Kanguva: ಕುತೂಹಲ ಹೆಚ್ಚಿಸಿದ ಸೂರ್ಯ ನಟನೆಯ ಹೊಸ ಸಿನಿಮಾದ ಟೈಟಲ್; ಟೀಸರ್ ವೈರಲ್

Published : Apr 16, 2023, 02:58 PM IST
Kanguva: ಕುತೂಹಲ ಹೆಚ್ಚಿಸಿದ ಸೂರ್ಯ ನಟನೆಯ ಹೊಸ ಸಿನಿಮಾದ ಟೈಟಲ್; ಟೀಸರ್ ವೈರಲ್

ಸಾರಾಂಶ

Kanguva: ಸೂರ್ಯ ನಟನೆಯ ಹೊಸ ಸಿನಿಮಾದ ಟೈಟಲ್ ಕುತೂಹಲ ಹೆಚ್ಚಿಸಿದೆ. ಟೀಸರ್ ವೈರಲ್ ಆಗಿದೆ.  

ಕಾಲಿವುಡ್​ ಸ್ಟಾರ್ ಸೂರ್ಯ ನಟನೆಯ ಹೊಸ ಸಿನಿಮಾದ ಟೈಟಲ್ ಗಮನ ಸೆಳೆಯುತ್ತಿದೆ. ಪ್ರತಿ ಸಿನಿಮಾದಲ್ಲೂ ಒಂದಿಲ್ಲೊಂದು ವಿಶೇಷತೆ ಮೂಲಕ ಅಭಿಮಾನಿಗಳ ಮುಂದೆ ಬರುವ ಸೂರ್ಯ ಇದೀಗ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಸೂರ್ಯ 42 ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಈ ಸಿನಿಮಾದ ಟೈಟಲ್ ಏನು ಎಂದು ರಿವೀಲ್ ಆಗಿರಲ್ಲ. ಇದೀಗ ಟೈಟಲ್ ಅನಾವರಣಗೊಳಿಸುವ ಮೂಲಕ ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದ್ದಾರೆ. 2022ರ ಸೆಪ್ಟೆಂಬರ್​ನಲ್ಲಿ ಈ ಚಿತ್ರ ಘೋಷಣೆ ಆಗಿತ್ತು. ಆದರೀಗ ಟೈಟಲ್ ರಿಲೀಸ್ ಮಾಡಲಾಗಿದೆ.  ಅಂದಹಾಗೆ ಚಿತ್ರಕ್ಕೆ‘ಕಂಗುವ’ ಎಂದು ಟೈಟಲ್ ಇಡಲಾಗಿದೆ.  

ಕಂಗುವ ಚಿತ್ರ 3ಡಿಯಲ್ಲಿ ಮೂಡಿಬರುತ್ತಿದೆ. ಅಲ್ಲದೇ, 10 ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಸದ್ಯ ಕಂಗುವ ಸಿನಿಮಾದ ಮೋಷನ್ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ. 

‘ಸ್ಟುಡಿಯೋ ಗ್ರೀನ್​’ ಮೂಲಕ ಕೆ.ಇ. ಜ್ನಾನವೇಲ್ ರಾಜ ನಿರ್ಮಿಸುತ್ತಿರುವ ‘ಕಂಗುವ’ ಚಿತ್ರಕ್ಕೆ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಸೂರ್ಯ ಸಿನಿಮಾ ಅಂದ್ಮೇಲೆ ಕುತೂಹಲ ಕೊಂಚೆ ಹೆಚ್ಚಾಗಿಯೆ ಇರುತ್ತದೆ. ಇದೀಗ ಟೈಟಲ್ ನೋಡಿ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ. ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಇನ್ನು ವಿಶೇಷ ಎಂದರೆ ಈ ಚಿತ್ರದಲ್ಲಿ ಸೂರ್ಯ ಅವರಿಗೆ ಜೋಡಿಯಾಗಿ ಬಾಲಿವುಡ್​ ನಟಿ ದಿಶಾ ಪಟಾಣಿ ಅಭಿನಯಿಸುತ್ತಿದ್ದಾರೆ. ಯೋಗಿ ಬಾಬು ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಬಹುನಿರೀಕ್ಷಿತ ‘ಕಂಗುವ’ ಸಿನಿಮಾ 10 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿರುವುದರಿಂದ ಎಲ್ಲ ಭಾಷೆಗಳಿಗೂ ಕನೆಕ್ಟ್ ಆಗುವಂತಹ ಶೀರ್ಷಿಕೆಗಾಗಿ ಚಿತ್ರತಂಡ ಹುಡುಕಾಟ ನಡೆಸಿತ್ತು. ಕೊನೆಗೂ ಟೈಟಲ್ ಫೈನಲ್ ಮಾಡಿ ರಿವೀಲ್ ಮಾಡಿದ್ದಾರೆ. ಕಂಗುವ ಎಂದರೆ ಬೆಂಕಿಯಷ್ಟೆ ಶಕ್ತಿಯುಳ್ಳವನು ಎಂದರ್ಥ. ಇಲ್ಲಿ ನಾಯಕ ಒಬ್ಬ ಸೂಪರ್ ಹೀರೋ ಆಗಿರುತ್ತಾನೆ. ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾನೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ನಟ ಸೂರ್ಯ ಕುಟುಂಬ ಚೆನ್ನೈನಿಂದ ಮುಂಬೈಗೆ ಶಿಫ್ಟ್; ಕಾರಣವೇನು?

ಕಂಗುವ ಈಗಾಗಲೇ  50ರಷ್ಟು ಚಿತ್ರೀಕರಣ ಮುಗಿಸಿದೆ. ಗೋವಾ, ಚೆನ್ನೈ ಸೇರಿದಂತೆ ಅನೇಕ ಕಡೆ ಚಿತ್ರೀಕರಣ ಮಾಡಿದೆ. ಬಹುನಿರೀಕ್ಷೆಯ ಸಿನಿಮಾ 2024 ಪ್ರಾರಂಭದಲ್ಲಿ ಬಿಡುಗಡೆಯಾಗಲಿದೆ ಎಂದು ಸದ್ಯ ರಿಲೀಸ್ ಆಗಿರುವ ಮೋಷನ್ ಪೋಸ್ಟರ್ ನಲ್ಲಿ ರಿವೀಲ್ ಮಾಡಲಾಗಿದೆ.  ಮುಂದಿನ ಪ್ರಾರಂಭದಲ್ಲಿ ಅಂದರೆ ಯಾವಾಗ ಎನ್ನುವುದು ಸದ್ಯದಲ್ಲೇ ಬಹಿರಂಗ ಪಡಿಸುವ ಸಾಧ್ಯತೆ ಇದೆ.&

ಸೂರ್ಯ ಇಲ್ಲದೆ ಜೀವನ ನಡೆಸೋದೇ ಕಷ್ಟ; ಪತಿಯ ಬಗ್ಗೆ ನಟಿ ಜೋತಿಕಾ ಪ್ರೀತಿಯ ಮಾತು

ಸೂರ್ಯ ಕೊನೆಯದಾಗಿ ಎತರ್ಕ್ಕುಂ ತುನಿಂಧವನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ನಿರೀಕ್ಷೆಯ ಗೆಲವು ದಾಖಲಿಸಿಲ್ಲ. ಬಳಿಕ ವಿಕ್ರಮ್ ಮತ್ತು ರಾಕೆಟರಿ ಸಿನಿಮಾದಲ್ಲಿ ಗೆಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕಂಗುವ ಮೂಲಕ ಅಭಿಮಾನಿಗಳ ಮುಂದೆ ಬರಲು ಭರ್ಜರಿ ತಯಾರಿ ನಡೆಸಿದ್ದಾರೆ.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?