ಡಿವೋರ್ಸ್ ಆಗಿ ಕೆಲವೇ ದಿನ: ಮಾಜಿ ಪತ್ನಿ ಜೊತೆ ಸಖತ್ ಸ್ಟೆಪ್ಸ್ ಹಾಕಿದ ಅಮೀರ್ ಖಾನ್

Suvarna News   | Asianet News
Published : Jul 17, 2021, 10:41 AM ISTUpdated : Jul 17, 2021, 10:48 AM IST
ಡಿವೋರ್ಸ್ ಆಗಿ ಕೆಲವೇ ದಿನ: ಮಾಜಿ ಪತ್ನಿ ಜೊತೆ ಸಖತ್ ಸ್ಟೆಪ್ಸ್ ಹಾಕಿದ ಅಮೀರ್ ಖಾನ್

ಸಾರಾಂಶ

ಡಿವೋರ್ಸ್ ಕೊಟ್ಟು ಕೆಲವೇ ದಿನದಲ್ಲಿ ಮಾಜಿ ಪತ್ನಿ ಜೊತೆ ಸಖತ್ ಡ್ಯಾನ್ಸ್ ಮಾಡಿದ ಅಮೀರ್ ಖಾನ್ ಡಿವೋರ್ಸ್ ಗದ್ದಲ ಮುಗಿದು ಲಡಾಖ್‌ನಲ್ಲಿ ಮೈಮರೆತು ಕಣಿದ ಜೋಡಿ

ಜುಲೈ 3 ರಂದು ಇಬ್ಬರೂ ವಿಚ್ಛೇದನೆ ಘೋಷಿಸಿದಾಗ ಅಮೀರ್ ಖಾನ್ ಮತ್ತು ಕಿರಣ್ ರಾವ್ ಅಭಿಮಾನಿಗಳು ನಿಜಕ್ಕೂ ಶಾಕ್ ಆಗಿದ್ದರು. ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ ದಂಪತಿಗಳು 15 ವರ್ಷಗಳ ಕಾಲ ಸಂತೋಷದಿಂದ ಸಂಸಾರ ಮಾಡಿ ಬೇರೆಯಾಗುತ್ತಿರುವುದಾಗಿ ಹೇಳಿದ್ದರು.

ತಮ್ಮ ವಿಚ್ಛೇದನವನ್ನು ಘೋಷಿಸಿದ ನಂತರ, ಅಮೀರ್ ಮತ್ತು ಕಿರಣ್ ಜೊತೆಯಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ವೀಡಿಯೊದಲ್ಲಿ ಅವರು ತಮ್ಮ ಹಿತೈಷಿಗಳು ಮತ್ತು ಅಭಿಮಾನಿಗಳಿಗೆ ತಮ್ಮ ನಿರ್ಧಾರದಿಂದ ತಾವು ಖುಷಿಯಾಗಿದ್ದೇವೆ ಎನ್ನುವುದನ್ನು ಪ್ರೂವ್ ಮಾಡಿದ್ದಾರೆ.

ಇತ್ತೀಚಿನ ಅಪ್‌ಡೇಟ್‌ನ ಪ್ರಕಾರ ಕಿರಣ್ ಮತ್ತು ಅಮೀರ್ ಲಡಾಖ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಲಾಲ್ ಸಿಂಗ್ ಚಾಡಾ ಚಿತ್ರದ ಚಿತ್ರೀಕರಣಕ್ಕಾಗಿ ಅಮೀರ್ ಮತ್ತು ಕಿರಣ್ ಲಡಾಕ್‌ನಲ್ಲಿದ್ದರು. ದಕ್ಷಿಣ ಭಾರತದ ನಟ ನಾಗ ಚೈತನ್ಯ ಅವರೇ ಅಮೀರ್ ಮತ್ತು ಕಿರಣ್ ಒಳಗೊಂಡ ಬಿಟಿಎಸ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಅಜ್ಜನಾಗೋ ವಯಸ್ಸಲ್ಲಿ ಅಮೀರ್‌ಗೆ ಮೂರನೇ ಹೆಂಡ್ತಿ ಆಸೆ ಎಂದ BJP ಸಂಸದ

ಈಗ ಸಾಂಪ್ರದಾಯಿಕ ಲಡಾಖಿ ಉಡುಪುಗಳನ್ನು ಧರಿಸಿದ ಅಮೀರ್, ಕಿರಣ್ ನೃತ್ಯದ ಹಲವಾರು ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಈಗ ವೈರಲ್ ಆಗಿರುವ ವಿಡಿಯೋ ತುಣುಕುಗಳಲ್ಲಿ, ಅಮೀರ್ ಕೆಂಪು ಬಣ್ಣದ ದೊಡ್ಡ ಗಾತ್ರದ ಉಡುಪು ಧರಿಸಿದ್ದಾರೆ. ಅಮೀರ್ ಚಮತ್ಕಾರಿ ನೇರಳೆ ಟೋಪಿ ಧರಿಸಿದ್ದರೆ, ಕಿರಣ್ ಹಸಿರು ಟೋಪಿ ಹೊಂದಿರುವ ಗುಲಾಬಿ ಬಣ್ಣದ ಉಡುಪನ್ನು ಧರಿಸಿದ್ದರು.

ಸ್ಥಳೀಯರು ಅಮೀರ್ ಮತ್ತು ಕಿರಣ್ ಅವರಿಗೆ ನೃತ್ಯ ಹೆಜ್ಜೆಗಳನ್ನು ಕಲಿಸುತ್ತಿರುವುದು ಕಂಡುಬಂತು, ಇಬ್ಬರೂ ಅನುಕರಿಸಲು ಪ್ರಯತ್ನಿಸುತ್ತಿದ್ದರು. ಆ ಪ್ರದೇಶದ ಸುತ್ತಲೂ ನೆರೆದಿದ್ದ ಪ್ರೇಕ್ಷಕರು ಅಮೀರ್ ಮತ್ತು ಕಿರಣ್ ಅವರನ್ನು ಹುರಿದುಂಬಿಸುತ್ತಿದ್ದರು. ಅನೇಕ ಫ್ಯಾನ್ ಪೇಜ್ ಇವರಿಬ್ಬರ ನೃತ್ಯದ ವೀಡಿಯೊಗಳು ಮತ್ತು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

15 ವರ್ಷದ ವೈವಾಹಿಕ ಜೀವನದ ನಂತರ ಬೇರಾಗುತ್ತಿದ್ದಾರೆ ಅಮೀರ್-ಕಿರಣ್

ಅದ್ವೈತ್ ಚಂದನ್ ನಿರ್ದೇಶನದ, ಲಾಲ್ ಸಿಂಗ್ ಚಡ್ಡಾ ಟಾಮ್ ಹ್ಯಾಂಕ್ಸ್ ಅಭಿನಯದ ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ಚಿತ್ರ ಫಾರೆಸ್ಟ್ ಗಂಪ್ ನ ಹಿಂದಿ ರಿಮೇಕ್ ಆಗಿದೆ. ಈ ಚಿತ್ರವು ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಬೇಕಿತ್ತು. ಈಗ 2021 ರ ಕ್ರಿಸ್‌ಮಸ್‌ನಲ್ಲಿ ರಿಲೀಸ್ ಆಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!