ಪತಿಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಶಾಹೀದ್ ಕಪೂರ್ ಮಡದಿ ಮೀರಾ ರಜ್‌ಪೂತ್ ರೊಮ್ಯಾಂಟಿಕ್ ಫೋಟೋ ವೈರಲ್.
ಬಾಲಿವುಡ್ ರೊಮ್ಯಾಂಟಿಕ್ ಕಪಲ್ ಅಂದ್ರೆ ಶಾಹಿದ್ ಕಪೂರ್ ಮತ್ತು ಪತ್ನಿ ಮೀರಾ ರಾಜ್‌ಪೂತ್. ಚಿತ್ರೀಕರಣಕ್ಕೆಂದು ಶಾಹಿದ್ ಕೊಂಚ ದೂರ ತೆರಳಿದರೂ 'ಮಿಸ್ ಯೂ' ಎಂದು ಮೀರಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಬರೆಯುತ್ತಾರೆ. ಆದರೀಗ ಮೀರಾ ಶೇರ್ ಮಾಡಿರುವ ಫೋಟೋ ಮತ್ತೊಂದು ಕಾರಣಕ್ಕೆ ವೈರಲ್ ಆಗುತ್ತಿದೆ.
'ನೀನು ಒಮ್ಮೊಮ್ಮೆ ನನ್ನ ಹಾರ್ಟ್‌ಬೀಟ್ ಸ್ಕಿಪ್ ಮಾಡುತ್ತೀರಾ. ಫೇಸ್‌ಟೈಮ್‌ನಲ್ಲೂ ಮಿಸ್ ಆಗುವುದಿಲ್ಲ. ಮಿಸ್ ಯು ಸೋ ಮಚ್,' ಎಂದು ಶಾಹಿದ್‌ರನ್ನು ತಬ್ಬಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ ಮೀರಾ. ಈ ಫೋಟೋದಲ್ಲಿ ಮೀರಾ ಕೈ ಬೆರಳಿನಲ್ಲಿರುವ ಮದುವೆ ಉಂಗುರ ಹೈಲೈಟ್ ಆಗಿದೆ. ಎಲ್ಲರೂ ಅದನ್ನು ನೋಡಿ ನಿಮ್ಮ ಮದುವೆ ಉಂಗುರ ಇಷ್ಟೊಂದು ದೊಡ್ಡ ಇತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ನೀವಿಬ್ಬರೂ ಕಪಲ್ ಗೋಲ್ಸ್ ಸೆಟ್ ಮಾಡುತ್ತೀರಾ ಎಂದಿದ್ದಾರೆ.
ಸೊಸೆ ಮೀರಾ ಬಗ್ಗೆ ಶಾಹಿದ್ ತಾಯಿ ನೀಲಿಮಾ ಹೇಳೋದೇನು?ಕೆಲವು ದಿನಗಳ ಹಿಂದೆ ಇಬ್ಬರೂ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಆಗಲೂ ಶಾಹಿದ್ ಅವರನ್ನು ತಬ್ಬಿಕೊಂಡಿರುವ ಫೋಟೋ ಹಂಚಿಕೊಂಡ ಮೀರಾ 'ಪದಗಳಲ್ಲಿ ವರ್ಣಿಸಲಾಗದಷ್ಟು ನಿಮ್ಮನ್ನು ನಾನು ಪ್ರೀತಿಸುವೆ. ಹ್ಯಾಪಿ 6 ಮೈ ಲವ್ ಆಫ್ ಲೈಫ್,' ಎಂದು ಬರೆದಿದ್ದರು. ಅದಕ್ಕೂ ಮುನ್ನ ಪತ್ನಿಗೆ ಶಾಹಿದ್ ಹೂಗುಚ್ಛ ನೀಡಿ ಸರ್ಪೈಸ್ ನೀಡಿದ್ದರು, ' ನೀವು ಹೀಗೆ ಮಾಡಿಯೇ ನನ್ನ ಹಾರ್ಟ್ ಮೆಲ್ಟ್ ಮಾಡುವುದು,' ಎಂದು ಮೀರಾ ಹೇಳಿದ್ದರು.