ರಶ್ಮಿಕಾ ಮಂದಣ್ಣ ಸೆಲ್ಫಿ, ಗಡ್ಡ ಶೇವ್​ ಮಾಡು ತಾಯಿ ಎಂದ ನೆಟ್ಟಿಗರು!

Published : Apr 16, 2023, 03:00 PM ISTUpdated : Apr 17, 2023, 04:29 PM IST
ರಶ್ಮಿಕಾ ಮಂದಣ್ಣ ಸೆಲ್ಫಿ, ಗಡ್ಡ ಶೇವ್​ ಮಾಡು ತಾಯಿ ಎಂದ ನೆಟ್ಟಿಗರು!

ಸಾರಾಂಶ

ಸದಾ ಒಂದಿಲ್ಲೊಂದು ಕಾರಣಗಳಿಂದ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗೆ ಒಳಗಾಗುತ್ತಿರುವ ನಟಿ ರಶ್ಮಿಕಾ ಮಂದಣ್ಣ, ಈಗ ಸೆಲ್ಫಿಯಿಂದಾಗಿ ಟ್ರೋಲ್​ ಆಗಿದ್ದಾರೆ. ಏನಿದು ಅಸಲಿಯತ್ತು?   

ನ್ಯಾಷನಲ್ ಕ್ರಶ್ ಎನ್ನೋ ಹೆಸರಿದ್ದರೂ ಇತ್ತೀಚಿನ ದಿನಗಳಲ್ಲಿ ಬರೀ ಟ್ರೋಲ್​ ಆಗ್ತಿರೋದೇ ಹೆಚ್ಚು. ಈಕೆ ಏನು ಮಾಡಿದ್ರೂ ಟ್ರೋಲ್​ ಆಗುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ರಶ್ಮಿಕಾ ಹೊಸ ಹೊಸ ವಿವಾದಗಳನ್ನು (ಕೆಲವೊಮ್ಮೆ ಉದ್ದೇಶಪೂರ್ವಕವಾಗಿ) ಸೃಷ್ಟಿಸುತ್ತಲೇ ಇರುತ್ತಾರೆ. ಹೆಚ್ಚಾಗಿ ನೆಗೆಟಿವ್​ ಸುದ್ದಿಗಳಿಂದಲೇ ಇತ್ತೀಚಿನ ದಿನಗಳಲ್ಲಿ ಈಕೆ ಸುದ್ದಿಯಲ್ಲಿದ್ದಾರೆ.  ಅತ್ಯಂತ ಕಡಿಮೆ ಉಡುಪು ತೊಟ್ಟು, ಒಳ ಉಡುಪು ಧರಿಸದೇ... ಹೀಗೆ ಹಲವು ವೇಷಗಳಲ್ಲಿ ದೊಡ್ಡ ದೊಡ್ಡ ವೇದಿಕೆಯ ಮೇಲೆ ಕಾಣಿಸಿಕೊಂಡೋ ಇಲ್ಲವೇ ಹುಚ್ಚುಹುಚ್ಚಾಗಿ ಸೆಲ್ಫಿ ತೆಗೆಸಿಕೊಂಡೋ ಟ್ರೋಲ್​ ಆಗುತ್ತಿದ್ದಾರೆ. ಬಾಲಿವುಡ್ (Bollywood) ಅಂಗಳದ ನೀರು ಕುಡಿದ ಮೇಲೆ ಇದೀಗ ರಶ್ಮಿಕಾ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆ ಕದಿಯುತ್ತಿದ್ದಾರೆ.  ಅಭಿಮಾನಿಗಳ (Fans)ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಒಳ್ಳೊಳ್ಳೆ ಆಫರ್​ಗಳು ಸಿಗುತ್ತಿವೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಯಾಂಡಲ್‌ವುಡ್‌, ಟಾಲಿವುಡ್‌, ಕಾಲಿವುಡ್‌, ಬಾಲಿವುಡ್‌... ಹೀಗೆ ವಿಭಿನ್ನ ಭಾಷಾ ಚಿತ್ರಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ ನಟಿ. ಸ್ಯಾಂಡಲ್‍ವುಡ್ ಸಾನ್ವಿ, ಟಾಲಿವುಡ್ ಶ್ರೀವಲ್ಲಿ (Tollywood Shreevalli) ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್‍ನಲ್ಲಿ ಗುರುತಿಸಿಕೊಂಡಿದ್ದಾರೆ. 

ಇಷ್ಟೆಲ್ಲಾ ಇದ್ದರೂ, ಈಗ ಮತ್ತೊಮ್ಮೆ ನಟಿ ಭಾರಿ ಟ್ರೋಲ್​ ಆಗಿದ್ದಾರೆ. ಅದಕ್ಕೆ ಕಾರಣ, ಅವರ ಮೇಕಪ್​ ರಹಿತ ಸೆಲ್ಫೀ. ಸೆಲ್ಫೀ ಗೀಳನ್ನು ಹೊಂದಿದ್ದಾರೆ ರಶ್ಮಿಕಾ. ಕಾಲೇಜು ದಿನಗಳಲ್ಲಿ ಬಹಳ ಸೆಲ್ಫಿ ತೆಗೆದುಕೊಳ್ಳುತ್ತಿದ್ದೆ. ಇತ್ತೀಚೆಗೆ ಅದು ಕಡಿಮೆಯಾಗಿದೆ ಎಂದು ಈಚೆಗಷ್ಟೇ ಹೇಳಿಕೊಂಡಿದ್ದ ನಟಿ, ಈಗ ಒಂದು ಸೆಲ್ಫಿ ತೆಗೆದುಕೊಂಡಿರುವುದೇ ಬಹಳ ಸುದ್ದಿಯಾಗಿದೆ. ಇದಕ್ಕೆ ಕಾರಣ, ಈಕೆ ಮೇಕಪ್ ಇಲ್ಲದೇ ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ಅಲ್ಲ, ಬದಲಿಗೆ ಆಗಿರುವುದೇ ಬೇರೆ. 

ಜಪಾನೀಸ್‌ ಫ್ಯಾಷನ್‌ ಬ್ರಾಂಡ್‌: ದೇಶದಲ್ಲೇ ಮೊದಲ ಬಾರಿಗೆ Rashmika Mandanna ರಾಯಭಾರಿ

ಇನ್ಸ್ಟಾಗ್ರಾಮ್ ಹ್ಯಾಂಡಲ್​ನಲ್ಲಿ ಮೇಕ್ಅಪ್ ಇಲ್ಲದ ಫೋಟೋ ಹಂಚಿಕೊಂಡು ನಟಿ ಪೇಚಿಗೆ ಸಿಲುಕಿದ್ದಾರೆ. ಆಗಿದ್ದೇನೆಂದರೆ, ಮೇಕಪ್​ ಇಲ್ಲದಿದ್ದರೂ ನಟಿ ಸರಿಯಾಗಿ ಫೇಷಿಯಲ್ ಮಾಡಬೇಕಿತ್ತು. ಏಕೆಂದರೆ ಅವರ ಗಡ್ಡದ ಬಳಿ ಕೂದಲು ಬೆಳೆಯುತ್ತದೆ. ಆದರೆ ಸೆಲ್ಫಿ ತೆಗೆದುಕೊಳ್ಳುವಾಗ ಅದನ್ನು ಅವರು ಗಮನಿಸಿದಂತೆ ಇಲ್ಲ.  ಹೀಗಾಗಿ ಕೆಳಗಿನ ದವಡೆಯ ಬಳಿ ಕೆನ್ನೆಯ ಕೆಳಗಿನ ಭಾಗದಲ್ಲಿ ಕೂದಲು ಕಾಣಿಸುತ್ತಿದೆ. ಇದು ತೀರಾ ಸೂಕ್ಷ್ಮವಾಗಿ ನೋಡಿದರಷ್ಟೇ ಕಾಣಿಸುತ್ತದೆ. ಆದರೆ ನಟಿಯನ್ನು ಟ್ರೋಲ್​ ಮಾಡುವುದಕ್ಕಾಗಿಯೇ ಇರುವ ಒಂದಿಷ್ಟು ಮಂದಿ ಅದನ್ನು ಬಿಟ್ಟಿದ್ದಾರೆಯೇ? ಒಮ್ಮೆ ಫೋಟೋವನ್ನು ಝೂಮ್ ಮಾಡಿ ನೋಡಿ ಮಹಾತಾಯಿ, ದಾಡಿ ಶೇವ್​ ಮಾಡಿಕೊಳ್ಳಬಾರದೇ, ಗಡ್ಡ ಬಂದಿದೆ ನೋಡಿ...ಮೊದಲು ಗಡ್ಡ ತೆಗೆದು ಆಮೇಲೆ ಪೋಸ್​ ಕೊಡಿ ಎಂದೆಲ್ಲಾ  ಟ್ರೋಲ್ ಮಾಡುತ್ತಿದ್ದಾರೆ. ಈ ರೀತಿಯ  ಬಾಡಿ ಶೇಮಿಂಗ್ ಮಾಡುವುದು ಸರಿಯಲ್ಲ ಎಂದು ಹಲವರು ಇದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.  

 ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಇನ್ಸ್ಟಾಗ್ರಾಮ್​ನಲ್ಲಿ ನಟಿ ರಶ್ಮಿಕಾ ಮಂದಣ್ಣ 36.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ರಶ್ಮಿಕಾ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಸದ್ಯಕ್ಕೆ ಅವರು ಸಂದೀಪ್‌ ರೆಡ್ಡಿ ವಂಗ ನಿರ್ದೇಶನದ  'ಅನಿಮಲ್‌' (Animal) ಬಾಲಿವುಡ್​ ಚಿತ್ರ ಹಾಗೂ ಸುಕುಮಾರ್‌ ನಿರ್ದೇಶನದ ತೆಲುಗಿನ 'ಪುಷ್ಪ' ಸೀಕ್ವೆಲ್‌ನಲ್ಲಿ ನಟಿಸುತ್ತಿದ್ದಾರೆ.  'ಅನಿಮಲ್‌'ನಲ್ಲಿ ರಣಬೀರ್‌ ಕಪೂರ್‌ ನಾಯಕನಾಗಿ ನಟಿಸುತ್ತಿದ್ದಾರೆ.  ಪರಿಣತಿ ಚೋಪ್ರಾ, ಅನಿಲ್‌ ಕಪೂರ್‌, ಬಾಬ್ಬಿ ಡಿಯೋಲ್‌ ಕೂಡಾ ನಟಿಸುತ್ತಿದ್ದಾರೆ.   'ಪುಷ್ಪ' (Pushpa) ಸೀಕ್ವೆಲ್‌ನಲ್ಲಿ ರಶ್ಮಿಕಾ ಶ್ರೀವಲ್ಲಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ವರ್ಷ ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.
ರಶ್ಮಿಕಾ-ವಿಜಯ್ ದೇವರಕೊಂಡ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದಾರಾ? 'ಪುಷ್ಪ' ನಟಿಯ ರಿಯಾಕ್ಷನ್ ವೈರಲ್

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?