದ್ರೆ ಸಾಲದು.. ಈಕೆ ಸಾಕ್ಷಾತ್ ಶೃಂಗಾರದೇವತೆಯಂತೆ ಸ್ಕ್ರೀನ್ ಮೇಲೆ ಕಣ್ಮನ ಸೆಳೆದಿದ್ದಾರೆ.
ಅಂದಹಾಗೆ ಕಿಯಾರಾ ಮೊದಲಿನಿಂದಲೂ ಬೋಲ್ಡ್ ಅಂಡ್ ಬಿಂದಾಸ್. ‘ಲಸ್ಟ್ ಸ್ಟೋರೀಸ್' ಇರಲಿ, 'ಕಬೀರ್ ಸಿಂಗ್' ಇರಲಿ.. ಕಥೆಗೆ ಬೇಕು ಅಂದ್ರೆ ಎಂಥದ್ದೇ ಬೋಲ್ಡ್ ಸೀನ್‌ಗೂ ಸೈ ಅನ್ನುವ ಧೈರ್ಯವಂತೆ ಈಕೆ. ಲಸ್ಟ್ ಸ್ಟೋರಿಯ ಶೃಂಗಾರ ದೃಶ್ಯಗಳು.. ಕಬಿರ್ ಸಿಂಗ್ನ ಕಿಸ್ಸಿಂಗ್ ಸೀನ್ಗಳಲ್ಲಿ ಮಡಿವಂತಿಕೆ ಮಾರುದೂರವಿಟ್ಟು ನಟಿಸಿದ ಬೋಲ್ಡ್ ಬ್ಯೂಟಿ ಈಕೆ.
2023ರಲ್ಲಿ ಸಿದ್ದಾರ್ಥ್ ಮಲ್ಹೋತ್ರ ಕೈಹಿಡಿದು ಮದುವೆಯಾದ ಕಿಯಾರಾ, ಇತ್ತೀಚೆಗಷ್ಟೇ ಒಂದು ಮುದ್ದಾದ ಮಗುವಿಗೆ ತಾಯಿಯೂ ಆಗಿದ್ದಾರೆ. ಮದುವೆಯಾಗಿ, ಮಗುವಾದ ಮೇಲೆ ಬಹುತೇಕ ನಟಿಯರು ಗ್ಲಾಮರಸ್ ಪಾತ್ರಗಳಿಂದ ದೂರ ಇರ್ತಾರೆ. ಆದ್ರೆ ಕಿಯಾರಾ ಈ ವಿಷ್ಯದಲ್ಲಿ ಫುಲ್ ಡಿಫ್ರೆಂಟ್.
ಮದುವೆಯ ನಂತರ ನಟಿಸಿದ 'ವಾರ್' ಸಿನಿಮಾದಲ್ಲಿ ಬಿಕಿನಿ ತೊಟ್ಟು ಹಸಿಬಿಸಿಯಾಗಿ ಮಿಂಚಿದ್ರು ಕಿಯಾರಾ. ಜ್ಯೂನಿಯರ್ ಎನ್.ಟಿ.ಆರ್, ಹೃತಿಕ್ ರಂಥಾ ಸೂಪರ್ ಸ್ಟಾರ್ಗಳಿದ್ರೂ, ಪಡ್ಡೆ ಹುಡುಗರು ಮಾತ್ರ ವಾರ್ ನೋಡ್ಲಿಕ್ಕೆ ಕಾರಣ ಕಿಯಾರಾ ಗ್ಲಾಮರ್. ವಾರ್ ಮೂವಿಯಲ್ಲಿ ಬಿಕಿನಿ ತೊಟ್ಟಿದ್ದಕ್ಕೆ ಮತ್ತೀಗ 'ಟಾಕ್ಸಿಕ್'ನಲ್ಲಿ ಇಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಕ್ಕೆ ನೆಟ್ಟಿಗರಿಂದ ತೀವ್ರ ಟೀಕೆಗಳು ವ್ಯಕ್ತವಾಗ್ತಿವೆ,"ಮದುವೆಯಾದ ಮೇಲೂ ಇಂಥಾ ಪಾತ್ರಗಳು ಬೇಕಾ?" ಅಂತ ಟ್ರೋಲರ್ಸ್ ಕಿಡಿಕಾರ್ತಾ ಇದ್ದಾರೆ.
ಆದರೆ, ಟೀಕೆ ಮಾಡುವವರ ಬಾಯಿ ಮುಚ್ಚಿಸಲು ಕಿಯಾರಾ ಹತ್ತಿರ ಪವರ್‌ಫುಲ್ ಅಸ್ತ್ರ ಇದೆ. ಇತ್ತೀಚಿನ ಇಂಟರ್ವ್ಯೂವೊಂದರಲ್ಲಿ ಕಿಯಾರಾ ಈ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಈ ವಿಚಾರದಲ್ಲಿ ಕಿಯಾರಾ ಬೆನ್ನಿಗೆ ನಿಂತಿದ್ದು ಬೇರೆ ಯಾರೂ ಅಲ್ಲ, ಸ್ವತಃ ಅವರ ಪತಿ ಸಿದ್ದಾರ್ಥ್ ಮಲ್ಹೋತ್ರಾ!
ಅಲ್ಲಿ ಒಂದು ರೀತಿಯ ತುಂಬಾ ವಿಚಿತ್ರವಾದ ನೆಗೆಟಿವಿಟಿ ಹರಡುತ್ತಿತ್ತು. ಕೆಲವೊಂದು ಸೀನ್‌ಗಳನ್ನ ... 'ಅವಳು ಇದನ್ನು ಯಾಕೆ ಮಾಡಿದಳು?', 'ಅದನ್ನು ಯಾಕೆ ಮಾಡಿದಳು?' ಎಂಬ ಪ್ರಶ್ನೆಗಳು ಕೇಳಿಬರುತ್ತಿದ್ದವು. ಬಹುಶಃ ಅದಕ್ಕೆ ಕಾರಣ, ‘ಓಹ್, ಈಗ ಅವಳಿಗೆ ಮದುವೆಯಾಗಿದೆ' ಅನ್ನೋದು ಇರಬಹುದು.
ಆಗ ಸಿದ್ಧಾರ್ಥ್ ನನಗೆ ಹೇಳಿದರು, 'ನೋಡು, ಈ ತರಹದ ನೆಗೆಟಿವ್ ಟ್ರೋಲರ್‌ಗಳು ಯಾವಾಗಲೂ ಇದ್ದೇ ಇರುತ್ತಾರೆ. ನೀನು ಇವುಗಳಿಗೆ ಇಷ್ಟೊಂದು ಪ್ರಾಮುಖ್ಯತೆ ನೀಡಿ, ಮನೆಯಲ್ಲಿ ಕುಳಿತು ಅಳುತ್ತಾ, ಎಲ್ಲವೂ ಕೈ ಮೀರಿ ಹೋಗಿದೆ ಅನ್ನುವಂತೆ ವರ್ತಿಸಿದರೆ ಹೇಗೆ? ನಿನಗೇನಾಗಿದೆ? ನಿನಗೆ ಅವರ್ಯಾರೂ ಗೊತ್ತಿಲ್ಲ, ಅವರಿಗೂ ನೀನು ಯಾರೆಂದು ಗೊತ್ತಿಲ್ಲ. ಇಂತಹ ವಿಷಯಗಳಿಗೆ ಗಮನ ಕೊಡಬೇಡ' ಅಂತ ಅವರು ನನಗೆ ತಿಳಿ ಹೇಳಿದರು.
ಇಂತಹ ವಿಷಯಗಳನ್ನು ಹಾಗೇ ಬಿಟ್ಟುಬಿಡಬೇಕು. ಜೀವನದಲ್ಲಿ ಎಷ್ಟೊಂದು ಸಂತೋಷವಿದೆ. ನಾವು ಮನುಷ್ಯರು ಹೇಗಾಗಿದ್ದೇವೆ ಎಂದರೆ, ನಮ್ಮ ಬಗ್ಗೆ 15 ಜನರು ತುಂಬಾ ಅದ್ಭುತವಾದ ಮಾತುಗಳನ್ನು ಆಡಿದ್ದರೂ ಸಹ, ನೆಗೆಟಿವ್ ಆಗಿ ಮಾತನಾಡುವ ಆ ಒಬ್ಬ ವ್ಯಕ್ತಿಯ ಕಡೆಗೇ ನಮ್ಮ ಗಮನ ಹೋಗುತ್ತದೆ.
ಮೂಲತಃ ನಾವು ಬದಲಾಯಿಸಿಕೊಳ್ಳಬೇಕಾಗಿರುವುದು ಇದನ್ನೇ. ನಾನು ನನ್ನಲ್ಲಿ ಬದಲಾಯಿಸಿಕೊಳ್ಳಬೇಕಾದ ವಿಷಯ ಇದು. ನನಗೆ ಈಗ ಅರಿವಾಗಿದೆ—ನನ್ನ ಬಗ್ಗೆ ಅಷ್ಟು ಪ್ರೀತಿಯಿಂದ, ಹೃದಯ ಮುಟ್ಟುವಂತೆ ಬರೆಯಲು ತಮ್ಮ ಸಮಯವನ್ನು ಮೀಸಲಿಟ್ಟ ಆ 15 ಜನರ ಕಡೆಗೆ ನಾನು ಗಮನ ಹರಿಸಬೇಕು. ಆದರೆ ನಾನು ಆ 15 ಜನರನ್ನು ನಿರ್ಲಕ್ಷಿಸಿ, ಯಾರೋ ಒಬ್ಬ ವ್ಯಕ್ತಿ—ಅವನ ದಿನವೇ ಹಾಳಾಗಿರಬಹುದು ಅಥವಾ ಯಾವುದೇ ಕಾರಣವಿಲ್ಲದೆ ನಿನಗೆ ಅರ್ಥವೇ ಇಲ್ಲದ ಕಮೆಂಟ್ ಮಾಡಿರಬಹುದು—ಅವನ ಬಗ್ಗೆ ಯಾಕೆ ಯೋಚಿಸಬೇಕು? ನಾನು ಆ ಒಬ್ಬ ವ್ಯಕ್ತಿಯ ಮೇಲೆ ಯಾಕೆ ಗಮನ ಹರಿಸುತ್ತಿದ್ದೇನೆ?
ಹೌದು, ಕಿಯಾರಾ ಪತಿ ಸಿದ್ದಾರ್ಥ್ ನೆಟ್ಟಿಗರ ಟೀಕೆಗಳನ್ನ ನೋಡಿ ಬೇಸರ ಮಾಡಿಕೊಳ್ಳಬೇಡ, ಇದೆಲ್ಲದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಅಂತ ಧೈರ್ಯ ತುಂಬಿದ್ದಾರಂತೆ. ಕಲೆಯನ್ನ ಕಲೆಯಾಗಿ ನೋಡಬೇಕು ಅನ್ನೋದು ಪತಿಯ ಸಲಹೆ. ಇದೇ ಕಾರಣಕ್ಕೆ ಕಿಯಾರಾ ಟ್ರೋಲರ್ಸ್‌ಗೆ ಕ್ಯಾರೇ ಅನ್ನದೆ, ಸಿನಿಮಾ ರಂಗದಲ್ಲಿ ತನ್ನ ಗ್ಲಾಮರ್ ಸಾಮ್ರಾಜ್ಯವನ್ನ ಯಶಸ್ವಿಯಾಗಿ ಮುನ್ನಡೆಸ್ತಾ ಇದ್ದಾರೆ. ಮದುವೆ, ಮಗು ಆದ್ರೂ ಪಡ್ಡೆ ಹೈಕಳ ಹೃದಯದಲ್ಲಿ ಈಗಲೂ ಕನಸಿನ ಕನ್ಯೆಯೇ ಆಗಿಯೇ ಉಳಿದುಕೊಂಡಿದ್ದಾರೆ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.