ನಾವಿಬ್ಬರು ಒಟ್ಟಿಗಿಲ್ಲ; ರಾಕೇಶ್ ಜೊತೆ ಬ್ರೇಕಪ್ ಖಚಿತಪಡಿಸಿದ ಶಮಿತಾ ಶೆಟ್ಟಿ

By Shruiti G Krishna  |  First Published Jul 27, 2022, 10:44 AM IST

ಬಿಗ್ ಬಾಸ್ ಒಟಿಟಿ ಹಿಂದಿ ಮೂಲಕ ಮತ್ತಷ್ಟು ಖ್ಯಾತಿಗಳಿಸಿದ್ದ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಬ್ರೇಕಪ್ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಬಿಗ್ ಬಾಸ್ ಒಟಿಟಿ ಹಿಂದಿ ಶೋನಲ್ಲಿ ಶಮಿತಾ ಶೆಟ್ಟಿ ಸಹ ಸ್ಪರ್ಧಿ ರಾಕೇಶ್ ಬಾಪಟ್ ಜೊತೆ ತುಂಬಾ ಆಪ್ತರಾಗಿದ್ದರು. ಆದರೀಗ ರಾಕೇಶ್ ಜೊತೆ ಬ್ರೇಕಪ್ ಮಾಡಿಕೊಂಡಿರುವುದಾಗಿ ಶಮಿತಾ ಬಹಿರಂಗ ಪಡಿಸಿದ್ದಾರೆ.


ಬಿಗ್ ಬಾಸ್ ಒಟಿಟಿ ಹಿಂದಿ ಮೂಲಕ ಮತ್ತಷ್ಟು ಖ್ಯಾತಿಗಳಿಸಿದ್ದ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಬ್ರೇಕಪ್ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಬಿಗ್ ಬಾಸ್ ಒಟಿಟಿ ಹಿಂದಿ ಶೋನಲ್ಲಿ ಶಮಿತಾ ಶೆಟ್ಟಿ ಸಹ ಸ್ಪರ್ಧಿ ರಾಕೇಶ್ ಬಾಪಟ್ ಜೊತೆ ತುಂಬಾ ಆಪ್ತರಾಗಿದ್ದರು. ಶೋನಲ್ಲಿಯೇ ಇಬ್ಬರೂ ಡೇಟಿಂಗ್ ಮಾಡಲು ಆರಂಭಿಸಿದರು. ಬಿಗ್ ಬಾಸ್ ಬಳಿಕವೂ ಇಬ್ಬರ ಸಂಬಂಧ ಮತ್ತಷ್ಟು ಗಟ್ಟಿಯಾಗಿತ್ತು. ಸದಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಇಬ್ಬರು ಮದುವೆ ಯಾಗ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೀಗ ರಾಕೇಶ್ ಜೊತೆ ಬ್ರೇಕಪ್ ಮಾಡಿಕೊಂಡಿರುವುದಾಗಿ ಶಮಿತಾ ಬಹಿರಂಗ ಪಡಿಸಿದ್ದಾರೆ. ರಾಕೇಶ್‌ನಿಂದ ದೂರ ಆಗಿದ್ದೀನಿ ಎಂದು ಶಮಿತಾ ಶೆಟ್ಟಿ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದಾರೆ. ಇಬ್ಬರು ತಮ್ಮ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬ್ರೇಕಪ್ ಅನ್ನು ಘೋಷಿಸಿದರು. ಶಮಿತಾ ಶೆಟ್ಟಿ ನೀಡಿದ ಹೇಳಿಕೆಯಲ್ಲಿ, ಅವರು ಕೆಲವು ದಿನಗಳಿಂದ ಒಟ್ಟಿಗೆ ಇಲ್ಲ ಎಂದು ಖಚಿತಪಡಿಸಿದ್ದಾರೆ. ಜೊತೆಗೆ ಸಂಗೀತ ವೀಡಿಯೊವನ್ನು ಶಾರಾ ಅಭಿಮಾನಿಗಳಿಗೆ ಅರ್ಪಿಸಿದರು.

ಈ ಬಗ್ಗೆ ಶಮಿತಾ ಶೆಟ್ಟಿ ಇನ್ಸ್ಟಾಗ್ರಾಮ್ ನಲ್ಲಿ 'ನಾನು ಇದನ್ನು ಸ್ಪಷ್ಟಪಡಿಸುವುದು ತುಂಬಾ ಮುಖ್ಯ ಎಂದು ಯೋಚಿಸಿದೆ. ರಾಕೇಶ್ ಮತ್ತು ನಾನು ಈಗ ಒಟ್ಟಿಗೆ ಇಲ್ಲ. ಕಳೆದ ಕೆಲವು ದಿನಗಳಿಂದ ನಾವು ಜೊತೆಯಲ್ಲಿ ಇಲ್ಲ. ಆದರೆ ಈ ಸುಂದರವಾದ ಸಂಗೀತ ವೀಡಿಯೊ ನಮಗೆ ತುಂಬಾ ಪ್ರೀತಿ ಮತ್ತು ಬೆಂಬಲವನ್ನು ನೀಡಿದ ಎಲ್ಲಾ ಅಭಿಮಾನಿಗಳಿಗೆ. ವೈಯಕ್ತಿಕವಾಗಿಯೂ ನಿಮ್ಮ ಪ್ರೀತಿಯನ್ನು ನಮಗೆ ಧಾರೆಯೆರೆಯುವುದನ್ನು ಮುಂದುವರಿಸಿ. ತುಂಬಾ ಸಕಾರಾತ್ಮಕತೆ ಇದೆ. ನಿಮ್ಮೆಲ್ಲರಿಗೂ ಪ್ರೀತಿ ಮತ್ತು ಕೃತಜ್ಞತೆಗಳು' ಎಂದು ಬರೆದಿದ್ದಾರೆ.

Tap to resize

Latest Videos

ಇನ್ನು ರಾಕೇಶ್ ಬಾಪಟ್ ಸಹ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 'ಶಮಿತಾ ಮತ್ತು ನಾನು ಇನ್ನು ಮುಂದೆ ಒಟ್ಟಿಗೆ ಇರುವುದಿಲ್ಲ ಎಂಬುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ವಿಧಿಯು ನಮ್ಮ ಹಾದಿಗಳನ್ನು ಅತ್ಯಂತ ಅಸಾಮಾನ್ಯ ಸಂದರ್ಭಗಳಲ್ಲಿ ಭೇಟಿ ಮಾಡಿತು. ಶಾರಾ ಕುಟುಂಬಕ್ಕೆ ತುಂಬಾ ಧನ್ಯವಾದಗಳು. ಪ್ರೀತಿ ಮತ್ತು ಬೆಂಬಲ ತೋರಿದ ಎಲ್ಲಿರಿಗೂ ಧನ್ಯವಾದ. ಒಬ್ಬ ಖಾಸಗಿ ವ್ಯಕ್ತಿಯಾಗಿ, ನಾನು ಈ ವಿಚಾರವನ್ನು ಸಾರ್ವಜನಿಕವಾಗಿ ಘೋಷಿಸಲು ಬಯಸಲಿಲ್ಲ. ಆದರೆ ಇದನ್ನು ಬಹಿರಂಗ ಪಡಿಸಿದ್ದು ನಮ್ಮ ಅಭಿಮಾನಿಗಳಿಗೆ ನಾವು ಋಣಿಯಾಗಿದ್ದೇವೆ ಎಂದು ನಾನು ಭಾವಿಸುತ್ತೇನೆ. ವೈಯಕ್ತಿಕವಾಗಿಯೂ ನಮ್ಮ ಮೇಲೆ ನಿಮ್ಮ ಪ್ರೀತಿ ಇರಲಿ. ನಿಮ್ಮೆಲ್ಲರ ಬೆಂಬಲಕ್ಕಾಗಿ ಎದುರುನೋಡುತ್ತಿದ್ದೇನೆ. ಈ ಮ್ಯೂಸಿಕ್ ವೀಡಿಯೋ ನಿಮ್ಮೆಲ್ಲರಿಗೂ ಸಮರ್ಪಿತವಾಗಿದೆ' ಎಂದು ಹೇಳಿದರು. 

ಅಮ್ಮನನ್ನು ನೋಡುತ್ತಿದ್ದಂತೆ ಕಾಲುಮುಟ್ಟಿ ನಮಸ್ಕರಿಸಿದ ಶಿಲ್ಪಾ ಶೆಟ್ಟಿ ಸಹೋದರಿ; ಅಭಿಮಾನಿಗಳ ಮೆಚ್ಚುಗೆ

ಶಮಿತಾ ಮತ್ತು ರಾಕೇಶ್ ಅವರ ಮುಂದಿನ ಸಂಗೀತ ವೀಡಿಯೊದಿಂದ  ರೋಮ್ಯಾಂಟಿಕ್ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಕೆಲವೇ ಗಂಟೆಗಳಲ್ಲಿ ಬ್ರೇಕಪ್ ಸುದ್ದಿ ಬಹಿರಂಗ ಪಡಿಸಿದರು. ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ತುಮ್ ಬಿನ್ ಖ್ಯಾತಿಯು ಶಮಿತಾ ಅವರ ಕೆನ್ನೆಗೆ ಮುತ್ತು ನೀಡುತ್ತಿರುವುದು ಕಂಡುಬಂದಿದೆ.

Raqesh Bapat ಜೊತೆ ಬ್ರೇಕಪ್‌ ಬಗ್ಗೆ ಮೌನ ಮುರಿದ Shamita Shetty

ಅಂದಹಾಗೆ ಶಮಿತಾ ಮತ್ತು ರಾಕೇಶ್ ಅವರ ಬ್ರೇಕ್ ಅಪ್ ವರದಿಗಳು ಬಹಳ ಸಮಯದಿಂದ ಸುದ್ದಿ ಮಾಡುತ್ತಿವೆ. ಈ ವರ್ಷದ ಮಾರ್ಚ್‌ನಲ್ಲಿ, ಇಬ್ಬರು ನಟರು ದೂರ ದೂರ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಬಳಿಕ ನಮ್ಮ ಸಂಬಂಧಕ್ಕೆ ಸಂಬಂಧಿಸಿದ ವದಂತಿಗಳನ್ನು ನಂಬಬೇಡಿ ಎಂದು ನಾವು ವಿನಂತಿಸುತ್ತೇವೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದಿದ್ದರು. ಇದೀಗ ಬ್ರೇಕಪ್ ವಿಚಾರ ಬಹಿರಂಗ ಪಡಿಸುವ ಮೂಲಕ ಶಾರಾ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
 

click me!