ಕೋಟಿಗೊಬ್ಬ2 ನಟಿ ನಿತ್ಯಾ ಮೆನನ್‌ಗೆ ಇದೇನಾಯ್ತು; ಏಕಾಏಕಿ ಸಿನಿಮಾ ತೊರೆಯುವುದಾಗಿ ಹೇಳಿದ್ಯಾಕೆ?

By Sathish Kumar KH  |  First Published Jan 9, 2025, 8:00 PM IST

ನನ್ನ ಜೀವನದಲ್ಲಿ ಸಿನಿಮಾವನ್ನೇ ಇಷ್ಟಪಡದ ವ್ಯಕ್ತಿ ನಾನು. ಎಲ್ಲರಂತೆ ಸಾಮಾನ್ಯವಾಗಿರಬೇಕು ಎಂದುಕೊಂಡಿದ್ದ ನನಗೆ ಸೆಲೆಬ್ರಟಿ ಎನಿಸಿಕೊಳ್ಳುವುದು ಕಷ್ಟವಾಗಿದೆ.  ಆದ್ದರಿಂದ ನಾನು ಸಿನಿಮಾ ನಟನೆ ನಿಲ್ಲಿಸುತ್ತೇನೆ ಎಂದು ನಟಿ ನಿತ್ಯ ಮೆನನ್ ಹೇಳಿದ್ದಾರೆ.


ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಾಲನಟಿಯಾಗಿ ಸಿನಿಮಾದ ವೃತ್ತಿ ಜೀವನವನ್ನು ಆರಂಭಿಸಿದ ಕರ್ನಾಟಕದ ಬೆಂಗಳೂರು ಮೂಲದ ನಟಿ ನಿತ್ಯ ಮೆನೆನ್ ಅವರು ಇದೀಗ ಒಂದೇ ಒಂದು ಅವಕಾಶ ಸಿಕ್ಕಿದರೆ ಸಿನಿಮಾ ರಂಗವನ್ನೇ ತೊರೆಯುವುದಾಗಿ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. 

ಬಾಲ ನಟಿಯಾಗಿ ವೃತ್ತಿಜೀವನ ಆರಂಭಿಸಿದ ನಟಿ ನಿತ್ಯಾ ಮೆನನ್. ಕನ್ನಡದಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದಾರೆ. 7 ಓ ಕ್ಲಾಕ್, ಜೋಶ್, ಐದೊಂದ್ಲ ಐದು, ಮೈನಾ, ಕೋಟಿಗೊಬ್ಬ 2, ಸೇರಿ ಹಲವು ಸಿನಿಮಾಗಳಲ್ಲಿ ಮಾಡಿದ್ದಾರೆ. ಇದಾದ ನಂತರ ದಕ್ಷಿಣ ಭಾರತದ ಇತರೆ ಭಾಷೆಗಳಲ್ಲಿ ಉಸ್ತಾದ್ ಹೋಟೆಲ್, ಬೆಂಗಳೂರು ಡೇಸ್, 100 ಡೇಸ್ ಆಫ್ ಲವ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದ ನಿತ್ಯಾ ಮೆನನ್, ತಮ್ಮ ವೃತ್ತಿಜೀವನದ ಬಗ್ಗೆ ಹೇಳಿದ ವಿಷಯ ಕೇಳಿ ದಕ್ಷಿಣ ಭಾರತ ಚಿತ್ರರಂಗ ಬೆಚ್ಚಿಬಿದ್ದಿದೆ.

Tap to resize

Latest Videos

ಸಿನಿಮಾವನ್ನು ಇಷ್ಟಪಡದ ವ್ಯಕ್ತಿಯೆಂದು ನಾನು ಮತ್ತು ಇನ್ನೂ ಹಾಗೆಯೇ ಇದ್ದೇನೆ ಎಂದು ನಿತ್ಯಾ ಮೆನನ್ ಹೇಳಿದ್ದಾರೆ. ಒಂದು ಅವಕಾಶ ಸಿಕ್ಕಿದರೆ ಖಂಡಿತವಾಗಿಯೂ ಸಿನಿಮಾ ಕ್ಷೇತ್ರವನ್ನೇ ಬಿಟ್ಟು ಹೋಗುತ್ತೇನೆ ಎಂದು ನಟಿ ಹೇಳಿದರು. ಬಿಹೈಂಡ್ ವುಡ್ಸ್ ತಮಿಳು ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ನಿತ್ಯಾ ಮೆನನ್ ಈ ವಿಷಯ ಬಹಿರಂಗಪಡಿಸಿದರು.

ಇದನ್ನೂ ಓದಿ:  ಅಲ್ಲು ಅರ್ಜುನ್‌ರನ್ನ ಅವಮಾನಿಸಿದ ನಟಿ ನಿತ್ಯಾ ಮೆನನ್!

'ಸಿನಿಮಾವನ್ನು ಇಷ್ಟಪಡದ ವ್ಯಕ್ತಿ ನಾನು. ಈಗಲೂ ಹಾಗೆಯೇ ಇದ್ದೇನೆ. ಒಂದು ಅವಕಾಶ ಸಿಕ್ಕಿದರೆ ಖಂಡಿತವಾಗಿಯೂ ಸಿನಿಮಾ ನಟನೆಯನ್ನು ನಿಲ್ಲಿಸುತ್ತೇನೆ. ಅದೇ ವಿಪರ್ಯಾಸ. ನಾನು ಈ ವಿಷಯ ಹೇಳಿದರೆ ನನಗೆ ಸಿನಿಮಾದ ಬಗ್ಗೆ ಕೃತಜ್ಞತೆ ಇಲ್ಲ ಎಂದು ಅನಿಸುತ್ತದೆ. ಆದ್ದರಿಂದ ಈ ಬಗ್ಗೆ ಮಾತನಾಡುವುದಿಲ್ಲ. ನನ್ನ ವ್ಯಕ್ತಿತ್ವ ಮತ್ತು ಸಿನಿಮಾ ನಡುವೆ ದೊಡ್ಡ ವ್ಯತ್ಯಾಸವಿದೆ. ನಾನು ಎಲ್ಲರಂತೆಯೂ ಸಾಮಾನ್ಯ ಜೀವನವನ್ನು ಬಯಸಿದ್ದೆ. ಯಾವುದೇ ನಿರ್ಬಂಧಗಳಿಲ್ಲದೆ ಮುಕ್ತವಾಗಿರಬೇಕೆಂದು ಬಯಸಿದ್ದೆ. ಈಗ ಅದು ಸಾಧ್ಯವಿಲ್ಲ. ನಿಜವಾಗಿ ನಾನು ಹಾಗೆಯೇ ಇದ್ದೇನೆ ಕೂಡ. ನನಗೆ ಪ್ರಯಾಣವೆಂದರೆ ಇಷ್ಟ. ಉದ್ಯಾನವನಕ್ಕೆ ಹೋಗಬೇಕು, ಮರಗಳೆಂದರೆ ಇಷ್ಟ. ಆದರೆ ಈಗ ಯಾವುದನ್ನೂ ನಾನು ಮುಕ್ತವಾಗಿ ಮಾಡುವುದಕ್ಕೆ ಅವಕಾಶಗಳು ಇಲ್ಲ. ಕೆಲವೊಮ್ಮೆ ಸಿನಿಮಾ ಬೇಕೇ ಬೇಕು ಎಂದು ಯೋಚಿಸಿದ್ದೇನೆ. ವೃತ್ತಿಯಿಂದ ನಿಧಾನವಾಗಿ ದೂರವಾಗಬಹುದು ಎಂದು ಭಾವಿಸಿದಾಗ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತು. ಅದು ದೇವರ ನಿರ್ಧಾರ' ಎಂದು ನಿತ್ಯಾ ಮೆನನ್ ಸಂದರ್ಶನದಲ್ಲಿ ಹೇಳಿದರು.

ಇದನ್ನೂ ಓದಿ:  ನನಗೆ ಓದಲು ಹಾಗೂ ಬರೆಯಲು ಬರುವ ಏಕೈಕ ಭಾಷೆ ಕನ್ನಡ; ನಿಜ ಹೇಳಿದ್ಯಾಕೆ ನಿತ್ಯಾ ಮೆನನ್?

ಇನ್ನು, ಜಯಂ ರವಿ ನಾಯಕನಾಗಿ ನಟಿಸಿರುವ 'ಕಾದಲಿಕ್ಕ ನೇರಮಿಲ್ಲೈ' ಚಿತ್ರ ನಿತ್ಯಾ ಅವರ ಮುಂದಿನ ಚಿತ್ರವಾಗಿದೆ. ಈ ಚಿತ್ರ ಜನವರಿ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಿರುತಿಗ ಉದಯನಿಧಿ ನಿರ್ದೇಶಿಸಿರುವ ಈ ಚಿತ್ರ ಸಹೋದರಿ-ಸಹೋದರ ಬಾಂಧವ್ಯದ ಕಥೆಯಾಗಿದೆ ಎಂದು ಹೇಳಲಾಗಿದೆ.

click me!