
ಬಾಲಿವುಡ್ ನಟಿ ರೇಖಾ ಮತ್ತು ಅಮಿತಾಭ್ ಬಚ್ಚನ್ ಸಂಬಂಧ ಬಾಲಿವುಡ್‌ನ ಎವರ್‌ಗ್ರೀನ್ ಲವ್‌ಸ್ಟೋರಿಗಳಲ್ಲಿ ಒಂದು. ಅದರ ಆರಂಭ, ಪ್ರೀತಿ, ಅವರ ಬ್ರೇಕಪ್ ಎಲ್ಲವೂ ಎಲ್ಲರಿಗೂ ಗೊತ್ತಿರುವ ವಿಚಾರ.
ಅಮಿತಾಭ್ ಅವರನ್ನು ವಿವಾಹವಾಗದಿದ್ದರೂ ರೇಖಾ ಸಿಂಧೂರ ಇಡುತ್ತಾರೆ. ಅಮಿತಾಭ್ ಕುರಿತ ಅವರ ಆಳವಾದ ಪ್ರೀತಿ ಮತ್ತೊಮ್ಮೆ ಸಾಬೀತಾಗಿದೆ. ಇತ್ತೀಚೆಗಷ್ಟೇ ಇದಕ್ಕೆ ಪ್ರೂಫ್ ಎಂಬಂತಹ ಘಟನೆ ನಡೆದಿದೆ.
ಬಾಲಿವುಡ್ ಎವರ್‌ಗ್ರೀನ್ ನಟಿ ರೇಖಾಗೆ ಸಂಜಯ್ ದತ್ ಜೊತೆ ಇತ್ತಾ ಅಫೇರ್!?
ಯಾವಾಗಲೂ ಕಾಂಜೀವರಂ ಸೀರೆಯಲ್ಲೇ ಕಾಣಿಸಿಕೊಳ್ಳೋ ರೇಖಾ ಚಿರ ಯವ್ವನೆ ಎಂದರೆ ತಪ್ಪಾಗಲಾರದು. ಬಾಲಿವುಡ್‌ನಲ್ಲಿ ರಾಣಿಯಂತೆ ಮೆರೆದ ನಟಿ ಪ್ರೀತಿಯ ವಿಚಾರದಲ್ಲಿ ಅನುಭವಿಸಿದ್ದು ನೋವು ಮಾತ್ರ.
ಹಿರಿಯ ನಟಿ ರೇಖಾ ಅವರು ಇಂಡಿಯನ್ ಐಡಲ್ 12 ರ ಸೆಟ್‌ನಲ್ಲಿ ಕೊಟ್ಟ ಹೇಳಿಕೆ ವೈರಲ್ ಆಗಿದೆ. ಅವರು ಶನಿವಾರ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.
ಮಂಗಳಸೂತ್ರ ಧರಿಸಿದ ರೇಖಾ: ಡಿನ್ನರ್‌ಗೆ ಮನೆಗೆ ಕರೆದು ಜಯಾ ಬಚ್ಚನ್ ಹೀಗನ್ನಬಾರದಿತ್ತು
ನಿರೂಪಕ ಜೈ ಭಾನುಶಾಲಿ ರೇಖಾ ಮತ್ತು ನೇಹಾ ಕಕ್ಕರ್ ಅವರನ್ನು ಕೇಳುತ್ತಾ, "ರೇಖಾಜಿ, ನೆಹು, ಯಾರಾದರೂ ಮಹಿಳೆ ಒಬ್ಬ ವ್ಯಕ್ತಿಗಾಗಿ ಈ ರೀತಿ ಹುಚ್ಚರಾಗುತ್ತಾರಾ.. ಅದೂ ವಿವಾಹಿತರಿಗಾಗಿ ? ಎಂದು ಪ್ರಶ್ನಿಸಿದ್ದಾರೆ.
ತಟ್ಟನೆ ಉತ್ತರಿಸಿದ ನಟಿ ನನ್ನಲ್ಲಿ ಕೇಳಿ ಅಲ್ವಾ ಅಂತ ಹೇಳಿದ್ದಾರೆ. ಅಚ್ಚರಿಯಿಂದ ನಿರೂಪಕ ಏನು ಎಂದಾಗ, ನಾನೇನೂ ಹೇಳಿಲ್ಲಪ್ಪ ಎಂದಿದ್ದಾರೆ. ಅಂತೂ ಈಗಲೂ ತಾವು ಅಮಿತಾಭ್‌ಗಾಗಿ ಹಂಬಲಿಸುತ್ತಿರೋದನ್ನು ಬಹಿರಂಗಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.