Circus Collection; ಮೋಡಿ ಮಾಡದ ರಣ್ವೀರ್; 10 ವರ್ಷಗಳಲ್ಲೇ ಅತ್ಯಂತ ಕೆಟ್ಟ ಓಪನಿಂಗ್ ಪಡೆದ ರೋಹಿತ್ ಸಿನಿಮಾ

By Shruthi KrishnaFirst Published Dec 24, 2022, 10:31 AM IST
Highlights

ರಣ್ವೀರ್ ಸಿಂಗ್ ನಟನೆಯ ಸರ್ಕಸ್ ಸಿನಿಮಾ ಮೊದಲ ದಿನ ಅಭಿಮಾನಿಗಳನ್ನು ಮೋಡಿ ಮಾಡುವಲ್ಲಿ ವಿಫಲವಾಗಿದೆ. 

ಬಾಲಿವುಡ್‌ಗೆ ಈ ವರ್ಷಾಂತ್ಯವು ಆಶಾದಾಯಕವಾಗಿರಲಿಲ್ಲ. ಡಿಸೆಂಬರ್ 23ರಂದು ತೆರೆಗೆ ಬಂದ ರಣ್ವೀರ್ ಸಿಂಗ್ ನಟನೆಯ ಕಾಮಿಡಿ ಡ್ರಾಮ ಸರ್ಕಸ್ ಸಿನಿಮಾ ಮೊದಲ ದಿನ ಅಭಿಮಾನಿಗಳನ್ನು ಮೋಡಿ  ಮಾಡುವಲ್ಲಿ ವಿಫಲವಾಗಿದೆ. ಭಾರಿ ನಿರೀಕ್ಷೆಯೊಂದಿಗೆ ಬಂದ ಸರ್ಕಸ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ. ರಣ್ವೀರ್ ಸಿಂಗ್ ಸಿನಿಮಾ ಅಂದ್ಮೇಲೆ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಾಗಿತ್ತು. ಆದರೆ ಅಭಿಮಾನಿಗಳ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ.  ಹಿಂದಿ ಸಿನಿಮಾಗಳು ಈ ವರ್ಷ ಸಾಲು ಸಾಲು ಸೋಲು ಕಂಡಿವೆ. ಸರಣಿ ಸೋಲಿನಿಂದ ತಪ್ಪಿಸಿಕೊಳ್ಳಲು ಬಾಲಿವುಡ್ ಪರದಾಡುತ್ತಿದೆ. ಇತ್ತೀಚಿಗಷ್ಟೆ ರಿಲೀಸ್ ಆಗಿದ್ದ ಅಜಯ್ ದೇವಗನ್ ನಟನೆಯ ದೃಶ್ಯಂ-2 ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಕೊಂಚ ಸಮಾಧಾನ ನೀಡಿತ್ತು. ಆದರೆ ನಿರೀಕ್ಷೆಯ ಸರ್ಕಸ್ ಸಿನಿಮಾ ಕಳಪೆ ಪ್ರದರ್ಶನ ಬಾಲಿವುಡ್‌ಗೆ ಮತ್ತೆ ಅಚ್ಚರಿ ಮೂಡಿಸಿದೆ.  

ಅಂದಹಾಗೆ ಸರ್ಕಸ್ ಸಿನಿಮಾಗೆ ರೋಹಿತ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದರು. ರಣ್ವೀರ್ ಮತ್ತು ರೋಹಿತ್ ಶೆಟ್ಟಿ ಕಾಂಬಿನೇಷ್ ಭಾರಿ ನಿರೀಕ್ಷೆ ಮೂಡಿಸಿತ್ತು. ಆದರೆ ಮೊದಲ ದಿನದ  ಕಲೆಕ್ಷನ್ ನೋಡಿದ್ರೆ ಗೊತ್ತಾಗುತ್ತೆ ಇಬ್ಬರೂ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ವಿಫಲವಾಗಿದ್ದಾರೆ. ಅಂದಹಾಗೆ ಸರ್ಕಸ್ ಸಿನಿಮಾ ಮೊದಲ ದಿನ 6.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಕಳೆದ ಒಂದು ದಶಕದಲ್ಲಿ ರೋಹಿತ್ ಶೆಟ್ಟಿ ಅವರ ಅತ್ಯಂತ ಕೆಟ್ಟ ಓಪನಿಂಗ್ ಆಗಿದೆ. ಈ ಮೊದಲು ರಿಲೀಸ್ ಆಗಿದ್ದ ಅಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿತ್ತು. ಕೊರೊನಾ ಬಳಿಕ  ಬಂದ ಸಿನಿಮಾ ಮೊದಲ ದಿನ 26.29 ಕೋಟಿ ರೂಪಾಯಿ ಬಾಚಿಕೊಂಡಿತ್ತು. 2018ರಲ್ಲಿ ಬಂದ ಸಿಂಬ ಸಿನಿಮಾ ಮೊದಲ ದಿನ 20.72 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಗೋಲ್ಮಾಲ್ ಎಗೇನ್ ಬರೋಬ್ಬರಿ 30.14 ಕೋಟಿ ರೂಪಾಯಿ ಬಾಚಿಕೊಂಡಿತ್ತು. ದಿಲ್ವಾಲೆ 21 ಕೋಟಿ ರೂಪಾಯಿ, ಸಿಂಗಮ್ ರಿಟರ್ನ್ಸ್ 32.09 ಕೋಟಿ ರೂಪಾಯಿ ಹಾಗೂ ಚೆನ್ನೈ ಎಕ್ಸ್‌ಪ್ರೆಸ್ ಸಿನಿಮಾ ಬರೋಬ್ಬರಿ 33.12 ಕೋಟಿ ಕಲೆಕ್ಷನ್ ಮಾಡಿ ಬೀಗಿತ್ತು.

ಬಾಲಿವುಡ್‌ನಲ್ಲಿ ರಣ್‌ವೀರ್ ಸಿಂಗ್‌ ಫ್ಯಾಷನ್‌ ಸೆನ್ಸ್ ಬೆಸ್ಟ್ ಎಂದ ಸಲ್ಲು ಮಿಯಾ

 ಸದ್ಯ ರಿಲೀಸ್ ಆಗಿರುವ ಸರ್ಕಸ್ ಸಿನಿಮಾ ಅತ್ಯಂತ ಕಡಿಮೆ ಕಲೆಕ್ಷನ್ ಮಾಡುವ ಮೂಲಕ ರೋಹಿತ್ ಶೆಟ್ಟಿಗೆ ಶಾಕ್ ನೀಡಿದೆ. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿರುವ ಸರ್ಕಸ್ ಸಿನಿಮಾ ಜೇಮ್ಸ್ ಕ್ಯಾಮರೂನ್ ಅವರ ಅವತಾರ್; ದಿ ವೇ ಆಫ್ ವಾಟರ್‌ನ ಪ್ರಬಲ ಪೈಪೋಟಿಯ ಹೊಡೆತಕ್ಕೆ ಸಿಲುಕಿ ಕಡಿಮೆ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಸರ್ಕಸ್ ಸಿನಿಮಾಗಿಂದ ಅವತಾರ್; ದಿ ವೇ ಆಫ್ ವಾಟರ್‌ ಕಲೆಕ್ಷನ್ ಹೆಚ್ಚಾಗಿದೆ. 2ನೇ ವಾರಕ್ಕೆ ಕಾಲಿಟ್ಟಿರುವ ಅವತಾರ್; ದಿ ವೇ ಆಫ್ ವಾಟರ್‌ ಡಿಸೆಂಬರ್ 23ಕ್ಕೆ 11.50 ರಿಂದ 13.50 ಕೋಟಿ ರೂಪಾಯಿ ಬಾಚಿಕೊಂಡಿದೆ ಎನ್ನಲಾಗಿದೆ.  

ರಣವೀರ್‌ ಹೊಸ ಮನೆ ಕಿಚನ್‌ ಡಿಸೈನ್‌ ಮಾಡಿರುವುದು ಸ್ವತಃ ದೀಪಿಕಾ ಪಡುಕೋಣೆಯಂತೆ!

ರಣ್ವಿರ್ ಸಿಂಗ್ ನಟನೆಯ ಜಯೇಶಭಾಯಿ ಜೋರ್ದಾರ್ ಸಿನಿಮಾ ಕೂಡ ಹೀನಾಯ ಸೋಲು ಕಂಡಿತ್ತು. ಕಳೆದ ವರ್ಷ ರಿಲೀಸ್ ಆಗಿದ್ದ 83 ಸಿನಿಮಾ ನಿರೀಕ್ಷೆಯ ಗೆಲುವು ದಾಖಲಿಸಲು ವಿಫಲವಾಗಿತ್ತು. ಇದೀಗ ಸರ್ಕಸ್ ಸಿನಿಮಾ ಕೂಡ ನೆಲಕಚ್ಚಿದೆ. ರಣ್ವೀರ್ ನಟನೆಯ ಸಾಲು ಸಾಲು ಸಿನಿಮಾಗಳು ಸೋಲು ಕಂಡಿವೆ. ರಣ್ವೀರ್ ಸಿಂಗ್ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಲು ಕಾಯುತ್ತಿದ್ದಾರೆ. 

click me!