ಈ ರವಿಚಂದ್ರನ್ ಹೀರೋಯಿನ್ ದೇಶದ ಅತ್ಯಂತ ಶ್ರೀಮಂತ ನಟಿ! ಐಶ್, ಪ್ರಿಯಾಂಕ, ದೀಪಿಕಾ ಎಲ್ಲರ ಆಸ್ತಿ ಸೇರಿಸಿದ್ರೂ ಇವಳಷ್ಟಾಗಲ್ಲ!

By Bhavani Bhat  |  First Published Aug 30, 2024, 10:17 AM IST

ಹುರೂನ್ ಇಂಡಿಯಾ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದೆ. ವಿಶೇಷವಾಗಿ ಎದ್ದು ಕಾಣುತ್ತಿರುವುದು ಅತ್ಯಂತ ಶ್ರೀಮಂತ ನಟಿಯ ಹೆಸರು. ಟಾಪ್‌ನಲ್ಲಿರುವ ಈಕೆ ಕನ್ನಡದ ರವಿಚಂದ್ರನ್ ಹೀರೋಯಿನ್ ಆಗಿದ್ದಳು.


ಹುರೂನ್ ಇಂಡಿಯಾ ಶ್ರೀಮಂತರ ಪಟ್ಟಿಯ 2024ರ ಆವೃತ್ತಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ಇದೊಂದು ವಾರ್ಷಿಕ ಪಟ್ಟಿ. ಭಾರತದಲ್ಲಿನ ಅತ್ಯಂತ ಶ್ರೀಮಂತ ಜನರ ಹೆಸರುಗಳನ್ನು ಅವರ ಗಳಿಕೆಯ ಆಧಾರದ ಮೇಲೆ ಅವರ ಸಂಪತ್ತಿನ ಅಂದಾಜುಗಳೊಂದಿಗೆ ಸಂಗ್ರಹಿಸುತ್ತದೆ. ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಅವರಂತಹ ಬಿಲಿಯನೇರ್‌ಗಳು ಈ ಪಟ್ಟಿಯಲ್ಲಿ ಎಲ್ಲೆಲ್ಲಿದ್ದಾರೆ ಎಂಬುದು ಗೊತ್ತಾಗುತ್ತದೆ. ಹಲವಾರು ಎಂಟರ್‌ಟೇನ್‌ಮೆಂಟ್ ಸೆಲೆಬ್ರಿಟಿಗಳು ಸಹ ಪಟ್ಟಿಯ ಭಾಗವಾಗಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ ಭಾರತದ ಎಂಟರ್‌ಟೇನ್‌ಮೆಂಟ್ ಪ್ರಪಂಚದ ಶ್ರೀಮಂತ ಮಹಿಳೆಯ ಹೆಸರು. ಇದು ನಿಮ್ಮ ಹುಬ್ಬೇರಿಸದೇ ಇರದು. 

ಈ ಹೆಸರಿನಲ್ಲಿ ಅನೇಕ ವಿಶೇಷಗಳಿವೆ. ಈ ನಟಿ ದಶಕಗಳಿಂದ ಯಾವುದೇ ಸೂಪರ್ ಹಿಟ್ ಫಿಲಂ ಅನ್ನು ಕೊಟ್ಟಿಲ್ಲ. ಹಲವು ವರ್ಷಗಳಿಂದ ನಟಿಸಿಯೂ ಇಲ್ಲ. ಗಲ್ಲಾಪೆಟ್ಟಿಗೆಯಲ್ಲಿ ಇವಳ ಹೆಸರು ಈಗ ಓಡುವ ಕುದುರೆ ಅಲ್ಲ. ಆದರೂ ಭಾರತದ ಶ್ರೀಮಂತ ನಟಿ! ಇನ್ನೂ ಹೇಳಬಹುದಾದರೆ ಐಶ್ವರ್ಯ ರೈ, ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ ಮುಂತಾದವರ ಆಸ್ತಿ ಮೌಲ್ಯವನ್ನೆಲ್ಲಾ ಒಟ್ಟುಗೂಡಿಸಿದರೂ ಈಕೆಯ ಶ್ರೀಮಂತಿಕೆಗೆ ಹತ್ತಿರವೂ ಬರುವುದಿಲ್ಲ! ಅಂದ ಹಾಗೆ, ಈಕೆ ನಮ್ಮ ಕನ್ನಡದಲ್ಲಿ ರವಿಚಂದ್ರನ್ ಅವರ ಫಿಲಂನಲ್ಲಿ ನಾಯಕಿಯಾಗಿ ನಟಿಸಿದ್ದವಳು! 

Tap to resize

Latest Videos

undefined

ಇವಳು ಜೂಹಿ ಚಾವ್ಲಾ. ಇವಳ ಆಸ್ತಿ ಮೌಲ್ಯ 4600 ಕೋಟಿ ರೂ. ಜೂಹಿ ಈಗ ಆರಾಮವಾಗಿ ಭಾರತದ ಶ್ರೀಮಂತ ನಟಿ ಮತ್ತು ವಿಶ್ವದ ಶ್ರೀಮಂತರಲ್ಲಿ ಒಬ್ಬಳು. ಕನ್ನಡದಲ್ಲಿ ರವಿಚಮದ್ರನ್ ಜೊತೆ ಪ್ರೇಮಲೋಕ, ಕಿಂದರಿಜೋಗಿ, ಶಾಂತಿ ಕ್ರಾಂತಿ ಮೊದಲಾದ ಫಿಲಂಗಳಲ್ಲಿ ಹೀರೋಯಿನ್ ಆಗಿದ್ದವಳು. ನಂತರ ಬಾಲಿವುಡ್ ಹಾಗೂ ಸೌತ್ ಇಂಡಿಯಾ ಫಿಲಂ ಇಂಡಸ್ಟ್ರಿಯನ್ನು ಆಳಿದವಳು. 

1,000 ಕೋಟಿ ರೂ.ಗಿಂತ ಹೆಚ್ಚಿನ ನಿವ್ವಳ ಸಂಪತ್ತನ್ನು ಹೊಂದಿರುವ ಭಾರತೀಯರನ್ನು ಈ ಪಟ್ಟಿಯು ಲಿಸ್ಟ್  ಮಾಡುತ್ತದೆ. ಕಳೆದ ವರ್ಷ  220 ವ್ಯಕ್ತಿಗಳಿದ್ದ ಪಟ್ಟಿ ಈ ವರ್ಷ 1,539 ಜನರಿಗೆ ಬೆಳೆದಿದೆ. ನಟ ಶಾರುಖ್ ಖಾನ್ ಅವರು 7300 ಕೋಟಿ ರೂಪಾಯಿಗಳ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾನೆ. ಇದು ಭಾರತದ ಯಾವುದೇ ಸೆಲೆಬ್ರಿಟಿಯ ಮೌಲ್ಯಕ್ಕಿಂತ ಅತ್ಯಧಿಕವಾಗಿದೆ. ಅವನ ಬೆನ್ನಿನ ಹಿಂದೆಯೇ ಇರುವವಳು ಜೂಹಿ ಚಾವ್ಲಾ. ಯಾಕೆಂದರೆ ಈಕೆ ಶಾರುಖ್‌ನ ವ್ಯಾಪಾರದಲ್ಲಿ ಪಾಲುದಾರೆ ಮತ್ತು ಮಾಜಿ ಸಹನಟಿ ಕೂಡ.

90ರ ದಶಕದಲ್ಲಿ ಹಿಂದಿ ಚಿತ್ರರಂಗದ ಟಾಪ್ ನಟಿಯರಲ್ಲಿ ಜೂಹಿ ಕೂಡ ಒಬ್ಬಳು. ಖಯಾಮತ್ ಸೆ ಕಯಾಮತ್ ತಕ್‌ನೊಂದಿಗೆ ಈಕೆಯ ಚೊಚ್ಚಲ ಪ್ರವೇಶ. 90ರ ದಶಕದಲ್ಲಿ ಬೋಲ್ ರಾಧಾ ಬೋಲ್, ಡರ್, ಲೋಫರ್ ಮತ್ತು ಇಷ್ಕ್‌ನಂತಹ ಹಿಟ್‌ಗಳೊಂದಿಗೆ ಗಲ್ಲಾಪೆಟ್ಟಿಗೆಯನ್ನು ಆಳಿದಳು. ಆದರೆ 2000 ರ ನಂತರ ಜೂಹಿ ಚಲನಚಿತ್ರ ನಿರ್ಮಾಣದತ್ತ ಹಾಗೂ ಪೋಷಕ ಪಾತ್ರಗಳತ್ತ ತೆರಳಿದಳು. ಮೊದಲು ಡ್ರೀಮ್ಸ್ ಅನ್‌ಲಿಮಿಟೆಡ್ ಮತ್ತು ಈಗ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ನೊಂದಿಗೆ ಆಕೆ ಚಲನಚಿತ್ರ ನಿರ್ಮಾಣದಲ್ಲಿ ಶಾರುಖ್‌ನ ಪಾಲುದಾರರಾಗಿದ್ದಾಳೆ. 

2024 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣ ಭಾರತೀಯ ಟಾಪ್ 10 ತಾರೆಯರಲ್ಲಿ ಕನ್ನಡತಿಗೂ ಸ್ಥಾನ!

2009ರಲ್ಲಿ ಬಂದ ಲಕ್ ಬೈ ಚಾನ್ಸ್ ಫಿಲಂ ಈಕೆಯ ಕಟ್ಟಕಡೆಯ ಹಿಟ್ ಫಿಲಂ. ನಂತರ ಜೂಹಿ ಬಾಕ್ಸ್ ಆಫೀಸ್ ಹಿಟ್ ಅನ್ನು ಹೊಂದಿಲ್ಲ. ಆದರೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ನಲ್ಲಿನ ಹೂಡಿಕೆ ಮತ್ತು ನೈಟ್ ರೈಡರ್ಸ್ ಕ್ರಿಕೆಟ್ ಫ್ರಾಂಚೈಸ್‌ನ ಸಹ-ಮಾಲೀಕಳಾಗಿ ಆಕೆ ಶ್ರೀಮಂತಳಾಗಿದ್ದಾಳೆ. ಇವಳಿಗೆ ಹೋಲಿಸಿದರೆ ಐಶ್ವರ್ಯಾ ರೈ (ರೂ. 900 ಕೋಟಿ), ಪ್ರಿಯಾಂಕಾ ಚೋಪ್ರಾ (ರೂ. 850 ಕೋಟಿ), ಆಲಿಯಾ ಭಟ್ (ರೂ. 550 ಕೋಟಿ), ದೀಪಿಕಾ ಪಡುಕೋಣೆ (ರೂ. 400 ಕೋಟಿ), ಮತ್ತು ಕತ್ರಿನಾ ಕೈಫ್ (ರೂ. 240 ಕೋಟಿ) ಮುಂತಾದ ಭಾರತೀಯ ನಟಿಯರು ಬಡವರು. ಇವರ ಆಸ್ತಿ ಮೌಲ್ಯವೆಲ್ಲಾ ಸೇರಿಸಿದರೂ ಜೂಹಿಯಷ್ಟಾಗುವುದಿಲ್ಲ. ಆಮೇಲೆ ಭಾರತದ ಈ ಯಾವ ನಟಿಯರೂ ಹುರೂನ್ ಶ್ರೀಮಂತರ ಪಟ್ಟಿಗೆ ಸೇರಲಿಲ್ಲ.

11.6 ಲಕ್ಷ ಕೋಟಿ ನಿವ್ವಳ ಮೌಲ್ಯದೊಂದಿಗೆ ಶ್ರೀಮಂತ ಭಾರತೀಯನಾಗಿ ಮುಖೇಶ್ ಅಂಬಾನಿ ಸ್ಥಾನಕ್ಕೆ ಗೌತಮ್ ಅದಾನಿ ಬಂದು ಅಗ್ರಸ್ಥಾನದಲ್ಲಿ ಕೂತು ಅಚ್ಚರಿ ಮೂಡಿಸಿದ್ದಾರೆ. ಹಿಂಡೆನ್‌ಬರ್ಗ್ ರಿಸರ್ಚ್ ವರದಿಯಿಂದ ಉಂಟಾದ ನಷ್ಟವನ್ನು ಮರುಪಡೆಯುವ ಮೂಲಕ, ಗೌತಮ್ ಅದಾನಿ ಅವರ ಆಸ್ತಿಯ ನಿವ್ವಳ ಮೌಲ್ಯವು ಕಳೆದ ವರ್ಷ 95 ಪ್ರತಿಶತದಷ್ಟು ಏರಿಕೆಯಾಗಿ 11.6 ಲಕ್ಷ ಕೋಟಿ ರೂ.ಗೆ ತಲುಪಿದೆ. ಇದು ಮುಖೇಶ್ ಅಂಬಾನಿಯನ್ನು ರಿಪ್ಲೇಸ್ ಮಾಡಲು ಅದಾನಿಗೆ ಸಹಾಯ ಮಾಡಿತು ಎಂದು ವರದಿ ಹೇಳಿದೆ.

ಹಂಸಲೇಖ ವಿವಾದದ ಹೇಳಿಕೆ ನೀಡಿದ 'ಚಿಂತನಗಂಗಾ' ಪುಸ್ತಕ ಯಾರದು? ಅದರಲ್ಲೇನಿದೆ?
 

click me!