ನಟರಿಗೆ ಕೋಟಿ ಕೋಟಿ ಹಣ ಕೊಟ್ರೆ ಹೆಸರು ಮಾಡೋ ಆಸೆ ಇರಲ್ಲ: ಬಿ-ಟೌನ್‌ ಮಂದಿಗೆ ರಾಜಮೌಳಿ ಟಾಂಗ್

By Vaishnavi ChandrashekarFirst Published Dec 15, 2022, 11:45 AM IST
Highlights

ಹಣ ಕೊಟ್ರೆ ಸಂಪಾದನೆ ಹೆಚ್ಚಾಗುತ್ತದೆ ಆದರೆ ಸಾಧನೆ ಮಾಡುವ ಹಸಿವು ಕಡಿಮೆ ಆಗುತ್ತದೆ. ಕಾರ್ಪೋರೆಟ್‌ ಪ್ರಪಂಚದಿಂದ ಚಿತ್ರರಂಗಕ್ಕೆ ನಷ್ಟ...
 

ಭಾರತೀಯ ಸಿನಿಮಾಗಳ ತೂಕ ಹೆಚ್ಚಿಸಿದ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಮೊದಲ ಬಾರಿ ಬಾಲಿವುಡ್ ಬಗ್ಗೆ ಮಾತನಾಡಿದ್ದಾರೆ. ಹಿಂದಿ ಸಿನಿಮಾ ಇದ್ದಕ್ಕಿದ್ದಂತೆ ಪಾತಾಳಕ್ಕೆ ಬೀಳಲು ಕಾರಣವೇನು? ಕೋಟಿ ಬಜೆಟ್ ಸಿನಿಮಾ ಮಾಡಿದ್ದರೂ ಯಾಕೆ ಹಿಟ್ ಅಗುತ್ತಿಲ್ಲ, ಕಥೆಗೆ ನಾಯಕರ ಆಯ್ಕೆ ಹೇಗೆ ಮಾಡಬೇಕು, ಕಾರ್ಪೋರೆಟ್‌ ಪ್ರವೇಶದಿಂದ ನಟರ ಪ್ರತಿಭೆಗೆ ಬೆಲೆ ಇಲ್ವಾ? ಈ ವಿಚಾರಗಳ ಬಗ್ಗೆ ರಾಜಮೌಳಿ ಮಾತನಾಡಿದ್ದಾರೆ.

'ಸೌತ್ ಸಿನಿಮಾಗಳು ಹಿಟ್ ಆಗುವುದಕ್ಕೆ ಯಾವುದೇ ಸೀಕ್ರೆಟ್ ಫಾರ್ಮ್ಯೂಲ್ ಇಲ್ಲ. ಎರಡು ವಿಚಾರಗಳ ಬಗ್ಗೆ ಹೇಳುವುದಕ್ಕೆ ಇಷ್ಟ ಪಡುತ್ತೀನಿ, ಒಂದು ವೀಕ್ಷಕರ ಜೊತೆ ಒಂದು ಕನೆಕ್ಷನ್‌ ಕಟ್ಟಿಕೊಳ್ಳಬೇಕು ಮತ್ತೊಂದು ಕಂಫರ್ಟ್‌ ಝೋ ಬಿಟ್ಟು ಕೆಲಸ ಮಾಡುವುದು. ತುಂಬಾ ಕಂಫರ್ಟ್‌ ಆಗಿದ್ದರೆ ಕೆಲಸ ಮಾಡಲು ಸೋಮಾರಿತನ ಬರುತ್ತದೆ. ಸಿನಿಮಾ ಅನೌನ್ಸ್‌ ಮಾಡುವ ಸಮಯದಲ್ಲಿ ಚೂರು ಹೆಸರು ಅಥವಾ ಹೈಪ್ ಕ್ರಿಯೇಟ್ ಮಾಡಿದ್ದರೆ ಅಲ್ಲೇ ಸಾಧನೆ ಮಾಡಿರುವ ಕೊಂಬು ಬರುತ್ತದೆ' ಎಂದು ಫಿಲ್ಮ ಕಂಪ್ಯಾನಿಯನ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ನಾವೇನು ಮಾಡ್ತಿದ್ದೀವಿ ಅಂತ ಯೋಚಿಸಬೇಕಿದೆ; 'ಕಾಂತಾರ' ಸಕ್ಸಸ್ ಬಗ್ಗೆ ನಿರ್ದೇಶಕ ರಾಜಮೌಳಿ ಅಚ್ಚರಿ ಹೇಳಿಕೆ

'ಹಿಂದಿ ಸಿನಿಮಾ ರಂಗಕ್ಕೆ ಕಾರ್ಪೋರೆಟ್‌ಗಳು ಪ್ರವೇಶ ಮಾಡಿದ್ದಾಗ ನಟರಿಗೆ, ನಿರ್ದೇಶಕರಿಗೆ ಹೆಚ್ಚಿನ ಸಂಭಾವನೆ ನೀಡುತ್ತಾರೆ ಆಗ ನಾನು ಹೆಸರು ಮಾಡಬೇಕು ಸಾಧನೆ ಮಾಡಬೇಕು ಅನ್ನೊ ಹಸಿವು ಕಡಿಮೆ ಆಗುತ್ತದೆ, ಸಾಧನೆ ಮಾಡುವ ಹಸಿವು ಹುಟ್ಟುವುದಿಲ್ಲ. ಸೌತ್ ಸಿನಿಮಾರಂಗದಲ್ಲಿ ಈ ರೀತಿ ನಡೆಯುವುದಿಲ್ಲ. ಇಲ್ಲಿ ನೀರಿಗೆ ಕಾಲಿಟ್ಟ ಮೇಲೆ ನೀವು ಮುಳಗಬೇಕು ಇಲ್ಲ ಈಜಬೇಕು ಹೀಗಾಗಿ ವ್ಯವಹಾರ ಉತ್ತಮವಾಗಿದೆ. ಈಗ ಸೌತ್ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಕಾರಣ ಈಗ ವ್ಯವಹಾರ ಶುರುವಾಗಿದೆ ಹೀಗಾಗಿ ಈಗ ನಾನು ಸೋಂಬೇರಿ ಆಗಬಾರದು. ನಾನು ಸಾಧನೆ ಮಾಡುವ ಮನಸ್ಸಿಲ್ಲ ಅಥವಾ ಹಣ ಇದೆ ಅಂತ ಸೋಂಬೇರಿ ಆಗಬಿಟ್ಟರೆ ನಮ್ಮ ಹಾದಿ ಬದಲಾಗುತ್ತದೆ. ನಾವು ವೀಕ್ಷಕರ ಬಗ್ಗೆ ತಿಳಿದುಕೊಳ್ಳಬೇಕು ಅವರ ನಿರೀಕ್ಷೆ ಏನೆಂದು ತಿಳಿಯಬೇಕು, ಸಿನಿಮಾ ಗೆಲ್ಲುವುದಕ್ಕೆ ಸೂತ್ರವಿದು' ಎಂದು ರಾಜಮೌಳಿ ಹೇಳಿದ್ದಾರೆ. 

ಗೋಲ್ಡನ್ ಗ್ಲೋಬ್ ರಾಜಮೌಳಿ ಸಿನಿಮಾ:

ಆರ್ ಆರ್ ಆರ್ ಸಿನಿಮಾ ಇದೀಗ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮಿನೇಟ್ ಆಗಿದೆ.  2 ವಿಭಾಗಗಳಲ್ಲಿ ರಾಜಮೌಳಿ ಚಿತ್ರ  ನಾಮಿನೇಟ್​ ಆಗಿರುವುದು ವಿಶೇಷ. ‘ಇಂಗ್ಲಿಷ್​ ಹೊರತಾದ ಅತ್ಯುತ್ತಮ ಸಿನಿಮಾ’ ಹಾಗೂ ‘ಅತ್ಯುತ್ತಮ ಹಾಡು’ (ನಾಟು ನಾಟು) ವಿಭಾಗದಲ್ಲಿ ಈ ಚಿತ್ರ ಬೇರೆ ಬೇರೆ ದೇಶಗಳ ಸಿನಿಮಾ ಜೊತೆಗೆ ಪೈಪೋಟಿ ನೀಡುತ್ತಿದೆ. ಈ ಸುದ್ದಿ ರಾಜಮೌಳಿ ಹಾಗೂ ಜೂ.ಎನ್ ಟಿ ಆರ್ ಮತ್ತು ರಾಮ್ ಚರಣ್ ಅಭಿಮಾನಿಗಳಿಗೆ ಸಂತಸ ತಂದಿದೆ. ಗೋಲ್ಡನ್​ ಗ್ಲೋಬ್ ಪ್ರಶಸ್ತಿಯನ್ನು  ‘ಹಾಲಿವುಡ್​ ಫಾರಿನ್​ ಪ್ರೆಸ್​ ಅಸೋಸಿಯೇಷನ್​’ ಮೂಲಕ ನೀಡಲಾಗುತ್ತದೆ. ಅಮೆರಿಕದ ಸಿನಿಮಾ ಹಾಗೂ ಕಿರುತೆರೆ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗುತ್ತಾರೆ. ಎರಡು ವಿಭಾಗಗಳಲ್ಲಿ ನಾಮಿನೇಟ್ ಆದ ಬಗ್ಗೆ ನಿರ್ದೇಶಕ ರಾಜಮೌಳಿ ಪ್ರತಿಕ್ರಿಯೆ ನೀಡಿದ್ದು ಸಂತಸ ವ್ಯಕ್ತಪಡಿಸಿದ್ದಾರೆ. ಆರ್ ಆರ್ ಆರ್ ಸಿನಮಾವನ್ನು ಗುರುತಿಸಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮಿನೇಟ್ ಮಾಡಿದ್ದಕ್ಕೆ   ಹಾಲಿವುಡ್​ ಫಾರಿನ್​ ಪ್ರೆಸ್​ ಅಸೋಸಿಯೇಷನ್‌ಗೆ ಧನ್ಯವಾದ ತಿಳಿಸಿದ್ದಾರೆ. ಹಾಗೂ ಅತೀ ಹೆಚ್ಚು ಪ್ರೀತಿ ತೋರಿದ ಅಭಿಮಾನಿಗಳಿಗೂ ರಾಜಮೌಳಿ ವಿಶೇಷ ಧನ್ಯವಾದ ಹೇಳಿದ್ದಾರೆ. 

click me!