ಸ್ತ್ರೀ ಜನನಾಂಗ ಟೈಟ್‌ ಮಾಡೋಕೆ ಸಿಗುತ್ತೆ ಮಾತ್ರೆ ಎಂದ ಬಿಗ್‌ಬಾಸ್‌ ಸ್ಪರ್ಧಿಗೆ 'ಕೆರಳಿದʼ ನೆಟ್ಟಿಗರು

By Bhavani Bhat  |  First Published Oct 23, 2024, 9:17 AM IST

ನಟಿ ನಿಯಾ ಶರ್ಮಾ ಮಹಿಳೆಯರ ಜನನಾಂಗವನ್ನು ಬಿಗಿಗೊಳಿಸುವ ಉತ್ಪನ್ನವೊಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡು ಟೀಕೆಗೆ ಗುರಿಯಾಗಿದ್ದಾರೆ. ಇಷ್ಟಕ್ಕೂ ನಿಯಾ ಶರ್ಮಾ ಹೇಳಿದ್ದೇನು?


ಹಿಂದಿ ಕಿರುತೆರೆಯ ಜನಪ್ರಿಯ ನಟಿ, ಬಿಗ್‌ಬಾಸ್‌ ಸ್ಪರ್ಧಿ  ಇದೀಗ ಸುದ್ದಿಯಲ್ಲಿದ್ದಾಳೆ. ನೆಟ್ಟಿಗರು ಸಕಾರವಾಗಿ ಆಕೆಯ ಮೇಲೆ ಮುಗಿಬಿದ್ದಿದ್ದಾರೆ. ಕಾರಣ ಇಷ್ಟೆ: ಮಹಿಳೆಯರ ಜನನಾಂಗವನ್ನು ಬಿಗಿಗೊಳಿಸುತ್ತದೆ ಎಂದು ಹೇಳಿಕೊಳ್ಳುವ ಉತ್ಪನ್ನವೊಂದರ ಜಾಹೀರಾತಿನಲ್ಲಿ ಆಕೆ ಕಾಣಿಸಿಕೊಂಡು ಅದನ್ನು ಶಿಫಾರಸು ಮಾಡಿರುವುದು. ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ  ಈಕೆ ಈ ಉತ್ಪನ್ನವನ್ನು ಪರಿಚಯಿಸುವ ವಿಡಿಯೊ ಹಂಚಿಕೊಂಡಿದ್ದಾಳೆ. ಅದರಲ್ಲೂ ಆಕೆ ಸ್ತ್ರೀಯ ಜನನಾಂಗವನ್ನು ಬಾಟಲಿ ಕ್ಯಾಪ್‌ಗೆ ಹೋಲಿಸಿದ್ದು, ಇನ್ನಷ್ಟು ಫನ್ನಿಯಾಗಿದೆ. 

ಇದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ. ಇದು ತಪ್ಪು ಮಾಹಿತಿ ಮತ್ತು ಹಾನಿಕಾರಕ ಎಂಬುದು ನೆಟಿಜನ್‌ಗಳ ಆಕ್ರೋಶ. ಅಷ್ಟಕ್ಕೂ ಈಕೆ  ಯಾರು ಅಂದರೆ ಹಿಂದಿ ಬಿಗ್‌ಬಾಸ್ ಸ್ಪರ್ಧಿ, ಕಿರುತೆರೆ ನಟಿ ನಿಯಾ ಶರ್ಮಾ. ನಿಯಾ ಶರ್ಮಾ ಜಾಹೀರಾತಿನ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ, “ಕೆಲವೊಮ್ಮೆ ಪರಿಪೂರ್ಣ ಫಿಟ್ ಆಗಿರುವುದನ್ನು ಬಯಸುತ್ತೇವೆ. ಅದು ನಿಮ್ಮ ನೆಚ್ಚಿನ ಉಡುಗೆಯಾಗಿರಬಹುದು ಅಥವಾ ಅದಕ್ಕಿಂತ ಹೆಚ್ಚು ಆಪ್ತವಾದದ್ದಾಗಿರಬಹುದು. ಪರಿಪೂರ್ಣ ‘ಬಿಗಿ’ಯನ್ನು ಅನುಭವಿಸಿ” ಎಂದು ವಿಡಿಯೊದಲ್ಲಿ ಅವರು ಉತ್ಪನ್ನವನ್ನು ಪರಿಚಯಿಸಿದ್ದಾರೆ.

Tap to resize

Latest Videos

undefined

ವಿಡಿಯೊದ ಆರಂಭದಲ್ಲಿ ಅವರು ಉಡುಪು, ಬಾಟಲ್ ಕ್ಯಾಪ್‌ನಿಂದ ಹಿಡಿದು ಶೂ ಲೇಸ್‌ಗಳವರೆಗೆ ‘ಸಡಿಲ’ ವಸ್ತುಗಳೊಂದಿಗೆ ಹೆಣಗಾಡುತ್ತಿರುವುದನ್ನು ಕಾಣಬಹುದು. ಸ್ವಲ್ಪ ಹೊತ್ತಿನ ಬಳಿಕ ಅವರು ಸಂಪೂರ್ಣ ಫಿಟ್‌ ಆಗಿರುವ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಾರೆ. “ಅದನ್ನು ಸರಿಯಾಗಿ ಮಾಡಿ, ಅದನ್ನು ಬಿಗಿಯಾಗಿರಿಸಿಕೊಳ್ಳಿ” ಎಂದು ಹೇಳುತ್ತಾರೆ.

ಈ ವಿಡಿಯೊ ಬಗ್ಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನು ಅಸಹ್ಯಕರ ಮತ್ತು ತಪ್ಪಾದ ಮಾಹಿತಿ ಎಂದು ಕರೆದಿದ್ದಾರೆ. “ನಿಯಾ ಶರ್ಮಾ ಅವರ ಮಹಿಳೆಯರ ಜನನಾಂಗವನ್ನು ಬಿಗಿಗೊಳಿಸುವ ಉತ್ಪನ್ನಗಳ ಪ್ರಚಾರವು ಗಂಭೀರ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. ಸಾರ್ವಜನಿಕ ವ್ಯಕ್ತಿಯಾಗಿ ಅವರಿಗೆ ಅನೇಕ ಜವಾಬ್ದಾರಿಗಳಿವೆ. ಇಂತಹ ಉತ್ಪನ್ನಗಳನ್ನು ಅನುಮೋದಿಸುವ ಮೂಲಕ ಅವರು ಸಾರ್ವಜನಿಕರ ದಾರಿ ತಪ್ಪಿಸುತ್ತಿದ್ದಾರೆ. ಪ್ರಭಾವಶಾಲಿ ವ್ಯಕ್ತಿಗಳು ತಮ್ಮ ಅಭಿಮಾನಿಗಳ ಯೋಗಕ್ಷೇಮಕ್ಕಿಂತ ಲಾಭಕ್ಕೆ ಆದ್ಯತೆ ನೀಡುವುದು ಖೇದಕರʼʼ ಎಂದು ಹಲವರು ಟೀಕಿಸಿದ್ದಾರೆ.

ಬಾಲಿವುಡ್‌ನಲ್ಲಿ 1 ಕೋಟಿ ಸಂಭಾವನೆ ಪಡೆದ ಈ ಮೊದಲ ನಟಿ, ಅಮಿತಾಭ್‌ ಜೊತೆ ನಟಿಸೋಲ್ಲ ಎಂದಿದ್ದಳು!
 

“ದಯವಿಟ್ಟು ಈ ಉತ್ಪನ್ನಗಳ ಪ್ರಚಾರ ಮಾಡುವುದನ್ನು ನಿಲ್ಲಿಸಿ. ವೈದ್ಯರ ಪ್ರಕಾರ ಮಾತ್ರೆಗಳಿಂದ ಸ್ತ್ರೀ ಜನನಾಂಗವನ್ನು ಬಿಗಿಯಾಗಲು ಸಾಧ್ಯವಿಲ್ಲ” ಎಂದು ಒಬ್ಬರು ಬರೆದುಕೊಂಡಿದ್ದಾರೆ. “ಭಯಾನಕ. ಇದು 2024. ಹಾಗಿದ್ದೂ ಈ ಅವೈಜ್ಞಾನಿಕ ಸಂಗತಿಯನ್ನು ಹರಡಲಾಗುತ್ತಿದೆ. ಮೊದಲು ಜನನಾಂಗ ಬಿಳಿಗೊಳಿಸುವ ಕ್ರೀಮ್ ಮತ್ತು ಈಗ ಇದುʼʼ ಎಂದು ಮತ್ತೊಬ್ಬರು ತಿಳಿಸಿದ್ದಾರೆ.

ನಟ ಪ್ರಭಾಸ್ ಮದುವೆ ಬಗ್ಗೆ ಒಳ್ಳೆ ಸುದ್ದಿ ಹೇಳಿದ ಅಜ್ಜಿ ಶ್ಯಾಮಲಾ ದೇವಿ!
 

ಕೆಲವರು ನಟಿಯಾಗಿ ಅವರು ಹೊಂದಿರುವ ಜವಾಬ್ದಾರಿಯನ್ನು ನೆನಪಿಸಿದ್ದಾರೆ. “ನಾನು ನಿಮ್ಮ ಅಭಿಮಾನಿಯಾಗಿದ್ದೆ. ಆದರೆ ನೀವು ಈ ರೀತಿಯ ಉತ್ಪನ್ನಗಳನ್ನು ಪ್ರಚಾರ ಮಾಡುತ್ತೀರಾ ಎನ್ನುವುದು ತಿಳಿದಿರಲಿಲ್ಲ. ಸಾಮಾನ್ಯ ಹುಡುಗಿಯನ್ನು ದುರ್ಬಲ ಸಂದೇಶಗಳಿಂದ ಅವಮಾನಿಸುತ್ತಿದ್ದೀರಿ” ಎಂದು ಅಭಿಮಾನಿಯೊನ್ನರು ಹೇಳಿದ್ದಾರೆ. “ನಿಮಗೆ ನಾಚಿಕೆಯಾಗಬೇಕು. ಇದು ಕರುಣಾಜನಕ. ತಕ್ಷಣವೇ ಇವರನ್ನು ಅನ್ ಫಾಲೋ ಮಾಡಿ” ಎಂದು ಮಗದೊಬ್ಬರು ಕರೆ ನೀಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಆ ಮೂಲಕ ನಿಯಾ ಶರ್ಮಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

click me!