ಮದುವೆಗೂ ಮುನ್ನವೇ ಅಮ್ಮನಾಗುವ ಬಯಕೆ ವ್ಯಕ್ತಪಡಿಸಿದ Rashmika Mandanna, ಮುಂದಿನ ವರ್ಷ ಮದುವೆ

Published : Oct 29, 2025, 12:39 PM IST
Rashmika Mandanna

ಸಾರಾಂಶ

ರಶ್ಮಿಕಾ ಮಂದಣ್ಣ ಎಂಗೇಜ್ಮೆಂಟ್ ಆಗಿದೆ. ಇನ್ನೇನು ಮುಂದಿನ ವರ್ಷ ಮದುವೆ ನಡೆಯಲಿದೆ. ಈ ಮಧ್ಯೆ ರಶ್ಮಿಕಾ ಮಕ್ಕಳ ಬಗ್ಗೆ ಮಾತನಾಡಿದ್ದಾರೆ. ಭವಿಷ್ಯದಲ್ಲಿ ಅಮ್ಮನಾಗುವ ಆಸೆ ವ್ಯಕ್ತಪಡಿಸಿದ್ದಾರೆ ರಶ್ಮಿಕಾ ಮಂದಣ್ಣ.

ಸಿನಿಮಾ ಜೊತೆ ತಮ್ಮ ಪರ್ಸನಲ್ ವಿಷ್ಯಕ್ಕೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಸುದ್ದಿಯಲ್ಲಿದ್ದಾರೆ. ರಶ್ಮಿಕಾ ಮಂದಣ್ಣ ನಟ ವಿಜಯ್ ದೇವರಕೊಂಡ (Vijay Devarakonda) ಜೊತೆ ನಿಶ್ಚಿತಾರ್ಥ ಮಾಡ್ಕೊಂಡಿದ್ದಾರೆ ಎನ್ನುವ ಸುದ್ದಿ ಇದೆ. ಅನೇಕ ಬಾರಿ ರಶ್ಮಿಕಾ ಮಂದಣ್ಣ ಎಂಗೇಜ್ ಮೆಂಟ್ ರಿಂಗ್ ತೋರಿಸಿದ್ದಾರೆ. ಆದ್ರೆ ಎಲ್ಲಿಯೂ ವಿಜಯ್ ದೇವರಕೊಂಡ ಜೊತೆ ನಿಶ್ಚಿತಾರ್ಥ ಮಾಡ್ಕೊಂಡಿದ್ದೇನೆ ಎಂಬುದನ್ನು ಹೇಳಿಲ್ಲ. ನಿಮಗೆಲ್ಲ ಗೊತ್ತಲ್ಲ ಎನ್ನುತ್ತಲೇ ಸತ್ಯವನ್ನು ಪರೋಕ್ಷವಾಗಿ ಹೇಳಿದ್ದಾರೆ. ಇನ್ನು ವಿಜಯ್ ದೇವರಕೊಂಡ ಕೂಡ, ರಶ್ಮಿಕಾ ಜೊತೆ ಎಂಗೇಜ್ ಆಗಿರೋ ವಿಷ್ಯವನ್ನು ಬಹಿರಂಗವಾಗಿ ಹೇಳಿಲ್ಲ. ಮುಂದಿನ ವರ್ಷ ಸೂಪರ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡ್ತಾರೆ ಎನ್ನುವ ಸುದ್ದಿ ಚರ್ಚೆಯಲ್ಲಿದೆ. ಈ ಮಧ್ಯೆ ರಶ್ಮಿಕಾ ಮಂದಣ್ಣ, ಮಗು ಬಗ್ಗೆ ತಮಗಿರುವ ಪ್ರೀತಿ, ಆಸಕ್ತಿಯನ್ನು ಬಹಿರಂಗಪಡಿಸಿದ್ದಾರೆ. ಅಮ್ಮನಾಗುವ ಬಯಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಮಕ್ಕಳನ್ನು ಪಡೆಯುವ ಬಗ್ಗೆ ಹಾಗೂ ಮಕ್ಕಳಿಗೆ ಸುರಕ್ಷತೆ ನೀಡುವ ಬಗ್ಗೆ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

ಅಮ್ಮನಾಗುವ ಆಸೆ ವ್ಯಕ್ತಪಡಿಸಿದ ರಶ್ಮಿಕಾ ಮಂದಣ್ಣ : 

ಗುಲ್ಟೆ ಜೊತೆ ನಡೆದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ, ಗರ್ಲ್ ಫ್ರೆಂಡ್ ಸಿನಿಮಾ ನಿರ್ದೇಶಕರು ಮಕ್ಕಳ ಬಗ್ಗೆ ಮಾತನಾಡುವಾಗ ದನಿಗೂಡಿಸಿದ್ದಾರೆ. ನಾನಿನ್ನೂ ಅಮ್ಮನೇ ಆಗ್ಲಿಲ್ಲ, ಆದ್ರೆ ಮುಂದೆ ನಾನು ಅಮ್ಮನಾಗ್ತೇನೆ, ಮಕ್ಕಳ ಮೇಲೆ ಅಪಾರ ಪ್ರೀತಿ ತೋರಿಸ್ತೇನೆ ಅಂತ ನನಗನ್ನಿಸುತ್ತೆ. ನನ್ನ ಮಕ್ಕಳ ಬಗ್ಗೆ ನನಗೆ ಅವರು ಹುಟ್ಟುವ ಮೊದಲೇ ಪ್ರೀತಿ ಇದೆ. ನಾನು ಮಕ್ಕಳಿಗಾಗಿ ಎಲ್ಲವನ್ನೂ ಮಾಡಬಯಸ್ತೇನೆ. ನಾನು ಅವರನ್ನು ಸುರಕ್ಷಿತವಾಗಿಡಲು ಬಯಸ್ತೇನೆ. ಅವರಿಗಾಗಿ ಯುದ್ಧಕ್ಕೆ ಹೋಗ್ಬೇಕಾದ ಸಂದರ್ಭ ಬಂದ್ರೆ ನಾನು ಅದಕ್ಕೂ ಸಿದ್ಧ. ಅದಕ್ಕೆ ಅಗತ್ಯವಿರುವ ಫಿಟ್ನೆಸ್ ನಾನು ಕಾಯ್ದುಕೊಳ್ಳಬೇಕು. ನಾನು ಈಗ್ಲೇ ಅದ್ರ ಬಗ್ಗೆ ಆಲೋಚನೆ ಮಾಡಿದ್ದೇನೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಇದೇ ನೋಡಿ ಇಳಯರಾಜಾ ಮ್ಯಾಜಿಕ್: ಸಿನಿಮಾ ಫ್ಲಾಪ್.. ಆದ್ರೆ ಒಂದೇ ಹಾಡಿನಿಂದ 1 ಕೋಟಿ ಲಾಭ ಮಾಡಿದ ನಿರ್ಮಾಪಕ

ಮುಂದಿನ ವರ್ಷ ಮದುವೆ ಗುಟ್ಟು ಬಿಚ್ಚಿಟ್ಟ ರಶ್ಮಿಕಾ : 

ರಶ್ಮಿಕಾ ಮಂದಣ್ಣ ಸಂದರ್ಶನದಲ್ಲಿ ಮಕ್ಕಳ ಆಸೆ ಬಗ್ಗೆ ಮಾತ್ರ ಅಲ್ಲ ಮದುವೆ ಬಗ್ಗೆಯೂ ಪರೋಕ್ಷವಾಗಿ ಸೂಚನೆ ನೀಡಿದ್ದಾರೆ. ಯಾವ ವರ್ಷ ಏನು ಆಗ್ಬೇಕು ಎನ್ನುವ ವಿಷ್ಯವನ್ನು ಮಾತನಾಡ್ತಾ, ರಶ್ಮಿಕಾ ತಾವು 30 ತುಂಬಿದ ಮೇಲೆ ಮದುವೆ ಆಗ್ತೇನೆ ಎಂಬ ಸೂಚನೆ ನೀಡಿದ್ದಾರೆ. ರಶ್ಮಿಕಾ ಪ್ರಕಾರ, ಇಪ್ಪತ್ತರಿಂದ ಮೂವತ್ತು ವರ್ಷ ವಯಸ್ಸು ಅಂದ್ರೆ ತಲೆ ತಗ್ಗಿಸಿ ಕೆಲಸ ಮಾಡಬೇಕಾದ ಸಮಯ. ಈ ಸಮಯದಲ್ಲಿ ನಾವು ಹಣ ಸಂಪಾದನೆ ಮಾಡ್ಬೇಕು, ಜೀವನದ ದಾರಿ ಕಂಡುಕೊಳ್ಳಬೇಕು. 30 ರಿಂದ 40 ವರ್ಷದ ವಯಸ್ಸು ಯಾವಾಗಲೂ ಕೆಲಸ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸುವುದಾಗಿದೆ. ಅದರಂತೆ ಪ್ಲಾನ್ ಮಾಡ್ಬೇಕು. ನಾನು ಅದನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಆಲೋಚನೆ ಮಾಡಿದ್ದೇನೆ ಎಂದು ರಶ್ಮಿಕಾ ಹೇಳಿದ್ದಾರೆ. ಅಂದ್ರೆ ರಶ್ಮಿಕಾಗೆ ಮುಂದಿನ ವರ್ಷ 30 ತುಂಬುತ್ತೆ. ಅದೇ ವರ್ಷ ರಶ್ಮಿಕಾ ದಾಂಪತ್ಯ ಜೀವನಕ್ಕೆ ಕಾಲಿಡೋ ಸಾಧ್ಯತೆ ದಟ್ಟವಾಗಿದೆ. 

ಆ ವಿಷಯದಲ್ಲಿ ಜೂ.ಎನ್‌ಟಿಆರ್‌ಗೆ ಪತ್ನಿ ಪ್ರಣತಿ ವಾರ್ನಿಂಗ್.. ಮನೆಯ ಗುಟ್ಟು ಬಿಚ್ಚಿಟ್ಟ ರಾಜಮೌಳಿ

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಫೆಬ್ರವರಿ 2026ರಲ್ಲಿ ಮದುವೆ ಆಗ್ತಾರೆ ಎನ್ನುವ ಸುದ್ದಿ ಇದೆ. ನಲವತ್ತು ವರ್ಷ ತುಂಬಿದ ನಂತ್ರ ಮುಂದೇನು ಎನ್ನುವ ಬಗ್ಗೆ ನಾನು ಆಲೋಚನೆ ಮಾಡಿಲ್ಲ. ಎಲ್ಲದಕ್ಕೂ ಒಂದು ನಿಗದಿತ ಸಮಯ ಇದೆ ೆಂದಿರುವ ರಶ್ಮಿಕಾ, ಫಿಟ್ನೆಸ್, 8 ಗಂಟೆ ಕೆಲ್ಸದ ಬಗ್ಗೆಯೂ ಮಾತನಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಾಯಿಬಾಬ ನಟ ಸುಧೀರ್ ಆಸ್ಪತ್ರೆ ದಾಖಲು, ಚಿಕಿತ್ಸೆಗೆ 11 ಲಕ್ಷ ರೂ ನೀಡಲು ಶಿರಡಿ ಟ್ರಸ್ಟ್‌ಗೆ ಸೂಚನೆ
ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!