ಸಿನಿಮಾ ಕೆರಿಯರ್‌ನಲ್ಲಿ ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಫಲಿತಾಂಶಕ್ಕೆ ನಾನು ಹೊಣೆಯಾದರೂ ಅದಕ್ಕೆ ಕಾರಣ ನಾನಲ್ಲ. ಸಿನಿಮಾದ ಸೋಲು-ಗೆಲುವು ನನ್ನೊಬ್ಬಳ ಮೇಲೆ ಅವಲಂಬಿಸಿಲ್ಲ. ಆದರೆ, ನನ್ನ ಕೆಲಸವನ್ನು ನಾನು ಶೃದ್ಧೆಯಿಂದ ಮಾಡಿದ್ದೇನೆ, ನನ್ನ ಪರಿಶ್ರಮಕ್ಕೆ, ಕೆಲಸಕ್ಕೆ ತಕ್ಕ ಪ್ರತಿಫಲ ಪಡೆದಿದ್ದೇನೆ.
ಕನ್ನಡ ಮೂಲದ ಇಂಡಿಯನ್ ಕ್ರಶ್ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಅವರು ಸಾರ್ವಜನಿಕರಿಗೆ ಉಪದೇಶ ಮಾಡಿದ್ದಾರೆ. ಯಾರೇನೇ ಅಂದರೂ ನೀವು ಕನಸು ಕಾಣುವುದನ್ನು ಬಿಡಬೇಡಿ. ಕನಸು ಎಂದರೆ ಸಾಮಾನ್ಯ ಕನಸಲ್ಲ, ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು. ಎಲ್ಲವೂ ಕ್ಷಣಿಕ, ಯಾವುದೂ ಶಾಶ್ವತವಲ್ಲ ಎಂದು ಯಾರೆಷ್ಟೇ ಉಪದೇಶ ಮಾಡಿದರೂ ಅಂತಹ ಮಾತಿಗೆಲ್ಲ ತಲೆ ಕೆಡಿಸಿಕೊಳ್ಳಬೇಡಿ. ಹೌದು, ಯಾವುದೂ ಶಾಶ್ವತವಲ್ಲ, ಆದರೆ ಜೀವನ ಇರುವಷ್ಟು ದಿನ ಗೌರವದಿಂದ ಬಾಳಬೇಕು ಎಂದರೆ ಸಾಧನೆ, ಹಣ ಎರಡೂ ಬೇಕು.
ನಾನು ಹೇಳುವುದು ಇಷ್ಟೇ, ಯಾರು ಏನೇ ಅಂದ್ರೂ, ಯಾರು ನಿಮ್ಮ ಕಾಲೆಳೆದ್ರೂ, ನಿಮ್ಮ ಬೆನ್ನು ಬಿದ್ದು ಬೇತಾಳದಂತೆ ಕಾಡಿದರೂ ನೀವು ಮಾತ್ರ ನಿಮ್ಮ ಕನಸನ್ನು ಬಿಡಬೇಡಿ. ಅದನ್ನು ಬೆನ್ನುಹತ್ತಿ ಸಾಧಿಸಲು ಪ್ರಯತ್ನಿಸಬೇಕು. ನಮ್ಮ ಕನಸನ್ನು ನನಸು ಮಾಡಲು ನಾವು ಪರಿಶ್ರಮ ಪಟ್ಟು ಕೆಲಸ ಮಾಡಬೇಕು, ಮತ್ತೆ ಮತ್ತೆ ಕೆಲಸ ಮಾಡುತ್ತಲೇ ಇರಬೇಕು. ನಾನು ನನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ, ಅವಮಾನಗಳನ್ನು ಎದುರಿಸಿದ್ದೇನೆ. ಆದರೆ, ಯಾವತ್ತೂ ನನ್ನ ಕನಸನ್ನು ಬಿಟ್ಟುಕೊಡಲಿಲ್ಲ.
ನಾನು ಗಂಡಸರ ಜತೆ ಕಾಲ ಕಳೆಯುವುದಿಲ್ಲ; ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್
ಸಿನಿಮಾ ಕೆರಿಯರ್‌ನಲ್ಲಿ ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಫಲಿತಾಂಶಕ್ಕೆ ನಾನು ಹೊಣೆಯಾದರೂ ಅದಕ್ಕೆ ಕಾರಣ ನಾನಲ್ಲ. ಸಿನಿಮಾದ ಸೋಲು-ಗೆಲುವು ನನ್ನೊಬ್ಬಳ ಮೇಲೆ ಅವಲಂಬಿಸಿಲ್ಲ. ಆದರೆ, ನನ್ನ ಕೆಲಸವನ್ನು ನಾನು ಶೃದ್ಧೆಯಿಂದ ಮಾಡಿದ್ದೇನೆ, ನನ್ನ ಪರಿಶ್ರಮಕ್ಕೆ, ಕೆಲಸಕ್ಕೆ ತಕ್ಕ ಪ್ರತಿಫಲ ಪಡೆದಿದ್ದೇನೆ. ನಾನು ನನ್ನ ಕನಸನ್ನು ನನಸು ಮಾಡಿಕೊಳ್ಳಲು ಸತತ ಪ್ರಯತ್ನ ಮಾಡುತ್ತಲೇ ಇದ್ದೇನೆ, ಅದೇ ದಾರಿಯಲ್ಲಿ ಸಾಗುತ್ತ ಗುರಿಗೆ ಸಮೀಪದಲ್ಲಿ ಇದ್ದೇನೆ. ನಾನು ನನ್ನ ಗುರಿಯನ್ನು ಖಂಡಿತವಾಗಿ ಸಾಧಿಸುತ್ತೇನೆ ಎಂಬ ವಿಶ್ವಾಸವೂ ನನಗಿದೆ ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ.
ಮೈಸೂರಿನಲ್ಲಿ ಪುಷ್ಪಾ 2 ಶೂಟಿಂಗ್ ಕ್ಯಾನ್ಸಲ್; ಇದಕ್ಕೆಲ್ಲಾ ಕಾರಣ ಅಲ್ಲು ಅರ್ಜುನ್!
ಅಂದಹಾಗೆ, ನಟಿ ರಶ್ಮಿಕಾ ಮಂದಣ್ಣ ಹಾಗು ರಣಬೀರ್ ಕಪೂರ್ ನಟನೆಯ 'ಆನಿಮಲ್' ಚಿತ್ರವು ನಿನ್ನೆ ಅಂದರೆ, 01 ಡಿಸೆಂಬರ್ 2023ರಂದು ಬಿಡುಗಡೆಯಾಗಿದೆ. ರಶ್ಮಿಕಾ ಹಾಗೂ ರಣಬೀರ್ ಕಪೂರ್ ಸಿನಿಮಾದಲ್ಲಿನ ಕೆಮೆಸ್ಟ್ರಿಗೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ ಎನ್ನಲಾಗುತ್ತಿದೆ. ರಶ್ಮಿಕಾ ಸೌಂದರ್ಯ, ಸ್ಮೈಲ್‌ಗೆ ಹರೆಯದ ಹುಡುಗರು ಮನಸೋತಿದ್ದು, ಮತ್ತೆ ಮತ್ತೆ ಸಿನಿಮಾ ಮಂದಿರದ ಕಡೆ ಧಾವಿಸಿ ಬರುತ್ತಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ, ಕನ್ನಡದ ಕುವರಿ ನಟಿ ರಶ್ಮಿಕಾ ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಬಾಲಿವುಡ್ ಚಿತ್ರರಂಗಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.