ನನ್​ ಗಂಡನೂ ನಿಮ್​ ಹಾಗೆ ಹೇಳ್ಬೋದು ಎನ್ನೋ ಮೂಲಕ ಮದ್ವೆ ಹಿಂಟ್​ ಕೊಟ್ರಾ ರಶ್ಮಿಕಾ ಮಂದಣ್ಣ?

By Suvarna News  |  First Published Jan 3, 2024, 5:58 PM IST

ನನ್​ ಗಂಡನೂ ನಿಮ್​ ಹಾಗೆ ಹೇಳ್ಬೋದು ಎನ್ನೋ ಮೂಲಕ ಮದ್ವೆ ಹಿಂಟ್​ ಕೊಟ್ರಾ ರಶ್ಮಿಕಾ ಮಂದಣ್ಣ? ಅಷ್ಟಕ್ಕೂ ಏನಿದು ಹಿಂಟ್​? ನಟಿ ಹೀಗೆ ಹೇಳಿದ್ದೇಕೆ? 
 


ಅನಿಮಲ್​ ಚಿತ್ರದ ಹಸಿಬಿಸಿ ದೃಶ್ಯದ ಬಳಿಕ ನಟಿ ರಶ್ಮಿಕಾ ಮಂದಣ್ಣ ಸಕತ್​ ಸುದ್ದಿಯಲ್ಲಿದ್ದಾರೆ. ನಟ ರಣಬೀರ್​ ಕಪೂರ್​ ಜೊತೆಗಿನ ಲಿಪ್​ಲಾಕ್​ ಸೇರಿದಂತೆ ಈ ಚಿತ್ರದಲ್ಲಿ ಇಂಟಿಮೇಟ್​ ಸೀನ್​ನಲ್ಲಿ ಕಾಣಿಸಿಕೊಂಡ ಬಳಿಕ ನಟಿಯ ಬೇಡಿಕೆ ಇನ್ನಷ್ಟು ಹೆಚ್ಚಾಗುತ್ತಿದೆ. ಯಾವ ಪಾತ್ರಕ್ಕಾದರೂ ಸೈ ಎನ್ನುವಂಥ ನಟನೆ ಮಾಡಿರುವ ರಶ್ಮಿಕಾ ಮಂದಣ್ಣ ಜೀವನದಲ್ಲಿ ಯಾರೋ ಎಂಟ್ರಿ ಕೊಟ್ಟ ಹಾಗಿದೆ. ನಿಗೂಢ ಪೋಸ್ಟ್​ ಹಾಕುವ ಮೂಲಕ ನಟಿ, ಅಭಿಮಾನಿಗಳ ತಲೆಗೆ ಈಚೆಗೆ ಹುಳು ಬಿಟ್ಟಿದ್ದರು. ರಶ್ಮಿಕಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ, ನನ್ನ ಲೈಫ್​ಗೆ ಎಂಟ್ರಿ ಕೊಟ್ಟಿರುವುದಕ್ಕೆ ಧನ್ಯವಾದ ಎಂದು ಹೇಳಲು ಬಯಸುತ್ತೇನೆ ಎಂಬ ಬರಹ ಇರುವ ಪೋಸ್ಟ್​ ಹಾಕಿದ್ದರು.  ಅಷ್ಟಕ್ಕೂ ನಟಿ ಈ ಪೋಸ್ಟ್​ ಹಾಕಿರುವುದು ನಟ ವಿಜಯ ದೇವರಕೊಂಡ ಅವರಿಗೆ ಎಂದು ಹೇಳಲಾಗುತ್ತಿದ್ದರೂ, ನಟಿಯ ಬದುಕಲ್ಲಿ ಬೇರೆ ಯಾರಾದ್ರೂ ಎಂಟ್ರಿ ಕೊಟ್ಟಿರಬಹುದೇ ಎಂಬ ಊಹೆಯನ್ನೂ ಫ್ಯಾನ್ಸ್​ ಮಾಡಿಕೊಳ್ಳುತ್ತಿದ್ದಾರೆ.

ಅಷ್ಟಕ್ಕೂ, ವಿಜಯ್​ ದೇವರಕೊಂಡ ಅವರು ನಟಿ ರಶ್ಮಿಕಾ ಮಂದಣ್ಣ ಜೊತೆ ಡೇಟಿಂಗ್ (Dating) ಮಾಡುತ್ತಿದ್ದಾರೆ ಎನ್ನುವ ಸುದ್ದಿ ತುಂಬಾ ಹಳೆಯದ್ದು. ಇವರಿಬ್ಬರು ಎಲ್ಲಿಯೇ ಹೋದರೂ ಹೆಸರು ಥಳಕು ಹಾಕಿಕೊಳ್ಳುತ್ತಿದೆ. ಆದರೆ ಈ ಸುದ್ದಿಯನ್ನು ರಶ್ಮಿಕಾ ಒಮ್ಮೆ ಅಲ್ಲಗಳೆದಿದ್ದರು.  ನಾನು, ವಿಜಯ್ ದೇವರಕೊಂಡ ಉತ್ತಮ ಸ್ನೇಹಿತರು. ನನಗೆ ಫ್ರೆಂಡ್ಸ್ ಸರ್ಕಲ್ ಇದೆ, ಅವರ ಜೊತೆಯೇ ನಾನು ಜಾಸ್ತಿ ಮಾತನಾಡ್ತೀನಿ, ತಿರುಗಾಡ್ತೀನಿ. ಅದರಲ್ಲೇನು ಎಂದು ಸ್ವಲ್ಪ ಗರಂ ಆಗಿದ್ದರು.  ಇವರಿಬ್ಬರೂ ನ್ಯೂಯಾರ್ಕ್​ಗೆ ಹೋಗಿದ್ದರು ಎನ್ನುವ ಸುದ್ದಿ ಬಹಳ ಸದ್ದು ಮಾಡಿದ್ದ ಬಗ್ಗೆಯೂ ಮಾತನಾಡಿದ್ದ ರಶ್ಮಿಕಾ  ನಾವು 10 ಜನರು ಒಟ್ಟಿಗೆ ಟ್ರಿಪ್ ಹೋಗ್ತೀವಿ. ಈಗ ಎಲ್ಲರೂ ಸ್ನೇಹಿತರ ಜೊತೆ ಟ್ರಿಪ್ ಹೋಗ್ತಾರೆ. ಅದರಲ್ಲೇನಿದೆ ಎಂದಿದ್ದರು. 

Tap to resize

Latest Videos

ಡ್ರಗ್ಸ್​ ಹೆಸರಲ್ಲಿ ಖ್ಯಾತ ನಟಿ ಅಂಜಲಿ ಪಾಟೀಲ್​ಗೆ 5.79 ಲಕ್ಷ ರೂ. ದೋಖಾ! ನಂಬಿ ಮೋಸ ಹೋಗಿದ್ದು ಹೇಗೆ?


ಆದರೆ ಇತ್ತೀಚೆಗೆ,  ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸೆಲೆಬ್ರಿಟಿ ಜ್ಯೋತಿಷಿ ಎಂದೇ ಖ್ಯಾತಿ ಪಡೆದಿರುವಂತಹ ವೇಣು ಸ್ವಾಮಿ ಈ ಜೋಡಿಯ ಬಗ್ಗೆ ಶಾಕಿಂಗ್ ಹೇಳಿಕೆಯನ್ನು ಕೊಟ್ಟಿದ್ದರು. ಸಂದರ್ಶನವೊಂದರಲ್ಲಿ, ವೇಣು ಸ್ವಾಮಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದು, ಈ ವಿಚಾರ ವೈರಲ್ ಆಗಿದೆ.  'ರಶ್ಮಿಕಾ ಹಾಗೂ ವಿಜಯ್ ದೇವರೊಂಡ  ಮದುವೆಯಾಗಲಿದ್ದಾರೆ. ಆದರೆ ವಿವಾಹವಾದ ಬಳಿಕ ಇಬ್ಬರೂ ದೂರಾಗಲಿದ್ದಾರೆ ಎಂಬುದು ಖಚಿತ. ವಿಜಯ್ ದೇವರಕೊಂಡ ಜೊತೆ ಮದುವೆಯಾದರೆ ವಿಚ್ಛೇದನ ಆಗಲಿದೆ ಎಂದು ನಾನು ನೇರವಾಗಿ ರಶ್ಮಿಕಾ ಮಂದಣ್ಣ ಅವರಿಗೆ ಹೇಳಿದ್ದೇನೆ. ಇದೇ ಕಾರಣಕ್ಕೆ ಅವರು ನನ್ನೊಂದಿಗೆ ಮಾತನಾಡುವುದು ಬಿಟ್ಟು, ನನ್ನ ಸಂಪರ್ಕ ಕಡಿದುಕೊಂಡಿದ್ದಾರೆ' ಎಂದು ತಿಳಿಸಿದ್ದರು. 

ಇಷ್ಟೆಲ್ಲಾ ಆದರೂ ರಶ್ಮಿಕಾ ಇದೀಗ ಮದುವೆಯಾಗುತ್ತಿದ್ದಾರೆ ಎನ್ನುವ ಇನ್ನೊಂದು ಹಿಂಟ್​ ಬಿಟ್ಟುಕೊಟ್ಟಿದ್ದಾರೆ.  ಅದೇನೆಂದರೆ,  ರಶ್ಮಿಕಾ ಅಭಿಮಾನಿಯೊಬ್ಬರು ಎಕ್ಸ್ ಖಾತೆಯಲ್ಲಿ  ರಶ್ಮಿಕಾ ಫೋಟೋ ಶೇರ್​ ಮಾಡಿಕೊಂಡಿದ್ದು, ಅದಕ್ಕೆ ಅವವರು,  'ನೀವು ನಮ್ಮ ನ್ಯಾಷನಲ್ ಕ್ರಶ್ ಮೇಡಂ..  ಮುಂದೊಂದು ದಿನ ನನಗೆ ನಿಮ್ಮಂತಹ ಹೆಂಡತಿ ಸಿಗುತ್ತಾಳೆ ಎಂದು ನಾನು ಭಾವಿಸುತ್ತೇನೆ' ಎಂದು ಬರೆದು ರಶ್ಮಿಕಾರಿಗೆ ಟ್ಯಾಗ್​ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಟಿ,  'ಓಹ್.. ನಾನು ಮದುವೆಯಾದಾಗ, ನನ್ನ ಪತಿ ಕೂಡ ನನ್ನನ್ನು ಅದ್ಭುತ ಹೆಂಡತಿ ಎಂದು ಭಾವಿಸುತ್ತಾರೆ' ಎಂದು ಕಮೆಂಟ್ ಮಾಡಿದ್ದಾರೆ. 

ರಶ್ಮಿಕಾ ಮಂದಣ್ಣ ಅವರ ಈ ಕಮೆಂಟ್​ ಸಕತ್​ ವೈರಲ್​ ಆಗುತ್ತಿದೆ. ರಶ್ಮಿಕಾ ಮದ್ವೆಯಾಗುವುದು ಗ್ಯಾರೆಂಟಿ ಎನ್ನಲಾಗುತ್ತಿದ್ದು, ಅದು ವಿಜಯ್​ ದೇವರಕೊಂಡನೋ ಅಥವಾ ಇನ್ನಾರೋ ಎಂದು ಕಾದು ನೋಡುತ್ತಿದ್ದಾರೆ. ರಶ್ಮಿಕಾ ಟಾಲಿವುಡ್​ಗೆ ಕಾಲಿಟ್ಟ ಮೇಲೆ ತೆರೆ ಮೇಲೆ ಪ್ರೀತಿ ಮುತ್ತಿನ ಮಳೆ ಸುರಿಸಿದ್ದು ವಿಜಯ್ ದೇವರಕೊಂಡ ಜತೆಗೆ ಹೆಚ್ಚು. ಪರದೆ ಮೇಲೆ ಮತ್ತು ಆಚೆ ರಶ್ಮಿಕಾ ವಿಜಯ್ ಕೆಮಿಸ್ಟ್ರಿ ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ. ನಿಜ ಜೀವನದಲ್ಲಿಯೂ ಸಾಕಷ್ಟು ದೇಶಗಳಲ್ಲಿ ಸುತ್ತಾಡಿ ಗುಟ್ಟಾಗಿ ಫೋಟೋನೂ ಶೇರ್​ ಮಾಡಿಕೊಂಡಿದೆ ಈ ಜೋಡಿ. ಪಾಪರಾಜಿಗಳ ಕೈಗೆ ಸಿಕ್ಕಿ ಬಿದ್ದದ್ದೂ ಆಗಿದೆ. 

ದೇವರ ದರ್ಶನಕ್ಕೂ ಬಿಡದ ಪಾಪರಾಜಿಗಳು: ಮಾಧುರಿ ದೀಕ್ಷಿತ್​- ಪತಿ ಶ್ರೀರಾಮ್​ ಸುಸ್ತೋ ಸುಸ್ತು!
 

click me!