ಸಲ್ಮಾನ್ ಖಾನ್ ಗೆ ಬೆದರಿಕೆ ಪ್ರಕರಣದಲ್ಲಿ ಭಾರೀ ಸುದ್ದಿ ಬಹಿರಂಗವಾಗಿದೆ. ಸಲ್ಮಾನ್ ಖಾನ್ ಗೆ ಬಂದಿರುವ ಬೆದರಿಕೆ ಪತರದ ಹಿಂದಿನ ಸೂತ್ರಧಾರ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಎನ್ನುವುದು ಬಹುತೇಕ ಖಚಿತವಾಗಿದೆ. ಮೂಲಗಳ ಪ್ರಕಾರ, ಈ ಗ್ಯಾಂಗ್ ಬಾಲಿವುಡ್ ನಲ್ಲೂ ತನ್ನ ಕಾರ್ಯಭಾರವನ್ನು ಆರಂಭಿಸುವ ನಿಟ್ಟಿನಲ್ಲಿ ಈ ಸಾಹಸ ಮಾಡಿತ್ತು ಎನ್ನಲಾಗಿದೆ.
ಮುಂಬೈ (ಜೂನ್ 10): ಸಲ್ಮಾನ್ ಖಾನ್ ಗೆ (Salman Khan) ಜೀವ ಬೆದರಿಕೆ ಪತ್ರ (death Threat Letter ) ಬಂದಿರುವ ವಿಚಾರದಲ್ಲಿ ಪ್ರಮುಖ ಮಾಹಿತಿ ಬಹಿರಂಗವಾಗಿದೆ. ಜೀವ ಬೆದರಿಕೆ ನೀಡಿದ ಪ್ರಕರಣದಲ್ಲಿ ಸಿಧು ಮೂಸೆವಾಲಾ (Sidhu moose wala) ಹತ್ಯೆಯಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನೇರವಾಗಿ ಭಾಗಿಯಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಈ ಬೆದರಿಕೆ ಪತ್ರದ ಮೂಲಕ ಬಾಲಿವುಡ್ ನಲ್ಲಿ ತಮ್ಮ ನೆಲೆ ಸ್ಥಾಪಿಸಿಕೊಳ್ಳಲು ಲಾರೆನ್ಸ್ ಬಿಷ್ಣೋಯಿ (lawrence bishnoi) ಗ್ಯಾಂಗ್ ಬಯಸಿತ್ತು. ಬಾಲಿವುಡ್ ನ ಅತಿದೊಡ್ಡ ಸ್ಟಾರ್ ಸಲ್ಮಾನ್ ಖಾನ್ ಗೆ ಬೆದರಿಕೆ ಒಡ್ಡಿದರೆ, ಇದರಿಂದ ಉಳಿದ ಸಣ್ಣ ಪುಟ್ಟ ನಟ-ನಟಿಯರೂ ಆತಂಕಕ್ಕೆ ಒಳಗಾಗುತ್ತಾರೆ. ಈ ಆತಂಕದ ಲಾಭ ಪಡೆದುಕೊಂಡು ನಟ-ನಟಿಯರಿಂದ ಹಣ ಸುಲಿಗೆ ಮಾಡುವ ಪ್ಲ್ಯಾನ್ ಅನ್ನು ಬಿಷ್ಣೋಯಿ ಗ್ಯಾಂಗ್ ಮಾಡಿತ್ತು ಎನ್ನುವ ಮಾಹಿತಿ ಹೊರಬಿದ್ದಿದೆ.
ಪೊಲೀಸ್ ಮೂಲಗಳ ಪ್ರಕಾರ, ಸೌರವ್ ಮಹಾಕಾಳ್ ಈ ವಿಚಾರ ತಿಳಿಸಿದ್ದು, ಬೆದರಿಕೆ ಪತ್ರದ ಹಿಂದಿರುವುದು ರಾಜಸ್ಥಾನದ ಹನುಮಾನ್ ಗಢದ ನಿವಾಸಿ ವಿಕ್ರಮ್ ಬ್ರಾರ್ (Vikram Brar) ಎಂದಿದ್ದಾರೆ. ವಿಕ್ರಮ್ ಬ್ರಾರ್, ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ (Goldy Brar) ಹಾಗೂ ಲಾರೆನ್ಸ್ ಬಿಷ್ಣೋಯಿಯ ಪರಮಾಪ್ತ ಎಂದು ಹೇಳಲಾಗಿದೆ. ಗೋಲ್ಡಿ ಹಾಗೂ ಲಾರೆನ್ಸ್ ಅವರ ಸೂಚನೆಯ ಮೇರೆಗೆ ವಿಕ್ರಮ್ ಬ್ರಾರ್, ಬೆದರಿಕೆ ಪತ್ರವನ್ನು ಪೂರ್ತಿ ಪ್ಲ್ಯಾನಿಂಗ್ ಅನ್ನು ಮಾಡಿದ್ದ ಎಂದು ಹೇಳಲಾಗಿದೆ.
ಬೆದರಿಕೆ ಪತ್ರವನ್ನು ಸಲ್ಮಾನ್ ಖಾನ್ ಗೆ ತಲುಪಿಸಬೇಕು ಎನ್ನುವ ಸಲುವಾಗಿ ರಾಜಸ್ಥಾನದಲ್ಲಿ ಮೂವರನ್ನು ಗುರುತಿಸಿ ಅವರಿಗೆ ಈ ಕೆಲಸವನ್ನು ವಿಕ್ರಮ್ ಬ್ರಾರ್ ನೀಡಿದ್ದ. ಸೌರವ್ ಮಹಾಕಾಳ್ (Sourav Mahakal) ಜೊತೆ ಈ ಮೂವರ ಭೇಟಿ ಮಹಾರಾಷ್ಟ್ರದ ಕಲ್ಯಾಣ್ ನಲ್ಲಿ ಆಗಿತ್ತು. ಸಲ್ಮಾನ್ ಖಾನ್ ವರೆಗೆ ಈ ಬೆದರಿಕೆ ಪತ್ರ ಹೇಗೆ ತಲುಪಬೇಕು ಎನ್ನುವ ನಿಟ್ಟಿನಲ್ಲಿ ಇಂಚಿಂಚೂ ಪ್ಲ್ಯಾನ್ ಅನ್ನು ಇಲ್ಲಿ ಮಾಡಲಾಗಿತ್ತು. ಬೆದರಿಕೆ ಪತ್ರ ನೇರವಾಗಿ ಅವರಿಗೆ ಮುಟ್ಟಿದರೆ, ಖಂಡಿತವಾಗಿ ದೊಡ್ಡ ಸುದ್ದಿ ಆಗುತ್ತದೆ. ಇಲ್ಲಿ ಆರಂಭವಾಗುವ ಭಯವೇ ಬಾಲಿವುಡ್ ನಲ್ಲಿ ಸುಲಿಗೆ ನಡೆಸಲು ಸಹಾಯ ಮಾಡುತ್ತದೆ ಎನ್ನುವುದನ್ನು ಗೋಲ್ಡಿ ಬ್ರಾರ್ ಹಾಗೂ ಲಾರೆನ್ಸ್ ಬಿಷ್ಣೋಯಿ ಅರ್ಥ ಮಾಡಿಕೊಂಡಿದ್ದರು.
ಸಿಧು ಮೂಸೆವಾಲಾ ಹತ್ಯೆಯ ಬಳಿಕ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡುವುದಾಗಿ ಇದ್ದ ಬೆದರಿಕೆ ಪತ್ರ ಸಲ್ಮಾನ್ ಅವರ ಮುಂಬೈನ ಅಪಾರ್ಟ್ ಮೆಂಟ್ ಗೆ ತಲುಪಿತ್ತು. ಆರಂಭದಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನ ಕೆಲಸ ಇದಾಗಿತ್ತು ಎಂದು ಊಹೆ ಮಾಡಲಾಗಿತ್ತಾದರೂ, ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ ಬಿಷ್ಣೋಯಿ ಗ್ಯಾಂಗ್ ನವರೇ ಇದರ ಹಿಂದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಲ್ಮಾನ್ ಖಾನ್ ಕೊಲೆಗೆ 4 ಲಕ್ಷ ಮೌಲ್ಯದ ರೈಫಲ್ ವ್ಯವಸ್ಥೆ ಮಾಡಿದ್ದ ಲಾರೆನ್ಸ್ ಬಿಷ್ಣೋಯಿ!
ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಬಂದಿರುವುದು ಇದೇ ಮೊದಲೇನಲ್ಲ. ಆದರೆ, ಲಾರೆನ್ಸ್ ಬಿಷ್ಣೋಯಿ ಬಂಧನದ ಬಳಿಕ ಸಲ್ಮಾನ್ ಖಾನ್ ಗೆ ಬಂದಿರುವ ಬೆದರಿಕೆ ಕರೆಗಳು ನಿಜವಾದವು ಎನ್ನುವ ಮಾಹಿತಿ ಗೊತ್ತಾಗಿದೆ. ಇದರ ಬೆನ್ನಲ್ಲಿಯೇ ಮುಂಬೈ ಪೊಲೀಸ್ (Mumbai Police) ಸಲ್ಮಾನ್ ಖಾನ್ ಹಾಗೂ ಅವರ ಮನೆಗೆ ಸೂಕ್ತ ಭದ್ರತೆ ನೀಡಿದ್ದಾರೆ. ಲಾರೆನ್ಸ್ ಬಿಷ್ಣೋಯಿ ಈ ಹಿಂದೆ ಜೈಲಿನಲ್ಲಿದ್ದಾಗಲೇ ಸಲ್ಮಾನ್ ಖಾನ್ ರನ್ನು ಕೊಲೆ ಮಾಡುವ ಪ್ರಯತ್ನ ಮಾಡಿದ್ದರು. ಆದರೆ, ಇದು ಕೊನೆಯಲ್ಲಿ ವಿಫಲವಾಗಿತ್ತು.
IIFA ವೇದಿಕೆಯಲ್ಲಿ ಕಷ್ಟದ ದಿನ ನೆನೆದು ಕಣ್ಣೀರಿಟ್ಟ ನಟ ಸಲ್ಮಾನ್ ಖಾನ್; ವಿಡಿಯೋ ವೈರಲ್
ಶಾರ್ಪ್ ಶೂಟರ್ ನಿಂದ ಬಚಾವ್ ಆಗಿದ್ದ ಸಲ್ಮಾನ್ ಖಾನ್: ಲಾರೆನ್ಸ್ ಬಿಷ್ಣೋಯಿ ಕಳಿಸಿದ್ದ ಗ್ಯಾಂಗ್ ನ ಶಾರ್ಪ್ ಶೂಟರ್ ದಾಳಿಯಿಂದ ಸಲ್ಮಾನ್ ಖಾನ್ ಸ್ವಲ್ಪದರಲ್ಲಿಯೇ ಬಚಾವ್ ಆಗಿದ್ದರು ಎನ್ನುವ ಮಾಹಿತಿಯೂ ಪ್ರಕಟವಾಗಿದೆ. ವರದಿಯ ಪ್ರಕಾರ, ಸಿಧು ಮೂಸೆವಾಲಾ ಅವರ ಭೀಕರ ಕೊಲೆ ಪ್ರಕರಣದ ಶಂಕಿತ ಆರೋಪಿಗಳಲ್ಲಿ ಒಬ್ಬರಾದ ಲಾರೆನ್ಸ್ ಬಿಷ್ಣೋಯ್ ಅವರು ಸಲ್ಮಾನ್ ಖಾನ್ ಅವರನ್ನು ಕೊಲ್ಲಲು, ಹಾಕಿ ಕೇಸಿಂಗ್‌ನಲ್ಲಿ ಅಡಗಿಸಿಟ್ಟಿದ್ದ ಸಣ್ಣ-ಬೋರ್ ಆಯುಧದೊಂದಿಗೆ ಶಾರ್ಪ್‌ಶೂಟರ್ ಅನ್ನು ಕಳುಹಿಸಿದ್ದರು. ಶಾರ್ಪ್‌ಶೂಟರ್‌ನನ್ನು ನಟನ ನಿವಾಸದ ಹೊರಗೆ ಇರಿಸಿದ್ದ ಎಂದು ವರದಿಯಾಗಿ. ಇನ್ನೇನು ಸಲ್ಮಾನ್ ಖಾನ್ ಮೇಲೆ ದಾಳಿ ಮಾಡಬೇಕು ಎನ್ನುವ ಹಂತದಲ್ಲಿ ಪೊಲೀಸ್ ಸಿಬ್ಬಂದಿಗೆ ಸಿಕ್ಕಿಬೀಳುವ ಭಯದಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದ ಎನ್ನುವ ಮಾಹಿತಿ ಬಹಿರಂಗವಾಗಿದೆ.