ಮಲೈಕಾ ಅರೋರಾಗೆ ಶಾಕ್, ನಟಿ ವಿರುದ್ದ ವಾರೆಂಟ್ ಹೊರಡಿಸಿದ ಮುಂಬೈ ಕೋರ್ಟ್

Published : Apr 08, 2025, 04:27 PM ISTUpdated : Apr 08, 2025, 04:47 PM IST
ಮಲೈಕಾ ಅರೋರಾಗೆ ಶಾಕ್, ನಟಿ ವಿರುದ್ದ ವಾರೆಂಟ್ ಹೊರಡಿಸಿದ ಮುಂಬೈ ಕೋರ್ಟ್

ಸಾರಾಂಶ

ಬಾಲಿವುಡ್ ನಟಿ ಮಲೈಕಾ ಅರೋರಾಗೆ ಮುಂಬೈ ಕೋರ್ಟ್ ಶಾಕ್ ನೀಡಿದೆ. ನಟಿ ವಿರುದ್ಧ ಕೋರ್ಟ್ ವಾರೆಂಟ್ ಹೊರಡಿಸಿದೆ. ಅಷ್ಟಕ್ಕೂ ಮಲೈಕಾ ಅರೋರಾಗೆ ಕೋರ್ಟ್ ವಾರೆಂಟ್ ಕೊಟ್ಟಿದ್ದೇಕೆ?

ಮುಂಬೈ(ಏ.08) ಬಾಲಿವುಡ್ ನಟಿ ಮಲೈಕಾ ಅರೋರಾ ಪ್ರತಿ ದಿನ ಸುದ್ದಿಯಲ್ಲಿರುತ್ತಾರೆ. ಅರೋರಾ ಫಿಟ್ನೆಸ್, ಡ್ರೆಸ್, ಫ್ಯಾಶನ್, ಜಿಮ್ ಸೇರಿದಂತೆ ಹಲವು ಕಾರಣಗಳಿಂದ ಮಲೈಕಾ ಆರೋರ ವೈರಲ್ ಆಗುತ್ತಾರೆ. ಇತ್ತೀಚೆಗೆ ಮದುವೆ, ರಿಲೇಶನ್‌ಶಿಪ್ ಸೇರಿದಂತೆ ಹಲವು ಕಾರಣಗಳಿಂದ ಮಲೈಕಾ ಆರೋರಾ ಟ್ರೋಲ್‌ಗೂ ಗುರಿಯಾಗಿದ್ದರು. ಇದೀಗ ಮಲೈಕಾ ಆರೋರಾಗೆ ಮುಂಬೈ ಕೋರ್ಟ್ ಶಾಕ್ ನೀಡಿದೆ. ಮುಂಬೈ ಕೋರ್ಟ್ ನಟಿ ಮಲೈಕಾ ಅರೋರಾ ವಿರುದ್ದ ವಾರೆಂಟ್ ಹೊರಡಿಸಿದೆ. ಇದು ಮಲೈಕಾ ಆರೋರಾಗೆ ತೀವ್ರ ತಲೆನೋವು ತರಿಸಿದೆ.

ನಟಿ ವಿರುದ್ಧ ಬೇಲೇಬಲ್ ವಾರೆಂಟ್
ಮುಂಬೈ ಕೋರ್ಟ್ ನಟಿ ಮಲೈಕಾ ಅರೋರಾ ವಿರುದ್ದ ಬೇಲೇಬಲ್ ವಾರೆಂಟ್ ಹೊರಡಿಸಿದೆ. ಮಲೈಕಾ ಆರೋರಾ ವಿಚಾರಣೆಗೆ ಹಾಜರಾಗದ ಕಾರಣ ಈ ಬೇಲೇಬಲ್ ವಾರೆಂಟ್ ಹೊರಡಿಸಿದೆ.

50ರಲ್ಲಿ 30ರ ಹೊಳಪು ಬೇಕಾ.. ನಟಿ ಮಲೈಕಾ ಅರೋರಾ ತರಹ 5 ಡ್ರೆಸ್ ಧರಿಸಿ!

ಮಲೈಕಾಗೆ ವಾರೆಂಟ್ ಯಾಕೆ? 
ಇದು 2012ರಲ್ಲಿ ನಡೆದ ಪ್ರಕರಣ.  ಉದ್ಯಮಿಗೆ ಹಲ್ಲೆ ಮಾಡಿದ ಪ್ರಕರಣದಲ್ಲಿ ನಟಿ ಮಲೈಕಾ ಅರೋರಾ ಕೂಡ ವಿಚಾರಣೆ ಎದುರಿಸುತ್ತಿದ್ದಾರೆ. ಮುಂಬೈನ ಖಾಸಗಿ ಹೊಟೆಲ್‌ನಲ್ಲಿ ಈ ಘಟನೆ ನಡೆದಿತ್ತು. ಮಲೈಕಾ ಆರೋರಾ ಸೇರಿದಂತೆ ಹಲವು ನಟಿಯರು, ಸೈಫ್ ಆಲಿ ಖಾನ್ ಸೇರಿದಂತೆ ಇತರರು ಈ ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಉದ್ಯಮಿ ಇಕ್ಬಾಲ್ ಮಿರ್ ಶರ್ಮಾ ಈ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.  ಈ ವೇಳೆ ಉದ್ಯಮಿ ಮೇಲೆ ಹಲ್ಲೆ ನಡೆದಿತ್ತು. ಹೀಗಾಗಿ ಪ್ರಕರಣ ದಾಖಲಾಗಿದೆ. 

ಏನಿದು ಹಲ್ಲೆ ಪ್ರಕರಣ?
ಸೈಫ್ ಆಲಿ ಖಾನ್, ಕರೀನಾ ಕಪೂರ್, ಕರೀಷ್ಮಾ ಕಪೂರ್, ಮಲೈಕಾ ಅರೋರಾ, ಅಮೃತಾ ಅರೋರಾ ಸೇರಿದಂತೆ ಬಾಲಿವುಡ್ ಸೆಲೆಬ್ರೆಟಿಗಳು ಈ ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಈ ಔತಣದ ವೇಳೆ ವಾಗ್ವಾದ ನಡೆದಿತ್ತು. ಪರಿಣಾಮ ಸೈಫ್ ಆಲಿ ಖಾನ್ ಉದ್ಯಮಿ ಮೇಲೆ ಹಲ್ಲೆ ಮಾಡಿದ್ದರು ಎಂದು ಉದ್ಯಮಿ ನೀಡಿದ್ದ ದೂರಿನಲ್ಲಿ ದಾಖಲಾಗಿದೆ. ಸೈಫ್ ಆಲಿ ಖಾನ್ ನೀಡಿದ ಹೊಡೆತಕ್ಕೆ ಉದ್ಯಮಿ ಇಕ್ಬಾಲ್ ಮಿರ್ ಶರ್ಮಾ ಮೂಗು ಸೇರಿ ಮುಖದಲ್ಲಿ ಗಾಯವಾಗಿತ್ತು. ಇದೇ ವೇಳೆ ಸೈಫ್ ಆಲಿ ಖಾನ್ ಜೊತಗಿದ್ದ ಸಹ ನಟಿಯರು ಉದ್ಯಮಿ ಸಂಬಂಧಿಕರ ಮೇಲೆ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ಬಳಿಕ ಸಂಬಂಧಿಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ. ಈ ಪ್ರಕರಣಧಲ್ಲಿ ಸೈಫ್ ಜೊತೆಗಿದ್ದ ಎಲ್ಲಾ ನಟ ನಟಿಯರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪೈಕಿ ಮಲೈಕಾ ಆರೋರಾ ಕೂಡ ಒಬ್ಬರು.

ಫೆಬ್ರವರಿ 15 ರಂದು ಈ ಪ್ರಕರಣ ಸಂಬಂಧ ಮಲೈಕಾ ಅರೋರಾ ಕೋರ್ಟ್‌ಗೆ ಹಾಜರಾಗಬೇಕಿತ್ತು. ಆದರೆ ಮಲೈಕಾ ಆರೋರಾ ಗೈರಾಗಿದ್ದರು. ಈ ವೇಳೆ ಮುಂಬೈಕೋರ್ಟ್ ಮಲೈಕಾ ಅರೋರಾಗೆ ಬೇಲೇಬಲ್ ವಾರೆಂಟ್ ಹೊರಡಿಸಿತ್ತು. ಬಳಿಕ ಪ್ರಕರಣದ ವಿಚಾರಣೆಯನ್ನು ಎಪ್ರಿಲ್ 7ಕ್ಕೆ  ಮುಂದೂಡಿತ್ತು. ಇದೀಗ  ಎರಡನೇ ಬಾರಿ ಮಲೈಕಾ ಆರೋರಾ ಕೋರ್ಟ್‌ಗೆ ಹಾಜರಾಗಲು ವಿಫಲರಾಗಿದ್ದಾರೆ. ಹೀಗಾಗಿ ಕೋರ್ಟ್ ಮತ್ತೆ ಬೇಲೇಬಲ್ ವಾರೆಂಟ್ ಹೊರಡಿಸಿದೆ. ಇದೀಗ ಪ್ರಕರಣದ ವಿಚಾರಣೆಯನ್ನು ಎಪ್ರಿಲ್ 29ಕ್ಕೆ ಮುಂದೂಡಲಾಗಿದೆ.

ಅರೆಸ್ಟ್ ಆಗಿದ್ದ ಸೈಫ್ ಆಲಿ ಖಾನ್
ಹಲ್ಲೆ ಪ್ರಕರಣದಲ್ಲಿ ದೂರು ದಾಖಲಾದ ಬೆನ್ನಲ್ಲೇ ಸೈಫ್ ಆಲಿ ಖಾನ್, ಸೈಫ್ ಜೊತೆಗಿದ್ದ ಶಾಕೀಲ್ ಲದಾಕ್, ಬಿಲಾಲ್ ಅಮ್ರೊಹಿ ಅರೆಸ್ಟ್ ಆಗಿದ್ದರು. ಬಳಿಕ ಜಾಮೀನು ಪಡೆದು ಹೊರಬಂದಿದ್ದರು. 

ನಟನೆಯಲ್ಲಿ ಮಾತ್ರ ಅಲ್ಲ, ಅಡುಗೆ ಮಾಡೋದ್ರಲ್ಲೂ ಎಕ್ಸ್’ಪರ್ಟ್ ಈ ಸೆಲೆಬ್ರಿಟಿಗಳು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!