ನನ್ನ ನಿರ್ಧಾರ ನೋಡಿ ರಿಷಿ ಕಪೂರ್‌ ತುಂಬಾ ಖುಷಿಪಡಲಿದ್ದಾರೆ: ಅಗಲಿದ ಪತಿಯ ನೆನೆದ ನೀತು

By Anusha Kb  |  First Published May 23, 2022, 11:29 AM IST
  • ಜಗ್‌ಜಗ್ ಜೀಯೋ ಸಿನಿಮಾದ ಟ್ರೈಲರ್ ರಿಲೀಸ್
  • ಪತಿ ರಿಷಿ ಕಪೂರ್ ನೆನೆದ ನೀತು ಕಪೂರ್
  • ತನ್ನ ನಿರ್ಧಾರದಿಂದ ಪತಿ ಖುಷಿ ಪಡಲಿದ್ದಾರೆ ಎಂದ ಹಿರಿಯ ನಟಿ

ಮುಂಬೈ: ಪತಿ ರಿಷಿ ಕಪೂರ್ ಅಗಲಿಕೆಯ ನಂತರ ಖಿನ್ನತೆಗೆ ಜಾರಿದ ನಟಿ ನೀತು ಕಪೂರ್ ದೀರ್ಘ ಬ್ರೇಕ್ ಪಡೆದು ಜಗ್‌ಜಗ್ ಜೀಯೋ (JugJugg Jeeyo) ಸಿನಿಮಾ ಮೂಲಕ ಮತ್ತೆ ಬಂದಿದ್ದಾರೆ. ಇದರ ಟ್ರೈಲರ್‌ ರಿಲೀಸ್ ವೇಳೆ ಮನಬಿಚ್ಚಿ ಮಾತನಾಡಿದ ನೀತು ಕಪೂರ್, ಪ್ರಸ್ತುತ ನನ್ನನ್ನು ನೋಡಿ ನನ್ನ ಪತಿ ರಿಷಿ ಕಪೂರ್ ತುಂಬಾ ಖುಷಿ ಪಡಲಿದ್ದಾರೆ ಎಂದು ಹೇಳಿದ್ದಾರೆ. ನೀತು ಅವರು ಈ ಚಿತ್ರದಲ್ಲಿ ಅನಿಲ್ ಕಪೂರ್ (Anil Kapoor) , ವರುಣ್ ಧವನ್ (Varun Dhawan) ಮತ್ತು ಕಿಯಾರಾ ಅಡ್ವಾಣಿ ( Kiara Advani) ಅವರೊಂದಿಗೆ ಸ್ಕ್ರೀನ್  ಹಂಚಿಕೊಂಡಿದ್ದಾರೆ.

ನೀತು ಕೊನೆಯದಾಗಿ 2013 ರ ಬೇಷರಮ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ ಅವರು ದಿವಂಗತ ನಟ ಮತ್ತು ಅವರ ಪತಿ ರಿಷಿ ಕಪೂರ್ ಮತ್ತು ಅವರ ಮಗ ರಣಬೀರ್ ಕಪೂರ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಮೇ.22 ರಂದು ನಡೆದ  ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನೀತು ಕಪೂರ್ ಬೆಳ್ಳಿತೆರೆಗೆ ಮರಳಿದ ತಮ್ಮ ನಿರ್ಧಾರ ಹಾಗೂ ಇದರಿಂದ ರಿಷಿ ಕಪೂರ್ ಅತ್ಯಂತ ಖುಷಿ ಪಡಲಿದ್ದಾರೆ ಎಂದು ಹೇಳಿದರು.

Tap to resize

Latest Videos

ತಮ್ಮ ಮದುವೆ ದಿನ ಮೂರ್ಛೆ ಹೋಗಿದ್ದ ಬಾಲಿವುಡ್‌ನ ಜೋಡಿ

ತನ್ನ ಪತಿಯ ನಿಧನದ ಸಂದರ್ಭದಲ್ಲಿ ಖಿನ್ನತೆಗ ಜಾರಿದ್ದ ಹಾಗೂ  ತಾನು ಅನುಭವಿಸಿದ ಸನ್ನಿವೇಶಗಳಿಂದ ಹೊರಬರಲು ಈ ಚಿತ್ರ ಸಹಾಯ ಮಾಡಿದೆ ಎಂದು ನೀತು ಕಪೂರ್ ಹೇಳಿದರು. ಅಲ್ಲದೇ ಅವರು ಸಿನಿಮಾ ನಿರ್ಮಾಪಕ ಕರಣ್ ಜೋಹರ್ (Karan Johar), ನಿರ್ದೇಶಕ ರಾಜ್ ಎ ಮೆಹ್ತಾ (Raj A Mehta) ಮತ್ತು ಇಡೀ ಚಿತ್ರತಂಡಕ್ಕೆ ತಮ್ಮನ್ನು ಬೆಂಬಲಿಸಿದ್ದಕ್ಕೆ ಧನ್ಯವಾದ ಹೇಳಿದರು. ಈ ಚಿತ್ರವು ತನಗೆ ಅತ್ಯಂತ ವಿಶೇಷವಾಗಿದೆ ಮತ್ತು ಅದರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಅವರು ಹೇಳಿದರು.

ನಾನು ಕರಣ್ ಅವರಿಗಿಂತ ಹೆಚ್ಚು ಯಾರಿಗೂ ಕೃತಜ್ಞರಾಗಿರಲು ಸಾಧ್ಯವಿಲ್ಲ. ನೀವು ನನ್ನನ್ನು ಮುಂದೆ ಹೋಗುವಂತೆ ತಳ್ಳಿದವರು, ನಾನು ಕೆಲಸ ಮಾಡಬೇಕು ಎಂದು ಹೇಳಿದವರು ನೀವು. ಅದು ನನ್ನ ಪಾಲಿನ ಉತ್ತಮ ನಿರ್ಧಾರವಾಗಿತ್ತು. ಈಗ ಅವರು (ರಿಷಿ) ಅತ್ಯಂತ ಸಂತೋಷದಿಂದ ಇರುತ್ತಾರೆ ಎಂದು ನನಗೆ ಖಾತ್ರಿಯಿದೆ. ಈ ಚಿತ್ರ ಯಾವಾಗಲೂ ವಿಶೇಷವಾಗಿರುತ್ತದೆ ಏಕೆಂದರೆ ನಾನು ಹಿಂದಿ ಚಿತ್ರಗಳಿಗೆ ಮರಳುತ್ತಿದ್ದೇನೆ ಎಂದು ನೀತು ಹೇಳಿದರು.

ರಣಬೀರ್‌ ಜೊತೆ ಶೂಟಿಂಗ್‌ ಸೆಟ್‌ಗೆ ಬಂದ ಅಮ್ಮ ನೀತು ಕಪೂರ್

ಜಗ್‌ಜಗ್ ಜೀಯೋ, ರಾಜ್ ಎ ಮೆಹ್ತಾ ಫ್ಯಾಮಿಲಿ ಎಂಟರ್‌ಟೈನರ್ 2022ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರದಲ್ಲಿ ನೀತು ಕಪೂರ್ ಅನಿಲ್ ಕಪೂರ್, ವರುಣ್ ಧವನ್ ಮತ್ತು ಕಿಯಾರಾ ಅಡ್ವಾಣಿ ಅವರೊಂದಿಗೆ ಪರದೆ ಹಂಚಿಕೊಳ್ಳುತ್ತಿದ್ದಾರೆ. ಹಿರಿಯ ನಟಿ ಕೊನೆಯದಾಗಿ 2013 ರ ಬೇಷರಮ್ ಚಲನಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಇನ್ನು ಜಗ್‌ಜಗ್ ಜೀಯೋ ಸಿನಿಮಾವೂ ವಿಭಿನ್ನ ತಲೆಮಾರುಗಳ ಎರಡು ಜೋಡಿಗಳ ಕಥೆಯಾಗಿದ್ದು, ಮದುವೆಯ ನಂತರದ ಸಮಸ್ಯೆಗಳ ಸುತ್ತ ಸಿಲುಕಿ ಹಾಕಿಕೊಂಡಿದೆ. ಇದು  ಸಾಕಷ್ಟು ಹಾಸ್ಯದೊಂದಿಗೆ ಎರಡು ಪೀಳಿಗೆಯ ಅಂತರವನ್ನು ಸುಂದರವಾಗಿ ವಿಲೀನಗೊಳಿಸುತ್ತದೆ ಮತ್ತು ಪ್ರೀತಿಯ ಬಗ್ಗೆ ವಿಶಿಷ್ಟವಾದ ದೃಷ್ಟಿಕೋನವನ್ನು ನೀಡುತ್ತದೆ. ಒಂದು ಕೌಟುಂಬಿಕ ಹಾಸ್ಯ ಪ್ರಧಾನ ಸಿನಿಮಾ ಇದಾಗಿದೆ. ಇದರಲ್ಲಿ ತಂದೆ ಮತ್ತು ತಾಯಿಯ ಪಾತ್ರವನ್ನು ಅನಿಲ್ ಮತ್ತು ನೀತು ನಿರ್ವಹಿಸಿದ್ದಾರೆ.  ಈ ವರ್ಷ ಜೂನ್ 24 ರಂದು ಜಗ್‌ಜಗ್ ಜೀಯೋ ಥಿಯೇಟರ್‌ಗಳಲ್ಲಿ ಜಗಮಗಿಸಲಿದೆ.

click me!