Liplock Scene: ಹಸಿಬಿಸಿ ದೃಶ್ಯ ಮಾಡಿ ಪಡಬಾರದ ಕಷ್ಟಪಟ್ಟ ನಟಿಯರಿವರು!

By Suvarna News  |  First Published Apr 5, 2023, 11:20 AM IST

ಚಿತ್ರಗಳಲ್ಲಿ ಕೆಲವೊಮ್ಮೆ ಇಂಟಿಮೇಟ್​ ದೃಶ್ಯಗಳನ್ನು ಮಾಡುವುದು ಅನಿವಾರ್ಯವಾಗುತ್ತದೆ. ಅಂಥ ದೃಶ್ಯಗಳನ್ನು ಮಾಡಿದ ಬಳಿಕ ಕೆಲ ಬಾಲಿವುಡ್​ ನಟಿಯರು ತುಂಬಾ ನೋವು ಅನುಭವಿಸಿದ್ದಾರೆ. ಆ ನಟಿಯರು ಯಾರು?
 


ಬಾಲಿವುಡ್ ನಟಿಯರು ತಮ್ಮ ಚಿತ್ರಗಳಿಗಾಗಿ ಜನಮನದಲ್ಲಿ ಉಳಿಯುತ್ತಾರೆ. ಕೆಲವೊಮ್ಮೆ ಚಿತ್ರದ ಡೈಲಾಗ್ ವೈರಲ್ ಆದರೆ,  ಕೆಲವೊಮ್ಮೆ ಚಿತ್ರದ ದೃಶ್ಯಗಳು  ಸಾಮಾಜಿಕ ಜಾಲತಾಣಗಳಲ್ಲಿ ಆವರಿಸಿಕೊಳ್ಳುತ್ತದೆ. ಆದರೆ ಬೋಲ್ಡ್ ಎಂಬ ಕಾರಣಕ್ಕೆ ಹಲವಾರು ದೃಶ್ಯಗಳು ಪದೇ ಪದೇ ವೈರಲ್​ ಆಗುವುದು ಇದೆ. ಯಾವುದೇ ಸಾಮಾಜಿಕ ಜಾಲತಾಣ, ಸ್ಮಾರ್ಟ್​ಫೋನ್ ಕಿರಿಕಿರಿಯಿಲ್ಲದಿದ್ದ ಸಮಯದಲ್ಲಿ ಸಿನಿಮಾಗಳಲ್ಲಿ ಬೋಲ್ಡ್​ ದೃಶ್ಯ ಮಾಡಿದ್ದರೆ ಅದು ಅಷ್ಟಾಗಿ ಪ್ರಚಲಿತಕ್ಕೆ ಬರುತ್ತಿರಲಿಲ್ಲ. ಆದರೆ ಈಗ ಆ ದೃಶ್ಯಗಳು ಕೂಡ ವೈರಲ್​ ಆಗುತ್ತವೆ. ದೃಶ್ಯಗಳು ಪ್ರಚಾರಕ್ಕೆ ಬರಲಿ, ಬಿಡಲಿ ಕೆಲವೊಮ್ಮ ನಟಿಯರು ಇಂಥ ಸೀನ್​ಗಳನ್ನು (Scene) ಅನಿವಾರ್ಯವಾಗಿ ಮಾಡಬೇಕಾಗುತ್ತದೆ.  ಅದರಲ್ಲಿಯೂ ಕೆಲ ದಶಕಗಳ ಹಿಂದೆ ನಟಿಯರು ಈಗಿನವರಷ್ಟು ಬೋಲ್ಡ್​ ಆಗಿರಲಿಲ್ಲವಲ್ಲ. ಈಗಿನ ಬಹುತೇಕ ಚಿತ್ರತಾರೆಯರು ತಮ್ಮ ದೇಹ ಪ್ರದರ್ಶನ ಮಾಡಲು ಪೈಪೋಟಿಗೆ ನಿಂತಿದ್ದಾರೆ. ಸಾಧ್ಯವಾದಷ್ಟು ದೇಹ ಪ್ರದರ್ಶನ ಮಾಡಿದರೆ ಮಾತ್ರ ಚಿತ್ರರಂಗದಲ್ಲಿ ನೆಲೆಯೂರಲು ಸಾಧ್ಯ ಎಂಬ ಪರಿಕಲ್ಪನೆಯಿಂದ ಆಸೆಪಟ್ಟು ಅಶ್ಲೀಲ (Intimate) ಎಂಬ ರೀತಿಯಲ್ಲಿ ಫೋಟೋಶೂಟ್​ ಮಾಡಿಸಿಕೊಳ್ಳುತ್ತಾರೆ. ಆದರೆ ಕೆಲ ದಶಕಗಳ ಹಿಂದೆ ಹೋದಾಗ ಕೆಲವೊಂದು ದೃಶ್ಯಗಳನ್ನು ಮಾಡಲು ನಟಿಯರು ಮುಜುಗರ ಪಟ್ಟುಕೊಂಡದ್ದಿದೆ. ದೃಶ್ಯ ಮಾಡಿಯಾದ ಮೇಲೆ ಪಡಬಾರದ ಕಷ್ಟ ಪಟ್ಟದ್ದೂ ಇದೆ. ಅಂಥ ನೋವು ಅನುಭವಿಸಿದ ಕೆಲ ನಟಿಯರ ಬಗ್ಗೆ ಇಲ್ಲಿ ಉಲ್ಲೇಖಿಸಲಾಗಿದೆ. 

ಸ್ಮಿತಾ ಪಾಟೀಲ್ (Smitha Patil)
ಬಾಲಿವುಡ್ ನಟಿ ಸ್ಮಿತಾ ಪಾಟೀಲ್ ಅವರು ನಟ ಅಮಿತಾಭ್​ ಬಚ್ಚನ್ ಅವರೊಂದಿಗೆ 'ನಮಕ್ ಹಲಾಲ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಒಂದು ಹಾಡಿನಲ್ಲಿ ಸಾಕಷ್ಟು ಬೋಲ್ಡ್ ದೃಶ್ಯಗಳಿದ್ದವು. ಲಿಪ್​ಲಾಕ್​ ಸೀನ್​ ಕೂಡ ಇತ್ತು. ಈ ಹಸಿಬಿಸಿ ದೃಶ್ಯವನ್ನು  ಮಾಡಿದ ನಂತರ ನಟಿ ವಿಷಾದಿಸಿದರು.

Tap to resize

Latest Videos

ಅಜಯ್​ ದೇವಗನ್​ ಜೊತೆ ಲಿಪ್​ಲಾಕ್​ಗೆ ಕರೀನಾ ಹಿಂಜರಿಯಲು ಇದೇ ಕಾರಣ!

ಕುಬ್ಬ್ರ ಸೇಟ್ (Kubra Seth)
ನಟಿ ಕುಬ್ಬಾ ಸೇಟ್ ಅವರು ನವಾಜುದ್ದೀನ್ ಸಿದ್ದಿಕಿ ಅವರೊಂದಿಗೆ 'ಸೇಕ್ರೆಡ್ ಗೇಮ್ಸ್' ವೆಬ್ ಸರಣಿಯಲ್ಲಿ ಕಾಣಿಸಿಕೊಂಡರು. ಈ ಸರಣಿಯಲ್ಲಿ ನವಾಜುದ್ದೀನ್ ಸಿದ್ದಿಕಿ ಮತ್ತು ಕುಬ್ರ ಸೇಟ್ ಅನೇಕ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಏಳು ಬಾರಿ ಬೋಲ್ಡ್ ಸೀನ್ ಶೂಟ್ ಮಾಡಲಾಗಿತ್ತು. ಅದೇ ರೀತಿಯ ಸೀನ್​ ಮಾಡುವುದು ಶೂಟಿಂಗ್​ ವೇಳೆ ಅನಿವಾರ್ಯವಾದರೂ ಕುಬ್ಬ್ರ ಸೇಟ್ ಈ ಸೀನ್​ ಪದೇ ಪದೇ ಮಾಡಿದ ಬಳಿಕ ಜ್ವರದಿಂದ ಮಲಗಿದ್ದರು.

ಮಾಧುರಿ ದೀಕ್ಷಿತ್ (Madhuri Dixit)
‘ದಯಾವನ್’ ಚಿತ್ರದಲ್ಲಿ ವಿನೋದ್ ಖನ್ನಾ ಜೊತೆಗಿನ ‘ಆಜ್ ಫಿರ್ ತುಂಪೆ ಪ್ಯಾರ್ ಆಯಾ ಹೈ’ ಹಾಡಿನಲ್ಲಿ ಮಾಧುರಿ ದೀಕ್ಷಿತ್ ಬೋಲ್ಡ್ ದೃಶ್ಯಗಳನ್ನು ನೀಡಿದ್ದಾರೆ. ಅದರ ಚಿತ್ರೀಕರಣದ ನಂತರ ಮಾಧುರಿ ದೀಕ್ಷಿತ್ ತುಂಬಾ ಅಳುತ್ತಿದ್ದರು. ತಾವು ಈ ರೀತಿ ಮಾಡಬಾರದಿತ್ತು ಎಂದು ಪಡಬಾರದ ನೋವು ಪಟ್ಟಿದ್ದರಂತೆ. ಈ ಕುರಿತು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. 

ಇಬ್ಬರು ಮಕ್ಕಳ ಅಪ್ಪನೊಂದಿಗೆ ಲವ್​ ಆದಾಗ... ನೆನಪು ಬಿಚ್ಚಿಟ್ಟ ನಟಿ ಶಬನಾ ಅಜ್ಮಿ

ಮಾಹಿ ಗಿಲ್ (Mahi Gill)
‘ದೇವ್ಡಿ’ ಚಿತ್ರದಲ್ಲಿ ಮಹಿ ಗಿಲ್ ಅನೇಕ ಬೋಲ್ಡ್ ದೃಶ್ಯಗಳನ್ನು ನೀಡಿದ್ದಾರೆ. ಬೋಲ್ಡ್ ದೃಶ್ಯಗಳ ಬಗ್ಗೆ ಮಾಹಿ ಗಿಲ್ ಅವರು ಇಂಟಿಮೇಟ್ ದೃಶ್ಯಗಳನ್ನು ಮಾಡುವುದು ನನಗೆ ತುಂಬಾ ವಿಚಿತ್ರವಾಗಿದೆ ಎಂದು ಹೇಳಿದ್ದರು. ಶೂಟಿಂಗ್​ ಮಾಡುವಾಗ ಏನೂ ಅನ್ನಿಸಿರಲಿಲ್ಲ. ಆದರೆ ಎಲ್ಲರ ಮುಂದೆ ಕುಳಿತು ಈ ದೃಶ್ಯಗಳನ್ನು ನೋಡಿದಾಗ ನಾನು ಸಂಕಟಪಟ್ಟೆ. ಈ ರೀತಿ ಮಾಡಬಾರದಿತ್ತು ಎನ್ನಿಸಿತು ಎಂದಿದ್ದಾರೆ. 

ರೇಖಾ (Rekha)
‘ಅಂಜನಾ ಸಫರ್’ ಚಿತ್ರದಲ್ಲಿ ನಟಿ ರೇಖಾ ಅವರನ್ನು ತಮಗಿಂತ 15 ವರ್ಷ ದೊಡ್ಡವನಾಗಿದ್ದ ಬಿಶ್ವಜಿತ್ ಬಲವಂತ ಮಾಡುವ ದೃಶ್ಯವಿದೆ. ಆ ಸಮಯದಲ್ಲಿ ರೇಖಾ ಚೆನ್ನಾಗಿಯೆ ನಟನೆ ಮಾಡಿದ್ದಾರೆ. ಆದರೆ  ದೃಶ್ಯದ ನಂತರ ರೇಖಾ ತುಂಬಾ ಅತ್ತಿದ್ದರಂತೆ. 

click me!