ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಕರ್ನಾಟಕದ ಬೆಡಗಿ ರಶ್ಮಿಕಾ ಮಂದಣ್ಣ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ರಶ್ಮಿಕಾ ಧರಿಸಿರುವ ಡ್ರೆಸ್ ಟ್ರೋಲರ್ ಬಾಯಿಗೆ ಆಹಾರವಾಗಿದೆ. ರಶ್ಮಿಕಾ ಚಿಕ್ಕ ಡ್ರೆಸ್ ಅಭಿಮಾನಿಗಳಿಗೆ ಇಷ್ಟವಾದಂತಿಲ್ಲ.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಫೇಮಸ್ ಆಗ್ತಿದ್ದಂತೆ ಡ್ರೆಸ್ಚಿಕ್ಕದಾದಂತಿದೆ. ಸದಾ ಸುಂದರ ಉಡುಗೆಯಲ್ಲಿ ಕಾಣಿಸಿಕೊಳ್ಳುವ ರಶ್ಮಿಕಾ ಮಂದಣ್ಣ, ಆಗಾಗ ಚಿಕ್ಕ ಡ್ರೆಸ್ ಧರಿಸಿ ಟ್ರೋಲರ್ ಬಾಯಿಗೆ ಆಹಾರ ಆಗ್ತಾರೆ. ರಶ್ಮಿಕಾ ಮಂದಣ್ಣ ಹಳೆ ವಿಡಿಯೋ ಒಂದು ಮತ್ತೆ ವೈರಲ್ ಆಗಿದೆ. ಅದ್ರಲ್ಲಿ ರಶ್ಮಿಕಾ ಕಪ್ಪು ಬಣ್ಣದ ಚಿಕ್ಕ ಉಡುಗೆ ಧರಿಸಿದ್ದಾರೆ. ಬ್ಲಾಕ್ ಡ್ರೆಸ್ ನಲ್ಲಿ ಅವರು ಸ್ಟನ್ನಿಂಗ್ ಆಗಿ ಕಾಣಿಸ್ತಿದ್ದರೂ ಅಭಿಮಾನಿಗಳಿಗೆ ರಶ್ಮಿಕಾ ಈ ಲುಕ್ ಇಷ್ಟವಾದಂತಿಲ್ಲ. ರಶ್ಮಿಕಾ ಸೆಕ್ಸಿ ಡ್ರೆಸ್ಸನ್ನು ಅಭಿಮಾನಿಗಳು ಡಿಸ್ ಲೈಕ್ ಮಾಡಿದ್ದಾರೆ.
ಅವಾರ್ಡ್ (Award) ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರಶ್ಮಿಕಾ (Rashmika) ಈ ಡ್ರೆಸ್ ಧರಿಸಿದ್ದರು. ಅವರ ಈ ಹಳೆ ವಿಡಿಯೋ ಈಗ ಮತ್ತೆ ವೈರಲ್ ಆಗಿದೆ. ಇದಕ್ಕೆ ಜನರು ಪ್ರತಿಕ್ರಿಯೆ ನೀಡಿದ್ದಾರೆ. ತೊಡೆ ಮುಚ್ಚದ ಈ ಡ್ರೆಸ್ (Dress) ನೋಡಿದ ನೆಟ್ಟಿಗರು, ಇವ್ರನ್ನ ನಾವು ನ್ಯಾಷನಲ್ ಕ್ರಶ್ ಅಂತ ಕರೀತಿದಿವಾ ಎಂದು ಕಮೆಂಟ್ ಮಾಡಿದ್ದಾರೆ.
ಹರಿದಿರುವ ಜೀನ್ಸ್‌ನಲ್ಲಿ ಪ್ರಿಯಾಂಕಾ ಉಪೇಂದ್ರ; ಈ ನಿನ್ನ ನಗುವಿಗೆ ಕಾರಣವೇನೇ ಎಂದ ನೆಟ್ಟಿಗರು!
ಎನಿಮಲ್ ಚಿತ್ರದ ನಂತ್ರ ರಶ್ಮಿಕಾ ಪ್ರಾಣಿ ರೀತಿಯಲ್ಲೇ ಆಡ್ತಿದ್ದಾರೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಡ್ರೆಸ್ ಕೆಳಗೆ ಸಾಕಷ್ಟು ಬಟ್ಟೆ ಇದೆ. ಆದ್ರೆ ಎಲ್ಲಿರಬೇಕಾಗಿತ್ತೋ ಅಲ್ಲಿಲ್ಲ ಎಂದು ಇನ್ನೊಬ್ಬರು ಬರೆದಿದ್ದಾರೆ. ಸಾಯಿ ಪಲ್ಲವಿ ಹಾಗೂ ರಶ್ಮಿಕಾ ಮಂದಣ್ಣ ಕಂಪೇರ್ ಮಾಡಿರುವ ನೆಟ್ಟಿಗರು, ಸಾಯಿ ಪಲ್ಲವಿಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಅಷ್ಟೇ ಅಲ್ಲ, ಉರ್ಫಿಯನ್ನು ಕೂಡ ನೆಟ್ಟಿಗರು ನೆನಪಿಸಿಕೊಂಡಿದ್ದಾರೆ. ಉರ್ಫಿ ಇಂಥ ಡ್ರೆಸ್ ಹಾಕಿದ್ರೆ ಆಕೆಗೆ ಛೀಮಾರಿ ಹಾಕ್ತಿದ್ದ ಜನರು ರಶ್ಮಿಕಾ ಮಂದಣ್ಣ ವಿಷ್ಯದಲ್ಲಿ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಬಾಲಿವುಡ್ ಗೆ ಬಂದು ರಶ್ಮಿಕಾ ಹಾಳಾಗಿದ್ದಾರೆ, ಆಕ್ಟಿಂಗ್ ಗಿಂತ ಓವರ್ ಆಕ್ಟಿಂಗ್ ಹೆಚ್ಚಾಗಿದೆ ಎಂದು ಜನರು ಕಮೆಂಟ್ ಮಾಡಿದ್ದಾರೆ. ರಶ್ಮಿಕಾ ಡ್ರೆಸ್ ಹಿಂದೆ ಸಾಕಷ್ಟು ಬಟ್ಟೆಯಿದ್ದು, ಅದು ನೆಲಕ್ಕೆ ಅಲೆಯುತ್ತಿದೆ. ಡ್ರೆಸ್ ಹೇಗೆ ಇರಲಿ, ರಶ್ಮಿಕಾ ಸ್ವಚ್ಛ ಭಾರತ್ ಅಭಿಯಾನ್ ನಲ್ಲಿ ಪಾಲ್ಗೊಂಡಿದ್ದಾರೆ ಎಂದು ಜನರು ಕಾಲೆಳೆದಿದ್ದಾರೆ.
ರಶ್ಮಿಕಾ ಮಂದಣ್ಣ ಈ ವಿಡಿಯೋವನ್ನು ವೈರಲ್ ಭಯಾನಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ. 26 ಸಾವಿರಕ್ಕೂ ಹೆಚ್ಚು ಲೈಕ್ಸ್ ವಿಡಿಯೋಕ್ಕೆ ಸಿಕ್ಕಿದೆ.
ಇದಕ್ಕೂ ಮುನ್ನ ಕೂಡ ರಶ್ಮಿಕಾ ಮಂದಣ್ಣ ಕೆಲ ಬಾರಿ ಶಾರ್ಟ್ ಡ್ರೆಸ್ ಧರಿಸಿದ್ದಾರೆ, ಕೆಂಬು ಬಣ್ಣದ ಅವರ ಶಾರ್ಟ್ ಡ್ರೆಸ್ ಕೆಲ ದಿನಗಳ ಹಿಂದೆ ಚರ್ಚೆಗೆ ಬಂದಿತ್ತು. ಆ ಡ್ರೆಸ್ ನಲ್ಲಿ ಅವರು ಅನ್ ಕಂಫರ್ಟ್ ಆಗಿದ್ರು. ಈ ಡ್ರೆಸ್ ನಲ್ಲಿಯೂ ರಶ್ಮಿಕಾ ಅನ್ ಕಂಫರ್ಟ್ ಆಗ್ತಿರೋದನ್ನು ವಿಡಿಯೋದಲ್ಲಿ ನೋಡ್ಬಹುದು.
ಸ್ಯಾಂಡಲ್ವುಡ್ ನಂತ್ರ ತಮಿಳು, ತೆಲಕು ಚಿತ್ರರಂಗದಲ್ಲಿ ಕೆಲಸ ಮಾಡ್ತಿರುವ ರಶ್ಮಿಕಾ ಮಂದಣ್ಣ ಬಾಲಿವುಡ್ ಗೆ 2022ರಲ್ಲಿಯೇ ಲಗ್ಗೆ ಇಟ್ಟಿದಾರೆ. ಅನೇಕ ಬಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ನಟಿ ಸದ್ಯ ಬ್ಯುಸಿ ನಟಿಯರಲ್ಲಿ ಒಬ್ಬರು. ವಿಕ್ಕಿ ಕೌಶಲ್ ಜೊತೆ ಛಾವಾ ಚಿತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದು, ಅವರಿಬ್ಬರ ಫೋಟೋ ಶೂಟ್ ಕೆಲ ದಿನಗಳ ಹಿಂದೆ ಸುದ್ದಿ ಮಾಡಿತ್ತು.
ಬೋಲ್ಡ್ ಫೋಟೊ ಹಂಚಿಕೊಂಡು ಕಿರುತೆರೆ ನಟಿ ಶಮಾ ಸಿಕಂದರ್; ಅಭಿಮಾನಿಗಳ ಎದೆಯಲ್ಲಿ ರೆಡ್ ಅಲರ್ಟ್!
ಪ್ರಭಾಸ್ ಚಿತ್ರ ಸ್ಪಿರಿಟ್ ನಲ್ಲಿ ರಶ್ಮಿಕಾ ನಟಿಸಲಿದ್ದಾರೆ. ಡಿಸೆಂಬರ್ 6ರಂದು ಬಿಡುಗಡೆಯಾಗಲಿರುವ ಪುಷ್ಮಾ 2, ದಿ ಗರ್ಲ್ ಫ್ರೆಂಡ್, ಸಿಕಂದರ್, ಕಬೇರ್, ಎನಿಮಲ್ ಪಾರ್ಕ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. ಕೆಲ ಚಿತ್ರಗಳ ಶೂಟಿಂಗ್ ಮುಗಿದಿದ್ದು, ಪ್ರಚಾರ ಕಾರ್ಯ ನಡೆಯುತ್ತಿದೆ. ಮತ್ತೆ ಕೆಲ ಚಿತ್ರಗಳ ಶೂಟಿಂಗ್ ನಲ್ಲಿ ಮಂದಣ್ಣ ಭಾಗಿಯಾಗ್ತಿದ್ದಾರೆ.