
ನ್ಯಾಷನಲ್ ಕ್ರಷ್, ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಇನ್ನು ಕೆಲವೇ ದಿನಗಳಲ್ಲಿ ನಟ ವಿಜಯ ದೇವರಕೊಂಡ ಜೊತೆ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದು ಭಾರಿ ಸದ್ದು ಮಾಡುತ್ತಿದೆ. ಬರುವ ಫೆಬ್ರವರಿಯಲ್ಲಿ ರಾಜಸ್ಥಾನದಲ್ಲಿ ಇವರ ಮದುವೆ ಎಂದು ಹೇಳಲಾಗುತ್ತಿದೆ. (Vijay Deverakonda-Rashmika Mandanna marriage). ಆದರೆ ಇದರ ನಡುವೆಯೇ, ಒಂದು ತಿಂಗಳು ಮುಂಚಿತವಾಗಿಯೇ ಇವರಿಬ್ಬರ ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸುತ್ತಿದೆ. ಸಿನಿಮಾ ಸೆಲೆಬ್ರಿಟಿಗಳು ಇವರಿಬ್ಬರ ಮದುವೆಯಲ್ಲಿ ಹಾಜರು ಇರುವುದನ್ನು ಈ ಫೋಟೋದಲ್ಲಿ ನೋಡಬಹುದಾಗಿದೆ.
ಅಷ್ಟಕ್ಕೂ ಮೊನ್ನೆಯಷ್ಟೇ, ರಶ್ಮಿಕಾ ತಮಗೆ ಬೆಂಗಳೂರಿನ ಹೂ ಬೇಕು ಎಂದು ಹೇಳಿದ್ದರು. ಕರ್ನಾಟಕದ ಬಗ್ಗೆ ದನಿ ಎತ್ತದ ಈ ನಟಿಗೆ ಕರುನಾಡಿನದ್ದೇ ಹೂವು ಬೇಕು ಎನ್ನುವ ಬಗ್ಗೆ ಸಾಕಷ್ಟು ಮಂದಿ ಟೀಕೆ ಕೂಡ ಮಾಡುತ್ತಿದ್ದಾರೆ. ಮದುವೆ ನಡೆಯೋದು ರಾಜಸ್ತಾನ ಪ್ಯಾಲೇಸ್ನಲ್ಲಿ. ಮದುವೆಯ ಅಲಂಕಾರಕ್ಕೆ ಬೆಂಗಳೂರಿನಿಂದ ಹೂಗಳು ಹೋಗಲಿವೆ ಎನ್ನುವುದು ತಿಳಿದುಬಂದಿತ್ತು. ಮದುವೆ ಮನೆಯಲ್ಲಿ ಬೆಂಗಳೂರಿನ ಹೂಗಳು ನಳನಳಿಸಲಿವೆ ಎಂದು ವರದಿಯಾಗಿತ್ತು. ಆದರೆ ಇದರ ನಡುವೆಯೇ ಇದೀಗ ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಅಷ್ಟಕ್ಕೂ, ಹೇಳಿ ಕೇಳಿ ಇರುವ ಕೃತಕ ಬುದ್ಧಿಮತ್ತೆ (AI) ಯುಗ. ಮದುವೆಯಾಕೆ, ಎಐ ಮೂಲಕವೇ ಮಕ್ಕಳನ್ನೂ ಮಾಡಿಬಿಡ್ತಾರೆ. ಒಟ್ಟಿನಲ್ಲಿ ಲೈಕ್ಸ್, ಶೇರ್ ಎಲ್ಲಾ ಬೇಕು ಕಂಟೆಂಟ್ ಕ್ರಿಯೇಟರ್ಸ್ಗೆ. ಇದೇ ಕಾರಣಕ್ಕೆ, ಇದೀಗ ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದುವೆಯ ಎಐ ಫೋಟೋ ಕ್ರಿಯೇಟ್ ಮಾಡಿ ಶೇರ್ ಮಾಡಲಾಗಿದೆ. ಇದರಲ್ಲಿ ಸಿನಿಮಾ ಚಿತ್ರರಂಗದ ಕೆಲವು ದಿಗ್ಗಜರು ಕೂಡ ಪಾಲ್ಗೊಂಡಿರುವಂತೆ ಚಿತ್ರಿಸಲಾಗಿದೆ!
ಅಷ್ಟಕ್ಕೂ, 30 ವರ್ಷದ ಈ ಚೆಲುವೆ ಡೇಟಿಂಗ್, ಮದ್ವೆ ವಿಷಯದಲ್ಲಿಯೂ ಸದಾ ಸುದ್ದಿಯಲ್ಲಿರುತ್ತಾರೆ. ಫೆಬ್ರುವರಿಯಲ್ಲಿ ವಿಜಯ ದೇವರಕೊಂಡ ಅವರ ಜೊತೆ ಮದುವೆ ಎನ್ನುವ ಸುದ್ದಿ ಸದ್ದು ಮಾಡ್ತಿದ್ದಂತೆಯೇ, ಕನ್ನಡದ ನಟಿ ರಕ್ಷಿತ್ ಶೆಟ್ಟಿಜೊತೆ ರಶ್ಮಿಕಾ ಮಂದಣ್ಣ ಎಂಗೇಜ್ಮೆಂಟ್ ಆಗಿರುವ ಫೋಟೋಗಳು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಬಹುತೇಕರಿಗೆ ತಿಳಿದಿರುವಂತೆ ಇವರಿಬ್ಬರೂ ಮದುವೆಯಾಗುವ ಸಿದ್ಧತೆ ನಡೆಸಿದ್ದರು. ಆದರೆ ಅದು ಮುರಿದು ಬಿದ್ದಿತ್ತು. ಈಗಲೂ ಇಬ್ಬರೂ ಸಿಂಗಲ್ ಆಗಿದ್ದಾರೆ.'ಕಿರಿಟ್ ಪಾರ್ಟಿ’ ಸಿನಿಮಾ ವೇಳೆ ರಕ್ಷಿತ್ ಶೆಟ್ಟಿ (Rakshit Shetty) ಜೊತೆ ರಶ್ಮಿಕಾ ಮಂದಣ್ಣ ಎಂಗೇಜ್ ಆಗಿದ್ದರು. ಆದರೆ ಕೆಲವೇ ತಿಂಗಳಲ್ಲಿ ಸಂಬಂಧ ಅಲ್ಲಿಗೇ ಮುಗಿಯಿತು. ಅವರಿವರ ಜೊತೆ ಆಗಾಗ್ಗೆ ಹೆಸರು ಕೇಳಿಬರುತ್ತಿದ್ದರೂ ಈ ವಿಷಯದಲ್ಲಿ ರಶ್ಮಿಕಾ ಹೆಸರು ಹೆಚ್ಚಾಗಿ ಥಳಕು ಹಾಕಿಕೊಂಡಿದ್ದು ವಿಜಯ್ ದೇವರಕೊಂಡ ಜೊತೆ. ಇದಾದ ಬಳಿಕ ಇವರ ಮದುವೆಯ ಕುರಿತು ಹೋದಲ್ಲೆಲ್ಲಾ ಪ್ರಶ್ನೆಗಳು ಎದುರಾಗುತ್ತಿರುತ್ತವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.