Latest Videos

ಪತ್ನಿ ನಯನಾತಾರಾಗೆ ದುಬಾರಿ ಉಡುಗೊರೆ ನೀಡಿದ ವಿಘ್ನೇಶ್ ಶಿವನ್; ಗಿಫ್ಟ್‌ನ ಬೆಲೆ ಎಷ್ಟು?

By Shruiti G KrishnaFirst Published Jun 10, 2022, 3:24 PM IST
Highlights

ದುಬಾರಿ ಮದುವೆ ಮೂಲಕ ಸದ್ದು ಮಾಡುತ್ತಿರುವ ನಯನತಾರಾ ಜೋಡಿ ಒಬ್ಬರಿಗೊಬ್ಬರು ನೀಡಿರುವ ಗಿಫ್ಟ್ ಕೂಡ ಅಷ್ಟೆ ದುಬಾರಿಯಾಗಿದೆ. ಹೌದು, ಮದುವೆಗೆ ವಿಘ್ನೇಶ್ ಶಿವನ್ ಪತ್ನಿ ನಯನತಾರಾಗೆ ದುಬಾರಿ ಉಡುಗೊರೆ ನೀಡಿದ್ದಾರೆ.  ಪ್ರೀತಿಯ ಪತ್ನಿಗೆ ವಿಘ್ನೇಶ್ ಶಿವನ್ ದುಬಾರಿ ಬೆಲೆಯ ಆಭರಣವನ್ನು ಗಿಪ್ಟ್ ಆಗಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ(Nayanthara) ಮತ್ತು ವಿಘ್ನೇಶ್ ಶಿವನ್(Vignesh shivan) ಮದುವೆ ಅದ್ದೂರಿಯಾಗಿ ನೆರವೇರಿತು. ಜೂನ್ 9ರಂದು ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ  ವಿಘ್ನೇಶ್ ಶಿವನ್, ನಯನತಾರಾಗೆ ಮಾಂಗಲ್ಯ ಧಾರಣೆ ಮಾಡಿದರು.  ಇಬ್ಬರ ಮದುವೆ ಸಮಾರಂಭಕ್ಕೆ ಗಣ್ಯಾತಿಗಣ್ಯರು ಹಾಜರಿದ್ದು ನವಜೋಡಿಗೆ ಶುಭಹಾರೈಸಿದ್ದರು. ಗ್ರ್ಯಾಂಡ್ ಆಗಿ ನಡೆದ ಮದುವೆ ಸಮಾರಂಭದಲ್ಲಿ ಇಬ್ಬರು ಕುಟುಂಬದವರು, ಆಪ್ತರು ಮತ್ತು ಚಿತ್ರರಂಗದ ಗಣ್ಯರು ಹಾಜರಿದ್ದರು. ನಯನತಾರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಲೈರಲ್ ಆಗಿದೆ. 

ಅಂದಹಾಗೆ ನಯನತಾರಾ ಮದುವೆಯಲ್ಲಿ ದಕ್ಷಿಣ ಭಾರತದ ಖ್ಯಾತ ಕಲಾವಿದರಾದ ರಜನಿಕಾಂತ್, ದಳಪತಿವಿಜಯ್ ಸೇರಿದಂತೆ ಅನೇಕ ಕಲಾವಿದರು ಭಾಗಿಯಾಗಿದ್ದರು. ಬಾಲಿವುಡ್ ಸ್ಟಾರ್ ಶಾರುಖ್ ಖಾನ್, ಬೋನಿ ಕಪೂರ್ ಸೇರಿದಂತೆ ಅನೇಕ ಗಣ್ಯರು ಮದುವೆಯಲ್ಲಿ ಭಾಗಿಯಾಗಿ ನಯನತಾರಾ ಮತ್ತು ವಿಘ್ನೇಶ್ ಜೋಡಿಗೆ  ಶುಭಹಾರೈಸಿದರು. 

ನಯನತಾರಾ ಕೆಂಪು ಸೀರೆ ಮತ್ತು ರಾಯಲ್ ಜ್ಯುವೆಲ್ಲರಿಯಲ್ಲಿ ಕಂಗೊಳಿಸುತ್ತಿದ್ದರು. ವಿಘ್ನೇಶ್ ಶಿವನ್ ಬಿಳಿ ಮತ್ತು ಗೋಲ್ಡ್ ಬಣ್ಣದ ಪಂಚೆ, ಕುರ್ತಾ ಮತ್ತು ಶಾಲ್ ಧರಿಸಿದ್ದರು. ಇಬ್ಬರ ಮದುವೆ ಲುಕ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಯನತಾರಾ ಮದುವೆಯಲ್ಲಿ ಹೈದರಾಬಾದ್ ಟಚ್ ನೀಡಲಾಗಿತ್ತು.  ಹೌದು, ಡ್ರೆಸ್ ಜೊತೆಗೆ ನಯನತಾರಾ ಧರಿಸಿದ್ದ ಜ್ಯುವೆಲ್ಲರಿ ಕೂಡ ಆಕರ್ಷಕವಾಗಿತ್ತು. ಬಹು ಎಳೆಯ ನೆಕ್ಲೆಸ್, ಮಾಂಗ್ ಟಿಕಾ, ದೊಡ್ಡದಾದ ಇಯರ್ ಸ್ಟಡ್ ಮತ್ತು ಬಳೆ ಧರಿಸಿದ್ದರು. ಇದು ಹೈದರಾಬಾದ್ ಸಾಂಪ್ರದಾಯಿಕ ಜ್ಯುವೆಲ್ಲರಿಯಾಗಿದ್ದು ರಾಜಾ ಮನೆತನದವರು ಧರಿಸುವ ಸಟ್ಲಡಾ ಹಾರ ಆಗಿದೆ. ಏಳು ಎಳೆಯ ಈ ಜ್ಯುವೆಲ್ಲರಿಯನ್ನು ಮುತ್ತು, ವಜ್ರ ಮತ್ತು ವಿವಿದ ದುಬಾರಿ ಸ್ಟೋನ್‌ಗಳನ್ನು ಬಳಸಿ ಮಾಡಲಾಗಿದೆ. ಇದು ಹೈಜರಾಬಾದ್ ನಿಜಾಮರು ಮತ್ತು ನವಾಬಿ ಪರಂಪರೆಯಾಗಿದ್ದು ಇಂದಿಗೂ ಕ್ಲಾಸಿಕ್ ಆಗಿ ಉಳಿದಿದೆ. 

ಹೈದರಾಬಾದ್ ನಿಜಾಮರ ಲುಕ್‌ನಲ್ಲಿ ಕಂಗೊಳಿಸಿದ ನಯನತಾರಾ; ಕೆಂಪು ಸೀರೆ-ಜ್ಯುವೆಲ್ಲರಿಯ ವಿಶೇಷತೆ ಇಲ್ಲಿದೆ

ಪತ್ನಿಗೆ ವಿಘ್ನೇಶ್ ಕೊಟ್ಟ ಗಿಫ್ಟ್ ಏನು? 

ದುಬಾರಿ ಮದುವೆ ಮೂಲಕ ಸದ್ದು ಮಾಡುತ್ತಿರುವ ನಯನತಾರಾ ಜೋಡಿ ಒಬ್ಬರಿಗೊಬ್ಬರು ನೀಡಿರುವ ಗಿಫ್ಟ್ ಕೂಡ ಅಷ್ಟೆ ದುಬಾರಿಯಾಗಿದೆ. ಹೌದು, ಮದುವೆಗೆ ವಿಘ್ನೇಶ್ ಶಿವನ್ ಪತ್ನಿ ನಯನತಾರಾಗೆ ದುಬಾರಿ ಉಡುಗೊರೆ ನೀಡಿದ್ದಾರೆ.  ಪ್ರೀತಿಯ ಪತ್ನಿಗೆ ವಿಘ್ನೇಶ್ ಶಿವನ್ ದುಬಾರಿ ಬೆಲೆಯ ಆಭರಣವನ್ನು ಗಿಪ್ಟ್ ಆಗಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಯನತಾರಾ ಮದುವೆಗೆ ಧರಿಸಿದ್ದ ಅಭರಣವನ್ನು ವಿಘ್ನೇಶ್ ಶಿವನ್ ಗಿಫ್ಟ್ ನೀಡಿದ್ದು ಎನ್ನಲಾಗಿದೆ. ಒಟ್ಟು  3 ರಿಂದ 3.5 ಕೋಟಿ ಬೆಲೆಬಾಲು ಒಡವೆಯನ್ನು ಧರಿಸಿದ್ದರು.  ಇನ್ನು 5 ಕೋಟಿ ರೂಪಾಯಿಯ ರಿಂಗ್ ಅನ್ನು ವಿಘ್ನೇಶ್ ಶಿವನ್ ಉಡುಗೊರೆಯಾಗಿ ನೀಡಿದ್ದಾರೆ.  ನಯನತಾರಾ ಕೂಡ ಪತಿ ವಿಘ್ನೇಶ್ ಶಿವನ್‌ಗೆ ಭರ್ಜರಿ ಗಿಪ್ಟ್ ನೀಡಿದ್ದಾರೆ. 20  ಕೋಟಿ ಬೆಲೆಬಾಳುವ ಬಂಗ್ಲೆಯನ್ನು ಗಿಫ್ಟ್ ನೀಡಿದ್ದಾರೆ ಎಂದು ವರದಿಯಾಗಿದೆ. 

ಮದುವೆ ವಿಡಿಯೋನಾ ಓಟಿಟಿಗೆ ಸೇಲ್‌ ಮಾಡಿಬಿಟ್ರಾ ನಯನತಾರಾ?

ನಯನತಾರಾ ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶಾರುಖ್ ಖಾನ್ ನಾಯಕನಾಗಿ ಕಾಣಿಸಿಕೊಂಡಿರುವ ಜವಾನ್ ಸಿನಿಮಾದಲ್ಲಿ ನಯನತಾರಾ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಯನತಾರಾ ಮದುವೆಯಲ್ಲಿ ಶಾರುಖ್ ನಿರ್ದೇಶಕ ಅಟ್ಲೀ ದಂಪತಿ ಜೊತೆ ಕ್ಯಾಮರಾಗೆ ಪೋಸ್ ನೀಡಿದ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ಮದುವೆ ಬಳಿಕವೂ ನಯನತಾರಾ ಸಿನಿಮಾದಲ್ಲಿ ನಟಿಸಲಿದ್ದು ಇನ್ನಷ್ಟು ಬ್ಯುಸಿಯಾಗಲಿದ್ದಾರೆ.  

 

click me!