'ಶಕುಂತಲಂ': ಅಲ್ಲು ಅರ್ಜುನ್ 4 ವರ್ಷದ ಪುತ್ರಿ ಆರ್ಹಾ ಚಿತ್ರರಂಗಕ್ಕೆ ಎಂಟ್ರಿ!

Suvarna News   | Asianet News
Published : Jul 16, 2021, 02:38 PM ISTUpdated : Jul 16, 2021, 02:53 PM IST
'ಶಕುಂತಲಂ': ಅಲ್ಲು ಅರ್ಜುನ್ 4 ವರ್ಷದ ಪುತ್ರಿ ಆರ್ಹಾ ಚಿತ್ರರಂಗಕ್ಕೆ ಎಂಟ್ರಿ!

ಸಾರಾಂಶ

ಅಲ್ಲು ಕುಟುಂಬದ ನಾಲ್ಕನೇ ಜನರೇಷನ್ ಚಿತ್ರರಂಗಕ್ಕೆ ಎಂಟ್ರಿ. ನಟಿ ಸಮಂತಾ ಅಕ್ಕಿನೇನಿ ಜೊತೆ 10 ದಿನಗಳ ಕಾಲ ಚಿತ್ರೀಕರಣ.

ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್‌ ಚಿತ್ರರಂಗದ ಬಹು ಬೇಡಿಕೆಯ ನಟ. ಒಂದು ಸಿನಿಮಾ ಮಾಡುವುದಕ್ಕೆ ಸುಮಾರು 3-5 ಕೋಟಿ ಸಂಭಾವನೆ ಪಡೆಯುವ ಈ ನಟ ಅರ್ಜುನ್ ಅವರ ಪುತ್ರಿ ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅರ್ಜುನ್ ಪತ್ನಿ ಸ್ನೇಹಾ ಸೋಷಿಯಲ್ ಮೀಡಿಯಾದಲ್ಲಿ ಅರ್ಹಾ ಪೋಟೋ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡಿ, ಚಿಕ್ಕ ವಯಸ್ಸಿಗೆ ಸ್ಟಾರ್ ಗಿರಿ ತಂದಿದ್ದಾರೆ. ಇದೀಗ ಅರ್ಹಾ ಸಿನಿ ಎಂಟ್ರಿ ಬಗ್ಗೆ ಇಡೀ ಟಾಲಿವುಡ್ ಮಂದಿ ಸಂತಸ ವ್ಯಕ್ತ ಪಡಿಸಿದ್ದಾರೆ.

ಮಗಳ ಹುಟ್ಟು ಹಬ್ಬಕ್ಕೆ ಅಲ್ಲು ಅರ್ಜುನ್‌ ಕೊಟ್ಟ ವಿಶೇಷ ಉಡುಗೊರೆ ಇದು!

'ಆರ್ಹಾ ಶಕುಂತಲಂ ಸಿನಿಮಾದಲ್ಲಿ ನಟಿಸುತ್ತಿದ್ದಾಳೆ. ನಾವು ಹೆಮ್ಮೆ ಪಡುವಂತೆ ಮಾಡುತ್ತಾಳೆ ಎಂದು ನನಗೆ ಗೊತ್ತಿದೆ,' ಎಂದು ಅಲ್ಲು ಸಿರೀಶ್ ಬರೆದರೆ. 'ಟೇಕ್‌ ಇಲ್ಲದೇ ಮೊದಲ ಶಾಟ್ ತೆಗೆದುಕೊಂಡಳು. ಆಕೆ ಡೈಲಾಗ್ ಹೇಳುವ ರೀತಿ ಅದ್ಭುತ. ಸೂಪರ್ ಸ್ಟಾರ್ ಆಗುವುದರಲ್ಲಿ ಅನುಮಾವಿಲ್ಲ. ದೇವರು ಒಳ್ಳೆಯದು ಮಾಡಲಿ,' ಎಂದು ಸಮಂತಾ ಬರೆದಿದ್ದಾರೆ.

ಅಲ್ಲು ರಾಮಾಲಿಂಗಯ್ಯ ಸುಮಾರು 1000ಕ್ಕೂ ಹೆಚ್ಚು ಸಿನಿಮಾ ಅಭಿನಯಿಸಿದ್ದಾರೆ. ಅವರ ಪುತ್ರ ಅಲ್ಲು ಅರವಿಂದ್ ಟಾಲಿವುಡ್ ನಿರ್ಮಾಪಕ. ಅವರ ಮೊಮ್ಮಗ ಅಲ್ಲು ಅರ್ಜುನ್ ಬಹು ಬೇಡಿಕೆಯ ನಟ, ಇದೀಗ ಅವರ ಮೊಮ್ಮಗಳು ಅಲ್ಲು ಅರ್ಹಾ ಬಾಲನಟಿ ಆಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರೀಕರಣದಲ್ಲಿ ಅರ್ಹಾರಿಗೆ ನಟಿ ಸಮಂತಾ ಸಪೋರ್ಟಿವ್ ಆಗಿರುವ ಕಾರಣ ಅಲ್ಲು ಕುಟುಂಬ ಸೋಷಿಯಲ್ ಮೀಡಿಯಾದಲ್ಲಿ ಧನ್ಯವಾದಗಳನ್ನು ತಿಳಿಸಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಷ್ಟಪಡುತ್ತಿದ್ದ ನಟರಿಗೆ ಧರ್ಮಛತ್ರದಂತಿತ್ತು ರಾಜ್‌ಪಾಲ್ ಮನೆ: ಸಾಲ ಕಟ್ಟಲಾಗದೇ ಜೈಲಿಗೆ ಹೋದ ಗೆಳೆಯನ ಉದಾರತೆ ತೆರೆದಿಟ್ಟ ನಟ
ನಾಳೆ ರಾಜ್‌ಪಾಲ್‌ ಯಾದವ್‌ ಜಾಮೀನು ಅರ್ಜಿ ವಿಚಾರಣೆ: ಸಹಾಯಕ್ಕೆ ಧಾವಿಸಿದ ಸಲ್ಮಾನ್‌ ಖಾನ್‌, ಅಜಯ್‌ ದೇವಗನ್‌!