ಮದುವೆಗೆ ಗಂಡೇ ಬೇಕೆಂದೇನೂ ಇಲ್ಲ, ಮೂರು ಮದ್ವೆಯಾಗಿದ್ದೇನೆ: ಮನದಾಳದ ಮಾತು ತೆರೆದಿಟ್ಟ ರೇಖಾ!

By Suchethana D  |  First Published Aug 2, 2024, 1:07 PM IST

ಅಮಿತಾಭ್​ ಅವರಿಂದ ದೂರವಾಗಿ, ಪತಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ರೇಖಾ ಮೂರು ಮದ್ವೆಯಾದ್ರಂತೆ. ಸಂದರ್ಶನದಲ್ಲಿ ನಟಿ ಹೇಳಿದ್ದೇನು?
 


  ಹಿಂದಿ ಚಿತ್ರರಂಗದ ಎವರ್ ಗ್ರೀನ್ ನಟಿಯರಲ್ಲಿ ಒಬ್ಬರಾದ ರೇಖಾ ಅವರಿಗೆ ಈಗ ವಯಸ್ಸು 70 ಆದರೂ ಈಗಲೂ ಆಕೆ ಸುರಸುಂದರಿಯೇ.  ಆಕೆಯ ಸ್ಟೈಲ್ ಜೊತೆಗೆ  ಸೌಂದರ್ಯದ ಬಗ್ಗೆ ಈಗಲೂ ಜನರು ಹುಚ್ಚರಾಗಿದ್ದರು. ರೇಖಾ ಪ್ರತಿ ಕಾರ್ಯಕ್ರಮಗಳು ಮತ್ತು ಪಾರ್ಟಿಗಳಲ್ಲಿ ಯಾವಾಗಲೂ ನಗುನಗುತ್ತಲೇ ಇರುತ್ತಾರೆ.   ಆದರೆ ಈ ನಗುವಿನ ಹಿಂದೆ ಇರುವ ನೋವು ಮಾತ್ರ ಬಲ್ಲವರಿಗೆ ಮಾತ್ರ ತಿಳಿದಿದೆ. ರೇಖಾ ಅವರ ವೃತ್ತಿಪರ ವೃತ್ತಿಜೀವನ ಎಷ್ಟು ಅದ್ಭುತವಾಗಿದೆಯೋ, ಅವರ ವೈಯಕ್ತಿಕ ಜೀವನವೂ ಅಷ್ಟೇ ನೋವಿನಿಂದ ಕೂಡಿದೆ. ಅವರ ಬದುಕೇ  ಒಂದು ಸಿನಿಮಾ ಕಥೆ ಇದ್ದಂತೆ. ಬಾಲಿವುಡ್‌ನ ನಿತ್ಯಹರಿದ್ವರ್ಣ ಸುಂದರಿ ಎಂದೇ ಎನಿಸಿಕೊಂಡಿದ್ದ ರೇಖಾ ಮತ್ತು ಸೂಪರ್​ ಸ್ಟಾರ್​ ಅಮಿತಾಭ್ ಬಚ್ಚನ್​ ವಿಷಯವೇನೂ ಗುಟ್ಟಾಗಿ ಉಳಿಯಲಿಲ್ಲ.  ರೇಖಾ ಅವರಿಗೆ ಕೊನೆಗೂ ಅಮಿತಾಭ್​ ಕೊನೆಗೂ ಸಿಗಲೇ ಇಲ್ಲ. 

ಇವರಿಬ್ಬರ ಪ್ರೇಮದ ವಿಷಯ ಬಹು ಚರ್ಚಿತವಾಗಿದ್ದರೂ,  ಅಮಿತಾಭ್​ ಮಾತ್ರ ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲೇ ಇಲ್ಲ, ಆದರೆ ರೇಖಾ ತಮ್ಮ ಪ್ರೇಮ ಕಥೆಯ ಬಗ್ಗೆ ಹಲವಾರು ವೇದಿಕೆಗಳಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಈ ಜೋಡಿಯ ಪ್ರೇಮಕಥೆ ಯಾರೂ ಮರೆಯಲು ಸಾಧ್ಯವಿಲ್ಲ. 70 ರ ದಶಕದಲ್ಲಿ, ಅಮಿತಾಭ್​ ಬಚ್ಚನ್ ಮತ್ತು ರೇಖಾ ಅವರ   ಸಂಬಂಧವು ಬಹಳ ಚರ್ಚಿತ ವಿಷಯವಾಗಿತ್ತು.  ಇದು ಕೇವಲ ಗಾಸಿಪ್​  ಆಗಿರಲಿಲ್ಲ, ಬದಲಿಗೆ ಇಬ್ಬರೂ ಪ್ರೀತಿಸುತ್ತಿದ್ದುದು ಕೂಡ ನಿಜವೇ ಆಗಿತ್ತು. ಬೆಳ್ಳಿ ಪರದೆಯ ಮೇಲೆ ಈ ಜೋಡಿಯ ಕೆಮೆಸ್ಟ್ರಿಯನ್ನು ಹಾಡಿ ಕೊಂಡಾಡಿದ್ದ ಅಭಿಮಾನಿಗಳು, ನಿಜ ಜೀವನದಲ್ಲಿಯೂ ಇವರಿಬ್ಬರು ಜೋಡಿಯಾಗಲಿ ಎಂದೇ ಹಾರೈಸಿದ್ದರು. ಆದರೆ ವಿಧಿಯ ಲೀಲೆಯೇ ಬೇರೆಯಾಗಿತ್ತು. ಒಬ್ಬರನ್ನೊಬ್ಬರು ಬಿಟ್ಟಿರದ ಜೋಡಿ ಕೊನೆಗೆ ಹಾವು ಮುಂಗುಸಿಯಾಗಿತ್ತು. ಇವರಿಬ್ಬರ ನಡುವೆ ಜಯಾ ಬಾಧುರಿ (Jaya Badhuri) ಎಂಟ್ರಿ ಕೊಟ್ಟಿದ್ದರು. ಅಮಿತಾಭ್ ಬಚ್ಚನ್ ಹಾಗೂ ಜಯಾ ಅವರು 1973ರಲ್ಲಿ ಮದುವೆಯಾದರು. ಅಮಿತಾಭ್​ ಬಚ್ಚನ್​ ಅವರ ಮದುವೆ ಜಯಾ ಅವರ ಜೊತೆಗೆ ಆದ ನಂತರ ರೇಖಾ ಜರ್ಜರಿತರಾಗಿದ್ದರು. 

Tap to resize

Latest Videos

ವಯಸ್ಸಾದರೇನು, ಮರೆಯಲಾದೀತೆ ಪ್ರಿಯಕರನ? ಜಯಾ ಎದುರೇ ಕುಣಿದಾಡಿದ ರೇಖಾ! ವಿಡಿಯೋ ವೈರಲ್​

ದೆಹಲಿಯ ಖ್ಯಾತ ಕೈಗಾರಿಕೋದ್ಯಮಿ ಮುಖೇಶ್ ಅಗರ್​ವಾಲ್​ ಅವರನ್ನು 1990ರಲ್ಲಿ ವಿವಾಹವಾದರು. ಆಗ ಈ ಮದುವೆಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು.  ರೇಖಾಳ (Rekha) ಜೀವನದಲ್ಲಿ ಇದ್ದಕ್ಕಿದ್ದಂತೆ ಮುಖೇಶ್ ಬಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸಕತ್​ ಸದ್ದು ಮಾಡಿತ್ತು. ಆದರೆ ಮದುವೆಯಾದ 7 ತಿಂಗಳ ನಂತರ ರೇಖಾ ಅವರ ಪತಿ ಮುಖೇಶ್ ಆತ್ಮಹತ್ಯೆ ಮಾಡಿಕೊಂಡರು. ಮಾಧ್ಯಮ ವರದಿಗಳ ಪ್ರಕಾರ, ಮದುವೆಯಾದ 3 ತಿಂಗಳ ನಂತರ ರೇಖಾ ತನ್ನ ಪತಿ ಮುಖೇಶ್‌ನೊಂದಿಗೆ ಬೇಸರಗೊಂಡಿದ್ದರು ಮತ್ತು ಪತಿಯಿಂದ ಬೇರೆಯಾಗಲು ನಿರ್ಧರಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ಪ್ರಶ್ನೆ ಕೇಳಿದ್ದಾಗ ರೇಖಾ, 'ನಾನು ನನ್ನ ವೃತ್ತಿಜೀವನದಲ್ಲಿ ಆ ಹಂತದಲ್ಲಿಯೇ ಇದ್ದೆ. ನಾನು ಮದುವೆಯಾಗಬೇಕು ಎಂದು ಭಾವಿಸಿದ್ದೆ. ನಾವು ಎಲ್ಲಿ ಭೇಟಿಯಾದೆವು, ಯಾವಾಗ ಭೇಟಿಯಾದೆವು, ಹೇಗೆ ಭೇಟಿಯಾದೆವು ಎಂಬುದು ಮುಖ್ಯವಲ್ಲ. ನಾವು ಭೇಟಿಯಾಗಿದ್ದೆವು. ನಾವು ಮದುವೆಯಾಗಿದ್ದೆವು ಎಂಬುದು ಮುಖ್ಯವಾಗಿತ್ತು. ಈ ಮದುವೆಯಿಂದ ನಾನು ಏನು ಕಲಿತೆ ಅಥವಾ ಕಳೆದುಕೊಂಡಿದ್ದೆ ಎಂದು ತಿಳಿಯುವುದು ಮುಖ್ಯ ಎಂದಿದ್ದರು. ಆದರೆ ಅನುಮಾನಸ್ಪದವಾಗಿ ಇವರು ಆತ್ಮಹತ್ಯೆ ಮಾಡಿಕೊಂಡು ಬಿಟ್ಟರು.

ಒಟ್ಟಿನಲ್ಲಿ ರೇಖಾ ಆ ಬಳಿಕ ಮದುವೆಯಾಗಲಿಲ್ಲ. ಆದರೆ ರೇಖಾ ಸದಾ ಸಿಂಧೂರ ಧರಿಸಿಯೇ ಇರುತ್ತಾರೆ. ಇದೇ ಗೆಟ್​ಅಪ್​ನಲ್ಲಿ ವಿವಾಹಿತ ಮಹಿಳೆಯಂತೆಯೇ ಪ್ರತಿ ಕಾರ್ಯಕ್ರಮಕ್ಕೂ ಹಾಜರಾಗುತ್ತಾರೆ. ಇದರ ಬಗ್ಗೆ ಹಿಂದೊಮ್ಮೆ  ಸಿಮಿ ಗ್ರೆವಾಲ್ ಅವರ ಚಾಟ್ ಶೋನಲ್ಲಿ ಪ್ರಶ್ನಿಸಿದಾಗ, ರೇಖಾ ಕೊಟ್ಟ ಉತ್ತರದ ವಿಡಿಯೋ ಮತ್ತೆ ವೈರಲ್​ ಆಗುತ್ತಿದೆ.  ಮದುವೆಯಾದ 7 ತಿಂಗಳ ನಂತರ  ಪತಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಮತ್ತೆ ಮದುವೆಯಾಗುವ ಯೋಚನೆ ಬಂದಿರಲಿಲ್ಲವೆ ಎಂದು ರೇಖಾ ಅವರನ್ನು ಪ್ರಶ್ನಿಸಲಾಗಿತ್ತು.

ಮನಸ್ಸಲ್ಲೇ ಮದ್ವೆಯಾಗಿದೆ, ಕಾಗದದ ತುಂಡ್ಯಾಕೆ? ಇಬ್ಬರು ಮಕ್ಕಳ ಬಳಿಕ ನಟ ಅರ್ಜುನ್​ ರಾಮ್​ಪಾಲ್​ ಮಾತು...

ಆಗ ರೇಖಾ ಅವರು   ಉತ್ತರಿಸಿದ್ದ ವಿಡಿಯೋ ವೈರಲ್​ ಆಗುತ್ತಿದೆ. ಅದರಲ್ಲಿ ರೇಕಾ ಅವರು. ಅದೇನೆಂದರೆ,  ನಾನು ಒಬ್ಬ ವ್ಯಕ್ತಿಯ ಜೊತೆ ಮದುವೆಯಾಗಲು ಇಷ್ಟಪಡುವುದಿಲ್ಲ. ಮದುವೆಯಾಗಲು ಪುರುಷನೇ ಆಗಬೇಕೆಂದೇನೂ ಇಲ್ಲ. ನಾನು ಇದಾಗಲೇ ಮೂರು ಮಂದಿಯ ಜೊತೆ ಮದುವೆಯಾಗಿದ್ದೇನೆ.  ನನ್ನ ಗಂಡನನ್ನು ಹೊರತುಪಡಿಸಿ, ನಾನು ಇನ್ನೂ ಮೂರು ಬಾರಿ  ಮದುವೆಯಾಗಿದ್ದೇನೆ. ಅದು ನನ್ನನ್ನು ನಾನು, ಎರಡನೆಯದ್ದು  ನನ್ನ ವೃತ್ತಿಯನ್ನು ಮತ್ತು ಮೂರನೆಯದ್ದು ನನ್ನ ಹೃದಯದಲ್ಲಿರುವ ನನ್ನ ಅಪಾರ ಅಭಿಮಾನಿಗಳನ್ನು. ಹೌದು. ಈ ಮದುವೆಗಿಂತಲೂ ಬೇರೆ ಮದುವೆ ನನಗೆ ಅವಶ್ಯಕತೆ ಎನ್ನಿಸಲಿಲ್ಲ.  ಮದುವೆಗೆ ಪುರುಷ ಅಗತ್ಯವಿಲ್ಲ. ಮಹಿಳೆ ತನ್ನನ್ನು ತಾನು ರಕ್ಷಿಸಿಕೊಳ್ಳುವಷ್ಟು ಶಕ್ಯಳಾಗಿದ್ದಾಳೆ ಎಂದಿದ್ದರು.  

click me!