ಬಾಲಿವುಡ್​ ಇಂಡಸ್ಟ್ರಿಯಲ್ಲಿ ತಲ್ಲಣ ಸೃಷ್ಟಿಸಿದ ಶ್ರೀದೇವಿಯ ನಿಗೂಢ 'ತಂಗಿ'! ಯಾರೀಕೆ?

By Suvarna News  |  First Published Apr 4, 2023, 5:31 PM IST

1990ರಲ್ಲಿ ಮ್ಯಾಗಜೀನ್​  ಮುಖಪುಟವೊಂದರಲ್ಲಿ ದಿಢೀರ್​ ಪ್ರತ್ಯಕ್ಷರಾಗಿ ಸಂಚಲನ ಸೃಷ್ಟಿಸಿದ್ದ ಶ್ರೀದೇವಿ ತಂಗಿಯ ಕುರಿತು ನಟ ಅನುಪಮ್​ ಖೇರ್​ ಮಾಹಿತಿ ಹಂಚಿಕೊಂಡಿದ್ದಾರೆ. 
 


1990 ರ ದಶಕದಲ್ಲಿ, ಸಿನಿ ಬ್ಲಿಟ್ಜ್ ಎಂಬ ನಿಯತಕಾಲಿಕವು ತನ್ನ ಮುಖಪುಟದಲ್ಲಿ ಹುಡುಗಿಯ ಚಿತ್ರವೊಂದನ್ನು ಪ್ರಕಟಿಸಿತು. ಅದರ ಮೇಲೆ 'ನಾನು ಶ್ರೀದೇವಿಯ ಅಪರಿಚಿತ ಸಹೋದರಿ' ಎಂದು ಬರೆಯಲಾಗಿತ್ತು. ಕವರ್ ಪೇಜ್‌ನಲ್ಲಿ ಶ್ರೀದೇವಿಯಂತೆಯೇ ಹುಡುಗಿಯ ಫೋಟೋವನ್ನು ಮುದ್ರಿಸಲಾಗಿತ್ತು ಮತ್ತು ಅದರೊಂದಿಗೆ ಹುಡುಗಿಯ ಹೆಸರನ್ನು ಪ್ರಭಾದೇವಿ ಎಂದು ಹೇಳಲಾಗಿತ್ತು.  ‘ಶ್ರೀದೇವಿಯ (Shreedevi)ತಂಗಿ’ಯನ್ನು ನೋಡಲು ಪತ್ರಿಕೆಯ ಹಲವು ಪ್ರತಿಗಳು ಮಾರಾಟವಾಗಿದ್ದವು. ಖುದ್ದು ಶ್ರೀದೇವಿಯೇ ಹೌಹಾರಿ ಹೋಗಿದ್ದರು. ಈ ಪತ್ರಿಕೆಯ ಮುಖಪುಟ ನೋಡಿದ ಬಾಲಿವುಡ್​ ಇಂಡಸ್ಟ್ರಿಯೂ ಅಚ್ಚರಿಗೊಂಡಿತ್ತು. ಶ್ರೀದೇವಿಗೂ ಗೊತ್ತಿಲ್ಲದ ಈ ತಂಗಿ ಯಾರು ಎಂದು ತಿಳಿಯಲು ಪತ್ರಿಕೆಗಳು ಭರದಿಂದ ಮಾರಾಟವಾಗಿದ್ದವು. ಬರೀ ಮುಖಪುಟ ನೋಡಿದವರು ಶ್ರೀದೇವಿಯ ಅಪ್ಪನ ಬಗ್ಗೆ ಸಂದೇಹ ಪಟ್ಟದ್ದೂ ಉಂಟು. ಈಗಿನಂತೆ ಸಾಮಾಜಿಕ ಜಾಲತಾಣ ಆಗ ಇದ್ದಿದ್ದರೆ ಅದರ ವಿಷಯವೇ ಬೇರೆ ಇರುತ್ತಿತ್ತೇನೋ. ಇವಾವುವೂ ಇಲ್ಲದೆಯೇ ಸುದ್ದಿ ಶರವೇಗದಲ್ಲಿ ಎಲ್ಲೆಡೆ ಹರಡಿತ್ತು.

ಆದರೆ ಈ ಪತ್ರಿಕೆಯನ್ನು ಕೊಂಡು ಅದನ್ನು ಓದಿದಾಗಲೇ ಅಸಲಿಯತ್ತು ತಿಳಿದದ್ದು. ಅದನ್ನು ಓದಿದವರು ಬಿದ್ದೂ ಬಿದ್ದೂ ನಕ್ಕರು. ವಿಷಯ ತಿಳಿದು ಸುಸ್ತಾಗಿ ಹೋದರು. ಈ ಸುದ್ದಿ ಕೂಡ ಅಷ್ಟೇ ವೇಗದಲ್ಲಿ (Fast)ಹರಿಡಿತ್ತು. ಆದರೆ ಪತ್ರಿಕೆಯಂತೂ ಹಾಟ್​ ಕೇಕ್​ನಂತೆ ಮಾರಾಟವಾಗಿ ಸಕತ್​ ದುಡ್ಡು ಮಾಡಿತ್ತು. ಅಷ್ಟಕ್ಕೂ ಆ ಪತ್ರಿಕೆ ಮಾರುಕಟ್ಟೆಗೆ ಬಂದ ದಿನ ಏಪ್ರಿಲ್​ 1 ಆಗಿತ್ತು. ಹೌದು! ಅದು ನಿಜಕ್ಕೂ ಏಪ್ರಿಲ್​ ಫೂಲ್​ (April Fool) ಆಗಿತ್ತು. ಆದರೆ ಫೋಟೋದಲ್ಲಿ ಇರುವಾಕೆ ಮಾತ್ರ ಥೇಟ್​ ಶ್ರೀದೇವಿಯ ರೂಪವೇ ಆಗಿತ್ತು. ಆದರೆ ಸಂಪೂರ್ಣ ಸುದ್ದಿ ಓದಿದ ಮೇಲೂ ಜನರು ಅದನ್ನು ನಂಬಲು ತಯಾರೇ ಇರಲಿಲ್ಲ. ನಕ್ಕೂ ನಕ್ಕೂ ಸುಸ್ತಾದರೂ ಆ ಫೋಟೋವನ್ನು ಬುಡಮೇಲೆಲ್ಲಾ ಮಾಡಿ ನೋಡಿದರೂ ಅಲ್ಲಿರುವ ವರದಿಯ ಬಗ್ಗೆ ನಂಬಲು ಸಾಧ್ಯವೇ ಆಗಿರಲಿಲ್ಲ.

Tap to resize

Latest Videos

Sridevi Biopic: ಶ್ರೀದೇವಿ ಜೀವನ ಚರಿತ್ರೆ ಶೀಘ್ರ ಬಿಡುಗಡೆ: ನಿಗೂಢ ಸಾವಿನ ರಹಸ್ಯ ಬಯಲಾಗುತ್ತಾ?

ಅಷ್ಟಕ್ಕೂ ಆ ಫೋಟೋ ಯಾರದ್ದು ಅಂದುಕೊಂಡ್ರಾ? ಯಾವ ನಟಿಯದ್ದೂ ಅಲ್ಲ, ಶ್ರೀದೇವಿ ತಂಗಿಯದ್ದಂತೂ ಅಲ್ಲವೇ ಅಲ್ಲ, ಅಷ್ಟೇ ಅಲ್ಲ... ಅಲ್ಲಿರುವ ಫೋಟೋ ಯಾವ ಯುವತಿಯದ್ದೂ ಅಲ್ಲ, ಬದಲಿಗೆ ನಟ ಅನುಪಮ್​  ಖೇರ್​ ಅವರದ್ದಾಗಿತ್ತು! ನಿಜ. ನೀವು ಓದಿದ್ದು ನಿಜ. ನಟ ಅನುಮಪ್​ ಖೇರ್​ ಅವರು ಮೇಕಪ್​  ಮಾಡಿಕೊಂಡು ನಟಿ ಶ್ರೀದೇವಿಯ ಲುಕ್​ನಲ್ಲಿ ಮಿಂಚಿದ್ದರು. ಈ ಪತ್ರಿಕೆಯು 1991 ರಲ್ಲಿ ಪ್ರಕಟವಾಯಿತು. ಮ್ಯಾಗಜೀನ್‌ನ ಮುಖಪುಟದಲ್ಲಿ ಕಾಣಿಸಿಕೊಳ್ಳಲು ಅನುಪಮ್ ಖೇರ್​ ಅವರು ಶ್ರೀದೇವಿಯಂತೆ ವೇಷ ಧರಿಸಿದ್ದರು. ಮೇಕಪ್ ಆರ್ಟಿಸ್ಟ್ (Make up artist) ಮತ್ತು ಸ್ಟೈಲಿಸ್ಟ್ ಮಿಕ್ಕಿ ಕಂಟ್ರಾಕ್ಟರ್ ಅವರು ಅನುಪಮ್ ಅವರನ್ನು ಶ್ರೀದೇವಿಯ ಲುಕ್‌ಗೆ ತರಲು ಶ್ರಮಿಸಿದ್ದರು. ಈ ಫೋಟೋವನ್ನು ಛಾಯಾಗ್ರಾಹಕ ಗೌತಮ್ ರಾಜಾಧ್ಯಕ್ಷ ಕ್ಲಿಕ್ ಮಾಡಿದ್ದರು. ಜನರು ಅನುಪಮ್ ಅವರ ಈ ಲುಕ್ ಅನ್ನು ತುಂಬಾ ಮೆಚ್ಚಿ ಹಾಡಿ ಹೊಗಳಿದ್ದರು.  ಫೋಟೋಶೂಟ್‌ನಲ್ಲಿ ಅನುಪಮ್ ಗ್ಲಾಮರಸ್ ದಿವಾ ಆಗಿ ಪೋಸ್ ನೀಡಿದ್ದರು.
 
ಇದೀಗ ಸುಮಾರು 32 ವರ್ಷಗಳ ನಂತರ ಅನುಪಮ್ (Anupam Kher) ಆ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಅವರು ಮತ್ತೊಮ್ಮೆ ತಮ್ಮ ಈ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು 1991 ರಲ್ಲಿ ಈ ಫೋಟೋ ರಾತ್ರೋರಾತ್ರಿ ಹೇಗೆ ಸಂಚಲನವಾಯಿತು ಎಂದು ಹೇಳಿದ್ದಾರೆ.  ಅನುಪಮ್ ಖೇರ್ ತಮ್ಮ ಸಾಮಾಜಿಕ ಖಾತೆಯಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು 'ಸಿನಿಬ್ಲಿಟ್ಸ್ ಮ್ಯಾಗಜೀನ್‌ನ ಮುಖಪುಟದಲ್ಲಿ ಇದು ನಾನು. ಇದು 1991 ರ ಏಪ್ರಿಲ್ ಫೂಲ್ ಸಂಚಿಕೆಯಾಗಿತ್ತು. ಈ ಚಿತ್ರ ಮತ್ತು ಅದರ ಕಥೆ ಸಂಚಲನ ಮೂಡಿಸಿದೆ. ಮಿಕ್ಕಿ ಗುತ್ತಿಗೆದಾರರು ನನಗೆ ಮೇಕಪ್ ಮಾಡಿದರು ಮತ್ತು ಪ್ರಸಿದ್ಧ ಛಾಯಾಗ್ರಾಹಕ ಗೌತಮ್ ರಾಜ್ಯಾಧ್ಯಕ್ಷ ನನ್ನ ಈ ಚಿತ್ರವನ್ನು ತೆಗೆದರು. ಅವು ಸುವರ್ಣ ದಿನಗಳು ಎಂದಿದ್ದಾರೆ. ಈಗಲೂ ಆ ಫೋಟೋ ನೋಡಿದರೆ ನಂಬಲು ಸಾಧ್ಯವೇ ಇಲ್ಲ ಬಿಡಿ. 

NANI: 20 ವರ್ಷ ಹಿರಿಯವರಾದ್ರೂ ನಟಿ ಶ್ರೀದೇವಿ ಜೊತೆ ಡೇಟಿಂಗ್​ ಆಸೆಯಿತ್ತು ಎಂದ ನಟ

 
 
 
 
 
 
 
 
 
 
 
 
 
 
 

A post shared by Anupam Kher (@anupampkher)

click me!