
ಮುಂಬೈ (ಅ.27) ಮನೆ ಕೆಲಸದವರು, ಭದ್ರತಾ ಸಿಬ್ಬಂದಿಗಳಿಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ತಲಾ 10,000 ರೂಪಾಯಿ ಹಾಗೂ ಸ್ವೀಟ್ ಬಾಕ್ಸ್ ಉಡುಗೊರೆಯಾಗಿ ನೀಡಿದ್ದಾರೆ. ದೀಪಾವಳಿ ಸಂಭ್ರಮಕ್ಕೆ ಅಮಿತಾಬ್ ಬಚ್ಚನ್ ಈ ಉಡುಗೊರೆ ನೀಡಿದ್ದಾರೆ. ಆದರೆ ಅಮಿತಾಬ್ ಬಚ್ಚನ್ ಉಡುಗೊರೆಗೆ ಪರ ವಿರೋಧಗಳು ವ್ಯಕ್ತವಾಗಿದೆ. ಅಮಿತಾಬ್ ಬಚ್ಚನ್ ಒಬ್ಬ ಮೇರು ನಟ, ಸಾವಿರಾರು ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಪ್ರತಿ ತಿಂಗಳು ಲಕ್ಷ ಲಕ್ಷ ರೂಪಾಯಿ ಆದಾಯಗಳಿಸುತ್ತಿದ್ದಾರೆ. ಅಮಿತಾಬ್ ಬಚ್ಚನ್‌ಗೆ ಹೋಲಿಸಿದರೆ ಇದು ಅತೀ ಕಡಿಮೆ ಮೊತ್ತದ ಉಡುಗೊರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಕಂಟೆಂಟ್ ಕ್ರಿಯೇಟರ್ ಒರ್ವ ಅಮಿತಾಬ್ ಬಚ್ಚನ್ ಮನೆಯಲ್ಲಿ ಕೆಲಸ ಮಾಡುತ್ತಿರುವವರನ್ನು ಅಮಿತಾಬ್ ಜುಹು ಮನೆ ಹೊರಭಾಗದಲ್ಲಿ ಭೇಟಿಯಾಗಿದ್ದಾರೆ. ಮನೆ ಕೆಲಸದವರ ಮಾತನಾಡುವ ವೇಳೆ ಕೈಯಲ್ಲಿರುವ ಸ್ವೀಟ್ ಬಾಕ್ಸ್ ಕುರಿತು ಪ್ರಶ್ನಿಸಲಾಗಿದೆ. ಇದು ಅಮಿತಾಬ್ ಬಚ್ಚನ್ ದೀಪಾವಳಿ ಹಬ್ಬಕ್ಕೆ ಕೊಟ್ಟಿರುವ ಸ್ವೀಟ್ ಬಾಕ್ಸ್ ಎಂದಿದ್ದಾರೆ. ಇದೇ ವೇಳೆ ಇತರ ಸಿಬ್ಬಂದಿಗಳನ್ನು ಮಾತನಾಡಿಸಿದಾಗ ಅಮಿತಾಬ್ ಬಚ್ಚನ್ ದೀಪಾವಳಿ ಹಬ್ಬಕ್ಕೆ 10,000 ರೂಪಾಯಿ ನಗದು ಉಡುಗೊರೆ ನೀಡಿದ್ದಾರೆ ಎಂದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಅಮಿತಾಬ್ ಬಚ್ಚನ್ ಅವರ ಮನೆಗೆಲಸದವರು, ಭದ್ರತಾ ಸಿಬ್ಬಂದಿಗಳು ಸ್ವೀಟ್ ಬಾಕ್ಸ್ ಹಾಗೂ ನಗದು ಹಿಡಿದಿರುವ ದೃಶ್ಯವಿದೆ. ಅಮಿತಾಬ್ ಬಚ್ಚನ್ ತನ್ನ ಎಲ್ಲಾ ಸಿಬ್ಬಂದಿಗಳಿಗೆ ದೀಪಾವಳಿ ಉಡುಗೊರೆ ನೀಡಿದ್ದಾರೆ. ಆದರೆ ಈ ವಿಡಿಯೋದಲ್ಲಿ ಹೇಳಿರುವ ಮಾಹಿತಿ ಹಾಗೂ ತೋರಿಸಿರುವ ದೃಶ್ಯಗಳ ಕುರಿತು ಸ್ಪಷ್ಟತೆ ಲಭ್ಯವಿಲ್ಲ.
ಅಮಿತಾಬ್ ಬಚ್ಚನ್ 10,000 ರೂಪಾಯಿ ನಗದು ಹಾಗೂ ಸ್ವೀಟ್ ನೀಡಿರುವ ದೀಪಾವಳಿ ಉಡುಗೊರೆ ಕುರಿತು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಟೀಕಿಸಿದ್ದಾರೆ. ಅಮಿತಾಬ್ ಬಚ್ಚನ್ ಹೆಚ್ಚಿನ ನಗದು ಮೊತ್ತವನ್ನು ಸಿಬ್ಬಂದಿಗಳಿಗೆ ನೀಡಬಹುದಿತ್ತು. ಪ್ರತಿ ತಿಂಗಳು ಲಕ್ಷ ಲಕ್ಷ ರೂಪಾಯಿ ಆದಾಯ ಪಡೆಯುತ್ತಿರುವ ಅಮಿತಾಬ್ ಬಚ್ಚನ್ ಕೇವಲ 10,000 ರೂಪಾಯಿ ನೀಡಿ ಕೈತೊಳೆದುಕೊಂಡಿದ್ದಾರೆ. ಅವರ ಆದಾಯ, ಆಸ್ತಿ, ಗಳಿಕೆ ಎಲ್ಲವನ್ನು ನೋಡಿದರೆ ಇದು ಜುಜುಬಿ ಮೊತ್ತ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಆದರೆ ಬಹುತೇಕರು ಅಮಿತಾಬ್ ಬಚ್ಚನ್ ಉಡುಗೊರೆಯನ್ನು ಸ್ವಾಗತಿಸಿದ್ದಾರೆ. ಪ್ರತಿ ತಿಂಗಳು ಸಾವಿರಾರು ಕೋಟಿ ರೂಪಾಯಿ ಆದಾಯಗಳಿಸುವ ಪ್ರತಿಷ್ಠಿತ ಕಂಪನಿಗಳು ಈ ರೀತಿ ನಗದು ಉಡುಗೊರೆ ನೀಡಿಲ್ಲ. ಆದರೆ ಅಮಿತಾಬ್ ಬಚ್ಚನ್ ಪ್ರತಿ ಸಿಬ್ಬಂದಿಗಳಿಗೆ ತಲಾ 10,000 ಪೂಪಾಯಿ ಹಾಗೂ ಸ್ವೀಟ್ಸ್ ನೀಡಿದ್ದಾರೆ. ಅಮಿತಾಬ್ ಬಚ್ಚನ್ ಉತ್ತಮ ನಿರ್ಧಾರ ಕೈಗೊಂಡಿದ್ದಾರೆ ಎಂದು ಹಲವರು ಶ್ಲಾಘಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.