ನಟರ ಜಾಹೀರಾತುಗಳ ಮೋಡಿಗೆ ಒಳಗಾಗಿ ಅದನ್ನೇ ಬಳಸ್ತೀರಾ? ಈ ವಿಡಿಯೋದಲ್ಲಿದೆ ನೋಡಿ ಭಯಾನಕ ಅಸಲಿಯತ್ತು!

By Suchethana DFirst Published Oct 23, 2024, 4:21 PM IST
Highlights

ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಅದನ್ನೇ ಖರೀದಿಸುವಂತೆ ಜನರಿಗೆ ಪ್ರೇರೇಪಿಸುವ ಸೆಲೆಬ್ರಿಟಿಗಳ ಅಸಲಿಯತ್ತು ಗೊತ್ತೆ? ವಿಡಿಯೋದಲ್ಲಿದೆ ನೋಡಿ ಅಸಲಿಯತ್ತು!
 

ಜಾಹೀರಾತಿನಲ್ಲಿ ತೋರಿಸುವುದೆಲ್ಲವೂ ಸತ್ಯವಲ್ಲ, ಯಾವುದೂ ಸತ್ಯವೇ ಅಲ್ಲ ಎನ್ನುವ ಸತ್ಯ ಬಹುತೇಕ ಎಲ್ಲರಿಗೂ ತಿಳಿದದ್ದೇ. ಕೋಟಿ ಕೋಟಿ ರೂಪಾಯಿ ಪಡೆದು ಹಲವು ನಟ-ನಟಿಯರು ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು, ತಮ್ಮ ಅಭಿಮಾನಿಗಳನ್ನು ತಪ್ಪು ದಾರಿಗೆ ಎಳೆಯುವುದು ದೊಡ್ಡ ದುರಂತ ಎಂದರೂ ತಪ್ಪಾಗಲಿಕ್ಕಿಲ್ಲ. ಕೆಲವು ವಿದೇಶಿ ಪಾನೀಯಗಳ ಜಾಹೀರಾತುಗಳಲ್ಲಿ ನಟಿಸುವ ಚಿತ್ರ ನಟರು, ಕ್ರಿಕೆಟಿಗರನ್ನು  ನೋಡಿ ಪ್ರತಿನಿತ್ಯ ವಿಷ ಸೇವನೆ ಮಾಡಿ ಕ್ಯಾನ್ಸರ್​ನಂಥ ಮಾರಕ ರೋಗಗಳಿಗೆ ಬಲಿಯಾಗುತ್ತಿರುವವರು ಅದೆಷ್ಟೋ ಮಂದಿ. ಇನ್ನು ದಿನನಿತ್ಯ ಬಳಸುವ ಪಾನೀಯ, ಶ್ಯಾಂಪೂ, ಪಾನ್​ ಮಸಾಲಾ, ಎಣ್ಣೆ, ಹಣ್ಣುಗಳ ಜ್ಯೂಸ್​, ಚಿಪ್ಸ್​, ಟೂಥ್​ಪೇಸ್ಟ್​... ಹೀಗೆ ಪ್ರತಿಯೊಂದಕ್ಕೂ ಸೆಲೆಬ್ರಿಟಿಗಳನ್ನು ಬಳಸಿಕೊಂಡು, ಅವರಿಗೆ ಕೋಟಿ ಕೋಟಿ ಹಣ ಕೊಟ್ಟು ಜಾಹೀರಾತು ಮಾಡಿ ಜನರನ್ನು ಮರಳು ಮಾಡುವ ತಂತ್ರದ ಬಗ್ಗೆ ಇದೀಗ ಫ್ಯಾಕ್ಟ್​ ಮೈಂಡೆಡ್​ ಎಂಬ ಯೂಟ್ಯೂಬ್​ ಚಾನೆಲ್​ನಲ್ಲಿ ವಿವರಣೆ ನೀಡಲಾಗಿದೆ.

ಪಾನ್​ ಮಸಾಲಾ ಆ್ಯಡ್​ ಮಾಡುವ ತಾರೆಯರು ಅಸಲಿಗೆ ಅದನ್ನು ಸೇವಿಸುವುದೇ ಇಲ್ಲ. ಈ ಶ್ಯಾಂಪೂ ಬಳಸಿದರೆ, ಕೂದಲು ಹೀಗಾಗುತ್ತದೆ ಎನ್ನುವ ನಟಿಯರು ಆ ಕೂದಲನ್ನು ಅಂದಗೊಳಿಸಲು ಗಂಟೆಗಟ್ಟಲೆ ಹೇಗೆ ಹೇರ್ ಸ್ಟೈಲಿಷ್​ ಮುಂದೆ ಕುಳಿತುಕೊಳ್ಳುತ್ತಾರೆ, ಬಿಯರ್​ ಜಾಹೀರಾತಿನಲ್ಲಿ ಪೆಟ್ರೋಲ್​ ಹೇಗೆ ಬಳಸಲಾಗುತ್ತದೆ, ಚಿಪ್ಸ್​ ಜಾಹೀರಾತಿನಲ್ಲಿ ಹೇಗೆ ನಕಲಿ ಚಿಪ್ಸ್​ ಬಳಸುತ್ತಾರೆ. ಅಡುಗೆ ಸಾಮಗ್ರಿ ಅಥವಾ ವಿವಿಧ ರೀತಿಯ ಅಡುಗೆ ಪುಡಿಗಳ ಬಳಕೆಯಲ್ಲಿ ಹೇಗೆ ಬೇರೆ ಬಣ್ಣಗಳನ್ನು ಬಳಸಿ ಜನರನ್ನು ಮರಳು ಮಾಡಲಾಗುತ್ತದೆ ಎನ್ನುವ ಬಗ್ಗೆ ಈ ವಿಡಿಯೋದಲ್ಲಿ ಸವಿಸ್ತಾರವಾಗಿ ತಿಳಿಸಲಾಗಿದೆ.

Latest Videos

ಅನಿಲ್​ ಕಪೂರ್​ 10 ಕೋಟಿ ಆಫರ್​ ರಿಜೆಕ್ಟ್! ಶಾರುಖ್​- ಅಜಯ್​ ದೇವಗನ್​ ವಿರುದ್ಧ ನೆಟ್ಟಿಗರಿಂದ ಭಾರಿ ಆಕ್ರೋಶ

ಕ್ರಿಕೆಟ್​ ತಾರೆಯರು, ಸಿನಿಮಾ ಸ್ಟಾರ್​ ನಟರು ಬಳಸುವ ವಿದೇಶಿ ಪಾನೀಯಗಳಲ್ಲಿ ಇರುವ ಕ್ರಿಮಿ ನಾಶಕದ ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಫಾಸ್ಟ್​ ಫುಡ್​ಗಳಲ್ಲಿ ಬಳಸುವ ಅಪಾಯಕಾರಿ, ಕ್ಯಾನ್ಸರ್​ಗೆ ತುತ್ತಾಗುವ ವಿಷದ ಬಗ್ಗೆಯೂ ಸದ್ದು ಮಾಡಿತ್ತು. ಪ್ರಯೋಗಾಲಯಗಳಲ್ಲಿಯೇ ಇದನ್ನು ಸಾಬೀತು ಮಾಡಲಾಗಿತ್ತು. ಪಾನ್​ ಮಸಾಲಾ ತಿಂದರೆ ಬಾಯಿಯ ಕ್ಯಾನ್ಸರ್​ ಹೇಗೆ ಬರುತ್ತದೆ ಎನ್ನುವ ಸರ್ಕಾರಿ ಜಾಹೀರಾತುಗಳೂ ಬರುತ್ತವೆ, ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ಕ್ಯಾನ್ಸರ್​ ರೋಗಕ್ಕೆ ಇಂಥ ಜಾಹೀರಾತುಗಳು ಹಾಗೂ ಜಾಹೀರಾತುಗಳಲ್ಲಿ ನಟಿಸುವ ಸೆಲೆಬ್ರಿಟಿಗಳ ಕೊಡುಗೆ ಬಹುದೊಡ್ಡದು ಇದೆ ಎನ್ನುವ ಬಗ್ಗೆ ಸೋಷಿಯಲ್​  ಮೀಡಿಯಾದಲ್ಲಿಯೂ ಭಾರಿ ಚರ್ಚೆಯೇ ನಡೆದಿತ್ತು.

ಇದರ ಹೊರತಾಗಿಯೂ ಜನರು ಜಾಹೀರಾತಿಗೆ ಮರಳಾಗುವುದು ನಡೆದೇ ಇದೆ. ಕೆಲ ದಿನಗಳ ಹಿಂದೆ ಪಾನ್​ ಮಸಾಲಾ ಜಾಹೀರಾತಿನಿಂದ ನಟ ಅಕ್ಷಯ್​ ಕುಮಾರ್​ ಹಿಂದಕ್ಕೆ ಸರಿದಿದ್ದರು. ಯುವಜನರನ್ನು ತಪ್ಪು ದಾರಿಗೆ ಎಳೆಯುವುದಿಲ್ಲ ಎಂದು ಅವರು ಹೇಳಿದ್ದರು. ಅದರ ಬೆನ್ನಲ್ಲೇ ಸ್ಯಾಂಡಲ್​ವುಡ್​ ನಟ ಯಶ್​ ಕೂಡ ಪಾನ್​ ಮಸಾಲಾ ಜಾಹೀರಾತನ್ನು ಒಪ್ಪಿಕೊಂಡಿರಲಿಲ್ಲ. ಮೊನ್ನೆಯಷ್ಟೇ ಅನಿಲ್​ ಕಪೂರ್​ 10 ಕೋಟಿ ರೂಪಾಯಿ ಆಫರ್​ ರಿಜೆಕ್ಟ್​ ಮಾಡಿದ್ದು ಸದ್ದು ಮಾಡಿತ್ತು. ಆದರೆ ಎಲ್ಲಾ ಸೆಲೆಬ್ರಿಟಿಗಳೂ ಹೀಗೆಯೇ ಇರಬೇಕೆಂದೇನೂ ಇಲ್ಲ. ಈ ಜಾಹೀರಾತುಗಳನ್ನು ಮಾಡುವಾಗ ಅವರು ನಕಲಿ ವಸ್ತುಗಳನ್ನು ಹೇಗೆ ಉಪಯೋಗಿಸಿ ಜನರಿಗೆ ವಿಷ ಸೇವನೆ ಮಾಡುವಂತೆ ಹೇಗೆ ತೋರಿಸುತ್ತಾರೆ ಎನ್ನುವ ಬಂಡವಾಳನ್ನು ಈ ವಿಡಿಯೋದಲ್ಲಿ ತೆರೆದಿಡಲಾಗಿದೆ... ನೋಡಿ... 

3 ಬಾರಿ ಡಿವೋರ್ಸ್​: ಗಂಡಸರ ಸಹವಾಸ ಸಾಕೆನಿಸಿ ತನ್ನನ್ನು ತಾನೇ ಮದ್ವೆಯಾದ ನಟಿ! ಟರ್ಕ್​ ದ್ವೀಪದಲ್ಲಿ ಹನಿಮೂನ್​

click me!