ರಶ್ಮಿಕಾ ಮಂದಣ್ಣ ಫ್ಯಾನ್ಸ್ ಗೆ ಬ್ಯಾಡ್ ನ್ಯೂಸ್, ಜಿಮ್ಮಲ್ಲಿ ಬಿದ್ದು ನ್ಯಾಷನಲ್ ಕ್ರಶ್‌ಗೆ ಗಾಯ

By Roopa Hegde  |  First Published Jan 10, 2025, 2:02 PM IST

ನಟಿ ರಶ್ಮಿಕಾ ಮಂದಣ್ಣ ಫ್ಯಾನ್ಸ್ ಗೆ ಬೇಸರದ ಸುದ್ದಿ ಒಂದಿದೆ. ರಶ್ಮಿಕಾ ಜಿಮ್ ನಲ್ಲಿ ಗಾಯಗೊಂಡಿದ್ದಾರೆ. ಅವರಿಗೆ ವಿಶ್ರಾಂತಿ ಅಗತ್ಯವಿದ್ದು, ಈಗ ಹೇಗಿದ್ದಾರೆ ಎಂಬ ಮಾಹಿತಿ ಇಲ್ಲಿದೆ. 
 


ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (National Crush Rashmika Mandanna) ಫ್ಯಾನ್ಸ್ ಗೆ ಒಂದು ಬ್ಯಾಡ್ ನ್ಯೂಸ್ ಇದೆ. ನಟನೆ, ಫ್ಯಾಷನ್ ಜೊತೆ ಫಿಟ್ನೆಸ್ ಗೆ ಹೆಸರಾಗಿರುವ ರಶ್ಮಿಕಾ ಮಂದಣ್ಣಗೆ ನೋವಾಗಿದೆ. ಜಿಮ್ (Gym) ನಲ್ಲಿ ವರ್ಕೌಟ್ (Work Out) ಮಾಡುವ ವೇಳೆ ರಶ್ಮಿಕಾ ಗಾಯಗೊಂಡಿದ್ದಾರೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ನೆಮ್ಮದಿ ಸುದ್ದಿ ಅಂದ್ರೆ ರಶ್ಮಿಕಾ ಆರೋಗ್ಯದಲ್ಲಿ ವೇಗವಾದ ಸುಧಾರಣೆ ಕಾಣ್ತಾ ಇದೆ. ಶೀಘ್ರದಲ್ಲಿಯೇ ಅವರು ಸಿನಿಮಾ ಶೂಟಿಂಗ್ ಗೆ ವಾಪಸ್ ಆಗುವ ಭರವಸೆ ಇದೆ. 

ಪುಷ್ಮಾ (Pushpa 2)2 ಸಕ್ಸಸ್  ನಂತ್ರ ರಶ್ಮಿಕಾ ಹಿಂದಿ ಸೇರಿದಂತೆ ಅನೇಕ ಸಿನಿಮಾಗಳಿಗೆ ಸೈನ್ ಹಾಕಿದ್ದಾರೆ. ಕೆಲ ಚಿತ್ರಗಳ ಶೂಟಿಂಗ್ ಈಗಾಗಲೇ ಶುರುವಾಗಿದ್ದು, ಮತ್ತೊಂದಿಷ್ಟು ಮುಗಿಯುವ ಹಂತದಲ್ಲಿದೆ. ಈ ಮಧ್ಯೆ ರಶ್ಮಿಕಾ ಮಂದಣ್ಣ ಗಾಯಗೊಂಡಿದ್ದಾರೆ. ಫಿಟ್ನೆಸ್ ಗೆ ಹೆಚ್ಚು ಆದ್ಯತೆ ನೀಡುವ ರಶ್ಮಿಕಾ, ಜಿಮ್ ನಲ್ಲಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಶ್ಮಿಕಾಗೆ ವಿಶ್ರಾಂತಿ ಅವಶ್ಯಕತೆ ಇದೆ. ಹಾಗಾಗಿಯೇ ಅವರು ಹೊರಗೆ ಕಾಣಿಸಿಕೊಂಡಿಲ್ಲ. ರಶ್ಮಿಕಾ ಸಂಪೂರ್ಣ ಗುಣಮುಖರಾದ್ಮೇಲೆ ಶೂಟಿಂಗ್ ಶುರು ಮಾಡುವ ನಿರ್ಣಯಕ್ಕೆ ಸಿನಿಮಾ ನಿರ್ಮಾಪಕರು ಬಂದಿದ್ದಾರೆ. ಹಾಗಾಗಿ ರಶ್ಮಿಕಾ ಸಿನಿಮಾಗಳ ಶೂಟಿಂಗ್ ಸದ್ಯ ನಿಂತಿದೆ.

Tap to resize

Latest Videos

ಕುಮಾರ್ ಸಾನುಗೆ ಪತ್ನಿ ಕಾಟ ! ಖಿನ್ನತೆಗೊಳಗಾಗಿದ್ದ ಗಾಯಕನ ಜೊತೆ ನಟಿಯ

ಜಿಮ್ ನಲ್ಲಿ ಗಾಯ ಹೇಗಾಯ್ತು ಎಂಬುದು ಸ್ಪಷ್ಟವಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ರಶ್ಮಿಕಾ, ಇನ್ಸ್ಟಾದಲ್ಲಿ ಸ್ಟೋರಿಗಳನ್ನು ಪೋಸ್ಟ್ ಮಾಡ್ತಿದ್ದಾರೆ. ಹೊಸ ವರ್ಷದಂದು ರಶ್ಮಿಕಾ ತಮ್ಮ ಸುಂದರ ಫೋಟೋಗಳನ್ನು ಹಾಕಿ 2025ನ್ನು ವೆಲ್ ಕಂ ಮಾಡಿದ್ರು. ಅದಾದ್ಮೇಲೆ ಯಾವುದೋ ಫೋಸ್ಟ್ ರಶ್ಮಿಕಾ ಹಂಚಿಕೊಂಡಿಲ್ಲ. ತಮಗೆ ಗಾಯವಾದ ಬಗ್ಗೆಯೂ ರಶ್ಮಿಕಾ ಎಲ್ಲಿಯೂ ಹೇಳಿಲ್ಲ. ಮಾಧ್ಯಮ ವರದಿ ಪ್ರಕಾರ, ಜಿಮ್ ನಲ್ಲಿ ರಶ್ಮಿಕಾ ಗಾಯಗೊಂಡಿದ್ದು, ವೈದ್ಯರು ವಿಶ್ರಾಂತಿ ಅಗತ್ಯವಿದೆ ಎಂದಿದ್ದಾರೆ. ಬಲ್ಲ ಮೂಲಗಳ ಪ್ರಕಾರ, ರಶ್ಮಿಕಾ ಆರೋಗ್ಯದಲ್ಲಿ ಚೇತರಿಕೆ ಕಾಣ್ತಿದೆ. ಬಹುಬೇಕ ರಶ್ಮಿಕಾ ಸುಧಾರಿಸಿಕೊಳ್ತಿದ್ದಾರೆ. ಸಂಪೂರ್ಣ ಗುಣಮುಖರಾದ್ಮೇಲೆ ಅವರು ಶೂಟಿಂಗ್ ಗೆ ವಾಪಸ್ ಆಗಲಿದ್ದಾರೆ. ರಶ್ಮಿಕಾ ಮಂದಣ್ಣ ಗಾಯಗೊಂಡ ವಿಷ್ಯ ಕೇಳಿ ಫ್ಯಾನ್ಸ್ ಗಾಬರಿಯಾಗಿದ್ದಾರೆ. ಏನಾಯ್ತು, ಹೇಗಾಯ್ತು ಎನ್ನುವ ಪ್ರಶ್ನೆಗಳು ಕೇಳಿ ಬರ್ತಿವೆ. 

ಪುಷ್ಪಾ ಒಂದರಂತೆ ಪುಷ್ಪಾ 2 ಸಿನಿಮಾದಲ್ಲೂ ರಶ್ಮಿಕಾ ಮಂದಣ್ಣ  ಪಾತ್ರವನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಸ್ಯಾಂಡಲ್ವುಡ್ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದ ರಶ್ಮಿಕಾ, ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಆನಿಮಲ್ ಸಿನಿಮಾದಲ್ಲಿ ರಣಬೀರ್ ಕಪೂರ್ ಜೊತೆ ಕಾಣಿಸಿಕೊಂಡಿರುವ ರಶ್ಮಿಕಾ ಈಗ ಸಲ್ಮಾನ್ ಖಾನ್ ಜೊತೆ ಮಿಂಚಲು ಸಿದ್ಧವಾಗಿದ್ದಾರೆ. ಸಲ್ಮಾನ್ ಖಾನ್  (Salman Khan) ಜೊತೆ ಸಿಕಂದರ್ (Sikandar) ಸಿನಿಮಾದಲ್ಲಿ ರಶ್ಮಿಕಾ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ.  ಇದಲ್ಲದೆ ಈ ವರ್ಷ ರಶ್ಮಿಕಾ ಅಭಿನಯದ ನಾಲ್ಕು ಚಿತ್ರಗಳು ತೆರೆಗೆ ಬರ್ತಿವೆ. 

ತಾಂಡವ್ ಜೊತೆ ಪೂಜೆಗೆ ಕುಳಿತುಕೊಳ್ತಾಳ ಭಾಗ್ಯ? ಪ್ರಸಾದ ಅಂತ ಶ್ರೇಷ್ಠಾ ಮಾಡಿದ್ದು ಉಪ್ಪಿಟ್ಟು!

ರಶ್ಮಿಕಾ ಒಂದ್ಕಡೆ ಸಿನಿಮಾದಲ್ಲಿ ಬ್ಯುಸಿಯಾಗಿದ್ರೆ ಇನ್ನೊಂದ್ಕಡೆ ರಿಲೇಶನ್ಶಿಪ್ ವಿಷ್ಯದಲ್ಲೂ ಸುದ್ದಿ ಮಾಡ್ತಿದ್ದಾರೆ. ನಟ ವಿಜಯ್ ದೇವರಕೊಂಡ ಜೊತೆ ಡೇಟ್ ಮಾಡ್ತಿರುವ ನಟಿ ಯಾವಾಗ ಮದುವೆ ಆಗ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಿಗಿದೆ. ಈಗಾಗಲೇ ಪರೋಕ್ಷವಾಗಿ ವಿಜಯ್ ದೇವರಕೊಂಡ ಪ್ರೀತಿಯಲ್ಲಿ ಬಿದ್ದಿರುವ ವಿಷ್ಯವನ್ನು ರಶ್ಮಿಕಾ ಒಪ್ಪಿಕೊಂಡಿದ್ದಾರಾದ್ರೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ರೀಲ್ ಲೈಫ್ ಸೂಪರ್ ಹಿಟ್ ಜೋಡಿಯನ್ನು ರಿಯಲ್ ಲೈಫ್ ನಲ್ಲಿ ನೋಡುವ ಆಸೆ ಅಭಿಮಾನಿಗಳಿಗಿದೆ. ಸದ್ಯ ರಶ್ಮಿಕಾ ಬೇಗ ಗುಣಮುಖರಾಗ್ಲಿ ಎಂಬುದು ಎಲ್ಲರ ಪ್ರಾರ್ಥನೆಯಾಗಿದೆ. 

click me!