ಬ್ಯಾನರ್ ಕಟ್ಟುವಾಗ ಅವಘಡ; ನಟ ಸೂರ್ಯ ಅಭಿಮಾನಿಗಳ ಧಾರುಣ ಸಾವು

Published : Jul 24, 2023, 12:43 PM IST
ಬ್ಯಾನರ್ ಕಟ್ಟುವಾಗ ಅವಘಡ; ನಟ ಸೂರ್ಯ ಅಭಿಮಾನಿಗಳ ಧಾರುಣ ಸಾವು

ಸಾರಾಂಶ

ತಮಿಳು ನಟ ಸೂರ್ಯ ಹುಟ್ಟುಹಬ್ಬ ದಿನ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಆಂಧ್ರ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ.  

ಕಾಲಿವುಡ್ ಸ್ಟಾರ್ ಸೂರ್ಯ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡರು. ನಟ ಸೂರ್ಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೆ ಹರಿದುಬಂದಿದೆ. ಸೂರ್ಯ ಕೇವಲ ತಮಿಳು ಮಾತ್ರವಲ್ಲದೇ ಗಡಿಗೂ ಮೀರಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸೂರ್ಯ ಅವರನ್ನು ದೇವರಂತೆ ಪ್ರೀತಿಸುವ, ಆರಾಧಿಸುವ ಅಭಿಮಾನಿಗಳು ದೇಶ ವಿದೇಶಗಲ್ಲಿದ್ದಾರೆ. 

ಸೂರ್ಯ ಹುಟ್ಟುಹಬ್ಬ ಆಚರಣೆಯ ಸಂಭ್ರಮದಲ್ಲಿದ್ದ ಇಬ್ಬರು ಅಭಿಮಾನಿಗಳು ಸಾವನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಹುಟ್ಟುಹಬ್ಬ ಆಚರಣೆಗೆ  ಬ್ಯಾನರ್ ಹಾಕುವ ವೇಳೆ ಇಬ್ಬರು ಅಭಿಮಾನಿಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ಇಬ್ಬರೂ ಕಾಲೇಜು ವಿದ್ಯಾರ್ಥಿಗಳು ಸೂರ್ಯನ ಬ್ಯಾನರ್ ಹಾಕಲು ಮುಂದಾಗಿದ್ದಾರೆ. ಆಗ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. 

ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆ ಮೋಪುಲವಾರಿಪಾಲೆಂ ಗ್ರಾಮದಲ್ಲಿ ವೆಂಕಟೇಶ್ ಮತ್ತು ಪೋಲೂರಿ ಸಾಯಿ ಎನ್ನುವವರು ಮೃತಪಟ್ಟ ಅಭಿಮಾನಿಗಳು. ಬ್ಯಾನರ್ ಕಟ್ಟುವ ವೇಳೆ ಕಬ್ಬಿಣದ ರಾಡ್ ವಿದ್ಯುತ್ ತಂತಿಗೆ ತಗುಲಿ ಈ ಘಟನೆ ಸಂಭವಿಸಿದೆ. ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  
ಮೃತದೇಹಗಳನ್ನು ನರಸರಾವ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇವರಿಬ್ಬರೂ ನರಸರಾವ್‌ಪೇಟೆಯ ಖಾಸಗಿ ಪದವಿ ಕಾಲೇಜಿನಲ್ಲಿ ಎರಡನೇ ವರ್ಷ ಓದುತ್ತಿದ್ದಾರೆ.

ಮೃತ ವಿದ್ಯಾರ್ಥಿಗಳ ಕುಟುಂಬದವರು ಕಾಲೇಜನ್ನು ದೂರುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಮೃತ ವಿದ್ಯಾರ್ಥಿ ಪೋಲೂರಿ ಸಾಯಿ ಸಹೋದರಿ, 'ನನ್ನ ಅಣ್ಣನ ಸಾವಿಗೆ ಕಾಲೇಜು ಕಾರಣ. ಕಾಲೇಜಿಗೆ ಸಾಕಷ್ಟು ಶುಲ್ಕ ಕಟ್ಟುತ್ತಿದ್ದೇವೆ. ಕಾಲೇಜಿಗೆ ಸೇರುವ ಮೊದಲು ಅವರು ವಿದ್ಯಾರ್ಥಿಗಳಿಗೆ ಭದ್ರತೆ ಮತ್ತು ನಿಗಾ ವಹಿಸುವ ಬಗ್ಗೆ ಭರವಸೆ ನೀಡಿದರು. ಆದರೆ, ಕಾಲೇಜು ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳನ್ನು ರಕ್ಷಿಸುತ್ತಿಲ್ಲ ಮತ್ತು ಮೇಲ್ವಿಚಾರಣೆ ಮಾಡುತ್ತಿಲ್ಲ. ನಾವು ದಿನಗೂಲಿ ಕಾರ್ಮಿಕರು. ನನ್ನ ಸಹೋದರನಿಗೆ ಒಳ್ಳೆಯ ಜೀವನಕ್ಕಾಗಿ ಶ್ರಮಿಸುತ್ತಿರುವ ನಾವು ಕಾಲೇಜು ಶುಲ್ಕವನ್ನು ಪಾವತಿಸಲು ಸಾಕಷ್ಟು ಕಷ್ಟಪಡುತ್ತೇವೆ' ಎಂದು ಕಣ್ಣೀರಿಟ್ಟಿದ್ದಾರೆ. 

ಈ ಘಟನೆ ಬಗ್ಗೆ ನಟ ಸೂರ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೂರ್ಯ ಏನೆಂದು ಪ್ರತಿಕ್ರಿಯೆ ನೀಡಲಿದ್ದಾರೆ, ಕುಟುಂಬಕ್ಕೆ ಸಹಾಯಕ್ಕೆ ಮಾಡುತ್ತಾರಾ ಎಂದು ಕಾದುನೋಡಬೇಕು. 

ಅಂಥ ಅನುಭವಗಳೇ ಆಗಿರ್ಲಿಲ್ಲ, ಸಂಬಂಧಗಳ ಬಗ್ಗೆ ತಿಳಿದುಕೊಂಡೆ: ಸೂರ್ಯ ಜೊತೆಗಿನ ನೆನಪು ಬಿಚ್ಚಿಟ್ಟ ರಮ್ಯಾ

ಕಂಗುವ ಗ್ಲಿಂಪ್ಸ್

ಸೂರ್ಯ ಹುಟ್ಟುಹಬ್ಬಕ್ಕೆ ಬಹುನಿರೀಕ್ಷೆಯ 'ಕಂಗುವಾ' ಸಿನಿಮಾ ಟೀಂ ಬಿಗ್ ಸರ್ಪ್ರೈಸ್ ಕೊಟ್ಟಿದೆ. ಕಂಗುವಾ ಫಸ್ಟ್ ಲುಕ್ ಗ್ಲಿಂಪ್ಸ್ ರಿಲೀಸ್ ಮಾಡಿದ್ದು, ಅಭಿಮಾನಿಗಳ ಕಾತುರವನ್ನು ಮತ್ತಷ್ಟು ಹೆಚ್ಚಿಸಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗ್ತಿರೋ ಕಂಗುವಾ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. 

Happy Birthday Suriya: ಗ್ರೇಟ್ ವಾರಿಯರ್ ಆದ 'ಸೂರ್ಯ', ಕಾಡ್ತಿದೆ 'ಕಂಗುವಾ'

ಅಭಿಮಾನಿಗಳ ನಿರೀಕ್ಷೆಯಂತೆ ಸೂರ್ಯ, ಕಂಗುವಾ ಆಗಿ ಅಬ್ಬರಿಸಿದ್ದಾರೆ.  2.12 ನಿಮಿಷವಿರೋ ಗ್ಲಿಂಪ್ಸ್‌ನಲ್ಲಿ ಸೂರ್ಯ ಮಿಂಚಿದ್ದಾರೆ. ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಸೂರ್ಯ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಈ ಸಿನಿಮಾದಲ್ಲಿ ಸೂರ್ಯ ಒಬ್ಬ ಗ್ರೇಟ್ ವಾರಿಯರ್ ಆಗಿ ನಟಿಸಿದ್ದಾರೆ‌. ವೀಡಿಯೋ ಉದ್ದಕ್ಕೂ ಕಂಗುವಾ ಪಾತ್ರದ ಗುಣಗಾನ ಮಾಡಲಾಗಿದೆ. ಪ್ರಾಣಿಯ ಮುಖಗವಸು, ಹುಲಿ ಉಗುರು ತೊಟ್ಟ ಸೂರ್ಯ ಅವತಾರನ ಜನ ಕೊಂಡಾಡುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!