
ನಟ ಅಕ್ಷಯ್ ಕುಮಾರ್ ಅವರಿಗೆ COVID-19 ಪಾಸಿಟಿವ್ ದೃಢಪಟ್ಟಿದೆ. ಅಕ್ಷಯ್ ಕುಮಾರ್ ಅವರು ಕೊರೋನಾ ಪರೀಕ್ಷೆ ಮಾಡಿದ್ದು, ಪಾಸಿಟಿವ್ ಬಂದಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಅವರು ಟ್ವೀಟ್ ಮಾಡಿ, ಈ ಬೆಳಗ್ಗೆ ನನಗೆ COVID-19 ಗಾಗಿ ಪಾಸಿಟಿವ್ ಬಂದಿದೆ. ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸಿ, ನಾನು ತಕ್ಷಣ ನನ್ನನ್ನು ಪ್ರತ್ಯೇಕಿಸಿಕೊಂಡಿದ್ದೇನೆ. ನಾನು ಮನೆಯಲ್ಲಿ ಕ್ವಾರೆಂಟೈನ್ ಆಗಿದ್ದೇನೆ. ಅಗತ್ಯವಾದ ವೈದ್ಯಕೀಯವನ್ನು ನೆರವು ಕೋರಿದ್ದೇನೆ ಎಂದು ಅಕ್ಷಯ್ ಕುಮಾರ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
47ರಲ್ಲೂ ಮಲೈಕಾ ಫಿಟ್: ಬ್ಯೂಟಿ ಸೀಕ್ರೆಟ್ ಹೇಳಿದ ನಟಿ
ಇತ್ತೀಚಿನ ದಿನಗಳಲ್ಲಿ ತಮ್ಮ ಸುತ್ತಮುತ್ತಲಿದ್ದವರು ತಮ್ಮನ್ನು ಪರೀಕ್ಷೆಗೆ ಒಳಪಡಿಸುವಂತೆ ಕೇಳಿಕೊಂಡಿದ್ದಾರೆ: ನನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷಿಸಿಕೊಳ್ಳಿ ಮತ್ತು ಕಾಳಜಿ ವಹಿಸುವಂತೆ ನಾನು ಪ್ರಾಮಾಣಿಕವಾಗಿ ವಿನಂತಿಸುತ್ತೇನೆ ಎಂದಿದ್ದಾನೆ.
ಅಕ್ಷಯ್ ಕುಮಾರ್ ಅವರು ರಾಮ್ ಸೇತು ಶೂಟಿಂಗ್ ವೇಳಾಪಟ್ಟಿಯಲ್ಲಿ ನಿರತರಾಗಿದ್ದ ಸಮಯದಲ್ಲಿ ಕೊರೋನಾ ಪಾಸಿಟಿವ್ ಬಂದಿದೆ. ಇದರಲ್ಲಿ ಅವರು ಪುರಾತತ್ವಶಾಸ್ತ್ರಜ್ಞನ ಪಾತ್ರ ಮಾಡಲಿದ್ದಾರೆ. ಕಳೆದ ತಿಂಗಳು ಅಕ್ಷಯ್ ಸಹನಟಿರಾದ ನುಸ್ರತ್ ಬರುಚ್ಚಾ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಅವರೊಂದಿಗೆ ಅಯೋಧ್ಯೆಗೆ ಪ್ರಯಾಣಿಸಿ ಮುಹೂರ್ತ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.