ಎಲ್ಲ ಬಿಟ್ಟು ರಾವಣನ ಪಾತ್ರವನ್ನೇಕೆ ಒಪ್ಪಿದ್ರು ಯಶ್, ಅವರೇ ಹೇಳಿದ್ದಾರೆ ಕೇಳಿ

By Roopa Hegde  |  First Published Oct 23, 2024, 3:58 PM IST

ಕೆಜಿಎಫ್ ಸ್ಟಾರ್ ಯಶ್ ಈಗ ಸ್ಯಾಂಡಲ್ವುಡ್, ಬಾಲಿವುಡ್ ಗೆ ಮಾತ್ರವಲ್ಲ ವಿಶ್ವದ ಮೂಲೆ ಮೂಲೆಯ ಜನರಿಗೆ ಚಿರಪರಿಚಿತ. ಕೆಜಿಎಫ್ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಸೆಳೆದಿರುವ ಪ್ಯಾನ್ ಇಂಡಿಯಾ ನಟ, ರಾಮಾಯಣ ಚಿತ್ರದ ಬಗ್ಗೆ ಆಸಕ್ತಿಕರ ವಿಷ್ಯವನ್ನು ಬಿಚ್ಚಿಟ್ಟಿದ್ದಾರೆ. 
 


ರಾಕಿಂಗ್ ಸ್ಟಾರ್ ಯಶ್ (Rocking star Yash) ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಬಾಲಿವುಡ್ (Bollywood) ನ ಬಹುನಿರೀಕ್ಷಿತ ಚಿತ್ರ ರಾಮಾಯಣ (Ramayana)ದಲ್ಲಿ ಯಶ್, ರಾವಣನ ಪಾತ್ರದಲ್ಲಿ ಮಿಂಚೋದು ಕನ್ಫರ್ಮ್ ಆಗಿದೆ. ಯಶ್ ಈ ವಿಷ್ಯವನ್ನು ಇದೇ ಮೊದಲ ಬಾರಿ ಸ್ಪಷ್ಟಪಡಿಸಿದ್ದಾರೆ. ಯಶ್, ರಾವಣನ ಪಾತ್ರ ಮಾಡ್ತಾರೆ ಎನ್ನುವ ಸುದ್ದಿ ಈ ಹಿಂದೆಯೂ ಬಂದಿತ್ತು. ನಂತ್ರ, ಅವರು ಚಿತ್ರದಲ್ಲಿ ಯಾವುದೇ ಪಾತ್ರವನ್ನು ಮಾಡ್ತಿಲ್ಲ, ಸಹ-ನಿರ್ಮಾಪಕರಾಗಿ ಮಾತ್ರ ಚಿತ್ರದ ಜೊತೆ ಸಂಬಂಧವಿಟ್ಟುಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದ್ರೀಗ ಸ್ವತಃ ಯಶ್ ಅವರು, ಸಂದರ್ಶನವೊಂದರಲ್ಲಿ ರಾಮಾಯಣ ಚಿತ್ರದಲ್ಲಿ ರಾವಣನ ಪಾತ್ರಕ್ಕೆ ಜೀವ ತುಂಬುವು ವಿಷ್ಯವನ್ನು ಬಹಿರಂಗಪಡಿಸಿದ್ದಾರೆ. ಇದನ್ನು ಕೇಳಿದ ಫ್ಯಾನ್ಸ್ ಖುಷಿಯಾಗಿದ್ದಾರೆ. 

ಹಾಲಿವುಡ್ ರಿಪೋರ್ಟರ್ ಇಂಡಿಯಾ ಜೊತೆ ಮಾತನಾಡಿದ ಕೆಜಿಎಫ್ ಸ್ಟಾರ್ (KGF Star) ಯಶ್, ಅನೇಕ ವಿಷ್ಯಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ರಾಮಾಯಣ ಚಿತ್ರದಲ್ಲಿ ರಾವಣನ ಪಾತ್ರ ಮಾಡುವುದನ್ನು ಕನ್ಫರ್ಮ್ ಮಾಡಿದ್ದಲ್ಲದೆ, ಯಾಕೆ ರಾವಣನ ಪಾತ್ರವನ್ನು ಒಪ್ಪಿಕೊಂಡಿದ್ದೇನೆ ಎಂಬ ಸಂಗತಿಯನ್ನು ಕೂಡ ಹೇಳಿದ್ದಾರೆ. 

Tap to resize

Latest Videos

undefined

51ರಲ್ಲಿ ಒಂಟಿಯಾಗಿರುವ ಮಲೈಕಾ ಬಳಿ ಇರೋ ಕಾರು, ಆಸ್ತಿ ಎಷ್ಟು ಕೋಟಿ ಗೊತ್ತಾ?

ರಾವಣ (Ravan) ನ ಪಾತ್ರದ ಬಗ್ಗೆ ಯಶ್ ಹೇಳಿದ್ದೇನು? : ಇದು ತುಂಬಾ ಆಕರ್ಷಣೀಯವಾದ ಪಾತ್ರ ಎಂದಿದ್ದಾರೆ ಯಶ್. ಬೇರೆ ಯಾವ ಪಾತ್ರದಲ್ಲಿ ನೀವು ನಟಿಸುತ್ತೀರಾ ಎಂದು ನನ್ನನ್ನು ಕೇಳಿದ್ದರೆ ನಾನು ಇಲ್ಲ ಎನ್ನುತ್ತಿದ್ದೆ. ಒಬ್ಬ ನಟನಾಗಿ ರಾವಣನ ಪಾತ್ರ ಮಾಡಲು ನಾನು ಉತ್ಸುಕನಾಗಿದ್ದೇನೆ. ಈ ಪಾತ್ರದ ಛಾಯೆಗಳು ಮತ್ತು ಸೂಕ್ಷ್ಮ ವ್ಯತ್ಯಾಸಗಳನ್ನು ನಾನು ಪ್ರೀತಿಸುತ್ತೇನೆ ಎಂದು ಯಶ್ ಹೇಳಿದ್ದಾರೆ. ಸಿನಿಮಾದಲ್ಲಿ ಪಾತ್ರ ಯಾವುದು ಎಂಬುದು ಮುಖ್ಯವಲ್ಲ. ವಿಲನ್ ಆಗಿರಲಿ ಇಲ್ಲ ನಾಯಕನಾಗಿರಲಿ, ಪಾತ್ರ ಬಲವಾಗಿರಬೇಕು, ಒಂದು ಪಾತ್ರವನ್ನು ಪಾತ್ರದಂತೆಯೇ ಪರಿಗಣಿಸಬೇಕು ಎಂದು ಯಶ್ ಹೇಳಿದ್ದಾರೆ. 

ರಾಮಾಯಣ ಚಿತ್ರದ ಸಹ ನಿರ್ಮಾಪಕರಾಗಿರುವ ಯಶ್, ನಿರ್ಮಾಪಕರು, ನಿರ್ದೇಶಕ ಮಾತಿಗೆ ಮನ್ನಣೆ ನೀಡ್ತಾರೆ. ಅವರು ಈ ಪ್ರಾಜೆಕ್ಟ್ ಗೆ ಕೈಜೋಡಿಸುವ ಐದು ವರ್ಷ ಮೊದಲೇ ಚಿತ್ರದ ಕೆಲ ಕೆಲಸಗಳು ಮುಗಿದಿದ್ದವು. ಈ ಚಿತ್ರವನ್ನು ನಿತೀಶ್ ತಿವಾರಿ ನಿರ್ದೇಶಿಸುತ್ತಿದ್ದಾರೆ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ದೃಢಪಡಿಸಿದ ಯಶ್, ರಾಮನ ಆಯ್ಕೆ ಮೊದಲೇ ಆಗಿತ್ತು, ಸೀತೆ ಪಾತ್ರವನ್ನು ನಾವೆಲ್ಲ ಸೇರಿ ನಿರ್ಧರಿಸಿದ್ದು ಎಂದಿದ್ದಾರೆ, ಸಾಯಿಪಲ್ಲವಿ ಸೀತೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಿತೀಶ್ ತಿವಾರಿ ಮೊದಲ ಆಯ್ಕೆ ಸಾಯಿಪಲ್ಲವಿ. ಅವರು  ಉತ್ತಮ ನಟಿ ಎಂದಿದ್ದಾರೆ. ದಕ್ಷಿಣ ಭಾರತ ಹಾಗೂ ಬಾಲಿವುಡ್ ಸ್ಟಾರ್ ಗಳು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂದು ಯಶ್  ಸ್ಪಷ್ಟಪಡಿಸಿದ್ದಾರೆ. 

ಪಾತ್ರವನ್ನು ಸರಿಯಾಗಿ ಪ್ರಸ್ತುತಪಡಿಸದಿದ್ದರೆ ಚಿತ್ರ ಯಶಸ್ವಿಯಾಗುವುದಿಲ್ಲ. ಇಂತಹ ಚಿತ್ರಕ್ಕೆ ಪ್ರತಿಭಾವಂತ ಕಲಾವಿದರು ಒಂದಾಗುವುದು ಮುಖ್ಯ ಎಂದಿರುವ ಯಶ್, ಮುಂದೆ ತಾವೂ ಸಹ ನಿರ್ಮಾಣ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ದೊಡ್ಡ ಬಜೆಟ್ ಸಿನಿಮಾ ಮಾಡಲು ದೊಡ್ಡ ಟೀಮ್ ಬೇಕು. ಈ ಪ್ರಾಜೆಕ್ಟ್ ನಲ್ಲಿ ನಾವೆಲ್ಲರೂ ನಮ್ಮದೇ ಸ್ಟಾರ್ ಡಮ್ ಮೇಲೆ ಕೆಲಸ ಮಾಡಬೇಕು ಎಂದಿದ್ದಾರೆ. 

ದೊಡ್ಮನೆಯಲ್ಲಿ ದೊಡ್ಡ ರಣರಂಗ, ಯಜಮಾನಿಕೆಗೆ ಭಾರೀ ಬಡಿದಾಟ, ಮೈಯೆಲ್ಲಾ ಗಾಯ!

ಕೆಜಿಎಫ್ ಬಗ್ಗೆ ಯಶ್ ಹೇಳಿದ್ದೇನು? : ಕೆಜಿಎಫ್ 3 ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದ್ರ ಬಗ್ಗೆ ಹಿಂಟ್ ನೀಡಿದ ಯಶ್, ಖಂಡಿತವಾಗಿಯೂ  ಕೆಜಿಎಫ್ 3 ಬರಲಿದೆ ಎಂದಿದ್ದಾರೆ. ಕೆಜಿಎಫ್ 3 ಮಾಡಲು ಪ್ರಶಾಂತ್ ಅವರೊಂದಿಗೆ ಚರ್ಚೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.  ಯಶ್ ಸದ್ಯ ಗೀತು ಮೋಹನ್‌ದಾಸ್ ಅವರ  ಟಾಕ್ಸಿಕ್ (Toxic) ಚಿತ್ರೀಕರಣದಲ್ಲಿ ಯಶ್ ನಿರತರಾಗಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. 
 

click me!