3 ಕೋಟಿಯ ಚಿನ್ನದ ಕೇಕ್​ ತಿಂದಾಗ ಏನಾಯ್ತು? ನಟಿ ಊರ್ವಶಿ ರೌಟೇಲಾ ಏನ್​ ಹೇಳಿದ್ರು ಕೇಳಿ...

Published : Feb 29, 2024, 04:50 PM IST
3 ಕೋಟಿಯ ಚಿನ್ನದ ಕೇಕ್​ ತಿಂದಾಗ ಏನಾಯ್ತು? ನಟಿ ಊರ್ವಶಿ ರೌಟೇಲಾ ಏನ್​ ಹೇಳಿದ್ರು ಕೇಳಿ...

ಸಾರಾಂಶ

ಹುಟ್ಟುಹಬ್ಬದ ದಿನ ಮೂರು ಕೋಟಿ ರೂಪಾಯಿ ಕೇಕ್​ ಕತ್ತರಿಸಿ, ತಿಂದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ನಟಿ ಹೇಳಿದ್ದೇನು?   

ಬಾಲಿವುಡ್ ನಟಿ ಮತ್ತು ರೂಪದರ್ಶಿ ಊರ್ವಶಿ ರೌಟೇಲಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಆಗಾಗ್ಗೆ ತಮ್ಮ ಸುಂದರವಾದ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಾರೆ. ಊರ್ವಶಿ ಇದೇ 25ರಂದು ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅದು ಎಲ್ಲರ ಗಮನ ಸೆಳೆಯಲು ಕಾರಣ, 24 ಕ್ಯಾರಟ್​ ಚಿನ್ನದಿಂದ ಅಲಂಕರಿಸಿದ ಗೋಲ್ಡನ್ ಕೇಕ್ ಅನ್ನು ಕಟ್ ಮಾಡಿ ಅದನ್ನು ತಿಂದಿದ್ದರು.  ಹನಿ ಸಿಂಗ್ ಅವರು ನಟಿ ಊರ್ವಶಿ ಅವರ ಮುಂದಿನ ಸಂಗೀತ ವಿಡಿಯೋ 'ಲವ್ ಡೋಸ್ 2' ನೊಂದಿಗೆ ಬರುತ್ತಿದ್ದಾರೆ. ಈ ಹಾಡಿನ ಚಿತ್ರೀಕರಣದ ಸೆಟ್‌ನಲ್ಲಿಯೇ ಊರ್ವಶಿ  ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.  ಅಂದಹಾಗೆ ಈ ಕೇಕ್​ ಕೂಡ ಹನಿ ಸಿಂಗ್​ ಅವರೇ ತರಿಸಿದ್ದು ಎನ್ನಲಾಗಿದೆ. ಹನಿ ಸಿಂಗ್​ ಅವರು ನಟಿಗೋಸ್ಕರ ಮೂರು ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ!
 

 ಒಂದಿಷ್ಟು ಲಕ್ಷದ್ದಲ್ಲ, ಬರೋಬ್ಬರಿ ಮೂರು ಕೋಟಿ ರೂಪಾಯಿಯ ಕೇಕ್​ ಅದು. ಅದನ್ನು ತಿಂದಾಗ ಏನು ಅನ್ನಿಸ್ತು ಎಂದು ಪ್ರಶ್ನಿಸಿದಾಗ, ಮೇಲುಗಡೆ ಚಿನ್ನದ ಪಕಳೆಗಳು ಇದ್ದವು, ಅದನ್ನೆಲ್ಲಾ ನಾನೇ ತಿಂದೆ. ತುಂಬಾ ಖುಷಿ ಆಯ್ತು ಎಂದಿದ್ದಾರೆ. ನಿಜಕ್ಕೂ ಇದು ಅಷ್ಟೆಲ್ಲಾ ದುಬಾರಿ ಕೇಕಾ ಎಂದು ಹಲವರು ಪ್ರಶ್ನಿಸ್ತಾರೆ. ಹೌದು ಅದು ಅಷ್ಟು ದುಬಾರಿಯದ್ದೇ, ಚಿನ್ನದ ಲೇಪನ ಇತ್ತು. ಅದರಲ್ಲೇನು ಎನ್ನುವಂತೆ ಹೇಳಿರುವ ನಟಿ, ಮೂರು ಕೋಟಿ ರೂಪಾಯಿ ಯಾವ ಲೆಕ್ಕದ್ದು ಎನ್ನುವಂತೆ ಮಾತನಾಡಿದ್ದಾರೆ. ಇಷ್ಟು ದುಬಾರಿ ಕೇಕ್​ ಅನ್ನು ಹಾಗೆಯೇ ಇಟ್ಟುಕೊಳ್ಳಬೇಕಿತ್ತು, ತಿನ್ನಬಾರದಿತ್ತು ಎಂದೆಲ್ಲಾ ಏನೇನೋ ಹೇಳ್ತಾರೆ. ಅದು ಅದು ಬ್ಯೂಟಿಫುಲ್​ ಕೇಕ್​, ತಿನ್ನದೇ ಇರುವುದು ಹೇಗೆ? ತಿಂದೆ, ತುಂಬಾ ಖುಷಿಯಾಯ್ತು ಎಂದಿದ್ದಾರೆ. 

ಡ್ರಾಮಾ ಜ್ಯೂನಿಯರ್ಸ್​ ವೇದಿಕೆಗೆ ಪ್ರಕಾಶ್​ ರಾಜ್​: ಪ್ರೇಕ್ಷಕರಿಂದ ಭಾರಿ ವಿರೋಧ- ಏನೆಲ್ಲಾ ಹೇಳಿದ್ರು ನೋಡಿ...

ಇದನ್ನು ಕೇಳಿ ನೆಟ್ಟಿಗರು, ಅದು ಮೂರು ಕೋಟಿಯ ಕೇಕ್​ ಎಂದರೆ ಈಗಲೂ ನಂಬಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನೊಂದಿಷ್ಟು ಮಂದಿ ಹುಟ್ಟುಹಬ್ಬದ ದಿನ ಒಂದಿಷ್ಟು ಬಡವರಿಗೆ ಊಟ ಹಾಕಿದ್ದರೆ ಸದಾ ನೆನಪಿಸಿಕೊಳ್ಳುತ್ತಿದ್ದರು ಎಂದಿದ್ದಾರೆ. ಕೋಟಿ ಎಂದರೆ ಹತ್ತಿಪ್ಪತ್ತು ರೂಪಾಯಿ ಲೆಕ್ಕದಲ್ಲಿ ಮಾತನಾಡುವ ಶ್ರೀಮಂತರಿಗೆ ಏನನ್ನಬೇಕೋ ತಿಳಿಯುತ್ತಿಲ್ಲ ಎಂದು ಇನ್ನೊಂದಿಷ್ಟು ಮಂದಿ ಹೇಳಿದ್ದಾರೆ. ಯಾರಾದರೂ ಬಿಟ್ಟಿ ಕೊಟ್ಟರೆ ಕೋಟಿ ಏನು ಅದಕ್ಕಿಂತಲೂ ಜಾಸ್ತಿಯಾದ್ರೂ ತಿನ್ನುತ್ತಾರೆ ಎಂದಿದ್ದರೆ, ಇನ್ನೊಂದಿಷ್ಟು ಮಂದಿ, ನಟಿ ಜಾಕ್ವೆಲಿನ್​ ಫರ್ನಾಂಡೀಸ್​ ವಿಷ್ಯ ಮಾತನಾಡಿದ್ದಾರೆ. ಐಷಾರಾಮಿ ಉಡುಗೊರೆ ಮೊರೆ ಹೋಗಿ ಈಗ ಕೋರ್ಟ್​, ಕಚೇರಿ ಅಲೆಯುವಂತಾಗಿದೆ. ಈ ರೀತಿ ಐಷಾರಾಮಿ ಜೀವನ ಸರಿಯಲ್ಲ ಎಂದಿದ್ದಾರೆ. ಇನ್ನು ಕೆಲವರು ಇಡಿ ಎಲ್ಲಿದ್ದೀರಪ್ಪಾ ಎಂದು ಪ್ರಶ್ನಿಸಿದ್ದಾರೆ.  

ಅಷ್ಟಕ್ಕೂ ನಟಿ ತಮ್ಮ ಹುಟ್ಟುಹಬ್ಬದ ದಿನ  ಹಣವನ್ನು ನೀರಿನಂತೆ ಖರ್ಚು ಮಾಡುತ್ತಿರುವುದು ಇದೇ ಮೊದಲಲ್ಲ. ಅವರು ಪ್ರತಿವರ್ಷವೂ ಒಂದಲ್ಲಾ ಒಂದು ರೀತಿಯಲ್ಲಿ ವಿಪರೀತ ಹಣ ಖರ್ಚು ಮಾಡಿ  ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ಫೋಟೋಗಳು ಹಾಗೂ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಇದರಲ್ಲಿ ಹನಿ ಸಿಂಗ್ ಊರ್ವಶಿ ಅವರ ಹುಟ್ಟುಹಬ್ಬದ ಕೇಕ್ ಅನ್ನು ಕತ್ತರಿಸಿ, ಅವರನ್ನು  ತಬ್ಬಿಕೊಂಡು ಸಂಭ್ರಮಿಸುವುದನ್ನು ನೋಡಬಹುದು.  ಈ 24 ಕ್ಯಾರಟ್​ ಚಿನ್ನದ ಲೇಪಿತ ಕೇಕ್ ಅನ್ನು 'ಲವ್ ಡೋಸ್ 2' ಸೆಟ್‌ನಲ್ಲಿ ಕತ್ತರಿಸಿದ್ದೇನೆ ಎಂದು ನಟಿ ಶೀರ್ಷಿಕೆಯಲ್ಲಿ ಹೇಳಿದ್ದರು. 

ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​: ಅಪ್ಪ ಶಾರುಖ್​ ಕುರಿತು ತನಿಖಾಧಿಕಾರಿ ವಾಂಖೆಡೆಯಿಂದ ಭಾರಿ ಹೇಳಿಕೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?
Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!