
ಬಾಲಿವುಡ್ ನ ಬೆಸ್ಟ್ ನಟಿ ಹಾಗೂ ಕಪೂರ್ ಕುಟುಂಬದ ಸೊಸೆ ಆಲಿಯಾ ಭಟ್ (Alia Bhatt) ಆಕ್ಟಿಂಗ್ ನಲ್ಲಿ ಮಾತ್ರವಲ್ಲ ಅಡುಗೆಯಲ್ಲೂ ಮುಂದಿದ್ದಾರೆ. ಸದಾ ಸಕ್ರಿಯವಾಗಿರುವ ನಟಿ, ತಮ್ಮ ಅಮ್ಮನಿಂದ ಅಡುಗೆ ಕಲಿತಿದ್ದಾರೆ. ಆಲಿಯಾ ಭಟ್ ತಮ್ಮ ಯುಟ್ಯೂಬ್ ಚಾನೆಲ್ (YouTube channel) ನಲ್ಲಿ ಇನ್ ಮೈ ಮಾಮ್ಸ್ ಕಿಚನ್ ಹೆಸರಿನಲ್ಲಿ ವಿಡಿಯೋ ಅಪ್ಲೋಡ್ ಮಾಡ್ತಿದ್ದಾರೆ. ಅಮ್ಮನ ಕೈ ರುಚಿ ನೋಡೋಕೆ ಹೋಗಿ ಸಣ್ಣ ನೋವನ್ನು ಆಲಿಯಾ ತಿಂದಿದ್ದಾರೆ. ಆಲಿಯಾ ಭಟ್ ಕೈ ಸುಟ್ಟುಕೊಂಡಿದ್ದಾರೆ.
ಆಲಿಯಾ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಇದ್ರ ವಿಡಿಯೋ ಹಂಚಿಕೊಂಡಿದ್ದಾರೆ. ಇದ್ರಿಂದಾಗಿ ಕೈ ಸುಟ್ಟುಕೊಂಡೆ ಎನ್ನುವ ಶೀರ್ಷಿಕೆಯಲ್ಲೇ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಆಲಿಯಾ ಭಟ್ ತಮ್ಮ ಅಮ್ಮ ಸೋನಿ ರಜ್ದಾನ್ (Sony Razdan ) ಜೊತೆ ಎರಡನೇ ಬಾರಿ ಅಡುಗೆ ವಿಡಿಯೋ ಮಾಡ್ತಿದ್ದಾರೆ. ಈ ಬಾರಿ ಆಪಲ್ ಕ್ರಂಬಲ್ ಮಾಡೋದಾಗಿ ಆಲಿಯಾ ಹೇಳೋದನ್ನು ಕೇಳಬಹುದು. ಸೋನಿ ರಜ್ದಾನ್, ಆಪಲ್ ಕತ್ತರಿಸಿ ಆಪಲ್ ಕ್ರಂಬಲ್ ಗೆ ತಯಾರಿ ನಡೆಸುತ್ತಿದ್ದಾರೆ. ಅಲ್ಲಿ ಇಲ್ಲಿ ಆಲಿಯಾ ಅವರಿಗೆ ಸಹಾಯ ಮಾಡ್ತಾರೆ. ಡಿಶ್ ಸಿದ್ಧವಾದ್ಮೇಲೆ ಅದ್ರ ರುಚಿ ನೋಡೋ ಭರದಲ್ಲಿ ಆಲಿಯಾ ಕೈ ಸುಟ್ಟುಕೊಳ್ತಾರೆ. ಬಿಸಿ ಇದೆ ಅಂತ ಸೋನಿ ರಜ್ದಾನ್ ಮೊದಲೇ ಎಚ್ಚರಿಕೆ ಕೊಟ್ಟಿದ್ದರಿಂದ ಆಪಲ್ ಕ್ರಂಬಲನ್ನು ಆಲಿಯಾ ಆರಿಸಿ ತಿಂದಿದ್ದಾರೆ. ಆದ್ರೆ ಪಕ್ಕದಲ್ಲಿ ಇಟ್ಟಿದ್ದ ಬಿಸಿ ಟ್ರೇ ಟಚ್ ಮಾಡಿ ಕೈ ಸುಟ್ಟುಕೊಳ್ತಾರೆ. ಇದ್ರಿಂದ ಸ್ವಲ್ಪ ಆತಂಕಗೊಳ್ಳುವ ಅವರ ತಾಯಿ ಸೋನಿ ರಜ್ದಾನ್, ತಣ್ಣನೆ ನೀರಿಗೆ ಕೈ ಹಿಡಿಯುವಂತೆ ಸಲಹೆ ನೀಡ್ತಾರೆ.
ಮಲೈಕಾ ಅರೋರಾಗೆ ಶಾಕ್, ನಟಿ ವಿರುದ್ದ ವಾರೆಂಟ್ ಹೊರಡಿಸಿದ ಮುಂಬೈ ಕೋರ್ಟ್
ಯೂಟ್ಯೂಬ್ ನಲ್ಲಿ ಈ ವಿಡಿಯೋ ಪೋಸ್ಟ್ ಆದ ಕೆಲವೇ ಗಂಟೆಯಲ್ಲಿ 8 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದಿದೆ. ಹಾಗೆಯೇ ನೂರಾರು ಮಂದಿ ಕಮೆಂಟ್ ಹಾಕಿದ್ದಾರೆ. ಆಲಿಯಾ ಭಟ್ ಹಾಗೂ ಅವರ ತಾಯಿ ಸೋನಿ ರಜ್ದಾನ್ ಬಾಂಡಿಂಗ್ ನೋಡುಗರಿಗೆ ಇಷ್ಟವಾಗಿದೆ. ನಗ್ತಾ ನಗ್ತಾ ನಿರೂಪಣೆ ಮಾಡುವ ಆಲಿಯಾರನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಆಲಿಯಾಗೆ ಇನ್ನೊಂದಿಷ್ಟು ವಿಡಿಯೋ ಬೇಗ ಬೇಗ ಅಪ್ಲೋಡ್ ಮಾಡುವಂತೆ ಬಳಕೆದಾರರು ಬೇಡಿಕೆ ಇಟ್ಟಿದ್ದಾರೆ.
ಆಲಿಯಾ ಭಟ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಿಂದೆ ತಾವು ಅಡುಗೆ ಮಾಡ್ತಿದ್ದ ವಿಡಿಯೋಗಳನ್ನು ಪೋಸ್ಟ್ ಮಾಡ್ತಿದ್ದರು. ಐದು ವರ್ಷಗಳ ಹಿಂದೆ ಆಲಿಯಾ, ಅಡುಗೆಗೆ ಸಂಬಂಧಿಸಿದ ಅನೇಕ ವಿಡಿಯೋ ಹಂಚಿಕೊಂಡಿದ್ದಾರೆ. ನಂತ್ರ ಅವರ ಅಡುಗೆ ವಿಡಿಯೋಕ್ಕೆ ಬ್ರೇಕ್ ಬಿದ್ದಿತ್ತು. ಈಗ ಮತ್ತೆ ಆಲಿಯಾ ಅಡುಗೆ ಶುರು ಮಾಡಿದ್ದಾರೆ. ಮೊದಲ ವಿಡಿಯೋದಲ್ಲಿಯೇ ಆಲಿಯಾ ಅಮ್ಮನ ಅಡುಗೆ ಬಗ್ಗೆ ಮಾಹಿತಿ ನೀಡಿದ್ದಾರೆ. ಅಮ್ಮನ ಕೈರುಚಿ ಅಧ್ಬುತವಾಗಿದೆ. ಅವರಿಂದ ಅಡುಗೆ ಕಲಿಯಲು ಶುರು ಮಾಡಿ ತುಂಬಾ ವರ್ಷವಾಯ್ತು ಎಂದಿದ್ದಾರೆ. ಅಮ್ಮನ ಅಡುಗೆ ಮುಂದೆ ಮತ್ತೇನೂ ಇಲ್ಲ. ಯಾವುದೇ ರೆಸ್ಟೋರೆಂಟ್, ಹೊಟೇಲ್ ಅಡುಗೆ ತಿಂದ್ರೂ ಅಮ್ಮನ ಅಡುಗೆ ತಿಂದಂತೆ ಆಗೋದಿಲ್ಲ ಎನ್ನುತ್ತಾರೆ ಆಲಿಯಾ. ಆಲಿಯಾ ಇಷ್ಟಪಡುವ ಅಮ್ಮನ ಅಡುಗೆಯನ್ನು ರಾಹಾ ಕೂಡ ಇಷ್ಟಪಡ್ತಾಳೆ. ಅಜ್ಜಿಯ ಕೆಲ ಅಡುಗೆ ರಾಹಾ ಫೆವರೆಟ್. ಆಲಿಯಾ ಹಾಗೂ ಅಮ್ಮ ಸೇರಿ ಈ ಹಿಂದೆ ಮ್ಯಾಕ್ & ಚೀಸ್ ಮಾಡಿದ್ದರು.
ಬಿಕಿನಿ ಹಾಕೊಂಡ್ರೆ ಸಿನಿಮಾದಲ್ಲಿ ಚಾನ್ಸ್ ಸಿಗುತ್ತೆ...; ನೆಟ್ಟಿಗನ ಕಾಮೆಂಟ್‌ಗೆ ಖಡಕ್ ಉತ್ತರ ಕೊಟ್ಟ ಸೋನು ಗೌಡ
ಸಿನಿಮಾ, ಮನೆ, ಮಗಳು ಎಲ್ಲದರ ಮಧ್ಯೆ ಆಲಿಯಾ ಯೂಟ್ಯೂಬ್ ನಲ್ಲೂ ಸಕ್ರಿಯವಾಗಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಅವರ ಲವ್ ಅಂಡ್ ವಾರ್ ಚಿತ್ರದಲ್ಲಿ ಆಲಿಯಾ ಕಾಣಿಸಿಕೊಳ್ತಿದ್ದಾರೆ. ಇದು 2026 ರಲ್ಲಿ ಬಿಡುಗಡೆಯಾಗಲಿದೆ. ಆಲಿಯಾ ಅಭಿನಯದ ಆಲ್ಫಾ ಸಿನಿಮಾ ಈ ವರ್ಷ ತೆರೆಗೆ ಬರಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.