RRR ಒಟಿಟಿ ಪ್ರೀಮಿಯರ್ ದಿನಾಂಕ ಬಹಿರಂಗ; Jr. NTR ಅಭಿಮಾನಿಗಳಿಗೆ ಡಬಲ್ ಸಂಭ್ರಮ

Published : May 13, 2022, 04:47 PM IST
RRR ಒಟಿಟಿ ಪ್ರೀಮಿಯರ್ ದಿನಾಂಕ ಬಹಿರಂಗ; Jr. NTR ಅಭಿಮಾನಿಗಳಿಗೆ ಡಬಲ್ ಸಂಭ್ರಮ

ಸಾರಾಂಶ

ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ (SS Rajamouli) ಸಾರಥ್ಯದಲ್ಲಿ ಮೂಡಿಬಂದಿರುವ ಆರ್ ಆರ್ ಆರ್(RRR) ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. 1000 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿರುವ ಆರ್ ಆರ್ ಆರ್ ಇದೀಗ ಒಟಿಟಿಯಲ್ಲಿ(OTT) ಬರಲು ಸಿದ್ಧವಾಗಿದೆ.

ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ (SS Rajamouli) ಸಾರಥ್ಯದಲ್ಲಿ ಮೂಡಿಬಂದಿರುವ ಆರ್ ಆರ್ ಆರ್(RRR) ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. 1000 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿರುವ ಆರ್ ಆರ್ ಆರ್ ಇದೀಗ ಒಟಿಟಿಯಲ್ಲಿ(OTT) ಬರಲು ಸಿದ್ಧವಾಗಿದೆ. ಚಿತ್ರಮಂದಿರಗಳಲ್ಲಿ ಅಬ್ಬರಿಸಿದ್ದ ಆರ್ ಆರ್ ಆರ್ ಇದೀಗ ಒಟಿಟಿ ಪ್ರೇಕ್ಷಕರ ಮನಗೆಲ್ಲಲೂ ರೆಡಿಯಾಗಿದೆ. ಅಂದಹಾಗೆ ಆರ್ ಆರ್ ಆರ್ ಒಟಿಟಿ ಪ್ರೀಮಿಯರ್ ಬಗ್ಗೆ ಅನೇಕ ದಿನಗಳಿಂದ ಚರ್ಚೆ ನಡೆಯುತ್ತಿತ್ತು. ಯಾವಾಗ ಎನ್ನುವ ಪ್ರೇಶ್ನೆ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಕೊನೆಗೂ ಒಟಿಟಿ ಪ್ರೀಮಿಯರ್ ದಿನಾಂಕ ಬಹಿರಂಗವಾಗಿದೆ.

ಅಂದಹಾಗೆ ಆರ್ ಆರ್ ಆರ್ ಸಿನಿಮಾ ಮೇ 20ರಂದು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಜೀ5ನಲ್ಲಿ(Zee5) ಆರ್ ಆರ್ ಆರ್ ಸ್ಟ್ರೀಮಿಂಗ್ ಆಗುತ್ತಿದೆ. ಅಂದಹಾಗೆ ಈ ಸಿನಿಮಾ ಅನೇಕ ಭಾಷೆಯಲ್ಲಿ ಬಿಡುಗಡೆಯಾಗಿದೆ. ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ಈ ಸಿನಿಮಾ ಎಲ್ಲಾ ಭಾಷೆಯಲ್ಲೂ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗುತ್ತಿದೆ. ಅಂದಹಾಗೆ ಮೇ 20 ಜೂ.ಎನ್ ಟಿ ಆರ್ ಪಾಲಿಗೆ ವಿಶೇಷ ದಿನವಾಗಿದೆ. ಯಾಕೆಂದರೆ ಜೂ.ಎನ್ ಟಿ ಆರ್ ಹುಟ್ಟಿದ ದಿನವಾಗಿದೆ.

ಜೂ ಎನ್ ಟಿ ಆರ್ ಹುಟ್ಟುಹಬ್ಬದ ದಿನವೇ ಆರ್ ಆರ್ ಆರ್ ಒಟಿಟಿಗೆ ಎಂಟ್ರಿ ಕೊಡುತ್ತಿದೆ. ಇದು ಅಭಿಮಾನಿಗಳಲ್ಲಿ ಮತ್ತಷ್ಟು ಸಂತಸ ಹೆಚ್ಚಿಸಿದೆ. ಅಂದಹಾಗೆ ಈ ಸಿನಿಮಾದಲ್ಲಿ ಜೂ ಎನ್ ಟಿ ಆರ್, ಕೊರಾಮ್ ಭೀಮ್ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲೂರಿ ಸೀತರಾಮ್ ರಾಜು ಪಾತ್ರದಲ್ಲಿ ರಾಮ್ ಚರಣ್ ಮಿಂಚಿದ್ದಾರೆ. ಇಬ್ಬರ ಪಾತ್ರವೂ ಚಿತ್ರ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ರಾಜಮೌಳಿ ನಿರ್ದೇಶನ, ದೃಶ್ಯ ವೈಭವ, ಹಾಡುಗಳು ಎಲ್ಲಾ ವಿಚಾರದಲ್ಲೂ ಆಱ್ ಆರ್ ಆರ್ ಅಭಿಮಾನಿಗಳ ಹೃದಯ ಗೆದ್ದಿದೆ. ಚಿತ್ರಮಂದಿರಗಳಲ್ಲಿ ನೋಡಲು ಮಿಸ್ ಮಾಡಿಕೊಂಡವರು ಇದೀಗ ಮನೆಯಲ್ಲೇ ಕುಳಿತು ಸಿನಿಮಾ ವೀಕ್ಷಿಸಬಹುದಾಗಿದೆ.

RRR ಸಿನಿಮಾ ಬಗ್ಗೆ ಪ್ರಶ್ನೆ : ತೆಲಂಗಾಣ ಪಿಯುಸಿ ಪ್ರಶ್ನೆ ಪತ್ರಿಕೆ ವೈರಲ್‌

    ಅಂದಹಾಗೆ ಆರ್ ಆರ್ ಆರ್ ತಂಡ ಒಟಿಟಿ ಬಿಡುಗಡೆ ದಿನಾಂಕ ಬಹಿರಂಗ ಪಡಿಸುವ ಜೊತೆಗೆ ಹೊಸ ಟ್ರೈಲರ್ ಬಿಡುಗಡೆ ಮಾಡಿ ಅಭಿಮಾನಿಗಳಲ್ಲಿ ಸಂತಸ ಹೆಚ್ಚಿಸಿದೆ. ಟ್ರೈಲರ್ ಅನ್ನು ಆರ್ ಆರ್ ಆರ್ ಸಿನಿಮಾದ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಹೊಸ ಟ್ರೈಲರ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.


    ವಿವಾಹ ವಾರ್ಷಿಕೋತ್ಸವ ಒಟ್ಟಿಗೆ ಆಚರಿಸಿದ ಪ್ರಶಾಂತ್ ನೀಲ್- Jr. NTR ಕುಟುಂಬ; ಫೋಟೋ ವೈರಲ್

     

    ಆರ್ ಆರ್ ಆರ್ ಸಿನಿಮಾದಲ್ಲಿ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಜೊತೆಗೆ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ನಾಯಕಿಯಾಗಿ ಮಿಂಚಿದ್ದಾರೆ. ಮೊದಲ ಬಾರಿಗೆ ಅಲಿಯಾ ಭಟ್ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಮಿಂಚಿದ್ದು ದೊಡ್ಡ ಮಟ್ಟದ ಸಕ್ಸಸ್ ಗಳಿಸಿದ್ದಾರೆ. ವಿಶ್ವದಾದ್ಯಂತ 1100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿರುವ ಆರ್ ಆರ್ ಆರ್ ಬಾಲಿವುಡ್ ನಲ್ಲಿ 27ದ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.

    PREV

    ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

    Read more Articles on
    click me!

    Recommended Stories

    15 ವರ್ಷಗಳಿಂದ ನಾಗಾರ್ಜುನರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆ ಯಾವುದು? ಯಾಕೆ ಕಡಿಮೆಯಾಗಿಲ್ಲ?
    ಆತ ನನ್ನ ಕ್ಲಾಸ್‌ಮೇಟ್.. ಗೆಳೆಯ ಶ್ರೀನಿವಾಸನ್ ನಿಧನ ಆಘಾತ ತಂದಿದೆ: ಭಾವುಕರಾದ ರಜನಿಕಾಂತ್