ರೇಖಾಗೆ ಗಂಡಸರ ಮೋಸ, ವಂಚನೆಯೇ ಹೆಣ್ಣಿನ ಜೊತೆ ಸಂಬಂಧ ಇಟ್ಟುಕೊಳ್ಳಲು ಕಾರಣವೇ?

Published : Jul 24, 2023, 01:03 PM IST
ರೇಖಾಗೆ ಗಂಡಸರ ಮೋಸ, ವಂಚನೆಯೇ ಹೆಣ್ಣಿನ ಜೊತೆ ಸಂಬಂಧ ಇಟ್ಟುಕೊಳ್ಳಲು ಕಾರಣವೇ?

ಸಾರಾಂಶ

ಬಾಲಿವುಡ್‌ ನಟಿ ರೇಖಾ ಮತ್ತು ಆಕೆಯ ಲೇಡಿ ಸೆಕ್ರೆಟರಿ ಫರ್ಝಾನ ಜೊತೆಗಿನ ರಿಲೇಶನ್‌ಶಿಪ್‌ ಸುದ್ದಿಯಾಗುತ್ತಿದೆ. ಇನ್ನೊಂದೆಡೆ ಗಂಡಸರು ಮಾಡಿದ ಮೋಸ, ವಂಚನೆಗಳೇ ರೇಖಾ ಇಂಥದ್ದೊಂದು ಸಂಬಂಧ ಇಟ್ಟುಕೊಳ್ಳಲು ಕಾರಣ ಆಯ್ತಾ ಅನ್ನೋ ಚರ್ಚೆ ಹೆಚ್ಚಾಗ್ತಿದೆ.

ಇದೀಗ ಬಾಲಿವುಡ್ ನಟಿ ರೇಖಾ ಲೈಫು ಹಸಿಬಿಸಿ ಚರ್ಚೆ ಆಗುತ್ತಿದೆ. ಮೊನ್ನೆ ಮೊನ್ನೆ ಅವರ ಬಯಾಗ್ರಫಿಯಲ್ಲಿ ಅವರು ಲೇಡಿ ಸೆಕ್ರೆಟರಿ ಜೊತೆಗೆ ಸಂಬಂಧ ಹೊಂದಿದ್ದರು ಅನ್ನೋದು ಸಖತ್ ವೈರಲ್ ಆಯ್ತು. 'ರೇಖಾ ದಿ ಅನ್‌ ಟೋಲ್ಡ್‌ ಸ್ಟೋರಿ' ಅನ್ನೋದು ರೇಖಾ ಅವರ ಜೀವನ ಕಥೆ. ಇದನ್ನು ಯಾಸರ್‌ ಉಸ್ಮಾನ್ ಎಂಬ ಲೇಖಕ ಬರೆಯುತ್ತಿದ್ದಾರೆ. ಇದರಲ್ಲಿ ರೇಖಾ ಬೆಡ್‌ರೂಮ್‌ ಸಂಗತಿಯೊಂದು ಬಯಲಾಯ್ತು. ಅದರ ಪ್ರಕಾರ ರೇಖಾ ತನ್ನ ಮೂವತ್ತು ವರ್ಷಗಳ ಸೆಕ್ರೆಟರಿ ಫರ್ಝಾನ ಅವರೊಂದಿಗೆ ರಿಲೇಶನ್‌ಶಿಪ್‌ನಲ್ಲಿದ್ದರು. ಅವರ ಬೆಡ್‌ರೂಮಿಗೆ ಎಂಟ್ರಿಕೊಡ್ತಿದ್ದ ಏಕೈಕ ವ್ಯಕ್ತಿ ಆಕೆ ಆಗಿದ್ದರು. ಆಕೆಯ ಜೊತೆಗೆ ಚರ್ಚೆ ಮಾಡದೇ ರೇಖಾ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಫರ್ಝಾನಗೆ ಗೊತ್ತಾಗದಂತೆ ರೇಖಾ ಯಾವುದೇ ಕೆಲಸ ಮಾಡುತ್ತಿರಲಿಲ್ಲ ಅನ್ನೋದೆಲ್ಲ ಲೀಕ್ ಆಯ್ತು. ಇದು ಹೆಚ್ಚಿನ ಬಾಲಿವುಡ್ ಮಂದಿಗೆ ಗೊತ್ತಿರುವ ಸಂಗತಿಯೇ.

ಆದರೆ ಈ ಸುದ್ದಿ ಸುಳ್ಳು ಅನ್ನೋದು ಆಮೇಲೆ ಗೊತ್ತಾಯ್ತು. ರೇಖಾಗೂ ಆಕೆಯ ಸೆಕ್ರೆಟರಿ ಪರ್ಝಾನಗೂ ದೈಹಿಕ ಸಂಬಂಧ ಇರಲಿಲ್ಲವಂತೆ. ಮೂಲಗಳ ಪ್ರಕಾರ ಅವರಿಬ್ಬರು ಆತ್ಮೀಯ ಸ್ನೇಹಿತರಷ್ಟೇ ಆಗಿದ್ದರು. ಆದರೆ ಈ ಮಾತು ಪೂರ್ತಿ ನಿಜವಾ ಅಂದರೆ ಅದಕ್ಕೂ ಉತ್ತರ ಸಿಗೋದಿಲ್ಲ. ಈ ನಡುವೆ ರೇಖಾ ಮಾತೊಂದು ವೈರಲ್ ಆಗ್ತಿದೆ. ಅದು ಮಹಿಳೆ ಮಹಿಳೆಯನ್ನೇ ಮದುವೆ ಆಗೋ ಬಗೆಗಿನ ರೇಖಾ ಅವರ ಮಾತು. ಅವರ ಈ ಮಾತು ಕೇಳಿದ ಒಂದಿಷ್ಟು ಜನ ಯಾಸಿನ್ ಬರ್ದಿದ್ದು ಪೂರ್ತಿ ಸುಳ್ಳಲ್ಲವೇನೋ ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ರೇಖಾ ಅವರ ಮಾತು ಏನೆಂದರೆ ‘ನಾನು ಮಹಿಳೆಯನ್ನು ಏಕೆ ಮದುವೆ ಆಗಬಾರದು’ ಎಂದು ಹೇಳಿದ್ದು. ಈ ಮಾತನ್ನು ರೇಖಾ ಸಂದರ್ಶನ ಒಂದರಲ್ಲಿ ನೇರವಾಗಿ ಕೇಳಿದ್ದರು. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

ಶೆರ್ಲಿನ್​ ಚೋಪ್ರಾ ವಿಡಿಯೋ ವೈರಲ್​: ಥೂ... ಅದಕ್ಕೂ ಪ್ಲಾಸ್ಟಿಕ್​ ಸರ್ಜರಿನಾ ಅಂದ ಫ್ಯಾನ್ಸ್​!

ಹಾಗೆ ನೋಡಿದರೆ ರೇಖಾ ವೈಯುಕ್ತಿಕ ಬದುಕಿನಲ್ಲಿ ಸಾಕಷ್ಟು ನೋವುಂಡಿದ್ದಾರೆ. ಹದಿನೈದನೇ ವಯಸ್ಸಿನಲ್ಲೇ ಸಿನಿಮಾ ರಂಗಕ್ಕೆ ಬಂದ ಈ ನಟಿ ವೈಯುಕ್ತಿಕ ಬದುಕು ನೋವಿನ ಸರಮಾಲೆ ಅಂತಲೇ ಹೇಳಬಹುದು. ರೇಖಾಗೆ ಅಮಿತಾಮ್‌ ಮೇಲೆ ಪ್ರೀತಿ ಇತ್ತು. ಆದರೆ ಅಮಿತಾಬ್‌ ಅಷ್ಟೊತ್ತಿಗೆ ಜಯಾ ಬಾಧುರಿಯನ್ನು ಮದುವೆ ಆಗಿದ್ದರು. ಜಯಾಗೆ ಡಿವೋರ್ಸ್ ಕೊಟ್ಟು ರೇಖಾ ಜೊತೆ ಅಮಿತಾಬ್‌ ಮದುವೆ ಆಗ್ತಾರೆ ಅನ್ನೋ ರೂಮರ್ ಹಬ್ಬಿತ್ತು. ಅಷ್ಟೊತ್ತಿಗೆ ಖ್ಯಾತ ಉದ್ಯಮಿಯನ್ನು ರೇಖಾ ಮದುವೆ ಆದರು. ಆ ಮದುವೆಯ ಬಳಿಕ ಆದರೂ ಲೈಫು ಸರಿ ಹೋಯ್ತಾ ಅಂದರೆ ಊಹೂಂ. ಮದುವೆ ಆದ ಏಳೇ ತಿಂಗಳಲ್ಲಿ ರೇಖಾ ಪತಿ ಮುಕೇಶ್ ಆತ್ಮಹತ್ಯೆ ಮಾಡಿಕೊಂಡರು. ಆ ಬಳಿಕೆ ರೇಖಾ ಮತ್ತೊಂದು ಮದುವೆ ಆಗಿಲ್ಲ.

ಇದಾಗಿ ಎಷ್ಟೋ ವರ್ಷಗಳ ಬಳಿಕ ಎರಡನೇ ಮದುವೆ ಬಗ್ಗೆ ಸಂದರ್ಶನ ಒಂದರಲ್ಲಿ ರೇಖಾ ಮಾತನಾಡಿದ್ದರು. ಸಿಮಿ ಗರೇವಾಲ್ ಅವರ ಶೋನಲ್ಲಿ ಭಾಗಿ ಆಗಿದ್ದಾಗ ಮದುವೆ ಬಗ್ಗೆ ಅವರಿಗೆ ಪ್ರಶ್ನೆ ಮಾಡಲಾಗಿತ್ತು. ‘ಪುರುಷನ ಜೊತೆ ಮತ್ತೆ ಮದುವೆಯೇ’ ಎಂದು ರೇಖಾ ಮರು ಪ್ರಶ್ನೆ ಮಾಡಿದ್ದರು. ‘ಮಹಿಳೆಯ ಜೊತೆಯಂತೂ ಮದುವೆಯಾಗಲು ಸಾಧ್ಯವಿಲ್ಲವಲ್ಲ’ ಎಂದು ಸಿಮಿ ಉತ್ತರಿಸಿದ್ದರು. ಇದಕ್ಕೆ ರೇಖಾ ‘ಯಾಕಾಗಬಾರದು’ ಎಂದು ಕೇಳಿದ್ದರು. ಈ ಮಾತು ಇದೀಗ ವೈರಲ್ ಆಗುತ್ತಿದೆ.

ಇನ್ನೊಂದೆಡೆ ರೇಖಾ ಬದುಕಿನಲ್ಲಿ ಪದೇ ಪದೇ ಆದ ಪ್ರೇಮ ವೈಫಲ್ಯಗಳು ಆಕೆಗೆ ಪುರುಷರ ಬಗ್ಗೆ ನಂಬಿಕೆ ಹೋಗುವಂತೆ ಮಾಡಿತೇ? ಕ್ರೌರ್ಯವಿಲ್ಲದ ಹೆಣ್ಣಿನ ಪ್ರೀತಿಗೆ ರೇಖಾ ಮನಸೋತರೇ? ನಿಜಕ್ಕೂ ಅವರಿಗೆ ಸೆಕ್ರೆಟರಿ ಜೊತೆಗೆ ಸಂಬಂಧ ಇರಲಿಲ್ಲವೇ? ಹೀಗೆಲ್ಲ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಕಂಡು ಬರುತ್ತಿವೆ.

ಆದರೆ ಇನ್ನೇನು ಎಪ್ಪತ್ತಕ್ಕೆ ಕಾಲಿಡುವ ರೇಖಾ ಇದನ್ನೆಲ್ಲ ಹೇಗೆ ತಗೊಳ್ತಾರೆ? ಈ ಇಳಿ ವಯಸ್ಸಿನಲ್ಲಿ ಇಂಥಾ ವಿವಾದ ಬೇಕಿತ್ತಾ ಅನ್ನೋ ಮಾತೂ ಕೇಳಿ ಬರುತ್ತಿದೆ.

Oppenheimer: ಸೆಕ್ಸ್ ವೇಳೆ ಭಗವದ್ಗೀತೆ ಓದುವ ದೃಶ್ಯ, ವಿವಾದದಲ್ಲಿ ಕ್ರಿಸ್ಟೋಫರ್ ನೋಲನ್ ಸಿನಿಮಾ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜಗಳದ ಕಾರಣದಿಂದ ನಾವು ದೂರವಾಗಲು ಬಯಸಲಿಲ್ಲ, ಜಗಳವನ್ನೇ ದೂರಮಾಡಲು ಬಯಸಿದ್ದೇವೆ; ಸೋನಾಕ್ಷಿ ಸಿನ್ಹಾ!
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?