4 ಕೈಕಾಲಿದ್ದ ಮಗುವಿನ ಚಿಕಿತ್ಸೆಗೆ ನೆರವಾದ ಸೋನು ಸೂದ್: ರಿಯಲ್ ಹೀರೋ ಕೆಲಸಕ್ಕೆ ಮೆಚ್ಚುಗೆಯ ಮಹಾಪೂರ

By Shruiti G Krishna  |  First Published Jun 10, 2022, 4:49 PM IST

ಸೋನು ಸೂದ್ ಚೌಮುಖಿ ಕುಮಾರಿ (Chaumukhi Kumari)ಎನ್ನುವ ಪುಟ್ಟ ಬಾಲಕಿಗೆ ಸಹಾಯ ಹಸ್ತ ಚಾಚಿದ್ದಾರೆ. ಬಿಹಾರ್ ಮೂಲದ ಬಾಲಕಿ ಹುಟ್ಟುವಾಗಲೇ 4 ಕೈ ಮತ್ತು 4 ಕಾಲು ಇತ್ತು. ತುಂಬಾ ಕಷ್ಟ ಪಡುತ್ತಿದ್ದ ಬಾಲಕಿಯ ಸಹಾಯಕ್ಕೆ ನಿಂತಿದ್ದಾರೆ ಸೋನು ಸೂದ್. ಪುಟ್ಟ ಬಾಲಕಿಗೆ ಸರ್ಜರಿ ಮಾಡಿಸಿದ್ದು ಬಾಲಕಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. 


ನಟ, ರಿಯಲ್ ಹೀರೋ ಸೋನು ಸೂದ್(Sonu Sood)ತನ್ನ ಸಮಾಜಮುಖಿ ಕೆಲಸದ ಮೂಲಕ ಅಭಿಮಾನಗಳ ಗಮನ  ಸೆಳೆಯುತ್ತಿರುತ್ತಾರೆ. ಕೊರೊನಾ ಸಮಯದಲ್ಲಿ ತನ್ನ ಸಮಾಜಮುಖಿ ಕೆಲಸ ಪ್ರಾರಂಭ ಮಾಡಿದ ನಟಿ ಸೋನು ಸೂದ್ ಕೊರೊನಾ ಕೊರೊನಾ ಬಳಿಕವೂ ತನ್ನ ಕೆಲಸ ಮುಂದುವರೆಸಿದ್ದಾರೆ. ಸಾವಿರಾರು ಜನರಿಗೆ ಸಹಾಯಹಸ್ತ ಚಾಚಿದ್ದಾರೆ. ಇಂದಿಗೂ ಸೋನು ಸೂದ್ ಕಷ್ಟ ಎಂದವರ ನೆರವಿಗೆ ಧಾವಿಸುತ್ತಾರೆ.  ಇದೀಗ ಸೋನು ಸೂದ್ ಚೌಮುಖಿ ಕುಮಾರಿ (Chaumukhi Kumari)ಎನ್ನುವ ಪುಟ್ಟ ಬಾಲಕಿಗೆ ಸಹಾಯ ಹಸ್ತ ಚಾಚಿದ್ದಾರೆ. ಬಿಹಾರ್ ಮೂಲದ ಬಾಲಕಿ ಹುಟ್ಟುವಾಗಲೇ 4 ಕೈ ಮತ್ತು 4 ಕಾಲು ಇತ್ತು. ತುಂಬಾ ಕಷ್ಟ ಪಡುತ್ತಿದ್ದ ಬಾಲಕಿಯ ಸಹಾಯಕ್ಕೆ ನಿಂತಿದ್ದಾರೆ ಸೋನು ಸೂದ್. ಪುಟ್ಟ ಬಾಲಕಿಗೆ ಸರ್ಜರಿ ಮಾಡಿಸಿದ್ದು ಬಾಲಕಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. 

ಈ ಬಗ್ಗೆ  ಸ್ವತಃ ಸೋನು ಸೂದ್ ಬಹಿರಂಗ ಪಡಿಸಿದ್ದಾರೆ. ನಟ ಸೋನು ಸೂದ್ ಬಾಲಕಿಯ ಮೊದಲಿನ ಪೋಟೋ ಮತ್ತು ಸರ್ಜರಿ ಬಳಿಕದ ಫೋಟೋವನ್ನು ಶೇರ್ ಮಾಡಿದ್ದಾರೆ. ಫೋಟೋ ಶೇರ್ ಮಾಡಿ, 'ನನ್ನ ಮತ್ತು ಚೌಮುಕಿ ಕುಮಾರಿಯ ಜರ್ನಿ ಈಗ ಯಶಸ್ವಿಯಾಗಿದೆ. ಚೌಮುಖಿ 4 ಕಾಲು ಮತ್ತು 4 ಕೈ ಹೊಂದಿದ್ದಳು. ಬಿಹಾರದ ಪುಟ್ಟ ಹಳ್ಳಿಯಲ್ಲಿ ಜನಿಸಿದ್ದರು. ಇದೀಗ ಯಶಸ್ವಿ ಸರ್ಜರಿ ಬಳಿಕ ಮನೆಗೆ ವಾಪಾಸ್ ಆಗುತ್ತಿದ್ದಾರೆ' ಎಂದು ಹೇಳಿದ್ದಾರೆ. 

ಸಹಾಯ ಮಾಡಲು ಹಣ ಎಲ್ಲಿಂದ ಬರುತ್ತೆ ಎಂದು ಸಂಪೂರ್ಣ ಮಾಹಿತಿ ಬಹಿರಂಗ ಪಡಿಸಿದ ನಟ ಸೋನು ಸೂದ್

Tap to resize

Latest Videos

ಮೂಲಗಳ ಪ್ರಕಾರ ಸೋನು ಸೂದ್ ಪುಟ್ಟ ಬಾಲಕಿ ಚೌಮುಖಿಯನ್ನು ಸೂರತ್ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸಿದ್ದಾರೆ. ಸತತ 7 ಗಂಟೆಯ ಸರ್ಜರಿ ಮಾಡಲಾಗಿದ್ದು ಸಕ್ಸಸ್ ಆಗಿದೆ. ಸೋನು ಸೂದ್ ಮಹತ್ತರ ಕೆಲಸಕ್ಕೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.  ನಟ ಸುನಿಲ್ ಶೆಟ್ಟಿ, ಪೂಜಾ ಬಾತ್ರ, ರಿಧಿಮಾ ಪಂಡಿತ್, ಇಶಾ ಗುಪ್ತಾ ಸೇರಿದಂತೆ ಅನೇಕರು ಹಾರ್ಟ್ ಇಮೋಜಿ ಹಾಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಅಭಿಮಾನಿಗಳು ಕಾಮೆಂಟ್ ಮಾಡಿ, ಭೂಮಿಯ ಮೇಲಿನ ಶೇಷ್ಠ ವ್ಯಕ್ತಿ. ಪ್ರತಿಭಾರಿ  ಅಭಿಮಾನಿಗಳ ಹೃದಯಗೆಲ್ತಾ ಇರುತ್ತೀರಿ, ದೇವರು ಯಾವಾಗಲು ಖುಷಿಯಾಗಿ ಇಟ್ಟಿರಲಿ ಎಂದು ಹೇಳುತ್ತಿದ್ದಾರೆ.

 
 
 
 
 
 
 
 
 
 
 
 
 
 
 

A post shared by Sonu Sood (@sonu_sood)


South Cine Industry ವಿರುದ್ಧಎಲ್ಲರೂ ಹರಿಹಾಯ್ದರೆ, ಸೋನು ಸೋದ್ ಮಾತ್ರ ಉಲ್ಟಾ!

 

ನಟ ಸೋನು ಸೂದ್, ಸಮಾಜಿಕ ಕೆಲಸಗಳ ಜೊತೆಗೆ ಸಿನಿಮಾ ಮತ್ತು ರಿಯಾಲಿಟಿ ಶೋಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಸದ್ಯ ಸೋನು ಎಂಟಿವಿ ರೋಡೀಸ್ ನಿರೂಪಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೇ ಸೋನು ಸೂದ್ ಕೊನೆಯದಾಗಿ ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಜೂನ್ 3ರಂದು ರಿಲೀಸ್ ಆಗಿದೆ. ರಾಜಾ ಪೃಥ್ವಿರಾಜ್ ಪಾತ್ರದಲ್ಲಿ ನಟ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಭಾರಿ ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾ ಬಾಕ್ಸ್ ‌ನಲ್ಲಿ ನಿರೀಕ್ಷೆಯ ಕಲೆಕ್ಷನ್ ಮಾಡುವಲ್ಲಿ ವಿಫಲವಾಗಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ವಿಶ್ವ ಸುಂದರಿ ಮಾನುಶಿ ಚಿಲ್ಲರ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ಮೊದಲ ಬಾರಿಗೆ ಮಾನುಷಿ ತೆರೆಮೇಲೆ ಮಿಂಚಿದ್ದಾರೆ. 
           
 

click me!